ಬ್ರೇಕಿಂಗ್ ನ್ಯೂಸ್
14-05-24 09:13 pm Mangalore Correspondent ಕರಾವಳಿ
ಉಳ್ಳಾಲ, ಮೇ.14: ಉಳ್ಳಾಲ ತಾಲೂಕಿನ ಸೋಮೇಶ್ವರ ಪುರಸಭಾ ವ್ಯಾಪ್ತಿಯ ಪಿಲಾರು, ದೇಲಂತಬೆಟ್ಟು ನಿವಾಸಿ ಶತಾಯುಷಿ ರಾಜೀವಿ ಶೆಟ್ಟಿ(107) ವಯೋಸಹಜ ಕಾಯಿಲೆಯಿಂದ ಮಂಗಳವಾರ ಮುಂಜಾನೆ ಸ್ವಗೃಹದಲ್ಲಿ ನಿಧನ ಹೊಂದಿದರು.
ಮೃತ ರಾಜೀವಿ ಅವರು ಕೆಲವು ದಿನಗಳಿಂದ ಅಸ್ವಸ್ಥರಾಗಿದ್ದು ಎಪ್ರಿಲ್ ತಿಂಗಳಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಮನೆಯಲ್ಲೇ ತಮ್ಮ ಮತದಾನದ ಹಕ್ಕನ್ನ ಚಲಾಯಿಸಿದ್ದರು. ಕಳೆದ ವರುಷ ನಡೆದ ವಿಧಾನಸಭೆ ಚುನಾವಣೆಯಲ್ಲಿ ಪಿಲಾರಿನ ಮತಗಟ್ಟೆಗೆ ತೆರಳಿ ರಾಜೀವಿ ಮತ ಚಲಾಯಿಸಿದ್ದರು.
1917 ನೇ ಇಸವಿಯ ಜನವರಿ 1 ರಂದು ಜನಿಸಿದ ರಾಜೀವಿ ಅವರು ಯಾವುದೇ ಕಾಯಿಲೆ ಇಲ್ಲದೆ ಮಕ್ಕಳು ,ಮೊಮ್ಮಕ್ಕಳು, ಮರಿ ಮೊಮ್ಮಕ್ಕಳೊಂದಿಗೆ ಸಂತೃಪ್ತಿಯ ಜೀವನ ಕಳೆದಿದ್ದರು. ತಮ್ಮ ಜೀವಿತಾವಧಿಯ ಕೊನೆಯಲ್ಲೂ ರಾಜೀವಿ ಅವರು ಕನ್ನಡಕ ಇಲ್ಲದೆಯೇ ದಿನಪತ್ರಿಕೆ ಓದಿ, ಎಲ್ಲರನ್ನೂ ಗುರುತಿಸುವಷ್ಟು ಲವ ಲವಿಕೆಯಲ್ಲಿದ್ದರು. ಪ್ರತಿ ಬಾರಿಯ ಚುನಾವಣೆಯಲ್ಲೂ ಮತಗಟ್ಟೆಗೆ ತೆರಳಿ ಮತ ಚಲಾಯಿಸುತ್ತಿದ್ದ ರಾಜೀವಿ ಅವರು ಈ ಬಾರಿ ಮಾತ್ರ ಮನೆಯಲ್ಲೇ ಲೋಕಸಭಾ ಚುನಾವಣೆಗೆ ಮತ ಚಲಾಯಿಸಿದ್ದರು.
ರಾಜೀವಿ ಅವರ ಅಗಲಿಕೆಗೆ ಮನೆ ಮಂದಿ, ಕುಟುಂಬಸ್ಥರು, ಊರಿನ ಗಣ್ಯರು ಸಂತಾಪ ವ್ಯಕ್ತ ಪಡಿಸಿದ್ದಾರೆ. ಮೃತರು ನಾಲ್ಕು ಗಂಡು, ಎರಡು ಹೆಣ್ಮಕ್ಕಳು, ಮೊಮ್ಮಕ್ಕಳು, ಮರಿ ಮಕ್ಕಳನ್ನ ಅಗಲಿದ್ದಾರೆ.
107 year old Rajeev Sheety dies at Ullal in Mangalore. She was not keeping well since some days. She has casted her vote during the assembly elections in karnataka.
10-11-25 07:17 pm
Bangalore Correspondent
54 ಹೆಕ್ಟೇರ್ ಅರಣ್ಯ ನಾಶ ಭೀತಿ ; ಶರಾವತಿ ಪಂಪ್ಡ್ ಸ್...
10-11-25 02:58 pm
'ನೋ ಚೇರ್ ಇನ್ ನವೆಂಬರ್' ಎಐ ವಿಡಿಯೋ ಹಂಚಿಕೊಂಡ ಬಿಜೆ...
10-11-25 01:23 pm
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ನಮಾಜ್ ವಿಡಿಯೋ ವೈರಲ...
10-11-25 12:22 pm
ಮುಸ್ಲಿಂ, ಕ್ರೈಸ್ತರು ಆರೆಸ್ಸೆಸ್ ಶಾಖೆಗೆ ಬರಬಹುದಾ?...
09-11-25 06:53 pm
10-11-25 11:07 pm
HK News Desk
ದೆಹಲಿಯಲ್ಲಿ ಭಾರೀ ಬಾಂಬ್ ಸ್ಫೋಟ ; ಛಿದ್ರಗೊಂಡು ಚದುರ...
10-11-25 09:08 pm
ರಾಜಧಾನಿ ದೆಹಲಿಯಲ್ಲಿ ಪ್ರಬಲ ಬಾಂಬ್ ಸ್ಫೋಟ ; ಒಂಬತ್ತ...
10-11-25 08:23 pm
ಫರಿದಾಬಾದ್ ; ಕಾಶ್ಮೀರಿ ವೈದ್ಯನ ಮಾಹಿತಿಯಂತೆ 300 ಕ...
10-11-25 03:04 pm
ದೊಡ್ಡ ಮಟ್ಟದ ವಿಧ್ವಂಸಕ ಕೃತ್ಯಕ್ಕೆ ಸಂಚು ; ಮೂವರು ಶ...
09-11-25 07:49 pm
08-11-25 08:31 pm
Mangalore Correspondent
ಬೆಂಗಳೂರು- ಮಂಗಳೂರು ಹೈಸ್ಪೀಡ್ ಕಾರಿಡಾರ್ ; ಶಿರಾಡ...
07-11-25 10:58 pm
ಕುದ್ರೋಳಿ ಕ್ಷೇತ್ರ ಸ್ಥಾಪಿಸಿದ ಫೆ.21ರಂದು ನಾರಾಯಣ ಗ...
07-11-25 07:23 pm
ಗೋಡಂಬಿ ಉದ್ಯಮಕ್ಕೆ ನೂರು ವರ್ಷ ; ನ.14-16ರಂದು ದೇಶದ...
07-11-25 05:25 pm
ನೆಲ್ಯಾಡಿಯಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿದ್ದ ಅಭಿಷೇ...
07-11-25 02:18 pm
09-11-25 10:27 pm
Mangalore Correspondent
ಬಹುಕೋಟಿ ವಂಚಕ ರೋಷನ್ ಸಲ್ದಾನಗೆ ಸೇರಿದ 2.85 ಕೋಟಿ ಮ...
09-11-25 03:50 pm
ಕೋಮುದ್ವೇಷದ ಕೊಲೆ ; ಪ್ರತೀಕಾರಕ್ಕೆ ಪ್ರಚೋದಿಸಿ ಇನ್...
08-11-25 11:15 pm
Digital Arrest Scam, Mangalore Online Fraud:...
08-11-25 04:08 pm
ಆರೋಪಿಗೆ ಜಾಮೀನು ನೀಡಲು ಹೋಗಿ ತಾನೇ ತಗ್ಲಾಕ್ಕೊಂಡ !...
07-11-25 11:20 pm