ಬ್ರೇಕಿಂಗ್ ನ್ಯೂಸ್
19-05-24 10:11 pm Mangalore Correspondent ಕರಾವಳಿ
ಮಂಗಳೂರು, ಮೇ 19: ಶಿವಮೊಗ್ಗದಲ್ಲಿ ಹರ್ಷ ಕೊಲೆಯಾದ ಸಂದರ್ಭದಲ್ಲಿ ಧನಂಜಯ ಸರ್ಜಿ, ಕಾಂಗ್ರೆಸ್, ಕಮ್ಯುನಿಸ್ಟರ ಜೊತೆಗೂಡಿ ಶಾಂತಿಗಾಗಿ ನಡಿಗೆ ಮಾಡಿದ್ದರು ಎಂಬ ಮಾಜಿ ಶಾಸಕ ರಘುಪತಿ ಭಟ್ ಆರೋಪಕ್ಕೆ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಧನಂಜಯ ಸರ್ಜಿ ಪ್ರತಿಕ್ರಿಯೆ ನೀಡಿದ್ದಾರೆ.
ಹತ್ತನೇ ವಯಸ್ಸಿನಲ್ಲೇ ಆರೆಸ್ಸೆಸ್ ಕಾರ್ಯಕರ್ತನಾಗಿ ತೊಡಗಿಕೊಂಡಿದ್ದೆ. ಐಟಿಸಿ, ಓಟಿಸಿ ಮಾಡಿದ್ದೇನೆ. ಪುತ್ತೂರಿನಲ್ಲಿ ಸಂಘದ ಮುಖ್ಯ ಶಿಕ್ಷಕನಾಗಿ ಕೆಲಸ ಮಾಡಿದ್ದೇನೆ. ಎಂಬಿಬಿಎಸ್ ಮುಗಿಸಿದ ಬಳಿಕ ಸಾರ್ವಜನಿಕ ಜೀವನದಲ್ಲಿ ತೊಡಗಿದ್ದೇನೆ. ಸಂಘದಲ್ಲಿ 36 ವರ್ಷಗಳಿಂದ ಕಾರ್ಯಕರ್ತನಾಗಿದ್ದೇನೆ. ಪಕ್ಷದಲ್ಲಿ ಎರಡು ವರ್ಷದಲ್ಲಿ ಅನುಭವ ಅಷ್ಟೇ. ಹರ್ಷ ಕುಟುಂಬಸ್ಥರು ನನಗೆ ಮೊದಲಿನಿಂದಲೂ ಪೇಶಂಟ್. ಕೊಲೆ ಘಟನೆಯ ಸಂದರ್ಭದಲ್ಲಿ ಸಮಾಜದಲ್ಲಿ ಶಾಂತಿ ಸ್ಥಾಪನೆಗಾಗಿ ನಡಿಗೆಯನ್ನು ಹಮ್ಮಿಕೊಂಡಿದ್ದೆವು. ಅದರಲ್ಲಿ ಬೇರಾವುದೇ ದುರುದ್ದೇಶ ಇರಲಿಲ್ಲ ಎಂದರು.
ನಿಮ್ಮನ್ನು ಸಂಘ ಆಯ್ಕೆ ಮಾಡಿದ್ದೋ, ನಾಯಕರು ಆಯ್ಕೆ ಮಾಡಿದ್ದೋ ಎಂಬ ಪ್ರಶ್ನೆಗೆ, ಪಕ್ಷ ಆಯ್ಕೆ ಮಾಡಿರುವುದು, ಪಕ್ಷದ ಸೂಚನೆಗೆ ಬದ್ಧನಾಗಿದ್ದೇನೆ ಎಂದರು. ಶಂಕರಮೂರ್ತಿಯಂಥವರು ಸುದೀರ್ಘ ಕಾಲದಿಂದ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ಕ್ಷೇತ್ರದ ಘನತೆಯನ್ನು ಉಳಿಸಿಕೊಂಡು ಪದವೀಧರರ ಪರವಾಗಿ ಪರಿಷತ್ತಿನಲ್ಲಿ ಧ್ವನಿಯೆತ್ತುವ ಕೆಲಸ ಮಾಡುತ್ತೇನೆ. ಶಿವಮೊಗ್ಗದಲ್ಲಿ ಇಡೀ ಜಿಲ್ಲೆಯ ಜನರು ನನಗೆ ಬೆಂಬಲವಾಗಿ ನಿಂತಿದ್ದಾರೆ ಎಂದು ಧನಂಜಯ ಸರ್ಜಿ ಹೇಳಿದ್ದಾರೆ.
ಮಾಜಿ ಶಾಸಕ ರಘುಪತಿ ಭಟ್ ನಿಮ್ಮ ಆಯ್ಕೆ ವಿರುದ್ಧ ಬಂಡಾಯ ಸ್ಪರ್ಧೆ ಮಾಡಿದ್ದಾರಲ್ವಾ ಎಂಬ ಪ್ರಶ್ನೆಗೆ, ಬಂಡಾಯ ವಿಚಾರವನ್ನು ಪಕ್ಷದ ನಾಯಕರು ನೋಡಿಕೊಳ್ಳಲಿದ್ದಾರೆ. ನಾವು ಆ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.
Dr Dhananjay Sarji slams Raghupati Bhat in Mangalore. I am a active RSS member since class 10
27-08-25 11:48 am
Bangalore Correspondent
R Ashok, Dharmasthala: ಬುರುಡೆ ಕಥೆ ಹೊರಗಡೆ ಬಂದ...
26-08-25 10:47 pm
ನನ್ನ ಪಕ್ಷ ನಿಷ್ಠೆಯನ್ನು ಪ್ರಶ್ನಿಸುವವರು ಮೂರ್ಖರು ;...
26-08-25 07:07 pm
Dharmasthala, SIT, NIA, Home Minister: ಧರ್ಮಸ್...
26-08-25 06:06 pm
Dharmasthala Case SIT Officer M.N. Anucheth:...
26-08-25 04:48 pm
26-08-25 09:02 pm
HK News Desk
ಜಮ್ಮು ಭಾರಿ ಮಳೆಗೆ ಒಂಬತ್ತು ಮಂದಿ ಬಲಿ ; ಹಲವೆಡೆ ಭೂ...
26-08-25 07:39 pm
Trump Immigrant Population: ಟ್ರಂಪ್ ಸಾಮ್ರಾಜ್ಯದ...
24-08-25 01:47 pm
Actor Vijay, Thalapathy; ಟಿವಿಕೆ ಮುಖ್ಯಸ್ಥ, ನಟ...
23-08-25 04:58 pm
Mp Brijesh Chowta, Mangalore: ಆನ್ಲೈನ್ ಗೇಮಿಂಗ್...
22-08-25 10:00 pm
26-08-25 10:57 pm
Mangalore Correspondent
Vasanth Giliyar Hate speech, Case: ಬೆಳ್ತಂಗಡಿ...
26-08-25 10:18 pm
Dharmasthala case, Chinmaya, Mahesh Shetty: ದ...
26-08-25 10:36 am
Mangalore, Rushabh Rao: ವಿಯಟ್ನಾಂ ಫ್ಯಾಷನ್ ಶೋ ಸ...
25-08-25 10:59 pm
Mangalore, Esyasoft, AI, Bajpe: ಬಜ್ಪೆ ; ಎಸ್ಯಾ...
25-08-25 10:44 pm
26-08-25 10:39 pm
HK News Desk
ಟೆಕ್ನಾಲಜಿಯಲ್ಲಿ ಮುಂದಿರುವ ಅಮೆರಿಕದ ಪ್ರಜೆಗಳನ್ನೇ ಯ...
26-08-25 05:24 pm
ದುಬೈನಲ್ಲಿ ಗಂಡ, ಮೈಸೂರಿನಲ್ಲಿ ಪತ್ನಿಯ ಲವ್ವಿ ಡವ್ವಿ...
25-08-25 08:29 pm
ಶಿಕ್ಷಣ ಸಚಿವ ಮಧು ಬಂಗಾರಪ್ಪ ಪಿಎ ಹೆಸರಲ್ಲಿ ವಸೂಲಿ ;...
25-08-25 07:42 pm
How Did Pastor John Shamine and Criminal Mada...
25-08-25 07:31 pm