ಬ್ರೇಕಿಂಗ್ ನ್ಯೂಸ್
01-12-20 05:16 pm Mangalore Correspondent ಕರಾವಳಿ
ಮಂಗಳೂರು, ಡಿ.1: ಆಯುಷ್ ಇಲಾಖೆಯ ‘ಸೃಷ್ಟಿ ಕ್ರಿಯೆ’ಯ ಯೋಜನೆ ಫಲ ನೀಡಿದೆ. ಮದುವೆಯಾಗಿ 9 ವರ್ಷಗಳಾದರೂ ಮಕ್ಕಳಾಗದೆ ಬೇಸತ್ತಿದ್ದ ಮಹಿಳೆ ಗರ್ಭಿಣಿಯಾಗಿ ಆರೋಗ್ಯವಂತ ಮಗುವಿಗೆ ಜನ್ಮ ನೀಡಿದ್ದಾರೆ.
ಹಾಸನ ಜಿಲ್ಲೆಯ ತರೀಕೆರೆ ಮೂಲದ ರಮೇಶ್ – ಶಶಿಕಲಾ ದಂಪತಿಗೆ ಮದುವೆಯಾಗಿ 9 ವರ್ಷಗಳಾದರೂ ಮಗು ಆಗಿರಲಿಲ್ಲ. ಅಲೋಪತಿ ಮತ್ತು ಆಯುರ್ವೇದ ಪ್ರಕಾರ ಹಲವೆಡೆ ಔಷಧಿಯನ್ನೂ ಮಾಡಿದ್ದರು. ಕಳೆದ ಬಾರಿಯ 2019ರ ಡಿಸೆಂಬರ್ ತಿಂಗಳಲ್ಲಿ ದಂಪತಿ ಆಯುಷ್ ಇಲಾಖೆಯಡಿ ಆರಂಭಗೊಂಡ ಸೃಷ್ಟಿ ಯೋಜನೆಯ ವಿಚಾರ ತಿಳಿದು ಪರೀಕ್ಷೆಗೆ ಬಂದಿದ್ದರು. ಅದರಂತೆ, ದಂಪತಿ ಅಲೋಪತಿ ಮತ್ತು ಆಯುರ್ವೇದ ಔಷಧ ನಿಲ್ಲಿಸಿ, ಹೋಮಿಯೋಪತಿ ಔಷಧಿ ಆರಂಭಿಸಿದ್ದರು.
ಎರಡೇ ತಿಂಗಳಲ್ಲಿ ಶಶಿಕಲಾ ಸಹಜ ಎನ್ನುವಂತೆ ಗರ್ಭ ಧರಿಸಿದ್ದರು. ಫೆಬ್ರವರಿಯಲ್ಲಿ ಗರ್ಭಿಣಿಯಾಗಿದ್ದ ಮಹಿಳೆ ಇದೀಗ ನವೆಂಬರ್ 28ರಂದು ಮಗುವಿಗೆ ಜನ್ಮ ನೀಡಿದ್ದಾರೆ. ಮಗು 3.3 ಕೆಜಿ ಭಾರ ಹೊಂದಿದ್ದು ಆರೋಗ್ಯವಾಗಿದೆ ಎಂದು ಚಿಕಿತ್ಸೆ ನೀಡಿರುವ ಯೇನಪೋಯ ಆಸ್ಪತ್ರೆಯ ಹೋಮಿಯೋಪತಿ ವಿಭಾಗದ ವೈದ್ಯ ಡಾ.ಕಿರಣ್ ಶಶಿಕಾಂತ್ ಹೇಳಿದ್ದಾರೆ. ಆಯುಷ್ ಸಂಯೋಜನೆಯಡಿ ಆರಂಭಗೊಂಡ ಸೃಷ್ಟಿ ಯೋಜನೆಯಲ್ಲಿ ಮಗುವಾಗಿದ್ದು ರಾಜ್ಯದಲ್ಲಿ ಇದೇ ಮೊದಲು.

ಜಿಲ್ಲಾ ಆಯುಷ್ ಇಲಾಖೆಯಡಿ ಯೇನಪೋಯ ಹೋಮಿಯೋಪತಿಕ್ ಮೆಡಿಕಲ್ ಕಾಲೇಜಿನ ಸಹಯೋಗದಲ್ಲಿ ಸೃಷ್ಟಿ ಯೋಜನೆ ಆರಂಭಿಸಲಾಗಿತ್ತು. ಮಕ್ಕಳಾಗದವರಿಗೆ ನವೀನ ತೆರನಾದ ಚಿಕಿತ್ಸೆ ನೀಡುವ ಮೂಲಕ ಗರ್ಭಿಣಿಯಾಗಿಸುವ ಯೋಜನೆಗೆ 2019ರ ಆಗಸ್ಟ್ 29ರಂದು ಆಯುಷ್ ಇಲಾಖೆ ಸಚಿವ ಶ್ರೀಪಾದ್ ನಾಯ್ಕ್ ಚಾಲನೆ ನೀಡಿದ್ದರು.
ಸೃಷ್ಟಿ ಹೋಮಿಯೋಪತಿಕ್ ಫರ್ಟಿಲಿಟಿ ಕೇರ್ ಸೆಂಟರ್ ಎನ್ನುವ ವಿಭಾಗವನ್ನು ಆಯುಷ್ ಇಲಾಖೆಯಡಿ ವೆನ್ಲಾಕ್ ಆಸ್ಪತ್ರೆಯಲ್ಲಿ ಆರಂಭಿಸಲಾಗಿದ್ದು 42 ಮಂದಿ ಮಕ್ಕಳಾಗದವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಮಕ್ಕಳಾಗದೆ ನೋವು ಅನುಭವಿಸುವ ದಂಪತಿಗೆ ಇದೊಂದು ಆಶಾಕಿರಣ ಎಂದು ಆಯುಷ್ ವೈದ್ಯ ಡಾ.ಮೊಹಮ್ಮದ್ ಇಕ್ಬಾಲ್ ತಿಳಿಸಿದ್ದಾರೆ.
An experiment undertaken under ambitious 'Srishti' scheme introduced by the Ayush department of Dakshina Kannada district to help childless couples to have children, has borne fruits perhaps for the first time in the state. A baby has been born out of homeopathy fertility treatment.
15-09-26 09:13 pm
HK News Staffer
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 09:18 pm
HK News Staffer
Satish Kumpala, Manglore: ಕಾಟಾಚಾರಕ್ಕೆ ಸಂಪುಟ ಸ...
15-09-26 07:46 pm
U T Khader, KDP Meeting, Bharath Sheety, Hari...
15-09-26 06:52 pm
Aravind Bolar Controversy, Mangalore: “ಎಂಕ್ ಮ...
15-09-26 05:29 pm
U T Khader, KDP Meeting, Sudheer Reddy Ips: :...
15-09-26 05:27 pm
15-09-26 09:19 pm
HK News Staffer
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am