ಬ್ರೇಕಿಂಗ್ ನ್ಯೂಸ್
08-04-24 10:07 pm Mangalore Correspondent ಕರಾವಳಿ
ಪುತ್ತೂರು, ಎ.8: ಪೊಲೀಸರು, ಆಡಳಿತ ವ್ಯವಸ್ಥೆ ಲೋಕಸಭೆ ಚುನಾವಣೆಯಲ್ಲಿ ಬಿಝಿಯಾಗಿರುವಾಗಲೇ ನಕ್ಸಲರು ಪಶ್ಚಿಮ ಘಟ್ಟದ ಅರಣ್ಯದಲ್ಲಿ ಚಟುವಟಿಕೆ ಆರಂಭಿಸಿದ್ದಾರೆ. ನಾಲ್ಕು ದಿನಗಳ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ ಕಟ್ಟಕಡೆಯ ಗ್ರಾಮ ಬಿಳಿನೆಲೆ ವ್ಯಾಪ್ತಿಯ ಚೇರಾ ಎಂಬಲ್ಲಿಗೆ ಭೇಟಿಯಿತ್ತ ಆರು ಮಂದಿಯಿದ್ದ ನಕ್ಸಲರು ದೇಶದ ಸೇನೆಯಲ್ಲಿದ್ದು ಗಡಿ ಕಾಯುತ್ತಿರುವ ಯೋಧನ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಮನೆಯಲ್ಲಿದ್ದ ವೃದ್ಧ ತಂದೆಯನ್ನು ಬೆದರಿಸಿ ಮಾಡಿಟ್ಟಿದ್ದ ಕೋಳಿ ಸುಕ್ಕದಲ್ಲಿ ಊಟ ಮಾಡಿ ತೆರಳಿದ್ದಾರೆ.
ಮೊನ್ನೆ ಗುರುವಾರ (ಎ.4) ಸಂಜೆ ಏಳು ಗಂಟೆಯ ವೇಳೆಗೆ ನಕ್ಸಲರು ಮನೆಗೆ ನುಗ್ಗಿದಾಗ, ಮನೆಯಲ್ಲಿ 65 ವರ್ಷದ ಶಿವರಾಮ ಗೌಡ ಒಬ್ಬರೇ ಇದ್ದರು. ಟಿವಿ ನೋಡುತ್ತ ಕುಳಿತುಕೊಂಡಿದ್ದ ಶಿವರಾಮ ಗೌಡರನ್ನು ಹಿಂದಿನಿಂದ ಬಂದ ನಕ್ಸಲರು ಗಟ್ಟಿಯಾಗಿ ಹಿಡಿದಿದ್ದು ನಾವೇನೂ ಮಾಡಲ್ಲ. ಬೊಬ್ಬೆ ಹಾಕಬೇಡಿ ಎಂದು ಗನ್ ಹಿಡಿದು ಎಚ್ಚರಿಸಿದ್ದಾರೆ. ತಂಡದಲ್ಲಿ ಆರು ಮಂದಿಯಿದ್ದು ನಾಲ್ವರು ಗನ್ ಹಿಡಿದು ಮನೆಯ ಒಳಗೆ, ಹೊರಗೆ ನಾಲ್ಕು ಮೂಲೆಯಲ್ಲಿ ನಿಂತರು. ಮತ್ತಿಬ್ಬರು ನನ್ನಲ್ಲಿ ಮಾತನಾಡುತ್ತಲೇ ಊಟ ಏನಿದೆ ಎಂದು ಕೇಳಿದರು. ನಾನು ಒಬ್ಬನೇ ಇದ್ದೇನೆ, ಗಂಜಿ ಹೆಚ್ಚಿಲ್ಲ. ಒಂದೂವರೆ ಕೇಜಿ ಕೋಳಿ ಸುಕ್ಕ ಇದೆ ಎಂದಾಗ, ಅಕ್ಕಿ ಇದೆಯಲ್ಲಾ, ಊಟಕ್ಕೆ ಕುಕ್ಕರಲ್ಲಿ ಗಂಜಿ ಇಡುವಂತೆ ಸೂಚಿಸಿದ್ದಾರೆ.
ಗುಂಡ್ಯ – ಸುಬ್ರಹ್ಮಣ್ಯ ಹೆದ್ದಾರಿಯ ಹತ್ತು ಕಿಮೀ ದೂರಕ್ಕೆ ಸಾಗಿದರೆ ಚೇರಾ ಎಂಬ ಪುಟ್ಟ ಹಳ್ಳಿ ಸಿಗುತ್ತದೆ. ಅಲ್ಲಿ ಶಿವರಾಮ ಗೌಡರ ಒಂಟಿ ಮನೆ ಇರುವುದನ್ನು ನೋಡಿ ತಿಳಿದಿದ್ದ ನಕ್ಸಲರು ರಾತ್ರಿ ವೇಳೆಗೆ ನುಗ್ಗಿದ್ದಾರೆ. ಶಿವರಾಮ ಗೌಡ- ಯಮುನಾ ದಂಪತಿಗೆ ಇಬ್ಬರು ಮಕ್ಕಳು. ಒಬ್ಬ ಪುತ್ರ ಭಾರತೀಯ ಸೇನೆಯಲ್ಲಿದ್ದು, ಅಸ್ಸಾಂನಲ್ಲಿ ಕರ್ತವ್ಯದಲ್ಲಿದ್ದಾರೆ. ಇನ್ನೊಬ್ಬ ಪುತ್ರಿ ಮದುವೆಯಾಗಿ ಗಂಡನ ಮನೆಯಲ್ಲಿದ್ದಾರೆ. ಹೀಗಾಗಿ ಮನೆಯಲ್ಲಿ ದಂಪತಿ ಮಾತ್ರ ಇದ್ದಾರೆ. ಮೊನ್ನೆ ನಕ್ಸಲರು ಬಂದಾಗ, ಪತ್ನಿ ಸಂಬಂಧಿಕರ ಮನೆಗೆ ತೆರಳಿದ್ದರು. ಶಿವರಾಮ ಗೌಡ ಒಬ್ಬರೇ ಇದ್ದರು.
ಏಳು ಗಂಟೆಗೆ ಬಂದಿದ್ದ ನಕ್ಸಲರು ರಾತ್ರಿ 9 ಗಂಟೆಯ ವರೆಗೂ ಮನೆಯಲ್ಲಿದ್ದರು. ಬಂದ ಕೂಡಲೇ ಮನೆಯ ಎಲ್ಲ ಲೈಟ್ ಗಳನ್ನು ಆಫ್ ಮಾಡಿದ್ದಾರೆ. ಮಾತನಾಡುವುದು ಹೊರಗೆ ಕೇಳಿಸದಂತೆ ಟೀವಿಯ ಸೌಂಡನ್ನು ಹೆಚ್ಚು ಮಾಡಿದ್ದಾರೆ. ಕುಕ್ಕರಲ್ಲಿ ಬೇಯಿಸಿದ ಗಂಜಿ ರೆಡಿಯಾದ ಬಳಿಕ ಕೋಳಿ ಸುಕ್ಕ ಬಡಿಸಿಕೊಂಡು ಅಡಿಕೆ ಹಾಳೆಯಲ್ಲಿ ಗಡದ್ದು ಊಟ ಮಾಡಿದ್ದಾರೆ. ಬಳಿಕ ಮನೆಯಲ್ಲಿ ತಡಕಾಡಿ ಐದು ಕೇಜಿ ಅಕ್ಕಿ, 5 ತೆಂಗಿನಕಾಯಿ ಪಡೆದಿದ್ದಾರೆ. ಅಕ್ಕಿಗೆ ಬದಲಾಗಿ 500 ರೂ. ಕೊಡಲು ಮುಂದೆ ಬಂದಿದ್ದಾರೆ, ನಾನು ಪಡೆಯಲಿಲ್ಲ. ಬಳಿಕ ಎಲ್ಲವನ್ನೂ ಕಟ್ಟಿಕೊಂಡು ಟಾರ್ಚ್ ಬೆಳಕಲ್ಲಿ ಕಾಡಿನ ದಾರಿ ಹಿಡಿದಿದ್ದಾರೆ. ಅದೇ ಸಂದರ್ಭದಲ್ಲಿ ನಾವು ಬಂದ ವಿಷಯವನ್ನು ಶುಕ್ರವಾರ ಮಧ್ಯಾಹ್ನ ವರೆಗೆ ಯಾರಿಗೂ ಹೇಳಬಾರದು ಎಂಬ ಷರತ್ತನ್ನೂ ಹಾಕಿದ್ದರು ಎಂದು ಸ್ಥಳಕ್ಕೆ ತೆರಳಿದ ಪತ್ರಕರ್ತರ ತಂಡಕ್ಕೆ ಶಿವರಾಮ ಗೌಡ ತಿಳಿಸಿದ್ದಾರೆ.
ಶಿವರಾಮ ಗೌಡರ ಮಗ ಗುಣಶೇಖರ್ ಅಸ್ಸಾಂನಲ್ಲಿ ಕರ್ತವ್ಯದಲ್ಲಿದ್ದಾರೆ. ಮನೆಗೆ ನಕ್ಸಲರು ಬಂದು ಹೋಗಿದ್ದನ್ನು ತಿಳಿದು ಆತಂಕಗೊಂಡಿದ್ದು, ಹೆತ್ತವರಿಗೆ ಕರೆ ಮಾಡಿ ಆಗಾಗ ವಿಚಾರಿಸುತ್ತಿದ್ದಾರೆ. ಪತ್ರಕರ್ತರ ತಂಡ ಆ ಮನೆಗೆ ಹೋಗಿದ್ದಾಗ ಪೊಲೀಸರು ಇರಲಿಲ್ಲ. ಏಂಟಿ ನಕ್ಸಲ್ ಫೋರ್ಸ್ ಪಡೆಯವರೂ ಇರಲಿಲ್ಲ. ಬಿಳಿನೆಲೆಗೆ ನಕ್ಸಲರು ಬಂದು ಹೋಗಿದ್ದು ತಿಳಿದ ಬಳಿಕ ಪೊಲೀಸರು ಮತ್ತು ಎಎನ್ಎಫ್ ಎಲರ್ಟ್ ಆಗಿದ್ದರು. ಆ ಪ್ರದೇಶದಲ್ಲಿ ಕೂಂಬಿಂಗ್ ಕಾರ್ಯಾಚರಣೆ ನಡೆಸುವುದಾಗಿ ಹೇಳಿಕೊಂಡಿದ್ದರು. ಆದರೆ ಕಳೆದ ಒಂದು ತಿಂಗಳ ಅವಧಿಯಲ್ಲಿ ಸುಬ್ರಹ್ಮಣ್ಯ ಆಸುಪಾಸಿನ ಕಾಡಂಚಿನ ಮೂರು ಮನೆಗಳಿಗೆ ನಕ್ಸಲರು ಬಂದಿದ್ದು, ಊಟ ಮಾಡಿ ದಿನಸಿ ಸಾಮಗ್ರಿ ಹೊತ್ತೊಯ್ದಿದ್ದಾರೆ. ಮಾರ್ಚ್ 17ರಂದು ಕೂಜುಮಲೆ ಎಸ್ಟೇಟ್, ಬಳಿಕ ವಾರದ ಅಂತರದಲ್ಲಿ ಐನೆಕಿದು ಗ್ರಾಮದ ಒಂಟಿ ಮನೆಗೆ ಬಂದಿದ್ದ ಇಬ್ಬರು ಮಹಿಳೆಯರಿದ್ದ ತಂಡ ಊಟ ಮಾಡಿ ಹೋಗಿದ್ದು ಸುದ್ದಿಯಾಗಿತ್ತು. ಇದೀಗ ಭಾರತೀಯ ಸೇನೆಯ ಯೋಧನ ಮನೆಗೆ ನಕ್ಸಲರು ನುಗ್ಗಿದ್ದು, ಸದ್ದಿಲ್ಲದೆ ಬಂದು ಹೋಗಿದ್ದಾರೆ.
ಪೊಲೀಸರು, ಸರ್ಕಾರಿ ವ್ಯವಸ್ಥೆಯ ಅಧಿಕಾರಿಗಳೆಲ್ಲ ಚುನಾವಣೆ ಕರ್ತವ್ಯದಲ್ಲಿ ಬಿಝಿಯಾಗಿದ್ದರೆ, ಇದೇ ಹೊತ್ತಿನಲ್ಲಿ ನಕ್ಸಲರು ಪಶ್ಚಿಮ ಘಟ್ಟದಲ್ಲಿ ಸಕ್ರಿಯವಾಗಿರುವುದು ಪ್ರಶ್ನಾರ್ಥಕ ಚಿಹ್ನೆ ಮೂಡಿಸಿದೆ. ಈಗ ಬಂದವರಲ್ಲಿ ನಾಲ್ವರು ತೆಲುಗು ಮಾತನಾಡುತ್ತಿದ್ದರು. ಇಬ್ಬರು ಮೈಸೂರು ಭಾಗದ ಕನ್ನಡ ಮಾತನಾಡುತ್ತಿದ್ದರು ಎನ್ನುವ ಮಾಹಿತಿ ಇರುವುದರಿಂದ ಆಂಧ್ರಪ್ರದೇಶ ಕಡೆಯವರೇ ಇರಬಹುದೆಂಬ ಶಂಕೆಯಿದೆ. ಇಬ್ಬರು ಕರ್ನಾಟಕದವರು ಇರಬೇಕು ಎನ್ನಲಾಗುತ್ತಿದೆ. ನಕ್ಸಲರ ಚಟುವಟಿಕೆಯಿಂದಾಗಿ ಪಶ್ಚಿಮ ಘಟ್ಟದ ಕಾಡಂಚಿನ ಮನೆಗಳಲ್ಲೀಗ ಆತಂಕ, ಭಯದ ವಾತಾವರಣ ಮನೆಮಾಡಿದೆ.
Naxals enter army personal house at Bilinele in puttur, carry away food from house by threating house members not to screm, naxals who entered the house took the items that were cooked by turning light off. Six masked and armed individuals, suspected to be Naxals, reportedly visited the house on the edge of the forest in Cheru, located in Bilinele village of Kadaba taluk on Thursday night.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
20-04-25 08:42 pm
HK News Desk
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
20-04-25 10:52 pm
Bangalore Correspondent
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am