ಬ್ರೇಕಿಂಗ್ ನ್ಯೂಸ್
24-05-24 09:17 pm Mangalore Correspondent ಕರಾವಳಿ
ಮಂಗಳೂರು, ಮೇ 24: ವಿಧಾನಸಭೆ ಸ್ಪೀಕರ್ ಯುಟಿ ಖಾದರ್ ಅವರ ಹಿರಿಯ ಸೋದರನ ಮಗಳ ಮದುವೆಯ ಅದ್ದೂರಿ ರಿಸೆಪ್ಶನ್ ಸಮಾರಂಭವನ್ನು ಮಂಗಳೂರಿನ ಟಿಎಂಎ ಪೈ ಹಾಲ್ ನಲ್ಲಿ ಮೇ 25 ಮತ್ತು 26ರಂದು ಆಯೋಜಿಸಲಾಗಿದ್ದು ವಿವಿಧ ರಾಜ್ಯಗಳ ರಾಜ್ಯಪಾಲರು, ಕರ್ನಾಟಕ ಸರ್ಕಾರದ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಸಚಿವರು, ಕೇರಳ ಸರ್ಕಾರದ ಸಚಿವರು ಆಗಮಿಸಲಿದ್ದಾರೆ.
ಪ್ರಮುಖ ವಿವಿಐಪಿಗಳು ಮಂಗಳೂರು ನಗರಕ್ಕೆ ಆಗಮಿಸಿ, ನಗರದ PVS ಹಾಗೂ ಲಾಲ್ಬಾಗ್ ಜಂಕ್ಷನ್ಗಳ ನಡುವೆ ಇರುವ ಎಂ.ಜಿ ರಸ್ತೆಯಲ್ಲಿನ ಟಿ.ಎಂ.ಎ.ಪೈ ಹಾಲ್ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸಲಿರುತ್ತಾರೆ. ಈ ಹಿನ್ನೆಲೆಯಲ್ಲಿ ಸದ್ರಿ ಪ್ರದೇಶಗಳಲ್ಲಿ ವಾಹನ ದಟ್ಟಣೆ ಅಧಿಕವಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ ನವಭಾರತ ಸರ್ಕಲ್ನಿಂದ ಪಿವಿಎಸ್ ಮೂಲಕ ಲೇಡಿಹಿಲ್ ಸರ್ಕಲ್ ಕಡೆಗೆ ಹೋಗುವ ಎಂ.ಜಿ ರಸ್ತೆಯಲ್ಲಿನ ಎಲ್ಲಾ ಸಂಪರ್ಕಗಳನ್ನು ಮುಚ್ಚಬೇಕಾಗುತ್ತದೆ. ಬೆಸೆಂಟ್ ಜಂಕ್ಷನ್, ಕೋಡಿಯಾಲ್ಗುತ್ತು ಕ್ರಾಸ್, ಬಲ್ಲಾಳ್ಬಾಗ್ ಜಂಕ್ಷನ್, ನೆಹರೂ ಅವೆನ್ಯೂ ಜಂಕ್ಷನ್ ಸಂಪರ್ಕವೂ ಬಂದ್ ಆಗಲಿದೆ. ಸದ್ರಿ ರಸ್ತೆಯನ್ನು ಬಳಸುವ ಎಲ್ಲ ವಾಹನ ಚಾಲಕರಿಗೆ ಪರ್ಯಾಯ ಮಾರ್ಗಗಳಲ್ಲಿ ಸಂಚರಿಸಲು ಪೊಲೀಸರು ಸೂಚಿಸಿದ್ದಾರೆ.
ವಾಹನ ದಟ್ಟಣೆ ಹೆಚ್ಚಾಗುವ ಸಾಧ್ಯತೆಗಳಿರುವ ಸ್ಥಳಗಳು
ಕೊಟ್ಟಾರ ಚೌಕಿ, ಕುಂಟಿಕಾನ, ಕೆ.ಪಿ.ಟಿ, ನಂತೂರು, ಕೆ.ಎಸ್.ಆರ್.ಟಿ.ಸಿ., ಬಂಟ್ಸ್ ಹಾಸ್ಟೆಲ್, ಡಾ. ಅಂಬೇಡ್ಕರ್ ಸರ್ಕಲ್, ಹಾರ್ಟಿಕಲ್ಚರ್ ಜಂಕ್ಷನ್, ಬಲ್ಮಠ, ಹಂಪನಕಟ್ಟೆ, ಕರಾವಳಿ ಸರ್ಕಲ್, ಕಂಕನಾಡಿ, ಪಂಪ್ವೆಲ್, ತೊಕ್ಕೊಟ್ಟು.
ಸಂಚಾರ ಪರ್ಯಾಯ ವ್ಯವಸ್ಥೆ ಬದಲು
ಹಂಪನಕಟ್ಟೆಯಿಂದ ಬಂಟ್ಸ್ ಹಾಸ್ಟೆಲ್ ಮುಖಾಂತರ ಲೇಡಿಹಿಲ್ಗೆ ಹೋಗುವ ಎಲ್ಲಾ ವಾಹನಗಳು ಕರಂಗಲಪಾಡಿ ಅಥವಾ ಭಾರತ್ ಬೀಡಿ ಜಂಕ್ಷನ್ ಮುಖಾಂತರ ಚಲಿಸುವುದು.
ಪಿ.ವಿ.ಎಸ್ ಜಂಕ್ಷನ್ನಿಂದ ಲೇಡಿಹಿಲ್ ಸರ್ಕಲ್ ವರೆಗಿನ ಎಂ.ಜಿ. ರಸ್ತೆಗೆ ಬಂದು ಸೇರುವ ಎಲ್ಲಾ ಕೂಡು ರಸ್ತೆಗಳನ್ನು ಉಪಯೋಗಿಸುವ ವಾಹನ ಸವಾರರು ಬಿಜೈ ಚರ್ಚ್ ರೋಡ್ / ಕುದ್ರೋಳಿ ರಸ್ತೆಯನ್ನು ಉಪಯೋಗಿಸುವುದು.
ಬಸ್ಸುಗಳ ಸಂಚಾರಕ್ಕೆ ನಿಗದಿಪಡಿಸಿದ ರಸ್ತೆಗಳು
ಕೆ.ಎಸ್.ರಾವ್ ರಸ್ತೆ, ಎಂ.ಜಿ. ರಸ್ತೆ, ಬಂಟ್ಸ್ ಹಾಸ್ಟೆಲ್ ಮುಖಾಂತರ ಸಂಚರಿಸುವ ಎಲ್ಲಾ ಸಿಟಿ ಬಸ್ಸುಗಳು, ಎಕ್ಸ್ಪ್ರೆಸ್ ಬಸ್ಸುಗಳು ಹಾಗೂ KSRTC ಬಸ್ಸುಗಳು ಹಂಪನಕಟ್ಟ, ಡಾ.ಅಂಬೇಡ್ಕರ್ ವೃತ್ತ, ಬಲ್ಮಠ, ಹಾರ್ಟಿಕಲ್ಚರ್ ಜಂಕ್ಷನ್, ಕದ್ರಿ ಜಂಕ್ಷನ್, ನಂತೂರು ಮುಖಾಂತರ ಸಂಚರಿಸಲು ಸೂಚಿಸಿದೆ. ಕೊಟ್ಟಾರ ಚೌಕಿ ಮುಖಾಂತರ ಸ್ಟೇಟ್ಬ್ಯಾಂಕ್ ಕಡೆಗೆ ಬರುವ ಎಲ್ಲಾ ಸಿಟಿ ಬಸ್ಸುಗಳು, ಎಕ್ಸ್ಪ್ರೆಸ್ ಬಸ್ಸುಗಳು ಹಾಗೂ KSRTC ಬಸ್ಸುಗಳು ಅದೇ ನಂತೂರು, ಕದ್ರಿ ಶಿವಭಾಗ್ ಮೂಲಕ ಸಂಚರಿಸಲು ಸೂಚಿಸಿದೆ.
KSRTC ಬಸ್ಸ್ ನಿಲ್ದಾಣದಿಂದ ಹೊರ ಹೋಗುವ ಹಾಗೂ ಒಳಬರುವ ಎಲ್ಲಾ ಬಸ್ಸುಗಳು ರಾಷ್ಟ್ರೀಯ ಹೆದ್ದಾರಿ ಕುಂಟಿಕಾನ ಜಂಕ್ಷನ್ ಮೂಲಕ ಒಳ ಬರಲು ಹಾಗೂ ಹೊರ ಹೋಗಲು ಸೂಚಿಸಿದೆ.
ವಾಹನ ಪಾರ್ಕಿಂಗ್ ನಿಷೇಧಿತ ಸ್ಥಳಗಳು
ಪಿ.ವಿ.ಎಸ್ ಜಂಕ್ಷನ್ನಿಂದ ಲಾಲ್ಭಾಗ್ ಜಂಕ್ಷನ್ ವರೆಗಿನ ಎಂ.ಜಿ ರಸ್ತೆಯಲ್ಲಿ, PVS ಜಂಕ್ಷನ್ ನಿಂದ ಬಂಟ್ಸ್ ಹಾಸ್ಟೆಲ್ ಜಂಕ್ಷನ್ ವರೆಗೆ ಹಾಗೂ ಲಾಲ್ಬಾಗ್ ಜಂಕ್ಷನ್ನಿಂದ ಕೆ.ಪಿ.ಟಿ ಜಂಕ್ಷನ್ ವರೆಗಿನ ರಸ್ತೆಯ ಎರಡೂ ಬದಿಯಲ್ಲಿ ವಾಹನ ನಿಲುಗಡೆ ನಿಷೇಧಿಸಲಾಗಿದೆ. ಎರಡು ದಿನಗಳಲ್ಲಿ ಸಂಜೆಯ ಹೊತ್ತು ಸಂಚಾರ ನಿಷೇಧ ಅನ್ವಯವಾಗಲಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
Mangalore Ut Khader family grand wedding, CM Siddaramaiah governor to attend function, traffic has been diverted for two days from may 25th to 26th. Check details of diversion
26-08-25 10:47 pm
HK News Desk
ನನ್ನ ಪಕ್ಷ ನಿಷ್ಠೆಯನ್ನು ಪ್ರಶ್ನಿಸುವವರು ಮೂರ್ಖರು ;...
26-08-25 07:07 pm
Dharmasthala, SIT, NIA, Home Minister: ಧರ್ಮಸ್...
26-08-25 06:06 pm
Dharmasthala Case SIT Officer M.N. Anucheth:...
26-08-25 04:48 pm
DK Shivakumar, BBMP, Potholea: ಬೆಂಗಳೂರಿನಲ್ಲಿ...
26-08-25 02:04 pm
26-08-25 09:02 pm
HK News Desk
ಜಮ್ಮು ಭಾರಿ ಮಳೆಗೆ ಒಂಬತ್ತು ಮಂದಿ ಬಲಿ ; ಹಲವೆಡೆ ಭೂ...
26-08-25 07:39 pm
Trump Immigrant Population: ಟ್ರಂಪ್ ಸಾಮ್ರಾಜ್ಯದ...
24-08-25 01:47 pm
Actor Vijay, Thalapathy; ಟಿವಿಕೆ ಮುಖ್ಯಸ್ಥ, ನಟ...
23-08-25 04:58 pm
Mp Brijesh Chowta, Mangalore: ಆನ್ಲೈನ್ ಗೇಮಿಂಗ್...
22-08-25 10:00 pm
26-08-25 10:57 pm
Mangalore Correspondent
Vasanth Giliyar Hate speech, Case: ಬೆಳ್ತಂಗಡಿ...
26-08-25 10:18 pm
Dharmasthala case, Chinmaya, Mahesh Shetty: ದ...
26-08-25 10:36 am
Mangalore, Rushabh Rao: ವಿಯಟ್ನಾಂ ಫ್ಯಾಷನ್ ಶೋ ಸ...
25-08-25 10:59 pm
Mangalore, Esyasoft, AI, Bajpe: ಬಜ್ಪೆ ; ಎಸ್ಯಾ...
25-08-25 10:44 pm
26-08-25 10:39 pm
HK News Desk
ಟೆಕ್ನಾಲಜಿಯಲ್ಲಿ ಮುಂದಿರುವ ಅಮೆರಿಕದ ಪ್ರಜೆಗಳನ್ನೇ ಯ...
26-08-25 05:24 pm
ದುಬೈನಲ್ಲಿ ಗಂಡ, ಮೈಸೂರಿನಲ್ಲಿ ಪತ್ನಿಯ ಲವ್ವಿ ಡವ್ವಿ...
25-08-25 08:29 pm
ಶಿಕ್ಷಣ ಸಚಿವ ಮಧು ಬಂಗಾರಪ್ಪ ಪಿಎ ಹೆಸರಲ್ಲಿ ವಸೂಲಿ ;...
25-08-25 07:42 pm
How Did Pastor John Shamine and Criminal Mada...
25-08-25 07:31 pm