ಬ್ರೇಕಿಂಗ್ ನ್ಯೂಸ್
09-04-24 10:57 pm Mangalore Correspondent ಕರಾವಳಿ
ಪುತ್ತೂರು, ಎ.9: ನಿಮ್ಮೆಲ್ಲರ ಕೈ ಕೊಯ್ದರೆ ರಕ್ತ ಕೆಂಪಿನದ್ದಿಲ್ಲ, ಕೇಸರಿ ಇರೋದು ಅಂತ ಗೊತ್ತಿದೆ. ನಿಮ್ಮವರಿಗೆ ಬಿಜೆಪಿ ಬಗ್ಗೆ, ಹಿಂದುತ್ವದ ಬಗ್ಗೆ ಪಾಠ ಹೇಳಲು ಬಂದಿಲ್ಲ. ಆದರೆ ನಾಡಿದ್ದು ಎಪ್ರಿಲ್ 26ರಂದು ಮದುವೆ ಇದೆ, ಮೋದಿ ಹೇಗೂ ಗೆಲ್ಲುತ್ತಾರೆಂದು ನಿರ್ಲಕ್ಷ್ಯ ಮಾಡಬೇಡಿ. ಮೋದಿಯವರು ಈ ದೇಶದ ಮಹಿಳೆಯರಿಗೆ ಶಕ್ತಿ ಕೊಟ್ಟಿದ್ದಾರೆ. ಮಹಿಳೆಯರ ಸಬಲೀಕರಣಕ್ಕಾಗಿ ಎಷ್ಟೆಲ್ಲಾ ಯೋಜನೆ ಮಾಡಿದ್ದಾರೆ. ಅದಕ್ಕಾಗಿ ನಾವು ಹಿಂತಿರುಗಿ ಕೊಡೋದು, ಒಂದು ಮತವಷ್ಟೇ. ಅದನ್ನು ತಪ್ಪದೆ ಮಾಡಬೇಕು ಎಂದು ಬಿಜೆಪಿ ನಾಯಕಿ, ಚಿತ್ರನಟಿ ಮಾಳವಿಕಾ ಅವಿನಾಶ್ ಹೇಳಿದ್ದಾರೆ.
ಪುತ್ತೂರಿನಲ್ಲಿ ನಾರಿಶಕ್ತಿ ಮಹಿಳಾ ಕಾರ್ಯಕರ್ತರ ಸಮಾವೇಶದಲ್ಲಿ ಅವರು ಮಾತನಾಡಿದರು. ನಮಗೆ ಮೋದಿ ಗೆಲ್ಲುವ ಬಗ್ಗೆ ಸಂಶಯ ಇಲ್ಲ. ಇಲ್ಲಿ ಬೃಜೇಶ್ ಗೆಲ್ಲುವುದರಲ್ಲೂ ಸಂಶಯ ಇಲ್ಲ. ಗೆಲ್ಲೋದು ಖಚಿತ. ಆದರೆ ಇಲ್ಲಿ ಎಷ್ಟು ಅಂತರದಿಂದ ಗೆಲ್ಲಿಸಿ ಕಳಿಸುತ್ತೇವೆ ಅನ್ನುವುದು ಮುಖ್ಯ. ಮೂರು ಲಕ್ಷನಾ, ನಾಲ್ಕು ಲಕ್ಷನಾ ಎಂದು ನಾವು ಈಗಲೇ ಸಂಕಲ್ಪ ಮಾಡಬೇಕು. ನಿಮಗೆಲ್ಲ ಗೊತ್ತಿದೆ, ಪರೀಕ್ಷೆಯಲ್ಲಿ ರಿವಿಶನ್ ಮಾಡೋದಕ್ಕಷ್ಟೇ ನಾನು ಬಂದಿದ್ದೇನೆ ಎಂದರು.
ಗರೀಬಿ ಹಠಾವೋ ಎಂದು ನಾವು ಹುಟ್ಟೋ ಮೊದಲೇ ಇಂದಿರಾ ಗಾಂಧಿ ಹೇಳಿದ್ದರು. ಆದರೆ ಗರೀಬಿ ಹಠಾವೋ ಆಗಿಲ್ಲ. ಅದನ್ನು ಮಾಡಲು ಮೋದಿಯೇ ಬರಬೇಕಾಯಿತು. ಅಷ್ಟೇ ಅಲ್ಲ, ಕಾಂಗ್ರೆಸನ್ನೂ ಹಠಾವೋ ಮಾಡಲು ಶುರು ಮಾಡಿದ್ದಾರೆ. ಆಮೂಲಕ ಕಾಂಗ್ರೆಸಿಗರ ಭ್ರಷ್ಟಾಚಾರವನ್ನೂ ತೊಲಗಿಸುವ ಸಂಕಲ್ಪ ಮಾಡಿದ್ದಾರೆ ಎಂದ ಮಾಳವಿಕಾ, ಮೋದಿ ಈ ದೇಶಕ್ಕೆ ಕೊಟ್ಟಿದ್ದೇನು ಅನ್ನೋದು ನಮ್ಮೆಲ್ಲರ ಮನಸ್ಸಿನಲ್ಲಿರಬೇಕು. ದಿನಪೂರ್ತಿ ಎಚ್ಚರದಲ್ಲಿದ್ದು ಈ ದೇಶದ ಒಳಿತಿಗಾಗಿ ದುಡಿಯುತ್ತಿದ್ದಾರೆ. ದೇಶದ ಅಭ್ಯುದಯವೇ ಅವರ ಗುರಿ. ಇಡೀ ದೇಶದ ಜನರು, ಪ್ರತಿ ಗ್ರಾಮವೂ ಅಭಿವೃದ್ಧಿಯಲ್ಲಿ ಜೋಡಣೆಯಾಗಬೇಕು ಅನ್ನುವ ದೃಷ್ಟಿಯಲ್ಲಿ ಕೆಲಸ ಮಾಡುತ್ತಿದ್ದಾರೆ.
ಮಹಿಳೆಯರಿಗೆ ಶಕ್ತಿ ಕೊಡುವುದಕ್ಕಾಗಿ ಉಜ್ವಲ್ ಗ್ಯಾಸ್ ಕೊಟ್ಟಿದ್ದಾರೆ. ಆಯುಷ್ಮಾನ್ ಆರೋಗ್ಯ ಕೊಟ್ಟಿದ್ದಾರೆ. ಮಾತೃ ವಂದನಾ ಯೋಜನೆ ನೀಡಿದ್ದಾರೆ. ಎಲ್ಲಿರಿಗೂ ನೀರು ಕೊಡಲು ಜಲಜೀವನ್ ಮಿಷನ್ ಕೊಟ್ಟಿದ್ದಾರೆ. ಹೇಳುತ್ತಾ ಹೋದರೆ ನೂರಕ್ಕೂ ಹೆಚ್ಚು ಇದೆ. ತಿಂಗಳಿಗೆ ಎರಡು ಲಕ್ಷ ಕೊಟ್ಟರೆ ಎಲ್ಲರಿಗೂ ಇಂತಹ ಯೋಜನೆ ಕೊಡಲು ಆಗುತ್ತಾ ಎಂದು ಗ್ಯಾರಂಟಿ ಯೋಜನೆಯ ಬಗ್ಗೆ ಟಾಂಗ್ ಇಟ್ಟರು.
ಎಲ್ಲರನ್ನು ಒಳಗೊಂಡು ದೇಶವನ್ನು ಅಭಿವೃದ್ಧಿ ಮಾಡುತ್ತಿದ್ದಾರೆ, ಇದರ ಲಾಭ ಪಡೆಯದವರು ಯಾರೂ ಇಲ್ಲ. ಪ್ರತಿಪಕ್ಷಗಳ ನಾಯಕರನ್ನೂ ಸೇರಿಸಿ ಅಭಿವೃದ್ಧಿಯ ಕೊಡುಗೆ ನೀಡುತ್ತಿದ್ದಾರೆ. ಜನ ಸಾಮಾನ್ಯರಿಗೂ ವಿಮಾನ ಸೇವೆ ತಲುಪಬೇಕೆಂದು ಉಪ ನಗರಗಳಲ್ಲಿಯೂ ವಿಮಾನ ನಿಲ್ದಾಣ ರಚಿಸಿದ್ದಾರೆ. ಹಾಗಾಗಿ ನಾಡಿದ್ದು ಎಪ್ರಿಲ್ 26ರಂದು ಒಳ್ಳೆ ಮುಹೂರ್ತ ಎಂದು ಕೇಳಲ್ಪಟ್ಟೆ. ಆ ದಿನ ಹೆಚ್ಚು ಮದುವೆ ಇರುತ್ತದಂತೆ. ಮಹಿಳೆಯರು ಮದುವೆಗೆ ಹೋಗಿ ಸಮಯ ಕಳೆಯಬೇಡಿ.. ಮದುವೆಗೆ ಹೋದರೂ, ಮತ ಹಾಕೋದನ್ನು ಮರೆಯಬೇಡಿ. ನಿಮ್ಮ ಅಕ್ಕ ಪಕ್ಕದವರನ್ನೂ ಮತ ಹಾಕಿಸಿಯೇ ಮದುವೆ ಹೋಗಿ. ನಮಗೆ ದೇಶವೇ ಮುಖ್ಯ ಅನ್ನುವುದನ್ನು ನೆನಪಲ್ಲಿರಿಸಿಕೊಳ್ಳಿ. ಮುಂದಿನ ಬಾರಿ ಮತ್ತೆ ಪುತ್ತೂರಿಗೆ ಬರುವಾಗ ತುಳುವಿನಲ್ಲೇ ಮಾತಾಡುತ್ತೇನೆ ಎಂದು ಹೇಳಿದರು ಮಾಳವಿಕಾ.
ಸಮಾರಂಭದಲ್ಲಿ ಲೋಕಸಭೆ ಅಭ್ಯರ್ಥಿ ಕ್ಯಾ.ಬೃಜೇಶ್ ಚೌಟ, ಸುಲೋಚನಾ ಜಿಕೆ ಭಟ್ ಸೇರಿದಂತೆ ಮಹಿಳಾ ನಾಯಕಿಯರು ಇದ್ದರು.
Bjp actress Malavika Avinash in puttur. Encourages leaders and members to work hard for the coming elections.
28-08-25 06:23 pm
HK News Desk
Bidar Bus Driver Suicide: ಬೀದರ್ ಬಸ್ ಡಿಪೋ ನಲ್ಲ...
28-08-25 02:41 pm
ಬಿಳಿಯಲ್ಲ ಮಾರಾಯರೇ ನೀಲಿ ಮೊಟ್ಟೆ ಇಟ್ಟ ನಾಟಿ ಕೋಳಿ ;...
28-08-25 11:56 am
Banumustak, DK Shivakumar, Chamundi Hill: ದೇವ...
27-08-25 06:21 pm
Congress, MP Yaduveer, DK Shivakumar: ಕಾಂಗ್ರೆ...
27-08-25 06:17 pm
28-08-25 12:19 pm
HK News Desk
ಕೈ ಗ್ಯಾರಂಟಿಗೆ ಬೊಕ್ಕಸ ಪೂರ ಖಾಲಿ - ಖಾಲಿ ; ತೆಲಂಗಾ...
26-08-25 09:02 pm
ಜಮ್ಮು ಭಾರಿ ಮಳೆಗೆ ಒಂಬತ್ತು ಮಂದಿ ಬಲಿ ; ಹಲವೆಡೆ ಭೂ...
26-08-25 07:39 pm
Trump Immigrant Population: ಟ್ರಂಪ್ ಸಾಮ್ರಾಜ್ಯದ...
24-08-25 01:47 pm
Actor Vijay, Thalapathy; ಟಿವಿಕೆ ಮುಖ್ಯಸ್ಥ, ನಟ...
23-08-25 04:58 pm
28-08-25 11:00 pm
Mangalore Correspondent
Mangalore Rain, School College Holiday: ಭಾರೀ...
28-08-25 10:07 pm
Soujanya Murder Case, Mother SIT: ಸೌಜನ್ಯಾ ಕೊಲ...
28-08-25 08:31 pm
Talapady Accident, Mangalore, Auto bus: ಕೇರಳ...
28-08-25 04:05 pm
Loudspeaker, Punjalkatte,Farangipete: ಪುಂಜಾಲ...
28-08-25 02:51 pm
27-08-25 10:23 pm
HK News Desk
Karkala Murder, Arrest, Crime: ಹೆಂಡ್ತಿ ಮಕ್ಕಳನ...
26-08-25 10:39 pm
ಟೆಕ್ನಾಲಜಿಯಲ್ಲಿ ಮುಂದಿರುವ ಅಮೆರಿಕದ ಪ್ರಜೆಗಳನ್ನೇ ಯ...
26-08-25 05:24 pm
ದುಬೈನಲ್ಲಿ ಗಂಡ, ಮೈಸೂರಿನಲ್ಲಿ ಪತ್ನಿಯ ಲವ್ವಿ ಡವ್ವಿ...
25-08-25 08:29 pm
ಶಿಕ್ಷಣ ಸಚಿವ ಮಧು ಬಂಗಾರಪ್ಪ ಪಿಎ ಹೆಸರಲ್ಲಿ ವಸೂಲಿ ;...
25-08-25 07:42 pm