ಬ್ರೇಕಿಂಗ್ ನ್ಯೂಸ್
29-04-24 08:05 pm Mangalore Correspondent ಕರಾವಳಿ
ಉಳ್ಳಾಲ, ಎ.29: ಉಳ್ಳಾಲ ತಾಲೂಕು ವ್ಯಾಪ್ತಿಯ ತೊಕ್ಕೊಟ್ಟು ಸಮೀಪದ ಕಲ್ಲಾಪು ಹೃದಯ ಭಾಗದಲ್ಲಿ ನಿರ್ಮಾಣಗೊಂಡ " ಸೂಪರ್ ಗೋಲ್ಡ್ & ಡೈಮಂಡ್ಸ್" ನೂತನ ಚಿನ್ನಾಭರಣ ಮಳಿಗೆ ಎ.30ರ ಮಂಗಳವಾರ ಬೆಳಗ್ಗೆ 9 ಗಂಟೆಗೆ ಉದ್ಘಾಟನೆಗೊಳ್ಳಲಿದ್ದು, ಸ್ಥಳೀಯ ಶಾಸಕರು, ವಿಧಾನಸಭಾ ಸ್ಪೀಕರ್ ಯು.ಟಿ ಖಾದರ್ ನೂತನ ಮಳಿಗೆಯನ್ನ ಉದ್ಘಾಟಿಸಲಿದ್ದಾರೆ ಎಂದು ಸುಪರ್ ಗೋಲ್ಡ್ ಸಂಸ್ಥೆಯ ಮುಖ್ಯಸ್ಥ ಟಿ.ಎಂ. ಬಾವಾ ಹೇಳಿದರು.
ತೊಕ್ಕೊಟ್ಟು ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ನೂತನ "ಸೂಪರ್ ಗೋಲ್ಡ್ & ಡೈಮಂಡ್ಸ್ " ಮಳಿಗೆಯ ಉದ್ಘಾಟನಾ ಸಮಾರಂಭದಲ್ಲಿ ತೊಕ್ಕೊಟ್ಟಿನ ಸಂತ ಸೆಬಾಸ್ಟಿಯನ್ ಚರ್ಚ್ ಧರ್ಮಗುರು ಸಿಫ್ರಿಯನ್ ಡಿ ಸೋಜ, ಉಳ್ಳಾಲ ದರ್ಗಾ ಅಧ್ಯಕ್ಷ ಹನೀಫ್ ಹಾಜಿ, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಎಸಿಪಿ ಧನ್ಯಾ ನಾಯಕ್ ಸಹಿತ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದರು.
ಒಂದು ಉದ್ಯಮದಲ್ಲಿ 45 ವರ್ಷಗಳ ಅನುಭವ ಹೊಂದಿರುವ ಯುನಿಟಿ ಹಾಲ್ ಮತ್ತು ಸೂಪರ್ ಗ್ರೂಪ್ ಇವುಗಳ ನೇತೃತ್ವದಲ್ಲಿ ಅಸ್ತಿತ್ವಕ್ಕೆ ಬಂದಿರುವ ಈ ಮಳಿಗೆಯಲ್ಲಿ ಮದುವೆ ಇನ್ನಿತರ ಸಮಾರಂಭಗಳಿಗೆ ಬಳಕೆಗೆ ಯೋಗ್ಯವಾದ ನವೀನ ಮಾದರಿಯ ಚಿನ್ನ ಮತ್ತು ವಜ್ರದ ಆಭರಣಗಳು ಲಭ್ಯವಿದೆ. 1985 ರಲ್ಲಿ ಐದು ಜನ ಪಾಲುದಾರಿಕೆಯಲ್ಲಿ ಸೂಪರ್ ಬಝಾರ್ ಆರಂಭಿಸಲಾಯಿತು. 15 ವರ್ಷಗಳ ಬಳಿಕ ಫರಂಗಿಪೇಟೆ, ಕೈಕಂಬದಲ್ಲಿ ಸೂಪರ್ ಬಝಾರ್ ಆರಂಭಿಸುವ ಮೂಲಕ ಶುರು ಮಾಡಿದ ಉದ್ಯಮ ಯಶಸ್ವಿ ಕಂಡು ಈಗ 25 ಸಂಸ್ಥೆ ರಚನೆ ಆಗಿದೆ ಎಂದು ಹೇಳಿದರು.
2016ರಲ್ಲಿ ತೊಕ್ಕೊಟ್ಟಿನಲ್ಲಿ ಚಿನ್ನಾಭರಣ ಮಾರಾಟದ ಮಳಿಗೆ ಆರಂಭಿಸಿ ತಯಾರಿ ವೆಚ್ಚ ಕಡಿಮೆ ಮಾಡಿ ಗ್ರಾಹಕರಿಗೆ ನೀಡುವ ಮೂಲಕ ಯಶಸ್ಸು ಕಂಡಿದ್ದೇವೆ. ಇದೀಗ ಕಲ್ಲಾಪು ಬಳಿ ನಿರ್ಮಾಣಗೊಂಡ ಸ್ವಂತ ಕಟ್ಟಡದಲ್ಲಿ ಚಿನ್ನದ ಮಳಿಗೆ ಆರಂಭಿಸಿದ್ದೇವೆ. ಈ ಕಟ್ಟಡದಲ್ಲಿ ಚಿನ್ನಾಭರಣ ವೀಕ್ಷಣೆಗೆ ಹಾಗೂ ವಾಹನ ನಿಲುಗಡೆಗೆ ವಿಶಾಲವಾದ ಸ್ಥಳಾವಕಾಶ ಇದೆ. ಚಿನ್ನ ಮತ್ತು ವಜ್ರದ ಆಭರಣಗಳ ವೀಕ್ಷಣೆ ಹಾಗೂ ಖರೀದಿಗೆ ಪ್ರತ್ಯೇಕ ವ್ಯವಸ್ಥೆ ಇರಲಿದೆ. ವಧುವಿನ ವಿವಾಹ ಕಾರ್ಯಕ್ಕೆ ಆಕರ್ಷಣೆಯ ವಿವಿಧ ವಿನ್ಯಾಸಗಳ ಆಭರಣಗಳು ಯೋಗ್ಯ ದರದಲ್ಲಿ ಲಭಿಸುವ ಜೊತೆಗೆ ಗ್ರಾಹಕರಿಗೆ ಪ್ರತಿ ಗಂಟೆಗೊಮ್ಮೆ ಲಕ್ಕಿ ಡ್ರಾ ನಡೆಯಲಿದೆ. ಇದರಲ್ಲಿ ವಿಜೇತರಾದವರಿಗೆ ಚಿನ್ನದ ನಾಣ್ಯ ಲಭಿಸಲಿದೆ. ಒಂದೇ ಬಾರಿ ಖರೀದಿಸಲು ಕಷ್ಟವಾಗುವ ಗ್ರಾಹಕರಿಗೆ ಸ್ಕೀಂನ ಮೂಲಕ ಮಾಸಿಕ ಕಂತು ಪಾವತಿ ಮಾಡಿ ಚಿನ್ನಾಭರಣ ಖರೀದಿಸಲು ಅವಕಾಶ ಇದೆ. ಈ ರೀತಿ ಖರೀದಿ ಮಾಡುವವರಿಗೂ ಸಂಸ್ಥೆ ವತಿಯಿಂದ ರಿಯಾಯಿತಿ ಕೊಡುಗೆಗಳು ಲಭಿಸಲಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾರ್ಕೆಟಿಂಗ್ ಮೆನೇಜರ್ ಕಲಂದರ್, ಮೊಹಮ್ಮದ್ ನದೀಂ, ಪಾಲುದಾರರಾದ ಸೀದಿಯಬ್ಬ, ತಯ್ಯುಬ್, ಫೈಝಲ್, ಹಸನಬ್ಬ, ಮೊಹಮ್ಮದ್ ಉಪಸ್ಥಿತರಿದ್ದರು.
Thokottu kalapu to have Super Gold and diamonds showroom in Mangalore, opening on April 30. All types of varieties of gold and diamonds will be available here.
27-08-25 06:21 pm
Bangalore Correspondent
Congress, MP Yaduveer, DK Shivakumar: ಕಾಂಗ್ರೆ...
27-08-25 06:17 pm
ದಸರಾ ಉದ್ಘಾಟಕರ ಆಯ್ಕೆ ವಿವಾದ ; ನೀವು ನಂಬಿರುವ ನಿಮ್...
27-08-25 03:17 pm
Kannada Anchor Anushree, Marriage, Mangalore:...
27-08-25 02:51 pm
ಚಾಮುಂಡಿ ಬೆಟ್ಟ ಪಕ್ಕಾ ಹಿಂದೂಗಳ ಸ್ವತ್ತು, ಮುಸ್ಲಿಮರ...
27-08-25 12:33 pm
26-08-25 09:02 pm
HK News Desk
ಜಮ್ಮು ಭಾರಿ ಮಳೆಗೆ ಒಂಬತ್ತು ಮಂದಿ ಬಲಿ ; ಹಲವೆಡೆ ಭೂ...
26-08-25 07:39 pm
Trump Immigrant Population: ಟ್ರಂಪ್ ಸಾಮ್ರಾಜ್ಯದ...
24-08-25 01:47 pm
Actor Vijay, Thalapathy; ಟಿವಿಕೆ ಮುಖ್ಯಸ್ಥ, ನಟ...
23-08-25 04:58 pm
Mp Brijesh Chowta, Mangalore: ಆನ್ಲೈನ್ ಗೇಮಿಂಗ್...
22-08-25 10:00 pm
27-08-25 11:02 pm
Mangalore Correspondent
FIR, Chinnayya, Dharmasthala, Mahesh Thimarod...
27-08-25 09:19 pm
Praveen Nettaru, NIA, Mangalore: ಪ್ರವೀಣ್ ನೆಟ್...
27-08-25 08:46 pm
Pastor John Shamine, BJP, Fake Human Rights:...
26-08-25 10:57 pm
Vasanth Giliyar Hate speech, Case: ಬೆಳ್ತಂಗಡಿ...
26-08-25 10:18 pm
27-08-25 10:23 pm
HK News Desk
Karkala Murder, Arrest, Crime: ಹೆಂಡ್ತಿ ಮಕ್ಕಳನ...
26-08-25 10:39 pm
ಟೆಕ್ನಾಲಜಿಯಲ್ಲಿ ಮುಂದಿರುವ ಅಮೆರಿಕದ ಪ್ರಜೆಗಳನ್ನೇ ಯ...
26-08-25 05:24 pm
ದುಬೈನಲ್ಲಿ ಗಂಡ, ಮೈಸೂರಿನಲ್ಲಿ ಪತ್ನಿಯ ಲವ್ವಿ ಡವ್ವಿ...
25-08-25 08:29 pm
ಶಿಕ್ಷಣ ಸಚಿವ ಮಧು ಬಂಗಾರಪ್ಪ ಪಿಎ ಹೆಸರಲ್ಲಿ ವಸೂಲಿ ;...
25-08-25 07:42 pm