ಬ್ರೇಕಿಂಗ್ ನ್ಯೂಸ್
20-05-24 11:24 am Mangalore Correspondent ಕರಾವಳಿ
ಮಂಗಳೂರು, ಮೇ.20: ಪ್ರೇಯಸಿ ಆತ್ಮಹತ್ಯೆ ಮಾಡಿಕೊಂಡಿದ್ದನ್ನು ತಿಳಿದ ಯುವಕನೊಬ್ಬ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದುದನ್ನು ಬಿಟ್ಟು ಬಂದು ತನ್ನ ಊರಿನಲ್ಲೇ ರೈಲಿನಡಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮೂಲ್ಕಿ ಬಳಿ ನಡೆದಿದೆ.
ಮೂಡುಬಿದಿರೆ ಸಮೀಪದ ಮಾರ್ಪಾಡಿ ಗ್ರಾಮದ ನಾಗರಕಟ್ಟೆ ಅಬ್ಬಕ್ಕ ನಗರದ ನಿವಾಸಿ ಹರೀಶ್ ಕೋಟ್ಯಾನ್ ಎಂಬವರ ಪುತ್ರಿ ಶರಣ್ಯ(19) ಮತ್ತು ಮೂಲ್ಕಿಯ ಅತಿಕಾರಿಬೆಟ್ಟು ಮೈಲೊಟ್ಟು ನಿವಾಸಿ ಕಾರ್ತಿಕ್ ಪೂಜಾರಿ (20) ಪ್ರತ್ಯೇಕವಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರಿಬ್ಬರು ಮೂಲ್ಕಿಯ ಕಾಲೇಜು ಒಂದರಲ್ಲಿ ಸಹಪಾಠಿಗಳಾಗಿದ್ದು, ಪರಸ್ಪರ ಪ್ರೀತಿಸುತ್ತಿದ್ದರು. ಸಣ್ಣ ವಯಸ್ಸಿನವರಾದ ಕಾರಣ ಮದುವೆಗೆ ಮನೆಯವರ ಒಪ್ಪಿಗೆ ಇರಲಿಲ್ಲ.
ಈ ನಡುವೆ, ಶರಣ್ಯಳನ್ನು ನಾಲ್ಕು ತಿಂಗಳ ಹಿಂದೆ ಕಾಲೇಜು ಬಿಡಿಸಿ ಹೆತ್ತವರು ಮೂಡುಬಿದಿರೆಯ ಮನೆಯಲ್ಲೇ ಇರುವಂತೆ ಮಾಡಿದ್ದರು. ತಂದೆ, ತಾಯಿ ಕ್ಯಾಂಟೀನ್ ಹೋಗಿ ಕೆಲಸ ಮಾಡುತ್ತಿದ್ದರೆ, ಮನೆಯಲ್ಲೇ ಉಳಿದಿದ್ದ ಶರಣ್ಯ ಖಿನ್ನತೆಗೆ ಒಳಗಾಗಿದ್ದಳು. ಶುಕ್ರವಾರ ಸಂಜೆ ಹೆತ್ತವರು ಮನೆಗೆ ಬಂದಾಗ, ಆಕೆಯ ಕೋಣೆಗೆ ಬಾಗಿಲು ಹಾಕಲಾಗಿತ್ತು. ಕಿಟಕಿಯಲ್ಲಿ ನೋಡಿದಾಗ, ಶಾಲನ್ನು ಕಿಟಕಿಗೆ ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಪತ್ತೆಯಾಗಿತ್ತು. ಮೂಡುಬಿದಿರೆ ಪೊಲೀಸರು ಸ್ಥಳ ಪರಿಶೀಲಿಸಿ ಆತ್ಮಹತ್ಯೆ ಪ್ರಕರಣ ದಾಖಲಿಸಿದ್ದರು.
ಇದೇ ವೇಳೆ, ಕಾರ್ತಿಕ್ ಪೂಜಾರಿ ಇತ್ತೀಚೆಗೆ ಚಿತ್ರದುರ್ಗದ ಸಂಬಂಧಿಕರಲ್ಲಿಗೆ ತೆರಳಿ, ಅಲ್ಲಿನ ಗ್ಯಾರೇಜಿನಲ್ಲಿ ಮೆಕ್ಯಾನಿಕ್ ಆಗಿ ಕೆಲಸ ಮಾಡತೊಡಗಿದ್ದ. ಇತ್ತ ಪ್ರೇಯಸಿ ಶರಣ್ಯ ಸಾವಿಗೆ ಶರಣಾಗಿರುವುದು ತಿಳಿಯುತ್ತಲೇ ಕಾರ್ತಿಕ್ ಏಕಾಏಕಿ ಕೆಲಸ ಬಿಟ್ಟು ಊರಿಗೆ ಬಂದಿದ್ದು ಶನಿವಾರ ಸಂಜೆ ಮನೆಗೆ ತಲುಪಿದ್ದ. ತಾಯಿ ಬೇರೆ ಕಡೆ ಹೋಗಿದ್ದಾಗ ಭಾನುವಾರ ಮುಂಜಾನೆ ಮನೆ ಪಕ್ಕದಲ್ಲಿರುವ ರೈಲ್ವೇ ಹಳಿಯಲ್ಲಿ ರೈಲಿನಡಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಬಗ್ಗೆ ಮೂಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Moodbidri suicide, youth jumps infront of moving train after girlfriend commits suicide in Mangalore. The deceased is identified as Kartik Poojary (20), son of Meera and a resident of Molottu. Mulky police inspector Vidyadhar visited the spot and registered a case.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
19-04-25 06:19 pm
Mangaluru Correspondent
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
Mangalore Waqf protest, Adyar, Police: ವಕ್ಫ್...
18-04-25 10:17 pm
Mangalore Waqf Protest, Adyar, Police, Live:...
18-04-25 12:54 pm
19-04-25 10:46 pm
Mangalore Correspondent
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am
Mangalore Kuthar, Ullal Gang Rape, Arrest: ಕು...
18-04-25 10:59 pm