ಬ್ರೇಕಿಂಗ್ ನ್ಯೂಸ್
23-05-24 03:13 pm Mangaluru Correspondent ಕರಾವಳಿ
ಮಂಗಳೂರು, ಮೇ23 ಹರೀಶ ಪೂಂಜರಿಗೆ ಸಣ್ಣ ವಯಸ್ಸಿನಲ್ಲಿ ಅಧಿಕಾರ ಸಿಕ್ಕಿದೆ. ಆದರೆ, ಶಾಸಕರು ಸಾರ್ವಜನಿಕ ಜೀವನದಲ್ಲಿ ರೋಲ್ ಮಾಡೆಲ್ ಆಗುವಂತೆ ಇರಬೇಕು. ವೈಕುಂಠ ಬಾಳಿಗಾರಂತಹ ಶಾಸಕರಿದ್ದ ಕ್ಷೇತ್ರವನ್ನು ತುಂಬಿದ್ದವರು ಶಾಸಕನಾಗಿ ಯಾವ ರೀತಿ ಇರಬೇಕು ಎಂದು ತಿಳ್ಕೊಂಡಿರಬೇಕು. ಹರೀಶ್ ಪೂಂಜ ಅವರು ಬಾಯಿಗೆ ಬಂದ ರೀತಿ ಮಾತನಾಡಿ ತಮ್ಮ ವ್ಯಕ್ತಿತ್ವಕ್ಕೆ ಮಸಿ ಬಳಿದುಕೊಂಡಿದ್ದಾರೆ. ಕಾಗೆಯನ್ನು ನೀಚ ಪಕ್ಷಿಯಂತೆ ಬಿಂಬಿಸಿ ಹಿಂದು ಧರ್ಮಕ್ಕೂ ಅವಮಾನಿಸಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ ಹೇಳಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಹಿಂದು ಧರ್ಮದಲ್ಲಿ ಕಾಗೆಯ ಮಹತ್ವ ಏನು ಅನ್ನುವುದು ಹರೀಶ್ ಪೂಂಜಗೆ ಗೊತ್ತಿಲ್ಲ. ಹಿಂದು ಧರ್ಮವನ್ನು ಗುತ್ತಿಗೆ ತೆಗೆದುಕೊಂಡವರ ರೀತಿ ವರ್ತಿಸುವ ಬಿಜೆಪಿ ನಾಯಕರೇ ಹಿಂದು ಧರ್ಮವನ್ನು ನಿಂದನೆ ಮಾಡಿದ್ದಾರೆ. ಶನಿ ದೇವರು ಕಾಗೆಯ ಜೊತೆಗಿರುವುದಲ್ಲವೇ.. ಶ್ರಾದ್ಧ ಮಾಡುವುದಕ್ಕೂ ತುಳುವರು ಕಾಗೆಗೆ ಮೊದಲು ಅನ್ನ ಕೊಟ್ಟು ಪೂಜೆ ಸಲ್ಲಿಸುವ ಸಂಪ್ರದಾಯ ಇದೆ. ಕಾಗೆಗೂ ಮಹತ್ವದ ಸ್ಥಾನ ಇದೆ, ಆದರೆ, ಹರೀಶ್ ಪೂಂಜ ಅವರು ರಕ್ಷಿತ್ ಶಿವರಾಂ ಅವರನ್ನು ಕಾಗೆಗೆ ಹೋಲಿಸಿದ್ದಾರೆ.
ಪೊಲೀಸರು ನೋಟೀಸ್ ಕೊಡಲು ಹರೀಶ್ ಪೂಂಜ ಮನೆಗೆ ತೆರಳಿದ್ದರು. ಬಂಧಿಸಲು ಹೋಗಿರಲಿಲ್ಲ. ಜನ ಸೇರಿಸಿ ಗೊಂದಲ ಏರ್ಪಟ್ಟಾಗ ಹೆಚ್ಚುವರಿ ಪೊಲೀಸರನ್ನು ಕರೆಸಿಕೊಂಡಿದ್ದರು. ಸಂಸದರು ಬಳಿಕ ವಿಚಾರಣೆಗೆ ಕಳಿಸುತ್ತೇನೆ ಎಂದು ಹೇಳಿದ್ದಕ್ಕೆ ಪೊಲೀಸರು ಹಿಂತಿರುಗಿ ಹೋಗಿದ್ದರು. ಠಾಣೆಯಲ್ಲೇ ಜಾಮೀನು ನೀಡಬಲ್ಲ ಸೆಕ್ಷನ್ ಇದ್ದವು ಎಂದು ಪೊಲೀಸರು ತಿಳಿಸಿದ್ದಾರೆ. ಇವರು ಅಷ್ಟಕ್ಕೇ ಬೃಹನ್ನಾಟಕ ಮಾಡುವ ಅಗತ್ಯವಿತ್ತೇ.. ಪೊಲೀಸರು ಬಂಧಿಸಲು ಬಂದಿದ್ದಾರೆ ಎಂದು ಹೇಳಿ ಸುದ್ದಿ ಹಬ್ಬಿಸಿದ್ದು, ಶಾಸಕರು, ಸಂಸದರನ್ನು ಕರೆಸಿ ಡ್ರಾಮಾ ಮಾಡಿದ್ದು ಹರೀಶ್ ಪೂಂಜ ಎಂದು ಭಂಡಾರಿ ಹೇಳಿದರು.
ಬಂಧಿಸಬೇಕೆಂದಿದ್ದರೆ ಅಷ್ಟು ಕಷ್ಟ ಇದೆಯೇ ?
ಕಾರ್ಯಕರ್ತರನ್ನು ನೋಡಿ ಪೊಲೀಸರು ಹಿಂತಿರುಗಿ ಹೋದರು ಅಂತ ಹೇಳ್ತಾರಲ್ವಾ.. ಮುಖ್ಯಮಂತ್ರಿ, ಸಚಿವರನ್ನೇ ಪೊಲೀಸರು ಬಂಧನ ಮಾಡಿಲ್ವಾ.. ಸರಕಾರ ಮನಸ್ಸು ಮಾಡಿದ್ದರೆ ಶಾಸಕರನ್ನು ಬಂಧನ ಮಾಡಲು ಅಷ್ಟು ಕಷ್ಟ ಇದೆಯೇ.. ತಹಸೀಲ್ದಾರ್ ಬಗ್ಗೆ ಅವಾಚ್ಯ ನಿಂದನೆ ಮಾಡುತ್ತಾರೆ. ಅದೇ ತಹಸೀಲ್ದಾರ್ ಚುನಾವಣೆಗೂ ಮುನ್ನ ಎಂಟು ತಿಂಗಳು ಇರಲಿಲ್ಲವೇ, ಆಗಲೂ ಕಾಂಗ್ರೆಸ್ ಏಜೆಂಟ್ ಇದ್ದರೇ ಅಥವಾ ಬಿಜೆಪಿ ಏಜಂಟ್ ಆಗಿದ್ದರೇ.. ಯಾಕೆ, ಆಗ ತಹಸೀಲ್ದಾರ್ ಬಗ್ಗೆ ಮಾತನಾಡಿಲ್ಲ ಎಂದು ಭಂಡಾರಿ ಪ್ರಶ್ನೆ ಮಾಡಿದರು.
ಬಂಗೇರ ಅವರ ರಾಜಕಾರಣದ ವಯಸ್ಸಿನಷ್ಟು ನಿಮಗೆ ವಯಸ್ಸು ಆಗಿಲ್ಲ. ಕೆಜೆ ಹಳ್ಳಿ ಮಾಡ್ತೀನಿ ಅನ್ನೋ ಬದಲು ಒಳ್ಳೆಯ ತಾಲೂಕು ಮಾಡ್ತೀನಿ ಎಂದು ಹೇಳಿ. ಇವರು ಕಾನೂನು ಕೈಗೆತ್ತಿಕೊಂಡವರ ಪರ ಮಾತನಾಡುತ್ತಿದ್ದಾರೆ, ಬಂಗೇರ ಯಾವತ್ತೂ ರೌಡಿ, ಭ್ರಷ್ಟರು, ಅಕ್ರಮ ಮಾಡುತ್ತಿದ್ದವರ ಪರ ಅಧಿಕಾರಿಗಳ ವಿರುದ್ಧ ಮಾತನಾಡಿಲ್ಲ. ಇದರ ನಡುವೆ, ಬಿಜೆಪಿ ನಾಯಕರು 4ನೇ ತಾರೀಕು ನಂತರ ಕಾಂಗ್ರೆಸ್ ಸರ್ಕಾರ ಹೋಗುತ್ತೆ ಎಂದು ಹೇಳುತ್ತಾರೆ. ಯಾವ ಆಧಾರದಲ್ಲಿ ಇದನ್ನು ಹೇಳುತ್ತಾರೋ ಗೊತ್ತಿಲ್ಲ. ನಿಮಗೆ ಅಧಿಕಾರಿಗಳು, ಕಾರ್ಯಾಂಗವೇ ಬೇಡ ಅಂತಾದರೆ, ರಾಜ್ಯಾಂಗವನ್ನೇ ಇಟ್ಕೊಂಡು ಸರಕಾರ ನಡೆಸಕಾಗುತ್ತಾ.. ಆಡಳಿತ ಮಾಡಕ್ಕೆ ಆಗೋದಾದ್ರೆ ಅದನ್ನು ಮಾಡಿಸಿ ಎಂದು ಹೇಳಿದರು.
ಅಕ್ರಮ ಕಲ್ಲು ಕೋರೆ, ಮರಳುಗಾರಿಕೆ ಎಲ್ಲ ಕಡೆ ಇದೆ ಎಂದು ಕೇಳಿದ ಪ್ರಶ್ನೆಗೆ, ಕಾಂಗ್ರೆಸ್ ಯಾವುದೇ ಅಕ್ರಮ ಚಟುವಟಿಕೆಯಲ್ಲಿ ಇಲ್ಲ. ಅಕ್ರಮಗಳಿಗೆ ಬೆಂಬಲ ಕೊಡುವುದಿಲ್ಲ. ಎಲ್ಲ ರೀತಿಯ ಅಕ್ರಮಗಳನ್ನು ಹತ್ತಿಕ್ಕಲು ಉಸ್ತುವಾರಿ ಸಚಿವರಿಗೆ ಹೇಳುತ್ತೇನೆ. ಹರೀಶ್ ಪೂಂಜ ವಿರುದ್ಧ ಕ್ರಮಕ್ಕೆ ಕಾಂಗ್ರೆಸ್ ಹೇಳಿಲ್ಲ. ಅದರ ಹಿಂದೆ ಕಾಂಗ್ರೆಸ್ ಕೈವಾಡವೂ ಇಲ್ಲ. ಇವರೇ ಮೈಗೆ ಬಿದ್ದು ಇದನ್ನೆಲ್ಲ ಮೈಗೆ ಎಳ್ಕೊಂಡಿದ್ದಾರೆ ಎಂದು ಹೇಳಿದರು.
Congress Manjunath Bhandary slams Harish poonja for his indecent behaviour in Belthangady holding a press meet at congres office in Mangalore. Harish Poonja must be a role model not a rowdy he added.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
19-04-25 06:19 pm
Mangaluru Correspondent
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
Mangalore Waqf protest, Adyar, Police: ವಕ್ಫ್...
18-04-25 10:17 pm
Mangalore Waqf Protest, Adyar, Police, Live:...
18-04-25 12:54 pm
19-04-25 10:46 pm
Mangalore Correspondent
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am
Mangalore Kuthar, Ullal Gang Rape, Arrest: ಕು...
18-04-25 10:59 pm