ಬ್ರೇಕಿಂಗ್ ನ್ಯೂಸ್
21-05-24 07:15 pm Udupi Correspondent ಕರಾವಳಿ
ಉಡುಪಿ, ಮೇ 21: ಶಾಲೆಯಲ್ಲಿ ಮುಖ್ಯೋಪಾಧ್ಯಾಯರು ಟಿಸಿ ಕೊಟ್ಟಿಲ್ಲವೆಂದು ಮನನೊಂದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಯೊಬ್ಬ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾದ ಘಟನೆ ಬೈಂದೂರಿನಲ್ಲಿ ನಡೆದಿದೆ. ನಿತಿನ್ (16) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ.
ಬೈಂದೂರು ಸರ್ಕಾರಿ ಪ್ರೌಢಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ನಿತಿನ್ ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತೀರ್ಣನಾಗಿದ್ದ. ಬೇರೆ ಕಾಲೇಜಿನಲ್ಲಿ ಪಿಯುಸಿಗೆ ಸೇರಲು ಟಿಸಿ ಪಡೆಯಲೆಂದು ನಿತಿನ್ ಶಾಲೆಗೆ ಬಂದಿದ್ದ ಎನ್ನಲಾಗಿದೆ.
ಆದರೆ ಶಾಲೆಯಲ್ಲಿ ಮುಖ್ಯೋಪಾಧ್ಯಾಯ ಸುರೇಶ್ ಭಟ್ ತನಗೆ ಬೈದಿದ್ದಾರೆ ಎಂದು ಸಾವಿಗೂ ಮುನ್ನ ಡೆತ್ ನೋಟ್ ಬರೆದಿಟ್ಟು ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾನೆ. ಬೈಂದೂರು ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದ್ದು ಸಾರ್ವಜನಿಕರು ಠಾಣೆ ಮುಂದೆ ಜಮಾಯಿಸಿ ಶಾಲೆಯ ಮುಖ್ಯೋಪಾಧ್ಯಾಯ ಸುರೇಶ್ ಭಟ್ ಬಂಧಿಸುವಂತೆ ಆಗ್ರಹಿಸಿದ್ದಾರೆ. ಪೊಲೀಸರು ತನಿಖೆ ನಡೆಸಿ ಕ್ರಮ ಜರುಗಿಸುವುದಾಗಿ ಭರವಸೆ ನೀಡಿದ್ದಾರೆ.
ಅಮ್ಮ ನಿಮ್ಮಲ್ಲಿ ಕೆಲವು ವಿಷಯ ಮುಚ್ಚಿಟ್ಟಿದ್ದೇನೆ !
ಅಮ್ಮ ನಾನು ನಿಮ್ಮ ಹತ್ತಿರ ತುಂಬಾ ಸತ್ಯವನ್ನು ಮುಚ್ಚಿಟ್ಟಿದ್ದೇನೆ. ನಾನು ಶಾಲೆಗೆ ಹೋದಾಗ, ನಿನಗೆ ಟಿಸಿ ಕೊಡೋದಕ್ಕೆ ಆಗೋದಿಲ್ಲ. ನೀನು ಸಿಸಿಟಿವಿ ಹಾಗೂ ಬೇರೆ ವಸ್ತುಗಳನ್ನು ಹಾಳು ಮಾಡಿದ್ದೀಯಾ. ನೀನು ನಿನ್ನ ಪೋಷಕರನ್ನು ಕರೆದುಕೊಂಡು ಬರಬೇಕು. ಜತೆಗೆ ಅದಕ್ಕೆ ದಂಡ ಕಟ್ಟಬೇಕು ಅಂತ ಮುಖ್ಯಗುರು ಹೇಳಿದ್ದಾರೆ. ಆದರೆ ನನಗೆ ನಿಮ್ಮ ಕಷ್ಟಗಳನ್ನು ನೋಡೋಕೆ ಆಗದೇ, ನಿಮ್ಮ ಹತ್ತಿರ ಏನನ್ನೂ ಹೇಳೋದಕ್ಕೆ ಆಗಲಿಲ್ಲ. ಅವರು ನನಗೆ ಶಾಲೆಯಲ್ಲಿ ತುಂಬಾನೇ ಅವಮಾನ ಮಾಡಿದ್ದಾರೆ. ಅದು ನನ್ನ ಹತ್ತಿರ ಸಹಿಸಿಕೊಳ್ಳಲು ಆಗಲಿಲ್ಲ. ಅವರಿಗೆ ನಾನೂ ಹೇಳಿದ್ದೆ, ನೀವು ಹೇಳಿದ ವಸ್ತುಗಳನ್ನು ನಾನು ಹಾಳು ಮಾಡಿಲ್ಲ ಅಂತ. ಆದರೆ ಅವರು ನೀನೇ ಇದನ್ನ ಮಾಡಿದ್ದು ಅಂತ ಹೇಳಿದ್ರು. ಅದಕ್ಕೆ ನಾನು ಟಿಸಿ ಕೊಡಿ ಸರ್ ಅಂತ ಹೇಳಿದ್ದೆ. ಆದರೆ ಆ ವಸ್ತಗಳನ್ನು ರಿಪೇರಿ ಮಾಡಿಸು, ಆಮೇಲೆ ಟಿಸಿ ಕೊಡುತ್ತೇನೆ ಅಂತ ಹೇಳಿದ್ದಾರೆ ಎಂದು ಡೆತ್ ನೋಟ್ನಲ್ಲಿ ವಿದ್ಯಾರ್ಥಿ ಬರೆದಿಟ್ಟಿದ್ದು ಮರುಕ ಹುಟ್ಟಿಸುತ್ತದೆ.
Members of the public and family of the deceased SSLC student, who killed himself for refusal to give him a Transfer Certificate (TC) to join PU college by Byndoor PU college high school authorities, held a protest in front of Byndoor police station calling for the arrest of those who abetted his suicide while also providing suitable justice.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
19-04-25 06:19 pm
Mangaluru Correspondent
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
Mangalore Waqf protest, Adyar, Police: ವಕ್ಫ್...
18-04-25 10:17 pm
Mangalore Waqf Protest, Adyar, Police, Live:...
18-04-25 12:54 pm
19-04-25 10:46 pm
Mangalore Correspondent
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am
Mangalore Kuthar, Ullal Gang Rape, Arrest: ಕು...
18-04-25 10:59 pm