ಬ್ರೇಕಿಂಗ್ ನ್ಯೂಸ್
21-05-24 09:01 pm Mangalore Correspondent ಕರಾವಳಿ
ಮಂಗಳೂರು, ಮೇ 21: ನೇರ, ನಿಷ್ಠುರ ಮತ್ತು ಸತ್ಯವನ್ನೇ ಹೇಳುವ ವಿಶೇಷ ಗುಣ ಹೊಂದಿದ್ದ ಜನಪರ ವ್ಯಕ್ತಿಯಾಗಿದ್ದವರು ವಸಂತ ಬಂಗೇರ. ಇಂತಹ ವ್ಯಕ್ತಿಯ ಅಗಲಿಕೆಯಿಂದ ರಾಜ್ಯದ ರಾಜಕಾರಣ ಬಡವಾಗಿದೆ. ವಸಂತ ಬಂಗೇರ ಅವರ ಪ್ರತಿಮೆಯನ್ನು ಬೆಳ್ತಂಗಡಿಯಲ್ಲೇ ಸ್ಥಾಪಿಸಲು ಕ್ರಮ ವಹಿಸಲಾಗುವುದು. ಬೆಳ್ತಂಗಡಿ ಬಸ್ ನಿಲ್ದಾಣಕ್ಕೆ ವಸಂತ ಬಂಗೇರ ಹೆಸರಿಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಬೆಳ್ತಂಗಡಿಯಲ್ಲಿ ನಡೆದ ಮಾಜಿ ಶಾಸಕ ವಸಂತ ಬಂಗೇರ ಅವರ ಉತ್ತರ ಕ್ರಿಯೆ ಮತ್ತು ನುಡಿನಮನ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಮಾತನಾಡಿದರು. ಐದು ಬಾರಿ ಶಾಸಕರಾಗಿದ್ದರೂ ಒಂದು ಬಾರಿಯೂ ಮಂತ್ರಿಯಾಗಬೇಕೆಂದು ಲಾಬಿ ನಡೆಸಿದವರಲ್ಲ. ಜನರ ಸಮಸ್ಯೆ ಹಿಡಿದು ನನ್ನ ಬಳಿಗೆ ಬರುತ್ತಿದ್ದರೇ ವಿನಾ ಒಂದು ಬಾರಿಯೂ ವೈಯಕ್ತಿಕ ಹಿತಾಸಕ್ತಿ ಹಿಡಿದು ವಿಧಾನಸೌಧಕ್ಕೆ ಬಂದಿಲ್ಲ. ನೇರ, ನಿಷ್ಠುರ ನಡೆಯ ಸತ್ಯವನ್ನೇ ಹೇಳುವ ವಿಶೇಷ ಗುಣ ಅವರಲ್ಲಿತ್ತು. ನಾನು ಮತ್ತು ವಸಂತ ಬಂಗೇರ ಒಟ್ಟಿಗೆ ವಿಧಾನಸಭೆ ಪ್ರವೇಶಿಸಿದ್ದೆವು. ಆವತ್ತಿನಿಂದಲೂ ಕೊನೆಯ ಉಸಿರು ಇರೋವರೆಗೂ ನನಗೆ ಆಪ್ತ ಮಿತ್ರನಾಗಿದ್ದರು.




ಬೆಂಗಳೂರಿನಲ್ಲಿ ಅನಾರೋಗ್ಯದಲ್ಲಿದ್ದಾಗ ನೋಡಲು ಹೋಗಿದ್ದೆ. ಉಷಾರಾಗಿ ಬರಬಹುದು, ನಮ್ಮೊಂದಿಗೆ ಇನ್ನೂ ಜೊತೆಗಿರುತ್ತಾರೆ ಎಂದುಕೊಂಡಿದ್ದೆ. ಆಪ್ತರನ್ನು ಕಳಕೊಂಡ ನೋವು ನನ್ನನ್ನು ಕಾಡುತ್ತಿದೆ. ಆದರೆ ಸದಾ ಜನರ ಪರ ಇರುತ್ತಿದ್ದ ವ್ಯಕ್ತಿಯನ್ನು ಜನರು ಮರೆಯಲ್ಲ, ಜನರ ಮನಸ್ಸಿನಲ್ಲಿ ಶಾಶ್ವತವಾಗಿ ಸ್ಥಾನ ಪಡೆಯಲಿದ್ದಾರೆ. ವಸಂತ ಬಂಗೇರ ಅವರು ತಮ್ಮ ರಾಜಕೀಯ ಜೀವನವನ್ನು ಜನರ ಪರವಾಗಿದ್ದುಕೊಂಡೇ ಸಾರ್ಥಕ ಮಾಡಿಕೊಂಡಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.
ಕಾರ್ಯಕ್ರಮದಲ್ಲಿ ಹಿರಿಯ ಮುಖಂಡ ಜನಾರ್ದನ ಪೂಜಾರಿ, ವಿಧಾನಸಭೆ ಸ್ಪೀಕರ್ ಯುಟಿ ಖಾದರ್, ಮಾಜಿ ಸಚಿವ ರಮಾನಾಥ ರೈ, ಪುತ್ತೂರು ಶಾಸಕ ಅಶೋಕ್ ರೈ, ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್, ಬೆಳ್ತಂಗಡಿ ಕ್ಷೇತ್ರದ ಮುಖಂಡ ರಕ್ಷಿತ್ ಶಿವರಾಂ, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಮತ್ತಿತರರಿದ್ದರು.
CM Siddaramaiah pays tributes to Vasant Bangera at Belthangady in Mangalore. Chief Minister Siddaramaiah on Tuesday paid glowing tributes to former MLA Vasant Bangera and recalled that he and the deceased Congress leader had entered the Assembly together and had been very close.
17-09-26 04:13 pm
HK News Staffer
ಚಿತ್ರರಂಗದ ಸಾರ್ವಕಾಲಿಕ ಶ್ರೇಷ್ಠ ನಟ ಅನಂತನಾಗ್ ಗೆ '...
16-09-26 10:40 pm
Tulu Language, Shivraj Tangadagi: ತುಳುವಿಗೆ 2ನ...
16-09-26 01:51 pm
Pradeep Eshwar, Pratap Simha: ಪೊಲೀಸ್ ಠಾಣೆಗೆ...
15-09-26 09:13 pm
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
18-09-26 07:30 pm
HK News Staffer
Puttur Medical College, Dakshina Kannada, Man...
18-09-26 06:08 pm
Tulu second official language: ತುಳುನಾಡಿನ ದಶಕಗ...
18-09-26 04:46 pm
Dk Shivakumar, Mangalore, social media: ಸೋಶಿಯ...
18-09-26 04:11 pm
CM Dk Shivakumar, Mangalore: ಕದ್ರಿ ದೇವಸ್ಥಾನದಲ...
18-09-26 03:39 pm
17-09-26 02:22 pm
HK News Staffer
Bangalore Murder, Crime: ಪ್ರೀತಿಸಿ ಮದುವೆಯಾಗಿದ್...
17-09-26 01:56 pm
Bangalore kidnap, Crime: ಬೆಂಗಳೂರಿನಲ್ಲಿ ಶಾಕ್...
17-09-26 12:35 pm
Manglore Cyber crime, Stock Market: ಷೇರು ಮಾರ್...
17-09-26 11:45 am
ಬೆಳ್ತಂಗಡಿ; ಗೃಹಪ್ರವೇಶಕ್ಕೆ ಹೋದಾಗ ಮನೆಗೆ ಕನ್ನ, ₹1...
16-09-26 11:18 am