ಬ್ರೇಕಿಂಗ್ ನ್ಯೂಸ್
20-04-24 10:25 pm Mangalore Correspondent ಕರಾವಳಿ
ಮಂಗಳೂರು, ಎ.20: ಹುಬ್ಬಳ್ಳಿಯ ನೇಹಾ ಹಿರೇಮಠ್ ಎಂಬ ವಿದ್ಯಾರ್ಥಿನಿಯನ್ನು ಇಸ್ಲಾಮಿಕ್ ಭಯೋತ್ಪಾದಕ, ಜಿಹಾದಿ ಮಾನಸಿಕ ವ್ಯಕ್ತಿ ಹಾಡಹಗಲೇ ಕೊಂದು ಹಾಕಿದ್ದಾನೆ. ಈ ಘಟನೆಯಿಂದ ಇಡೀ ರಾಜ್ಯವೇ ಬೆಚ್ಚಿ ಬಿದ್ದಿದ್ದು ಜನರು ಭಯಪಡುವಂತಾಗಿದೆ. ಇದೊಂದು ಲವ್ ಜಿಹಾದ್ ಕೃತ್ಯವೆಂದು ಆಕೆಯ ತಂದೆಯೇ ಹೇಳಿದ್ದಾರೆ. ಕೃತ್ಯಕ್ಕೆ ಬೇರೆ ಕೆಲವು ಗೆಳೆಯರೂ ಸಹಾಯ ಮಾಡಿದ್ದಾರೆ. ಮುಸ್ಲಿಂ ಮೂಲಭೂತವಾದಿ ಗುಂಪು ಕೈವಾಡದ ಶಂಕೆಯಿದೆ. ಇದಕ್ಕಾಗಿ ರಾಷ್ಟ್ರೀಯ ತನಿಖಾ ದಳದಿಂದ ತನಿಖೆ ಮಾಡಿಸಬೇಕು ಎಂದು ವಿಶ್ವ ಹಿಂದು ಪರಿಷತ್ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪ್ವೆಲ್ ಆಗ್ರಹಿಸಿದ್ದಾರೆ.
ಸುದ್ದಿಗೋಷ್ಟಿ ನಡೆಸಿದ ಅವರು, ನೇಹಾ ಹತ್ಯೆಯ ಆರೋಪಿ ಅಲ್ಪಸಂಖ್ಯಾತ ಎನ್ನುವ ಕಾರಣಕ್ಕೆ ರಾಜ್ಯ ಸರಕಾರ, ಗೃಹ ಸಚಿವರು ಕ್ಷುಲ್ಲಕವಾಗಿ ಮಾತನಾಡಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಹಿಂದುಗಳ ಮೇಲೆ ದೌರ್ಜನ್ಯ, ಹತ್ಯಾ ಸರಣಿ ಆಗ್ತಾ ಇದೆ. ರಾಮೇಶ್ವರ ಕೆಫೆ ಬ್ಲಾಸ್ಟ್, ಪಾಕಿಸ್ತಾನ್ ಪರ ಘೋಷಣೆ, ರಾಮನ ಪರ ಘೋಷಣೆ ಹಾಕಿದ್ದಕ್ಕೆ ಹಲ್ಲೆ, ನಟಿ ಹರ್ಷಿಕಾ ಪೂಣಚ್ಚ ಅವರ ಕುಟುಂಬದ ಮೇಲೆ ದಾಳಿ, ಸಾಯಿ ಮಂದಿರದ ಬಳಿ ಮುಸ್ಲಿಂ ಗೂಂಡಾಗಳೊಂದಿಗೆ ಸೇರಿ ದಾಳಿ ನಡೆಸಿರುವುದು ಕಾಂಗ್ರೆಸ್ ಸರಕಾರ ತುಘಲಕ್ ದರ್ಬಾರ್ ನಡೆಸುತ್ತಿರುವುದಕ್ಕೆ ಸಾಕ್ಷಿ. ರಾಜ್ಯದಲ್ಲಿ ಟಿಪ್ಪು ಆಡಳಿತ ಇದೆಯೇ ಎಂದು ಅನುಮಾನ ಬರುವಂತೆ ಸಿದ್ದರಾಮಯ್ಯ ಆಡಳಿತ ಮಾಡುತ್ತಿದ್ದಾರೆ. ಕಾಂಗ್ರೆಸಿಗರ ಮೌನ ಜಿಹಾದಿ ಶಕ್ತಿಗಳಿಗೆ ಬೆಂಬಲ ನೀಡುವಂತಿದೆ.
ಭಾರತೀಯ ಸಂಸ್ಕೃತಿಯಲ್ಲಿ ತಾಯಂದಿರನ್ನು ಉನ್ನತ ಸ್ಥಾನದಲ್ಲಿ ನೋಡಲಾಗುತ್ತದೆ. ಆದರೆ ಕಾಂಗ್ರೆಸ್ ಸರಕಾರ ಬಂದ ಕೂಡಲೇ ಹೆಣ್ಮಕ್ಕಳ ಮೇಲೆ ದಾಳಿಯಾಗುತ್ತಿದ್ದು, ಬೀದಿಯಲ್ಲಿ ಕೊಲೆ ಮಾಡುತ್ತಿದ್ದಾರೆ. ಹೆಣ್ಮಕ್ಕಳ ರಕ್ಷಣೆಗೆಂದೇ ಪಂಜಾಬ್ ನಲ್ಲಿ ಕಿರುಗತ್ತಿಯನ್ನು ಇಟ್ಟುಕೊಳ್ಳುವ ಸಂಪ್ರದಾಯ ಇದೆ. ಕರ್ನಾಟಕದಲ್ಲಿಯೂ ಹೆಣ್ಮಕ್ಕಳಿಗೆ ಕಿರು ಕತ್ತಿಯನ್ನು ಇಟ್ಟುಕೊಳ್ಳಲು ಅವಕಾಶ ನೀಡಬೇಕು. ಜೊತೆಗೆ ಹೆಣ್ಮಕ್ಕಳಿಗೆ ಆತ್ಮ ರಕ್ಷಣೆಗೆ ತರಬೇತಿ ಶಿಬಿರ ನಡೆಸಬೇಕು ಎಂದು ಶರಣ್ ಪಂಪ್ವೆಲ್ ಆಗ್ರಹಿಸಿದ್ದಾರೆ.
ಲವ್ ಜಿಹಾದ್ ಬಗ್ಗೆ ಕೇರಳ, ಉತ್ತರ ಪ್ರದೇಶದಲ್ಲಿ ದೊಡ್ಡ ಮಟ್ಟದ ಚರ್ಚೆಯಾಗಿದ್ದು ಕಾನೂನು ತರುವ ಬಗ್ಗೆ ಚಿಂತನೆಯಾಗಿದೆ. ಸುಪ್ರೀಂ ಕೋರ್ಟಿನ ವರೆಗೂ ಹೋಗಿ ನಿಶ್ಚಿತ ಕಾನೂನು ತರಬೇಕೆಂಬ ಬಗ್ಗೆ ಅಭಿಪ್ರಾಯ ಬಂದಿದೆ. ಪ್ರೀತಿ ಪ್ರೇಮದ ಹೆಸರಲ್ಲಿ ಇಸ್ಲಾಂಗೆ ಮತಾಂತರ ಮಾಡುವುದು, ಮತಾಂತರಕ್ಕೆ ಒಪ್ಪದೇ ಇದ್ದರೆ ಕೊಲ್ಲುವುದು, ಮದುವೆಗೆ ಒಪ್ಪದಿದ್ದಲ್ಲಿ ನಗ್ನ ಫೋಟೋ ತೆಗೆದು ಬ್ಲಾಕ್ಮೇಲ್ ಮಾಡುವುದು ಇವರ ಹುನ್ನಾರ. ಇಂಥ ಕೃತ್ಯಗಳನ್ನು ಗಂಭೀರ ಪರಿಗಣಿಸಿ ಸರಕಾರ ಕಡಿವಾಣ ಹಾಕಲೇಬೇಕು ಎಂದು ಹೇಳಿದರು. ಸುದ್ದಿಗೋಷ್ಟಿಯಲ್ಲಿ ಭುಜಂಗ ಕುಲಾಲ್, ಮನೋಹರ್, ಪುರುಷೋತ್ತಮ, ರವಿ ಅಸೈಗೋಳಿ, ಪುನೀತ್ ಅತ್ತಾವರ ಇದ್ದರು.
The Vishwa Hindu Parishad (VHP) has called for a thorough investigation by the National Investigation Agency (NIA) into the tragic murder of Neha, a first-year MCA student at a college in Hubballi. Neha was the daughter of Niranjan Hiremath, a member of the Hubli Dharwad Mahanagara Corporation.
10-01-26 10:28 pm
HK News Desk
"ಡ್ಯಾಡಿ ಈಸ್ ಹೋಮ್" ಎಐ ವಿಡಿಯೋ ರಿಲೀಸ್ ; ರಾಜ್ಯ ರಾ...
10-01-26 04:29 pm
ಚಾರ್ಮಾಡಿ ಘಾಟಿಯಲ್ಲಿ ರಸ್ತೆಗೆ ಅಡ್ಡ ನಿಂತ ಒಂಟಿ ಸಲಗ...
10-01-26 03:00 pm
Purushottam Bilimale, Legal Battle Against Ma...
10-01-26 01:17 pm
ಮಲಯಾಳ ಭಾಷಾ ಮಸೂದೆಯಿಂದ ಕಾಸರಗೋಡು ಕನ್ನಡಿಗರಿಗೆ ಧಕ್...
09-01-26 04:42 pm
10-01-26 03:22 pm
HK News Desk
ಶಬರಿಮಲೆ ಚಿನ್ನ ಕಳವು ಪ್ರಕರಣ ; ಪ್ರಧಾನ ತಂತ್ರಿ ಕಂಠ...
09-01-26 11:00 pm
ಟ್ರಂಪ್ ಕೈಗಳು ಸಾವಿರಾರು ಇರಾನಿಗರ ರಕ್ತದಿಂದ ಒದ್ದೆಯ...
09-01-26 08:30 pm
ರಷ್ಯಾ ಹಡಗು ವಶಕ್ಕೆ ಪಡೆದ ಬೆನ್ನಲ್ಲೇ ಅಮೆರಿಕಕ್ಕೆ ತ...
08-01-26 11:21 pm
ರಷ್ಯಾ ತೈಲ ಖರೀದಿ ನಿಲ್ಲಿಸಲು ಅಮೆರಿಕ ಹೊಸ ಮಸೂದೆ ;...
08-01-26 05:11 pm
11-01-26 12:56 pm
Mangaluru Staffer
Cm Siddaramaiah, Mangalore: ಕರಾವಳಿ ಪ್ರವಾಸೋದ್ಯ...
10-01-26 10:45 pm
ಡೀಮ್ಡ್ ಯುನಿವರ್ಸಿಟಿಗಳಲ್ಲಿ ಭಾಷೆಯ ಅವಜ್ಞೆ ; ಸಾಹಿತ...
10-01-26 07:57 pm
Dr Meenakshi Jain at Mangaluru Lit Fest: ಉಪನಿ...
10-01-26 07:21 pm
ಕರಾವಳಿ ಟೂರಿಸಂ ಅಭಿವೃದ್ಧಿಗೆ ಜನಪ್ರನಿಧಿಗಳು, ಉದ್ಯಮ...
10-01-26 06:23 pm
07-01-26 10:45 pm
Bangalore Correspondent
ಸಮಾಧಿಯಲ್ಲಿ ಡ್ರಗ್ಸ್ ಬಚ್ಚಿಟ್ಟು ಮಾರಾಟ ; 3.5 ಕೋಟಿ...
06-01-26 07:04 pm
Kanachur Hospital, POSCO, Doctor: ಚಿಕಿತ್ಸೆಗೆ...
06-01-26 02:24 pm
ಯಲ್ಲಾಪುರ ; ಮದ್ವೆಗೆ ಒಪ್ಪಿಲ್ಲವೆಂದು ನಡುರಸ್ತೆಯಲ್ಲ...
04-01-26 11:02 pm
Ganja from Bihar: ಬಿಹಾರದಿಂದ ರೈಲಿನಲ್ಲಿ ಗಾಂಜಾ ತ...
04-01-26 06:15 pm