ಬ್ರೇಕಿಂಗ್ ನ್ಯೂಸ್
04-04-24 03:51 pm Mangalore Correspondent ಕರಾವಳಿ
ಮಂಗಳೂರು, ಎ.4: ಇಲ್ಲಿ ಯಾರೋ ಜಾತಿ ಮೇಲೆ ಓಟ್ ಕೇಳ್ತಿದ್ದಾರೆ ಅಂತ ಕೇಳಿದೆ. ನಿಮ್ಗೆ ಒಂದು ಮಾತು ಹೇಳ್ತೀನಿ, ಇದು ಜಾತಿ ಉಳಿಸೋ ಚುನಾವಣೆಯಲ್ಲ, ದೇಶ ಉಳಿಸುವ ಚುನಾವಣೆ. ದೇಶ ಉಳಿದ್ರೆ ನೀನು, ನಾನು, ನಮ್ಮ ಜಾತಿ ಎಲ್ಲ. ದೇಶವೇ ಇಲ್ಲದಿದ್ರೆ ನೀನೂ ಇಲ್ಲ, ನಿನ್ನ ಜಾತಿನೂ ಇರಲ್ಲ ಎಂದು ಬಿಜೆಪಿ ಮಾಜಿ ರಾಷ್ಟ್ರೀಯ ಕಾರ್ಯದರ್ಶಿ ಸಿಟಿ ರವಿ ಹೇಳಿದ್ದಾರೆ.
ಬಿಜೆಪಿ ಅಭ್ಯರ್ಥಿ ಬೃಜೇಶ್ ಚೌಟ ನಾಮಪತ್ರ ಸಲ್ಲಿಕೆಗೂ ಮುನ್ನ ನಡೆದ ಸಮಾವೇಶದಲ್ಲಿ ಮಾತನಾಡಿದ ಸಿಟಿ ರವಿ, ನಿಮ್ಮ ಒಂದು ಓಟು, ದೇಶ ಉಳಿಸಬಹುದು. ಹಿಂದೆ ವಾಜಪೇಯಿ ಒಂದು ಓಟಿನ ಕಾರಣಕ್ಕೆ ಸರಕಾರ ಕಳಕೊಂಡರು. ನಿಮ್ಮ ಒಂದು ಓಟು ಈ ಸೀಟನ್ನು ಉಳಿಸಬಹುದು. ಇದಕ್ಕಾಗಿ ಪ್ರತಿ ಮನೆಗೆ ಹಿಂದುತ್ವ, ಕೇಸರಿ ಗಾಳಿ ಸೋಕಬೇಕು. ರಾಷ್ಟ್ರಭಕ್ತಿಯ ಗಾಳಿ ಮನೆ ಮನೆಗೆ ತಟ್ಟಬೇಕು ಎಂದರು.
ಕೇಸರಿ ಶಾಲು ಜೋರಾಗಿ ಬೀಸಿ, ಇಲ್ಲಿರೋದು ಕೇಸರಿ ಗಾಳಿ, ಹಿಂದುತ್ವದ ಗಾಳಿ ಎನ್ನುತ್ತಲೇ ಭಾಷಣ ಆರಂಭಿಸಿದ ಸಿಟಿ ರವಿ, ನಿನ್ನೆ ಬಸನಗೌಡ ಪಾಟೀಲ್ ಯತ್ನಾಳ್ ಉಡುಪಿಯಲ್ಲಿ ಒಂದು ಮಾತು ಹೇಳಿದ್ರು. ಉಡುಪಿಗೆ ಕೋಟಾ, ಮಂಗಳೂರಿಗೆ ಚೌಟಾ, ಕಾಂಗ್ರೆಸ್ ಗೆ ಗೂಟ ಅಂತ. ಅದು ಖಾಲಿ ಗೂಟ ಹಾಕೋದಲ್ಲ, ಕಾಂಗ್ರೆಸಿನವರಿಗೆ ಹಾಕಿದ್ರೆ ಬಗಣಿ ಗೂಟವನ್ನೇ ಹಾಕಬೇಕು. ಆನಂತರ ಮೇಲೆ ಏಳಲೇಬಾರದು ಎಂದು ಹೇಳಿದರು.
ಕೇರಳ ಸರಕಾರ ಕಂಠಪೂರ್ತಿ ಸಾಲ ಮಾಡಿ, ದಿವಾಳಿಯ ಸ್ಥಿತಿಗೆ ತಲುಪಿದೆ. ಈಗ ಸಾಲ ಕೇಳಿ ಸುಪ್ರೀಂ ಕೋರ್ಟಿಗೆ ಹೋಗಿದೆ. ಗ್ಯಾರಂಟಿ ಯೋಜನೆಯಿಂದಾಗಿ ರಾಜ್ಯದಲ್ಲಿಯೂ ಸದ್ಯದಲ್ಲೇ ಅಂತಹ ಪರಿಸ್ಥಿತಿ ಬರುತ್ತೆ. ರಾಜ್ಯಕ್ಕೆ ಸಿದ್ರಾಮಿಕ್ಸ್ ಬಂದ ಮೇಲೆ ಯಾವುದೆಲ್ಲಾ ಬೆಲೆ ಏರಿಕೆಯಾಗಿದೆ ಗೊತ್ತಾ? ಸಿದ್ದರಾಮಯ್ಯ ಪ್ಲಸ್ ಎಕನಾಮಿಕ್ಸ್ ಅದು ಸಿದ್ರಾಮಿಕ್ಸ್. ಕ್ವಾರ್ಟರ್ ಗೆ ಬೆಲೆ ಜಾಸ್ತಿ ಮಾಡಿದ್ರು, ಪಹಣಿ ಪತ್ರದ ಬೆಲೆ, ದೀನಸಿ ಸಾಮಗ್ರಿ ಬೆಲೆ ಎಲ್ಲವೂ ಏರಿಕೆಯಾಯಿತು. ಮಹಿಳೆಯರೇ ಸಿದ್ದರಾಮಯ್ಯ ಗ್ಯಾರಂಟಿ ಹಣ ನೀಡಿದ್ದು ಅವರ ಕಿಸೆಯಿಂದ ಅಲ್ಲ. ನಿಮ್ಮ ಯಜಮಾನರ ಕಿಸೆಗೆ ಕೈಹಾಕಿ ನೀಡಿದ್ದಾರೆ. 5 ಕೆಜಿ ಅಕ್ಕಿಯಲ್ಲಿ ಕಾಂಗ್ರೆಸಿನ ಒಂದು ಕಾಳು ಅಕ್ಕಿಯೂ ಇಲ್ಲ. ಕೊಟ್ಟಿದ್ದು ದೇಶದ ಪ್ರಧಾನಿ ನರೇಂದ್ರ ಮೋದಿ. ಇವನ್ನೆಲ್ಲ ಜನಸಾಮಾನ್ಯರಿಗೆ ಕಾರ್ಯಕರ್ತರು ಅರ್ಥ ಮಾಡಿಸಬೇಕಿದೆ ಎಂದರು.
ಜೂನ್ ನಾಲ್ಕರಂದು ವಿರೋಧಿಗಳು ದೇಶದ ಫಲಿತಾಂಶ ಕಂಡು ಪರ್ಮನೆಂಟ್ ಆಗಿ ಎದೆ ಹೊಡ್ಕೋಬೇಕು. ಮತ್ತೆ ಇವರಿಗೆ ಅವಕಾಶ ಕೊಟ್ರೆ ಪಂಚಾಯತ್ ನಿಂದ ಪಾರ್ಲಿಮೆಂಟ್ ವರೆಗೂ ಪಾಕಿಸ್ತಾನ ಜಿಂದಾಬಾದ್ ಕೂಗು ಕೇಳಿಸುತ್ತದೆ. ದೇಶ ವಿರೋಧಿ ಚಟುವಟಿಕೆ ನಡೆಸುವ ಎಸ್ಡಿಪಿಐ, ಪಿಎಫ್ಐ ಈ ಬಾರಿ ಕಾಂಗ್ರೆಸಿಗೆ ಬೆಂಬಲ ಕೊಟ್ಟಿದೆ. ಅಂದ್ರೆ, ದೇಶ ವಿರೋಧಿಗಳೆಲ್ಲ ಒಟ್ಟಾಗಿದ್ದಾರೆ. ಕಾಂಗ್ರೆಸ್ ಗೆಲುವನ್ನ ಪಾಕಿಸ್ತಾನವೂ ಸಂಭ್ರಮಿಸುತ್ತೆ. ಅದಕ್ಕಾಗಿ ಕಾಂಗ್ರೆಸ್ ನವರು ಪಾಕಿಸ್ತಾನ ಜಿಂದಾಬಾದ್ ಅಂತಿದ್ದಾರೆ ಎಂದು ಪರೋಕ್ಷವಾಗಿ ಕಾಂಗ್ರೆಸ್ ಪಾಕ್ ಪರ ಇದೆಯೆಂದು ಆರೋಪ ಮಾಡಿದರು.
Mangalore Brijesh Chowta nomination, CT Ravi says this election is to save India not caste. If there is no India what will you do by fighting for religion, Anti nations like SDPI and PFI have joined hands with congress we need to save India from them he added.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
20-04-25 08:42 pm
HK News Desk
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
20-04-25 10:52 pm
Bangalore Correspondent
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am