ಬ್ರೇಕಿಂಗ್ ನ್ಯೂಸ್
26-04-24 01:47 pm Mangalore Correspondent ಕರಾವಳಿ
ಮಂಗಳೂರು, ಎ.26: ಪ್ರಧಾನಿ ನರೇಂದ್ರ ಮೋದಿ ಪಾಲಿಗೆ ನಾರಿಶಕ್ತಿಯೇ ಪರಮೋಚ್ಛ. ನವರಾತ್ರಿ ದಿನಗಳಲ್ಲಿ ಮೋದಿಯವರು ನವದುರ್ಗೆಯರನ್ನು ಆರಾಧಿಸಿ ಒಂಬತ್ತು ದಿನಗಳಲ್ಲಿ ಅನ್ನಾಹಾರ ತ್ಯಜಿಸಿ ಕೇವಲ ನೀರು ಕುಡಿದು ನವರಾತ್ರಿ ಆಚರಿಸುವುದನ್ನು ವಾಡಿಕೆ ಮಾಡಿಕೊಂಡಿದ್ದಾರೆ. ಪ್ರಧಾನಿ ಮೋದಿ ನಾರಿಶಕ್ತಿಗೆ ನೀಡುವ ಮನ್ನಣೆಯನ್ನು ಗುರುತಿಸಿ ಈ ಬಾರಿ ಬಿಜೆಪಿ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ, ಮೋದಿ ಪರವಾಗಿ ನಾರಿಶಕ್ತಿ ಒಗ್ಗೂಡುವಂತೆ ಕರೆ ನೀಡಿದ್ದರು. ಇದಕ್ಕೆ ಮಂಗಳೂರಿನಲ್ಲಿ ಒಳ್ಳೆಯ ಸ್ಪಂದನೆ ಸಿಕ್ಕಿದೆ.
ಎಲ್ಲ ಮತಗಟ್ಟೆಗಳಲ್ಲೂ ನವದುರ್ಗೆಯರಾಗಿ ಮಹಿಳೆಯರು ಮೊದಲು ಬಂದು ಮತ ಚಲಾಯಿಸಿದ್ದಾರೆ. ಇದರ ಫೋಟೋಗಳನ್ನು ಜಾಲತಾಣದಲ್ಲಿ ಶೇರ್ ಮಾಡಿದ್ದು, ಬಿಜೆಪಿ ಅಭ್ಯರ್ಥಿ ನೀಡಿರುವ ಕರೆಗೆ ಅಭೂತಪೂರ್ವ ಸ್ಪಂದನೆ ಸಿಕ್ಕಿರುವುದು ಕಂಡುಬಂದಿದೆ. ನವದುರ್ಗೆಯರ ರೂಪದಲ್ಲಿ ಮತಗಟ್ಟೆಗೆ ಮೊದಲು ಬಂದು ಮತ ಚಲಾಯಿಸಬೇಕು, ಆಮೂಲಕ ಮೋದಿ ಮತ್ತೊಮ್ಮೆ ಪ್ರಧಾನಿಯಾಗುವಂತೆ ಆಶೀರ್ವಾದ ಮಾಡಬೇಕು ಎಂದು ಬ್ರಿಜೇಶ್ ಚೌಟ ಕರೆ ನೀಡಿದ್ದರು.
ಮಂಗಳೂರಿನ ಕಪಿತಾನಿಯೋ ಶಾಲೆಯ ಮತಗಟ್ಟೆಯಲ್ಲಿ ಒಂಬತ್ತು ಮಂದಿ ಮಹಿಳೆಯರು ಬೆಳಗ್ಗೆ 6.30ರ ವೇಳೆಗೇ ಬಂದು ಕುಳಿತುಕೊಂಡಿದ್ದರು. ಮತಗಟ್ಟೆ ತೆರೆಯುವ ಮೊದಲೇ ಸೀರೆಯುಟ್ಟ ನಾರಿಯರು ಹೊರಗಿನ ಅಂಗಣದಲ್ಲಿ ಕುಳಿತು ವಿಜಯದ ನಗೆ ಬೀರಿದ್ದಾರೆ. ಆಮೂಲಕ ನಾರಿಶಕ್ತಿಯ ಸಾಥ್ ನರೇಂದ್ರ ಮೋದಿ ಪರವಾಗಿದೆ ಎನ್ನುವ ಸಂದೇಶವನ್ನು ಮಹಿಳೆಯರು ನೀಡಿದ್ದಾರೆ. ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಕ್ಯಾ.ಬ್ರಿಜೇಶ್ ಚೌಟ, ಜಿಲ್ಲೆಯಾದ್ಯಂತ ನಾರಿಶಕ್ತಿಯರಿಂದ ಉತ್ತಮ ಸ್ಪಂದನೆ ಸಿಕ್ಕಿದ್ದು, ಮೊದಲ ಬಾರಿಗೆ ಮತಗಟ್ಟೆಗೆ ಬಂದು ಮೋದಿಯವರಿಗೆ ಆಶೀರ್ವದಿಸಿದ್ದಾರೆ. ಅವರಿಗೆಲ್ಲ ಆಭಾರಿಯಾಗಿದ್ದೇನೆ ಎಂದು ಹೇಳಿದ್ದಾರೆ.
ಸಾಮಾನ್ಯವಾಗಿ ಮಹಿಳೆಯರು ಬೆಳಗ್ಗೆ ಎಂದಿನ ತಮ್ಮ ಕೆಲಸ ಮುಗಿಸಿ ಮತಗಟ್ಟೆಗೆ ತೆರಳುವುದು ರೂಢಿ. ಆದರೆ, ಬ್ರಿಜೇಶ್ ಚೌಟರು ನವದುರ್ಗೆಯರ ರೂಪದಲ್ಲಿ ಬನ್ನಿ ಎನ್ನುವ ಕೋರಿಕೆ ಇಟ್ಟಿದ್ದನ್ನು ಮಹಿಳೆಯರು ಪುರಸ್ಕರಿಸಿದ್ದಾರೆ. ಆಮೂಲಕ ಮತದಾನ ಕೇಂದ್ರಗಳಲ್ಲಿ ಮಹಿಳೆಯರು ಬೆಳಗ್ಗೆಯೇ ಹೊಸ ಸಂಚಲನ ಮೂಡಿಸಿದ್ದಾರೆ.
For Prime Minister Narendra Modi, Nari Shakti is supreme. During Navratri, Modi worships Goddess Navadurga, gives up food for nine days and drinks only water to celebrate Navratri. This time, BJP candidate K Brijesh Chowta had called for nari shakti to unite in favour of Modi, recognising the recognition given to him by Prime Minister Narendra Modi. It has received a good response in Mangalore.
16-05-25 10:04 am
Bangalore Correspondent
Davanagere Sp, Constable Accident: ದಾವಣಗೆರೆಯಲ...
15-05-25 10:16 pm
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
Pro Pakistan slogan, Arrest, Bangalore: ಬೆಂಗಳ...
14-05-25 05:16 pm
Hassan Kidnap: ಅಪ್ಪನ ಎದುರೇ ಮಗಳ ಅಪಹರಣ ; ಬೇಲೂರಿ...
13-05-25 09:50 pm
16-05-25 04:45 pm
HK News Desk
ಮುಸ್ಲಿಂ ವ್ಯಕ್ತಿಗೆ ಕುರಾನ್ ಪ್ರಕಾರ ನಾಲ್ಕು ಮದುವೆ...
15-05-25 09:09 pm
Donald Trump: ನಾನೇನೂ ಮಧ್ಯಸ್ಥಿಕೆ ವಹಿಸಿರಲಿಲ್ಲ,...
15-05-25 08:38 pm
Sofia Qureshi, BJP leader, FIR: ಸೋಫಿಯಾ ಭಯೋತ್ಪ...
14-05-25 11:08 pm
Masood Azhar; ಐಎಂಎಫ್ ಸಾಲದ ಹಣವನ್ನೂ ಉಗ್ರರಿಗೆ ಹಂ...
14-05-25 11:08 pm
16-05-25 06:05 pm
Mangalore Correspondent
Mangalore, Dinesh Gundurao: ಇಡಿ ದೇಶದಲ್ಲಿ ಅತೀ...
16-05-25 02:47 pm
Mangalore Cargo Ship, Lakshadweep: ಲಕ್ಷದ್ವೀಪಕ...
16-05-25 10:06 am
Capt Brijesh Chowta, Mangalore Mp, CM Siddara...
15-05-25 08:04 pm
Lashkar Terror HQ, Pakistan: ಧ್ವಂಸಗೊಂಡ ಲಷ್ಕರ್...
15-05-25 06:36 pm
15-05-25 11:06 pm
HK News Desk
Bangalore Crime, Mobile showroom: ಮೊಬೈಲ್ ಅಂಗಡ...
15-05-25 06:02 pm
Bangalore Job Fraud, Crime; ಮೆಕ್ರೋಸಾಪ್ಟ್ , ಬ...
15-05-25 12:14 pm
ಕೊಲ್ಕತ್ತಾದಲ್ಲಿ ಕಾರು ಅಡ್ಡಗಟ್ಟಿ 2.66 ಕೋಟಿ ದರೋಡೆ...
14-05-25 10:22 pm
Suhas Shetty Murder, Arrest, CCB Police: ಸುಹಾ...
14-05-25 09:23 pm