ಬ್ರೇಕಿಂಗ್ ನ್ಯೂಸ್
10-04-24 08:56 pm Mangalore Correspondent ಕರಾವಳಿ
ಉಳ್ಳಾಲ, ಎ.10: ಯಾವುದೇ ಧರ್ಮದ ಹಬ್ಬಗಳ ಆಚರಣೆಯಿಂದ ನಮ್ಮನ್ನ ನಾವು ತಿದ್ದಿಕೊಳ್ಳುವಂತಾಗಬೇಕು. ಹಬ್ಬಗಳ ಸಂಭ್ರಮವನ್ನ ಸಮಾಜದ ಎಲ್ಲಾ ವರ್ಗದವರು ಅನುಭವಿಸುವಂತಾಗಬೇಕೆಂದು ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷರಾದ ಯು.ಟಿ.ಖಾದರ್ ಅಭಿಪ್ರಾಯಪಟ್ಟರು.
ತೊಕ್ಕೊಟ್ಟಿನ "ಹೆಲ್ಫ್ ಇಂಡಿಯಾ ಫೌಂಡೇಷನ್" ವತಿಯಿಂದ ಉಳ್ಳಾಲ ತಾಲೂಕಿನ ಸೋಮೇಶ್ವರದ ಪಶ್ಚಿಮ್ ರಿಹ್ಯಾಬ್ ಸೆಂಟರಿನಲ್ಲಿ ಬುಧವಾರ ನಡೆದ ಈದ್ ಹಬ್ಬದ ಸಂಭ್ರಮಾಚರಣೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಮನುಷ್ಯನಾಗಿ ಹುಟ್ಟಿದ ಪ್ರತಿಯೊಬ್ಬರೂ ಒಂದಲ್ಲ ಒಂದು ಸಮಸ್ಯೆಯಿಂದ ಬಳಲುತ್ತಿರುವವರೇ ಆಗಿದ್ದಾರೆ. ಈ ಪುನಶ್ಚೇತನ ಕೇಂದ್ರಕ್ಕೆ ಯಾವುದೋ ಚಿಂತೆ, ಸಮಸ್ಯೆಯಿಂದ ಬಂದಿರೋ ನೀವೆಲ್ಲರೂ ಶೀಘ್ರ ಗುಣಮುಖರಾಗಿ ಸಮಾಜದ ಮುಖ್ಯ ವಾಹಿನಿಯಲ್ಲಿ ಎಲ್ಲರೊಂದಿಗೆ ಬೆರೆತು ಬಾಳುವಂತಾಗಬೇಕು. ನಿಮ್ಮೊಂದಿಗೆ ಈದ್ ಹಬ್ಬದ ಸಂಭ್ರಮ ಹಂಚಲು ಅವಕಾಶ ಮಾಡಿಕೊಟ್ಟ ಹೆಲ್ಫ್ ಇಂಡಿಯಾ ಫೌಂಡೇಷನ್ ಕಾರ್ಯ ಶ್ಲಾಘನೀಯ ಎಂದರು.
ಈದ್ ಹಬ್ಬದ ಪ್ರಯುಕ್ತ ಆಶ್ರಮವಾಸಿಗಳೆಲ್ಲರಿಗೂ ಬಿರಿಯಾನಿ ಊಟವನ್ನು ಖಾದರ್ ಹಂಚಿದರು. ನಮ್ಮ ಟಿ.ವಿ ವಾಹಿನಿಯ ನಿರ್ದೇಶಕರಾದ ಡಾ.ಶಿವಶರಣ್ ಶೆಟ್ಟಿ, ಉದ್ಯಮಿ ಬಶೀರ್, ಡಾ.ಜಮಾಲ್, ಉಳ್ಳಾಲ ನಗರಸಭಾ ಸದಸ್ಯ ಅಝೀಝ್, ಪಶ್ಚಿಮ್ ರಿಹ್ಯಾಬ್ ಸೆಂಟರ್ ನ ವ್ಯವಸ್ಥಾಪಕರಾದ ರೋಹಿತ್ ಸಾಂಕ್ಟಸ್, ಹೆಲ್ಫ್ ಇಂಡಿಯಾ ಫೌಂಡೇಷನ್ ಸ್ಥಾಪಕರಾದ ರಾಝಿಕ್ ಉಳ್ಳಾಲ್, ಪ್ರಮುಖರಾದ ಝಾಕಿರ್ ಇಕ್ಲಾಸ್ ಮೊದಲಾದವರು ಉಪಸ್ಥಿತರಿದ್ದರು.
ಇದಕ್ಕೂ ಮುನ್ನ ಯು.ಟಿ ಖಾದರ್ ಅವರು ದಕ್ಷಿಣದ ಅಜ್ಮೀರ್ ಖ್ಯಾತಿಯ ಉಳ್ಳಾಲ ದರ್ಗಾಕ್ಕೆ ತೆರಳಿ ಈದ್ ಹಬ್ಬದ ಪ್ರಯುಕ್ತ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಉಳ್ಳಾಲ ದರ್ಗಾ ಅಧ್ಯಕ್ಷರಾದ ಹಾಜಿ ಬಿ.ಜಿ.ಹನೀಫ್, ಉಪಾಧ್ಯಕ್ಷರಾದ ಅಶ್ರಫ್ ಅಹ್ಮದ್ ರೈಟ್ ವೇ ಅವರು ಖಾದರ್ ಅವರನ್ನ ಸ್ವಾಗತಿಸಿದರು.
Speaker mla UT Khader celebrates eid at orphanage centre at Thokottu in Mangalore.
28-08-25 06:23 pm
HK News Desk
Bidar Bus Driver Suicide: ಬೀದರ್ ಬಸ್ ಡಿಪೋ ನಲ್ಲ...
28-08-25 02:41 pm
ಬಿಳಿಯಲ್ಲ ಮಾರಾಯರೇ ನೀಲಿ ಮೊಟ್ಟೆ ಇಟ್ಟ ನಾಟಿ ಕೋಳಿ ;...
28-08-25 11:56 am
Banumustak, DK Shivakumar, Chamundi Hill: ದೇವ...
27-08-25 06:21 pm
Congress, MP Yaduveer, DK Shivakumar: ಕಾಂಗ್ರೆ...
27-08-25 06:17 pm
28-08-25 12:19 pm
HK News Desk
ಕೈ ಗ್ಯಾರಂಟಿಗೆ ಬೊಕ್ಕಸ ಪೂರ ಖಾಲಿ - ಖಾಲಿ ; ತೆಲಂಗಾ...
26-08-25 09:02 pm
ಜಮ್ಮು ಭಾರಿ ಮಳೆಗೆ ಒಂಬತ್ತು ಮಂದಿ ಬಲಿ ; ಹಲವೆಡೆ ಭೂ...
26-08-25 07:39 pm
Trump Immigrant Population: ಟ್ರಂಪ್ ಸಾಮ್ರಾಜ್ಯದ...
24-08-25 01:47 pm
Actor Vijay, Thalapathy; ಟಿವಿಕೆ ಮುಖ್ಯಸ್ಥ, ನಟ...
23-08-25 04:58 pm
28-08-25 11:00 pm
Mangalore Correspondent
Mangalore Rain, School College Holiday: ಭಾರೀ...
28-08-25 10:07 pm
Soujanya Murder Case, Mother SIT: ಸೌಜನ್ಯಾ ಕೊಲ...
28-08-25 08:31 pm
Talapady Accident, Mangalore, Auto bus: ಕೇರಳ...
28-08-25 04:05 pm
Loudspeaker, Punjalkatte,Farangipete: ಪುಂಜಾಲ...
28-08-25 02:51 pm
27-08-25 10:23 pm
HK News Desk
Karkala Murder, Arrest, Crime: ಹೆಂಡ್ತಿ ಮಕ್ಕಳನ...
26-08-25 10:39 pm
ಟೆಕ್ನಾಲಜಿಯಲ್ಲಿ ಮುಂದಿರುವ ಅಮೆರಿಕದ ಪ್ರಜೆಗಳನ್ನೇ ಯ...
26-08-25 05:24 pm
ದುಬೈನಲ್ಲಿ ಗಂಡ, ಮೈಸೂರಿನಲ್ಲಿ ಪತ್ನಿಯ ಲವ್ವಿ ಡವ್ವಿ...
25-08-25 08:29 pm
ಶಿಕ್ಷಣ ಸಚಿವ ಮಧು ಬಂಗಾರಪ್ಪ ಪಿಎ ಹೆಸರಲ್ಲಿ ವಸೂಲಿ ;...
25-08-25 07:42 pm