ಬ್ರೇಕಿಂಗ್ ನ್ಯೂಸ್
31-05-24 10:07 pm Mangalore Correspondent ಕರಾವಳಿ
ಮಂಗಳೂರು, ಮೇ 31: ಮಂಗಳೂರು ಪೊಲೀಸ್ ಕಮಿಷನರ್ ಗೆ ಇಲ್ಲಿನ ಹಿಂದು ಸಂಘಟನೆಗಳ ಶಕ್ತಿ ಗೊತ್ತಿಲ್ಲ ಎಂದೆನಿಸುತ್ತದೆ. ನಮ್ಮ ಸಂಘಟನೆಗಳ ಜೊತೆಗೆ ಚೆಲ್ಲಾಟಕ್ಕೆ ಇಳಿದ ರೀತಿ ತೋರುತ್ತಿದೆ. ಯಾರದ್ದೋ ಒತ್ತಡಕ್ಕೆ ಮಣಿದು ಮುಸ್ಲಿಮರ ಮೇಲಿನ ಕೇಸನ್ನು ಹಿಂಪಡೆಯುತ್ತಾರೆ, ನಮ್ಮ ಸಂಘಟನೆ ನಾಯಕರ ಮೇಲೆ ಜಾಮೀನು ರಹಿತ ಕೇಸು ದಾಖಲು ಮಾಡುತ್ತಾರೆ. ಪೊಲೀಸ್ ಆಯುಕ್ತರಿಗೆ ನಮ್ಮ ಪವರ್ ಗೊತ್ತಿಲ್ಲಾಂದ್ರೆ ತೋರಿಸಬೇಕಾಗುತ್ತದೆ ಎಂದು ಬಿಜೆಪಿ ಮುಖಂಡ ಶರಣ್ ಪಂಪ್ವೆಲ್ ಹೇಳಿದ್ದಾರೆ.
ನಮಾಜ್ ವಿಚಾರದಲ್ಲಿ ದಾಖಲಾಗಿದ್ದ ಸುಮೊಟೋ ಕೇಸನ್ನು ಹಿಂಪಡೆದಿದ್ದನ್ನು ವಿರೋಧಿಸಿ ಮತ್ತು ಹಿಂದು ಮುಖಂಡ ಶರಣ್ ಪಂಪ್ವೆಲ್ ವಿರುದ್ಧ ಕೇಸು ದಾಖಲಿಸಿದ್ದನ್ನು ಖಂಡಿಸಿ ಮಲ್ಲಿಕಟ್ಟೆ ವೃತ್ತದಲ್ಲಿ ವಿಶ್ವ ಹಿಂದು ಪರಿಷತ್, ಬಜರಂಗದಳ ವತಿಯಿಂದ ಏರ್ಪಡಿಸಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. ಪೊಲೀಸರು ಕಾಂಗ್ರೆಸ್ ಮತ್ತು ಮುಸ್ಲಿಂ ನಾಯಕರ ಅಣತಿಯಂತೆ ಕೆಲಸ ಮಾಡುತ್ತಿದ್ದಾರೆ. ಕರಾವಳಿಯಲ್ಲಿ ಕೋಮು ದ್ವೇಷ ಕದಡಲು ಇವರೇ ಕಾರಣ ಆಗುತ್ತಿದ್ದಾರೆ. ರಸ್ತೆಯಲ್ಲಿ ನಮಾಜ್ ಮಾಡುವ ವಿಡಿಯೋ ಆಧರಿಸಿ ಸ್ವಯಂಪ್ರೇರಿತ ಕೇಸು ದಾಖಲಿಸಿದ್ದ ಪೊಲೀಸರೇ ಕಾಂಗ್ರೆಸ್ ನಾಯಕರ ಒತ್ತಡ ಬರುತ್ತಲೇ ಬಿ ರಿಪೋರ್ಟ್ ಹಾಕುತ್ತಾರೆ. ಪ್ರಕರಣ ದಾಖಲಿಸಿದ ಬಳಿಕ ತನಿಖೆಯನ್ನೇ ನಡೆಸದೆ ಬಿ ರಿಪೋರ್ಟ್ ಹಾಕಿದ್ದು ಇದೇ ಮೊದಲಿರಬೇಕು. ಅದರ ಜೊತೆಗೆ, ಕಾಂಗ್ರೆಸ್ ನಾಯಕರ ಸೂಚನೆಯಂತೆ ಶರಣ್ ಪಂಪ್ವೆಲ್ ಮೇಲೆ ಕೇಸು ದಾಖಲಿಸಿದ್ದಾರೆ. ಆ ಕೇಸನ್ನು ಅದೇ ರೀತಿ ಹಿಂಪಡೆಯಬೇಕು, ಇಲ್ಲಾಂದ್ರೆ ನಮ್ಮ ಶಕ್ತಿಯನ್ನು ತೋರಿಸಬೇಕಾಗುತ್ತದೆ ಎಂದರು.

ಬಜರಂಗದಳ ಮುಖಂಡ ಪುನೀತ್ ಅತ್ತಾವರ ಮಾತನಾಡಿ, ರಸ್ತೆಯಲ್ಲಿ ನಮಾಜ್ ಮಾಡಿದ್ದಕ್ಕೆ ದಾಖಲೆ ಇತ್ತು. ಅದಕ್ಕಾಗಿ ಪೊಲೀಸರು ಕೇಸು ದಾಖಲು ಮಾಡಿದ್ದಾರೆ. ಅದರ ನೆಪದಲ್ಲಿ ನೀವು ಗಣೇಶೋತ್ಸವ ಮಾಡೋದಿಲ್ಲವೇ, ಭಜನೆ, ಯಕ್ಷಗಾನ ಮಾಡೋದಿಲ್ಲವೇ ಎಂದು ಕೇಳುತ್ತಾರೆ. ನಾವು ಏನು ಮಾಡುವುದಿದ್ದರೂ ಪೊಲೀಸರ ಪರ್ಮಿಶನ್ ಪಡೆದೇ ಮಾಡುತ್ತೇವೆ. ನೀವು ಇದೇ ರೀತಿ ಮಾಡುತ್ತಾ ಹೋದರೆ ನಾವು ಕೇವಲ ಹನುಮಾನ್ ಚಾಲೀಸಾ ಪಠಣ ಮಾಡುವುದಲ್ಲ. ಕೈಯಲ್ಲಿ ದಂಡವನ್ನೂ ಹಿಡಿಯುತ್ತೇವೆ. ನಮಾಜ್ ಮಾಡಲು ಪರ್ಮಿಶನ್ ಬೇಡಾಂದ್ರೆ ಮಸೀದಿ ಎದುರಲ್ಲಿ ಹನುಮಾನ್ ಚಾಲೀಸಾ ಪಠಿಸುವುದಕ್ಕೂ ಪರ್ಮಿಶನ್ ಬೇಕಾಗಲ್ಲ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ನಂದನ್ ಮಲ್ಯ, ಶಿವಾನಂದ ಮೆಂಡನ್ ಸೇರಿದಂತೆ ಹಲವು ಪ್ರಮುಖರು, ಕಾರ್ಯಕರ್ತರು ಪಾಲ್ಗೊಂಡಿದ್ದರು.
Mangalore Vhp Bajrang dal warns police commissioner Anupam agrwal over playing tactics in namaz case. Out of political pressure the sumoto case against muslim guys have been cancelled said jagadish shenava.
17-09-26 04:13 pm
HK News Staffer
ಚಿತ್ರರಂಗದ ಸಾರ್ವಕಾಲಿಕ ಶ್ರೇಷ್ಠ ನಟ ಅನಂತನಾಗ್ ಗೆ '...
16-09-26 10:40 pm
Tulu Language, Shivraj Tangadagi: ತುಳುವಿಗೆ 2ನ...
16-09-26 01:51 pm
Pradeep Eshwar, Pratap Simha: ಪೊಲೀಸ್ ಠಾಣೆಗೆ...
15-09-26 09:13 pm
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
18-09-26 07:30 pm
HK News Staffer
Puttur Medical College, Dakshina Kannada, Man...
18-09-26 06:08 pm
Tulu second official language: ತುಳುನಾಡಿನ ದಶಕಗ...
18-09-26 04:46 pm
Dk Shivakumar, Mangalore, social media: ಸೋಶಿಯ...
18-09-26 04:11 pm
CM Dk Shivakumar, Mangalore: ಕದ್ರಿ ದೇವಸ್ಥಾನದಲ...
18-09-26 03:39 pm
17-09-26 02:22 pm
HK News Staffer
Bangalore Murder, Crime: ಪ್ರೀತಿಸಿ ಮದುವೆಯಾಗಿದ್...
17-09-26 01:56 pm
Bangalore kidnap, Crime: ಬೆಂಗಳೂರಿನಲ್ಲಿ ಶಾಕ್...
17-09-26 12:35 pm
Manglore Cyber crime, Stock Market: ಷೇರು ಮಾರ್...
17-09-26 11:45 am
ಬೆಳ್ತಂಗಡಿ; ಗೃಹಪ್ರವೇಶಕ್ಕೆ ಹೋದಾಗ ಮನೆಗೆ ಕನ್ನ, ₹1...
16-09-26 11:18 am