ಬ್ರೇಕಿಂಗ್ ನ್ಯೂಸ್
03-04-24 09:39 pm Udupi Correspondent ಕರಾವಳಿ
ಉಡುಪಿ, ಏ 03: ಕರಾವಳಿ ಹಿಂದುತ್ವ ನೋಡಲು ಬಂದಿದ್ದೇನೆ- ಉತ್ತರ ಕರ್ನಾಟಕದಲ್ಲಿ ಈಗ ಹಿಂದುತ್ವ ಉಗಮ ಆಗುತ್ತಿದೆ. ಇನ್ನು ಈ ಬಾರಿಯ ಚುನಾವಣೆ ಮೋದಿ ಚುನಾವಣೆ ಅಲ್ಲ, ಸನಾತನ ಧರ್ಮ ಉಳಿಸೋ ಚುನಾವಣೆಯಾಗಿದೆ. ಎಲ್ಲರೂ ಧರ್ಮ ಉಳಿಸುವ ನಿಟ್ಟಿನಲ್ಲಿ ಮತದಾನ ಮಾಡಬೇಕು. ಅವರು ಚೌಟಾ ಇವರು ಕೋಟಾ ಕಾಂಗ್ರೆಸ್ಗೆ ಗೂಟ ಎಂದು ವಿಜಯಪುರ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಹೇಳಿದರು.
ಉಡುಪಿಯಲ್ಲಿ ಬಿಜೆಪಿ ಅಭ್ಯರ್ಥಿ ಕೋಟಾ ಶ್ರೀನಿವಾಸ ಪೂಜಾರಿ ನಾಮಪತ್ರ ಸಲ್ಲಿಕೆ ವೇಳೆ ಮಾತನಾಡಿದ ಅವರು, ಕರಾವಳಿ ಹಿಂದುತ್ವ ನೋಡಲು ಬಂದಿದ್ದೇನೆ- ಉತ್ತರ ಕರ್ನಾಟಕದಲ್ಲಿ ಈಗ ಹಿಂದುತ್ವ ಉಗಮ ಆಗುತ್ತಿದೆ. ಅವರು ಚೌಟಾ ಇವರು ಕೋಟಾ ಕಾಂಗ್ರೆಸ್ ಗೆ ಗೂಟ. ಮೋದಿ ಚುನಾವಣೆ ಅಲ್ಲ ಸನಾತನ ಧರ್ಮ ಉಳಿಸೋ ಚುನಾವಣೆಯಾಗಿದೆ. ತಿಹಾರ್ ಜೈಲಿಂದ ಬಂದವ 15 ಲಕ್ಷ ಕೇಳ್ತಾನೆ.. ನಿನ್ನ ಆಸ್ತಿ ಮಾರಿದ್ರೆ ಕೊಡಬಹುದು. ಯಾರನ್ನು ಬಿಡಲ್ಲ, ನಿಮ್ಮನ್ನೂ ಬಿಡಲ್ಲ. 10 ವರ್ಷದ ಟ್ರೈಲರ್ ಮುಂದಿನ ಪಿಚ್ಚರ್ ಬಾಕಿ ಹೇ ಕೇಜ್ರಿವಾಲ್ ಇಲ್ಲ.. ಡಿಂಗ್ರಿವಾಲನೂ ಎಲ್ಲರೂ ಜೈಲಿಗೆ ಹೋಗ್ತಾನೆ ಎಂದು ಟೀಕೆ ಮಾಡಿದರು.
ಕಾಂಗ್ರೆಸ್ನವರು ಮಗ -ತಂಗಿ- ಅಣ್ಣನ ಮಗನಿಗೆ ಟಿಕೆಟ್ ಅಂತ ಕಚ್ಚಾಡ್ತಿದ್ದಾರೆ. ಪರಿವಾರ ವಾದ 2024 ಕ್ಕೆ ಮೋದಿ ಆಯ್ಕೆ ಆದ್ರೆ ಎಲ್ಲಾ ನಿರ್ನಾಮ ಆಗುತ್ತದೆ. ಇನ್ನು ರಾಹುಲ್ ಗಾಂಧಿ ದೇಗುಲ -ಮಸೀದಿ -ಚರ್ಚ್ ಹೋದಾಗ ಬದಲಾಗ್ತಾನೆ. ಸಿದ್ದರಾಮಯ್ಯ ಮುಂದಿನ ಜನ್ಮದಲ್ಲಿ ಮುಸ್ಲಿಂ ಆಗ್ತೀನಿ ಅಂತಾನೆ. ಸಿದ್ದುಗೆ ಮುಂದಿನ ಜನ್ಮ ಕೊಡೋಕೆ ದೇವರಿಗೆ ತಲೆ ಕೆಟ್ಟಿದ್ಯಾ? ಮುಂದಿನ ಜನ್ಮದಲ್ಲೇನು ಈಗಲೇ ಮುಸ್ಲಿಂ ಆಗಿಬಿಡು. ಅಖಿಲಭಾರತ ವೀರಶೈವ ಮಹಾಸಭಾ ಮೂರು ಜನರ ಕಂಪನಿ. ಮುಖ್ಯಮಂತ್ರಿಗೆ ಸನ್ಮಾನ ಸಂದರ್ಭ ಸತ್ತಮೇಲೆ ಲಿಂಗಾಯತರ ಹೆಣ ಕೂರಿಸಿದಂಗೆ ಕೂರಿಸಿ ಹೂವು ಹಾಕಿದರು. ಸಿದ್ದರಾಮಯ್ಯ ನಕ್ಕರೆ ರಾವಣ ನಕ್ಕಂಗಾಗುತ್ತದೆ. ಸಿದ್ದರಾಮಯ್ಯ ಇಳಿದರೆ ಕಾಂಗ್ರೆಸ್ ಡುಬುಕ್ ಅಂತ ಬಿದ್ ಬಿಡುತ್ತದೆ ಎಂದು ಹೇಳಿದರು.
ಮಾಜಿ ಸಚಿವ ಸಿ.ಟಿ. ರವಿ ಮಾತನಾಡಿ, ಈ ಬಾರಿ ಪೂಜಾರಿ.. ಈ ಬಾರಿ ಪೂಜಾರಿ... ಈ ಬಾರಿ ನಮ್ಮದು ನೀತಿ -ನೇತೃತ್ವ ನಿಯತ್ತಿನ ಚುನಾವಣೆಯಾಗಿದೆ. ಆಕಾಶ- ಭೂಮಿ, ಪಾತಾಳದಲ್ಲಿ ಕಾಂಗ್ರೆಸ್ ಹಗರಣ ಮಾಡಿದೆ. ಮೋದಿ ಕಾಲದಲ್ಲಿ 7 ರಿಂದ 20 ಲಕ್ಷ ಕೋಟಿವರೆಗೆ ತೆರಿಗೆ ಹಣ ಸಂಗ್ರಹವಾಗಿದೆ. ಕಾಂಗ್ರೆಸ್ 14 ಟಿಕೆಟ್ ಕಾಂಗ್ರೆಸ್ ಕುಟುಂಬಕ್ಕೆ ಕೊಟ್ಟಿದೆ. ಕಾಂಗ್ರೆಸ್ ಕಾರ್ಯಕರ್ತರು ಪಕ್ಷದ ಚಾಕರಿ ಮಾಡಲು ಮಾತ್ರ ಇರೋದು. ಹೆತ್ತವರಿಗೆ ಹೆಗ್ಗಣ ಮುದ್ದು ಕಾಂಗ್ರೆಸ್ ನ ಮನಸ್ಥಿತಿ. ಕಾಂಗ್ರೆಸ್ ನದ್ದು ಪಪ್ಪು ನೇತೃತ್ವ, ಬಿಜೆಪಿದ್ದು ಜಗತ್ತು ಕೊಂಡಾಡಿದ ನೇತೃತ್ವವಾಗಿದೆ ಎಂದರು.
ಮೋದಿಯನ್ನು ಅಮೆರಿಕಾ, ಜರ್ಮನಿ, ಇಸ್ರೇಲ್, ಉಕ್ರೇನ್ ರಷ್ಯಾ ಕೊಂಡಾಡಿದೆ. ಭಾರತ ಅಮೃತಕಾಲದಲ್ಲಿ ವಿಶ್ವಗುರು ಭಾರತ ಆಗಬೇಕು ಎಂಬುದು ಗುರಿಯಾಗಿದೆ. ಭ್ರಷ್ಟಾಚಾರ ಮುಚ್ಚಾಕಲು, ಜಾತಿಗಾಗಿ, ದೇಶ ಒಡೆಯಲು ಅಧಿಕಾರ ಕೊಡಬೇಡಿ. ಭಯೋತ್ಪಾಧಕರಿಗೆ ಗಲಭೆಕೋರರಿಗೆ ಕಾಂಗ್ರೆಸ್ ಬ್ರದರ್ಸ್ ಅಂತಾರೆ. ರಾಮೇಶ್ವರ ಕೆಫೆ ಬ್ಲ್ಯಾಸ್ಟ್ ಪ್ರಕರಣದಲ್ಲಿ ಬಾಂಬ್ ತಯಾರಿಸಿದವನ ಲಿಂಕ್ ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿದೆ. ಅದನ್ನು ಮಟ್ಟ ಹಾಕ್ತೇವೆ. ಮತ್ತೆ ಬಾಬ್ರಿ ಮಸೀದಿ ನಿರ್ಮಾಣದ ಕೂಗು ಕೇಳುತ್ತಿದೆ, ಅವಕಾಶ ಕೊಡ್ತೀರಾ? ಮಥುರಾ , ಕಾಶಿ ಪುನರ್ ನಿರ್ಮಾಣ ಮಾಡುವ ತಾಕತ್ತು ಮೋದಿ ಸರಕಾರಕ್ಕಿದೆ. ಈ ಬಾರಿ ಪೂಜಾರಿ.. ಮತ್ತೊಮ್ಮೆ ಮೋದಿ. ಹೀ ಈಸ್ ನಾಟ್ ಜಂಪಿಂಗ್ ಸ್ಟಾರ್, ಕೋಟ ಕಮಿಟೆಡ್ ಕೇಡರ್ ಎಂದು ಮಾಜಿ ಸಚಿವ ಸಿ.ಟಿ. ರವಿ ಹೇಳಿದರು.
Yatnal Slams CM Siddaramaiah in Udupi. Yatnal who came to the file nomination along with Kota Srinivas Poojari slammed at CM Siddaramaiah and congress government. CM siddaramaiah wants to become muslim in the next generation is God mad to give him next generation he mocked.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
20-04-25 08:42 pm
HK News Desk
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
20-04-25 10:52 pm
Bangalore Correspondent
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am