ಬ್ರೇಕಿಂಗ್ ನ್ಯೂಸ್
20-05-24 08:47 pm Mangalore Correspondent ಕರಾವಳಿ
ಬಂಟ್ವಾಳ, ಮೇ 20: ಸಾಲೆತ್ತೂರು ಬಳಿಯ ಮೋಂತಿಮಾರ್ ಎಂಬಲ್ಲಿ ಕಾರೊಂದು ಸ್ಕೂಟರಿಗೆ ಡಿಕ್ಕಿಯಾಗಿ ಪರಾರಿಯಾಗಿದ್ದು ಪುತ್ತೂರಿನ ಮಾಜಿ ಸೈನಿಕರೊಬ್ಬರು ಸಾವನ್ನಪ್ಪಿದ್ದಾರೆ.
ಸೋಮವಾರ ಮಧ್ಯಾಹ್ನ ಆಕ್ಟಿವಾದಲ್ಲಿ ಸಂಚರಿಸುತ್ತಿದ್ದ ಪುತ್ತೂರಿನ ನೆಹರು ನಗರದ ನಿವಾಸಿ ನಿವೃತ್ತ ಸೈನಿಕ ಚಿದಾನಂದ ಕಾಮತ್ (55) ಅವರಿಗೆ ಕಾರು ಡಿಕ್ಕಿಯಾಗಿದೆ. ಕಾಮತ್ ತೀವ್ರ ಗಾಯಗೊಂಡಿದ್ದು ಆಸ್ಪತ್ರೆಗೆ ತಲುಪುವಷ್ಟರಲ್ಲಿ ಸಾವನ್ನಪ್ಪಿದ್ದಾರೆ.


ಮುಡಿಪು ಇನ್ಫೋಸಿಸ್ ಕಂಪೆನಿಯಲ್ಲಿ ಸೆಕ್ಯೂರಿಟಿ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಇವರು ತಾಯಿ ಜೊತೆ ಪುತ್ತೂರಿನಲ್ಲಿ ವಾಸವಾಗಿದ್ದರು. ಸಾಲೆತ್ತೂರಿನಿಂದ ಮುಡಿಪು ಕಡೆಗೆ ಹೋಗುತ್ತಿದ್ದ ಸ್ಕೂಟರ್ ಸವಾರ ಚಿದಾನಂದ ಕಾಮತ್ ಅವರಿಗೆ ಅಪರಿಚಿತ ಕಾರು ಡಿಕ್ಕಿ ಹೊಡೆದು ಪರಾರಿಯಾಗಿದೆ. ಅವರನ್ನು ಸ್ಥಳೀಯರು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದ್ದು ಅಷ್ಟರಲ್ಲಿ ಮೃತಪಟ್ಟಿದ್ದಾರೆ. ಪೊಲೀಸರು ಕಾರು ಚಾಲಕನನ್ನು ಪತ್ತೆಹಚ್ಚಿದ್ದು, ಆತನ ವಿರುದ್ಧ ಹಿಟ್ ಆಂಡ್ ರನ್ ಪ್ರಕರಣ ದಾಖಲಿಸಿದ್ದಾರೆ. ಮೆಲ್ಕಾರ್ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಆಟೋ ಪಲ್ಟಿಯಾಗಿ ಪ್ರಯಾಣಿಕ ಸಾವು
ಪಾಣೆಮಂಗಳೂರು ಪೇಟೆಯಲ್ಲಿ ಸೋಮವಾರ ಸಂಜೆ ನಡೆದ ಮತ್ತೊಂದು ಅಪಘಾತ ಘಟನೆಯಲ್ಲಿ ಆಟೋವೊಂದು ಬೈಕಿಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದ್ದರಿಂದ ಪ್ರಯಾಣಿಕ ರಸ್ತೆಗೆ ಎಸೆಯಲ್ಪಟ್ಟು ಸಾವನ್ನಪ್ಪಿದ್ದಾರೆ. ಸಜೀಪ ನಿವಾಸಿ ಅಲ್ತಾಫ್ (18) ಮೃತಪಟ್ಟವರು.
ಬಿ.ಸಿ.ರೋಡಿನಿಂದ ತೆರಳುತ್ತಿದ್ದ ಆಟೋ ಹಾಗೂ ಪಾಣೆಮಂಗಳೂರು ಪೇಟೆಯಿಂದ ಬರುತ್ತಿದ್ದ ಬೈಕ್ ನಡುವೆ ಅಪಘಾತ ಸಂಭವಿಸಿತ್ತು. ಈ ಸಂದರ್ಭ ಆಟೋದಲ್ಲಿದ್ದ ಪ್ರಯಾಣಿಕ ರಸ್ತೆಗೆ ಎಸೆಯುವ ದೃಶ್ಯ ಸಿ.ಸಿ. ಕ್ಯಾಮರಾದಲ್ಲಿ ಸೆರೆಯಾಗಿದೆ. ರಸ್ತೆಗೆ ಎಸೆಯಲ್ಪಟ್ಟ ರಭಸಕ್ಕೆ ಯುವಕನ ತಲೆಗೆ ಗಂಭೀರ ಗಾಯವಾಗಿತ್ತು. ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
Mangalore accident in Bantwal, 55 year old man dies after car hits bike. The deceased has been identified as Chidanand Kamath. He was a Ex Army man. A hit and run case has been registered at Bantwal.
10-01-26 10:28 pm
HK News Desk
"ಡ್ಯಾಡಿ ಈಸ್ ಹೋಮ್" ಎಐ ವಿಡಿಯೋ ರಿಲೀಸ್ ; ರಾಜ್ಯ ರಾ...
10-01-26 04:29 pm
ಚಾರ್ಮಾಡಿ ಘಾಟಿಯಲ್ಲಿ ರಸ್ತೆಗೆ ಅಡ್ಡ ನಿಂತ ಒಂಟಿ ಸಲಗ...
10-01-26 03:00 pm
Purushottam Bilimale, Legal Battle Against Ma...
10-01-26 01:17 pm
ಮಲಯಾಳ ಭಾಷಾ ಮಸೂದೆಯಿಂದ ಕಾಸರಗೋಡು ಕನ್ನಡಿಗರಿಗೆ ಧಕ್...
09-01-26 04:42 pm
11-01-26 06:07 pm
HK News
ವೆನಿಜುವೆಲಾ ತೈಲದ ನಿಯಂತ್ರಣಕ್ಕೆ ಮುಂದಾದ ಅಮೆರಿಕ ;...
10-01-26 03:22 pm
ಶಬರಿಮಲೆ ಚಿನ್ನ ಕಳವು ಪ್ರಕರಣ ; ಪ್ರಧಾನ ತಂತ್ರಿ ಕಂಠ...
09-01-26 11:00 pm
ಟ್ರಂಪ್ ಕೈಗಳು ಸಾವಿರಾರು ಇರಾನಿಗರ ರಕ್ತದಿಂದ ಒದ್ದೆಯ...
09-01-26 08:30 pm
ರಷ್ಯಾ ಹಡಗು ವಶಕ್ಕೆ ಪಡೆದ ಬೆನ್ನಲ್ಲೇ ಅಮೆರಿಕಕ್ಕೆ ತ...
08-01-26 11:21 pm
11-01-26 10:39 pm
Mangaluru Staffer
ಬಾಂಗ್ಲಾದಲ್ಲಿ ಹಿಂದುಗಳ ಹತ್ಯೆಯನ್ನು ಭಾರತ ನೋಡುತ್ತ...
11-01-26 07:06 pm
ಅಮೆರಿಕ ಬಿಟ್ಟು ಚೀನಾ ಜೊತೆಗೆ ಬಾಂಧವ್ಯ ಬೆಳೆಸಬೇಕಿದೆ...
11-01-26 12:56 pm
Cm Siddaramaiah, Mangalore: ಕರಾವಳಿ ಪ್ರವಾಸೋದ್ಯ...
10-01-26 10:45 pm
ಡೀಮ್ಡ್ ಯುನಿವರ್ಸಿಟಿಗಳಲ್ಲಿ ಭಾಷೆಯ ಅವಜ್ಞೆ ; ಸಾಹಿತ...
10-01-26 07:57 pm
11-01-26 09:59 pm
Mangaluru Staff
ಆರು ವರ್ಷದ ಬಾಲಕಿಯನ್ನು ಅಪಹರಿಸಿ, ಕೊಲೆ ; ತಾಯಿ ಜಗಳ...
07-01-26 10:45 pm
ಸಮಾಧಿಯಲ್ಲಿ ಡ್ರಗ್ಸ್ ಬಚ್ಚಿಟ್ಟು ಮಾರಾಟ ; 3.5 ಕೋಟಿ...
06-01-26 07:04 pm
Kanachur Hospital, POSCO, Doctor: ಚಿಕಿತ್ಸೆಗೆ...
06-01-26 02:24 pm
ಯಲ್ಲಾಪುರ ; ಮದ್ವೆಗೆ ಒಪ್ಪಿಲ್ಲವೆಂದು ನಡುರಸ್ತೆಯಲ್ಲ...
04-01-26 11:02 pm