ಬ್ರೇಕಿಂಗ್ ನ್ಯೂಸ್
12-04-24 10:35 pm Mangaluru Correspondent ಕರಾವಳಿ
ಮಂಗಳೂರು, ಎ.12: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರಿಗೆ ಪೊಳಲಿ ರಾಜರಾಜೇಶ್ವರಿ ದೇವಿಯ ಅಭಯ ಸಿಕ್ಕಿದೆ. ಇದಕ್ಕೆ ಸಾಕ್ಷಿಯೆಂಬಂತೆ, ದೇವರ ಗರ್ಭಗುಡಿಯ ಮುಂದೆ ಪ್ರಾರ್ಥನೆ ನೆರವೇರಿಸುತ್ತಿದ್ದಾಗ ಅಕಸ್ಮಾತ್ ಮೇಲಿನಿಂದ ಹೂವೊಂದು ಬ್ರಿಜೇಶ್ ಚೌಟ ಹಿಡಿದುಕೊಂಡಿದ್ದ ಪ್ರಸಾದದ ತಟ್ಟೆಗೆ ಬಿದ್ದಿರುವ ವಿಡಿಯೋ ಈಗ ಭಾರೀ ವೈರಲ್ ಆಗುತ್ತಿದೆ.
ಪೊಳಲಿ ದೇವಸ್ಥಾನದಲ್ಲಿ ತಿಂಗಳ ಪರ್ಯಂತ ನಡೆದ ವಾರ್ಷಿಕ ಉತ್ಸವದ ಕೊನೆಯಲ್ಲಿ ರಥೋತ್ಸವ ನಡೆಯುತ್ತದೆ. ಎಪ್ರಿಲ್ 11ರಂದು ರಥೋತ್ಸವ ನಡೆಯುವುದಕ್ಕೂ ಮುನ್ನ ಬ್ರಿಜೇಶ್ ಚೌಟ ದೇವಿಯ ಸನ್ನಿಧಿಗೆ ತೆರಳಿದ್ದು, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಜೊತೆಗೆ ನಿಂತು ದೇವರಿಗೆ ಪ್ರಾರ್ಥನೆ ಸಲ್ಲಿಸಿದ್ದಾರೆ. ಈ ವೇಳೆ, ಅರ್ಚಕರು ಹೂವಿನ ಪೂಜೆಗೆ ಪ್ರತಿಯಾಗಿ ಪ್ರಸಾದವನ್ನು ತಟ್ಟೆಯಲ್ಲಿ ಹಾಕಿ ಕೊಟ್ಟಿದ್ದಾರೆ.
ಪ್ರಸಾದ ಪಡೆದು ಹಣೆಗೆ ತಿಲಕವಿಡುತ್ತಲೇ ಮೇಲಿನಿಂದ ಹೂವೊಂದು ಚೌಟರು ಕೈಯಲ್ಲಿ ಹಿಡಿದುಕೊಂಡಿದ್ದ ತಟ್ಟೆಗೆ ಬಂದು ಬಿದ್ದಿದ್ದು ಅಚ್ಚರಿ ಎನ್ನುವಂತೆ ರಾಜೇಶ್ ನಾಯ್ಕ್ ಮತ್ತು ಬ್ರಿಜೇಶ್ ಚೌಟ ಮೇಲೆ ನೋಡಿದ್ದಾರೆ. ಗರ್ಭಗುಡಿಯ ಮುಂದೆ ಮೇಲ್ಭಾಗದಲ್ಲಿ ಅಲಂಕಾರಕ್ಕೆ ಇಡಲಾಗಿದ್ದ ಹೂವು ಅಕಸ್ಮಾತ್ ಪ್ರಸಾದ ತಟ್ಟೆಗೆ ಬಿದ್ದಿರುವುದು ಅಲ್ಲಿ ವಿಡಿಯೋ ಮಾಡುತ್ತಿದ್ದಾಗ ಸೆರೆಯಾಗಿದೆ. ಆಮೂಲಕ ಪೊಳಲಿ ದೇವಿಯ ಅಭಯವೇ ಬ್ರಿಜೇಶ್ ಚೌಟರಿಗೆ ಸಿಕ್ಕಂತಾಗಿದೆ ಎನ್ನುವ ರೀತಿ ಅಭಿಮಾನಿಗಳು ವಿಡಿಯೋ ಷೇರ್ ಮಾಡುತ್ತಿದ್ದಾರೆ.
ಎರಡು ದಿನಗಳಲ್ಲಿ ಜಾಲತಾಣದಲ್ಲಿ ಈ ವಿಡಿಯೋ ಭಾರೀ ವೈರಲ್ ಆಗಿದ್ದು, ಸುರಥ ರಾಜನ ಭಕ್ತಿಗೆ ರಾಜ್ಯವನ್ನೇ ಕರುಣಿಸಿದ ಪೊಳಲಿ ಜಗನ್ಮಾತೆಯ ಅನುಗ್ರಹ ದೇಶ ಕಾಯೋ ಯೋಧನಿಗೆ ಸಿಕ್ಕಿದ ಘಳಿಗೆ, ವಿಜಯೀಭವ ಎಂದು ಅಭಿಮಾನಿಗಳು ಹಂಚಿಕೊಂಡಿದ್ದಾರೆ. ಈ ವಿಡಿಯೋವನ್ನು ಮೊದಲ ಬಾರಿಗೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ತಮ್ಮ ಫೇಸ್ಬುಕ್ ಪೇಜ್ ನಲ್ಲಿ ಹಂಚಿಕೊಂಡಿದ್ದರು.
BJP #Brijeshchowta #Polali temple visit video goes viral in #Mangalore @CaptBrijesh pic.twitter.com/awxniZvOyx
— Headline Karnataka (@hknewsonline) April 12, 2024
BJP Brijesh chowta Polali temple visit video goes viral in Mangalore. She looks grander and even more powerful during her annual jatre. May she bless all of us with health and happiness esp through this pandemic says Chowta twitter post
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
20-04-25 08:42 pm
HK News Desk
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
20-04-25 10:52 pm
Bangalore Correspondent
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am