ಬ್ರೇಕಿಂಗ್ ನ್ಯೂಸ್
30-11-20 02:55 pm Udupi Correspondent ಕರಾವಳಿ
ಉಡುಪಿ, ನ.30 : ಹಿಂದೂ ಧರ್ಮ ಏನು ಬಿಜೆಪಿಗರ ಸ್ವತ್ತಾ? ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿಕೆಗೆ ಸಂಸದೆ ಶೋಭಾ ಕರಂದ್ಲಾಜೆ ತಿರುಗೇಟು ನೀಡಿದ್ದಾರೆ. ಹೌದು, ಖಂಡಿತವಾಗಿಯೂ ಕರಾವಳಿಯನ್ನು ನಾವು ದತ್ತು ತಗೊಂಡಿದ್ದೇವೆ. ಕರ್ನಾಟಕ ಕರಾವಳಿ ನಮ್ಮದೇ. ಉಡುಪಿಯ ಐವರು ಶಾಸಕರು ಬಿಜೆಪಿಯವರೇ ಎಂದು ಟಾಂಗ್ ನೀಡಿದ್ದಾರೆ.
ಉಡುಪಿಯಲ್ಲಿ ಮಾತನಾಡಿದ ಸಂಸದೆ, "ಈ ಭಾಗವನ್ನು ದತ್ತು ತೆಗೆದುಕೊಳ್ಳುತ್ತೇವೆ, ಅಭಿವೃದ್ಧಿನೂ ಮಾಡುತ್ತೇವೆ. ಕಾಂಗ್ರೆಸ್ ಜನವಿರೋಧಿ ನೀತಿಗೆ ಕರಾವಳಿ ಜನ ತಕ್ಕ ಪಾಠ ಕಲಿಸುತ್ತಾರೆ. ದೇವರ ವಿಚಾರದಲ್ಲಿ ನಾವು ರಾಜಕೀಯ ಮಾಡುತ್ತಿಲ್ಲ, ಡಿಕೆಶಿ ಚುನಾವಣೆ ಬಂದಾಗ ಮಾತ್ರ ದೇವಸ್ಥಾನ ತಿರುಗುತ್ತಾರೆ'' ಎಂದು ಆರೋಪಿಸಿದರು.
ಸಿಎಂ ರಾಜಕೀಯ ಕಾರ್ಯದರ್ಶಿ ಸಂತೋಷ್ ಆತ್ಮಹತ್ಯೆ ಯತ್ನ ವಿಚಾರವಾಗಿ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಸಿಡಿ ಹೇಳಿಕೆಗೆ, ಪ್ರತಿಕ್ರಿಯಿಸಿ ಶೋಭಾ ಕರಂದ್ಲಾಜೆ, ಡಿಕೆಶಿಯವರು ತಮಗೆ ಗೊತ್ತಿರುವ ಮಾಹಿತಿಯನ್ನು ಬಹಿರಂಗಪಡಿಸಲಿ. ಬುಟ್ಟಿಯಲ್ಲಿ ಹಾವಿದೆ, ಹಾವಿದೆ ಎಂದು ಹೆದರಿಸುವ ಕೆಲಸ ಬೇಡ. ಸಾಧ್ಯವಿದ್ದರೆ ಆ ಹಾವನ್ನು ಹೊರಗೆ ಬಿಡಿ. ಈ ಪ್ರಕರಣದಲ್ಲಿ ನಿಮ್ಮ ಷಡ್ಯಂತ್ರ ಏನಾದರೂ ಇದೆಯಾ? ನಮ್ಮ ನಾಯಕರ ವಿರುದ್ಧ ಏನು ಷಡ್ಯಂತ್ರ ಮಾಡಿದ್ದೀರಿ ಎಂದು ಪ್ರಶ್ನಿಸಿದರು.

ಸುಳ್ಳು ಹೇಳುವುದರಲ್ಲಿ ಯಡಿಯೂರಪ್ಪ ಮಿನಿ ಮೋದಿ ಇದ್ದಂತೆ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಗರಂ ಆದ ಸಂಸದೆ ಶೋಭಾ ಕರಂದ್ಲಾಜೆ, ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಹೇಗೆ ಆಡಳಿತ ಮಾಡಿದ್ದಾರೆ ಎಂಬುದನ್ನು ನೋಡಿದ್ದೇವೆ. ಜಾತಿ ಜಾತಿಯನ್ನು ಒಡೆಯುವ ನೀತಿ ಮಾಡಿದ್ದರು. ಅಭಿವೃದ್ಧಿಗಿಂತ ಹೆಚ್ಚಾಗಿ ಜಾತಿ ಒಡೆಯುವುದರಲ್ಲಿ ಮಗ್ನರಾಗಿದ್ದರು ಎಂದು ತಿರುಗೇಟು ನೀಡಿದರು.
ನರೇಂದ್ರ ಮೋದಿ ಕೊಟ್ಟ ಅಕ್ಕಿ, ಗೋಧಿ ಬಳಕೆ ಮಾಡಿಕೊಂಡಿರಿ. ನಾನೇ ಅನ್ನಭಾಗ್ಯ ಯೋಜನೆ ಕೊಟ್ಟೆ ಎಂದು ಸುಳ್ಳು ಹೇಳಿದಿರಿ. ಸುಳ್ಳು ಹೇಳುವುದರಲ್ಲಿ ಯಾರಾದರೂ ನಿಪುಣರು ಇದ್ದರೆ ಅದು ಕಾಂಗ್ರೆಸ್ಸಿನವರು. ಸಿದ್ದರಾಮಯ್ಯನವರಿಗೆ ಕಾಂಗ್ರೆಸ್ ಅಥವಾ ಬೇರೆಲ್ಲೂ ಭವಿಷ್ಯವಿಲ್ಲ. ಹಾಗಾಗಿ ಸಿದ್ದರಾಮಯ್ಯ ಮಾತಿಗೆ ಯಾರೂ ಬೆಲೆ ಕೊಡುವುದಿಲ್ಲ ಎಂದು ಸಂಸದೆ ಶೋಭಾ ಆರೋಪಿಸಿದರು.
15-09-26 09:13 pm
HK News Staffer
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 09:18 pm
HK News Staffer
Satish Kumpala, Manglore: ಕಾಟಾಚಾರಕ್ಕೆ ಸಂಪುಟ ಸ...
15-09-26 07:46 pm
U T Khader, KDP Meeting, Bharath Sheety, Hari...
15-09-26 06:52 pm
Aravind Bolar Controversy, Mangalore: “ಎಂಕ್ ಮ...
15-09-26 05:29 pm
U T Khader, KDP Meeting, Sudheer Reddy Ips: :...
15-09-26 05:27 pm
15-09-26 09:19 pm
HK News Staffer
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am