ಬ್ರೇಕಿಂಗ್ ನ್ಯೂಸ್
16-04-24 08:32 pm Mangalore Correspondent ಕರಾವಳಿ
ಮಂಗಳೂರು, ಎ.16: ಪ್ರಧಾನಿ ಮೋದಿಯವರು ಮಂಗಳೂರಿನಲ್ಲಿ ನಾರಾಯಣ ಗುರುಗಳ ಪ್ರತಿಮೆಗೆ ಮಾಲಾರ್ಪಣೆ ಮಾಡಿರುವುದರಿಂದ ನಾರಾಯಣ ಗುರು ಸರ್ಕಲನ್ನು ರಾಷ್ಟ್ರ ಮಟ್ಟದಲ್ಲಿ ಜನರು ನೋಡುವಂತಾಗಿದೆ. ನಾರಾಯಣ ಗುರು ಇಡೀ ಜಗತ್ತಿನಲ್ಲಿ ಅತಿ ದೊಡ್ಡ ಮಾನವತಾವಾದಿ. ಗುರುಗಳ ಪ್ರತಿಮೆಗೆ ಮಾಲಾರ್ಪಣೆ ವಿಚಾರದಲ್ಲಿ ಯಾರೂ ಮತ್ಸರ ಪಡುವ ಅಗತ್ಯವಿಲ್ಲ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಹೇಳಿದ್ದಾರೆ.
ಸುದ್ದಿಗೋಷ್ಟಿ ನಡೆಸಿದ ಅವರು, ಪ್ರಧಾನಿ ಮೋದಿಯವರನ್ನು ನಮ್ಮ ಜಿಲ್ಲೆಯ ಜನರು ಆದರದಿಂದ ಬರಮಾಡಿಕೊಂಡಿದ್ದಾರೆ. ರೋಡ್ ಶೋ ನಡೆದ ರಸ್ತೆಯ ಅಲ್ಲಲ್ಲಿ ಸ್ವಯಂಪ್ರೇರಿತವಾಗಿ ಕಲಾತಂಡಗಳು ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಿದ್ದಾರೆ. ಎಲ್ಲರಿಗೂ ಜಿಲ್ಲಾ ಬಿಜೆಪಿ ವತಿಯಿಂದ ಅಭಿನಂದನೆ ಹೇಳುತ್ತೇನೆ. ಲೇಡಿಹಿಲ್ ಸರ್ಕಲ್ ನಲ್ಲಿ ನಾರಾಯಣ ಗುರು ಸರ್ಕಲ್ ಮಾಡುವಂತಾಗಲು ಶಾಸಕ, ಸಂಸದರಿಂದ ಹಿಡಿದು ಪಾಲಿಕೆಯಲ್ಲಿ ಅಧಿಕಾರಿಗಳು, ಮೇಯರ್ ಪ್ರೇಮಾನಂದ ಶೆಟ್ಟಿ ಸೇರಿ ಎಲ್ಲರೂ ಬಹಳಷ್ಟು ಶ್ರಮ ವಹಿಸಿದ್ದಾರೆ. ಈಗ ಪ್ರಧಾನಿ ಮೋದಿ ಬಂದು ಮಾಲಾರ್ಪಣೆ ಮಾಡಿದ್ದರಿಂದ ದೇಶದ ಮಟ್ಟಕ್ಕೆ ಸರ್ಕಲ್ ಗೆ ಹೆಸರು ಬಂದಿದೆ ಎಂದರು.
ಮೋದಿ ಅವರನ್ನು ಸ್ವಾಗತಿಸಲು ಮಂಗಳೂರು ಮೇಯರ್ ಗೆ ಅವಕಾಶ ನೀಡಿಲ್ಲವೇ ಎಂಬ ಪ್ರಶ್ನೆಗೆ, ನಾವು ಎಸ್ ಪಿಜಿಗೆ ಕಳಿಸಿಕೊಟ್ಟ ಪಟ್ಟಿಯಲ್ಲಿ ಮೇಯರ್ ಹೆಸರು ಇತ್ತು. ಆದರೆ ಕೊನೆಕ್ಷಣದಲ್ಲಿ ಅವರ ಹೆಸರು ಬಿಟ್ಟು ಹೋಗಿತ್ತು. ಆ ರೀತಿಯ ಎಡವಟ್ಟು ಆಗಿದ್ದಕ್ಕೆ ನಮಗೆ ವಿಷಾದವಿದೆ ಎಂದರು. ಬಿರುವೆರ್ ಕುಡ್ಲ ತಂಡಕ್ಕೆ ಅವಕಾಶ ನೀಡಬೇಕಿತ್ತು ಎಂಬ ಅಭಿಪ್ರಾಯ ಕೇಳಿಬರುತ್ತಿದೆ ಎಂಬ ಪ್ರಶ್ನೆಗೆ, ನಾವು ಎಲ್ಲರನ್ನೂ ಜೊತೆಗೆ ಜೋಡಿಸಿಕೊಂಡು ಹೋಗುತ್ತಿದ್ದೇವೆ. ಮೂರು ದಿನದಲ್ಲಿ ಕಾರ್ಯಕ್ರಮ ಆಗಿದ್ದರಿಂದ ಕೆಲವೊಂದು ಎಡವಟ್ಟು ಆಗಿರಬಹುದು. ಅದನ್ನು ಸರಿ ಮಾಡುತ್ತೇವೆ ಎಂದಿದ್ದಾರೆ.
ವಿನಯ ಕುಮಾರ್ ಸೊರಕೆಯವರು ನಾರಾಯಣ ಗುರುಗಳ ಬಗ್ಗೆ ಮೋದಿಗೆ ಈಗ ನೆನಪಾಗಿದೆ ಎಂದು ಟೀಕಿಸಿದ್ದಕ್ಕೆ, ಗುರುಗಳ ಪ್ರತಿಮೆಗೆ ಪ್ರಧಾನಿ ಮಾಲಾರ್ಪಣೆ ಮಾಡಿದ್ದಕ್ಕೆ ಯಾರೂ ಮತ್ಸರ ಪಡಬಾರದು. ಇವರು ಬೇಕಿದ್ದರೆ ಸಿಎಂ ಸಿದ್ದರಾಮಯ್ಯ ಅವರನ್ನು ಕರೆಸಿ ಮಾಲಾರ್ಪಣೆ ಮಾಡಬಹುದಿತ್ತು. ಯಾಕೆ ಮಾಡಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ.
Mangalore PM offers Floral Tributes To Sri Narayana Guru, Kumpala slams those mocking.
28-08-25 06:23 pm
HK News Desk
Bidar Bus Driver Suicide: ಬೀದರ್ ಬಸ್ ಡಿಪೋ ನಲ್ಲ...
28-08-25 02:41 pm
ಬಿಳಿಯಲ್ಲ ಮಾರಾಯರೇ ನೀಲಿ ಮೊಟ್ಟೆ ಇಟ್ಟ ನಾಟಿ ಕೋಳಿ ;...
28-08-25 11:56 am
Banumustak, DK Shivakumar, Chamundi Hill: ದೇವ...
27-08-25 06:21 pm
Congress, MP Yaduveer, DK Shivakumar: ಕಾಂಗ್ರೆ...
27-08-25 06:17 pm
28-08-25 12:19 pm
HK News Desk
ಕೈ ಗ್ಯಾರಂಟಿಗೆ ಬೊಕ್ಕಸ ಪೂರ ಖಾಲಿ - ಖಾಲಿ ; ತೆಲಂಗಾ...
26-08-25 09:02 pm
ಜಮ್ಮು ಭಾರಿ ಮಳೆಗೆ ಒಂಬತ್ತು ಮಂದಿ ಬಲಿ ; ಹಲವೆಡೆ ಭೂ...
26-08-25 07:39 pm
Trump Immigrant Population: ಟ್ರಂಪ್ ಸಾಮ್ರಾಜ್ಯದ...
24-08-25 01:47 pm
Actor Vijay, Thalapathy; ಟಿವಿಕೆ ಮುಖ್ಯಸ್ಥ, ನಟ...
23-08-25 04:58 pm
28-08-25 11:00 pm
Mangalore Correspondent
Mangalore Rain, School College Holiday: ಭಾರೀ...
28-08-25 10:07 pm
Soujanya Murder Case, Mother SIT: ಸೌಜನ್ಯಾ ಕೊಲ...
28-08-25 08:31 pm
Talapady Accident, Mangalore, Auto bus: ಕೇರಳ...
28-08-25 04:05 pm
Loudspeaker, Punjalkatte,Farangipete: ಪುಂಜಾಲ...
28-08-25 02:51 pm
27-08-25 10:23 pm
HK News Desk
Karkala Murder, Arrest, Crime: ಹೆಂಡ್ತಿ ಮಕ್ಕಳನ...
26-08-25 10:39 pm
ಟೆಕ್ನಾಲಜಿಯಲ್ಲಿ ಮುಂದಿರುವ ಅಮೆರಿಕದ ಪ್ರಜೆಗಳನ್ನೇ ಯ...
26-08-25 05:24 pm
ದುಬೈನಲ್ಲಿ ಗಂಡ, ಮೈಸೂರಿನಲ್ಲಿ ಪತ್ನಿಯ ಲವ್ವಿ ಡವ್ವಿ...
25-08-25 08:29 pm
ಶಿಕ್ಷಣ ಸಚಿವ ಮಧು ಬಂಗಾರಪ್ಪ ಪಿಎ ಹೆಸರಲ್ಲಿ ವಸೂಲಿ ;...
25-08-25 07:42 pm