ಬ್ರೇಕಿಂಗ್ ನ್ಯೂಸ್
14-04-24 09:01 pm Mangaluru Correspondent ಕರಾವಳಿ
ಮಂಗಳೂರು, ಎ.14: ಮಂಗಳೂರಿನಲ್ಲಿ ಇಂದು ಕೇಸರಿ ಪಾಳಯದ ಜನಸಾಗರವೇ ಹರಿದಿತ್ತು. ಪ್ರಧಾನಿ ಮೋದಿಯನ್ನು ನೋಡಲು ಸಂಜೆ ಐದು ಗಂಟೆಯಿಂದಲೇ ಲಕ್ಷಾಂತರ ಜನರು ಸೇರಿದ್ದರು. ಜನರು ಹೂಮಳೆಗರೆಯುತ್ತಿದ್ದಂತೆ ಮೋದಿ ಕೈಮುಗಿಯುತ್ತಲೇ ಸಾಗಿದರು.
ಸರಿಯಾಗಿ 7.50ಕ್ಕೆ ಲೇಡಿಹಿಲ್ ಬಳಿಯ ನಾರಾಯಣ ಗುರು ಸರ್ಕಲ್ ಬಂದಿಳಿದ ಮೋದಿ, ನಾರಾಯಣ ಗುರುಗಳ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಬಳಿಕ ರೋಡ್ ಶೋ ವಾಹನ ಏರಿದರು. ವಾಹನದಲ್ಲಿ ದಕ್ಷಿಣ ಕನ್ನಡ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ, ಉಡುಪಿ ಲೋಕಸಭೆ ಕ್ಷೇತ್ರದ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಜೊತೆಗಿದ್ದರು.
ರಸ್ತೆಯ ಇಕ್ಕೆಲಗಳಲ್ಲೂ ಜನರು, ಅಭಿಮಾನಿಗಳು ನೆರೆದಿದ್ದರು. ಅಲ್ಲಲ್ಲಿ ಮೋದಿ ಬರುವ ಮೊದಲು ಜನರಿಗೆ ಬೋರ್ ಆಗದಂತೆ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಾಡಾಗಿತ್ತು. ಮೋದಿ ತೆರೆದ ವಾಹನದಲ್ಲಿ ಬರುತ್ತಿದ್ದಂತೆ ಜನರ ಮೋದಿ ಮೋದಿ ಜೈಕಾರ ಮೊಳಗಿತು. ಭಾರೀ ಸಂಖ್ಯೆಯಲ್ಲಿ ನೆರೆದಿದ್ದ ಅಭಿಮಾನಿಗಳು ಮೋದಿ ಮೋದಿ ಘೋಷಣೆ ಹಾಕಿದರು. ರಸ್ತೆಯುದ್ಸಕ್ಕೂ ಸೇರಿದ ಜನರ ಒಂದೇ ಕಂಠದ ಕೂಗು ಕೇಳಿ ಸ್ವತಃ ಮೋದಿಯೇ ಪುಳಕಗೊಂಡರು. ಕೆಲವು ಜಾಗದಲ್ಲಿ ಜನರು ಹುಚ್ಚೆದ್ದು ಕುಣಿಯುವುದೂ ಕಂಡುಬಂತು. ಮೋದಿಯವರೇ ತಮಗೆ ಬಿದ್ದ ಹೂವುಗಳನ್ನು ಮರಳಿ ಜನರತ್ತ ಎಸೆದಿದ್ದೂ ಕಂಡುಬಂತು. ಮಹಿಳೆಯರು, ಮಕ್ಕಳು, ವೃದ್ಧರು ಬಹುಪಾಲು ಯುವಜನರು ಬಿಳಿ ಗಡ್ಡದ ಮೋದಿಯವರ ವರ್ಚಸ್ಸು ಕಂಡು ಆನಂದ ತುಂದಿಲರಾದರು.
ನಾರಾಯಣ ಗುರು ವೃತ್ತದಿಂದ ಲಾಲ್ ಬಾಗ್, ಪಿವಿಎಸ್ ವೃತ್ತದ ಮೂಲಕ ನವಭಾರತ್ ಸರ್ಕಲ್ ಬಳಿ ರೋಡ್ ಶೋ ಕೊನೆಗೊಂಡಿತು. ಬಳಿಕ ಅಲ್ಲಿಂದಲೇ ವಾಹನದಿಂದ ಇಳಿದು ಮೋದಿ ಎಸ್ಕಾರ್ಟ್ ವಾಹನದಲ್ಲಿ ಹಂಪನಕಟ್ಟೆ ಮೂಲಕ ಮರಳಿ ಏರ್ಪೋರ್ಟ್ ನತ್ತ ಸಾಗಿದರು. ಜನರು ಜೈಶ್ರೀರಾಮ್, ಜೈ ಮೋದಿ ಎನ್ನುತ್ತ ಮನೆಯತ್ತ ನಡೆದರು.
A massive crowd gathered in Mangaluru to witness the roadshow of Prime Minister (PM) Narendra Modi on Sunday, April 14. The event kicked off at Narayana Guru Circle at Ladyhill and concluded at Navbharath Circle. PM Modi was warmly welcomed at Narayana Guru Circle with an aarti ritual, followed by the garlanding of the statue of Narayana Guru before embarking on the roadshow.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
20-04-25 08:42 pm
HK News Desk
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
20-04-25 10:52 pm
Bangalore Correspondent
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am