ಬ್ರೇಕಿಂಗ್ ನ್ಯೂಸ್
03-04-24 06:02 pm Bangalore Correspondent ಕರಾವಳಿ
ಮಂಗಳೂರು, ಎ.3: ದಕ್ಷಿಣ ಕನ್ನಡ ಹಿಂದುತ್ವದ ಭದ್ರಕೋಟೆ ಎಂಬ ಪ್ರಶ್ನೆಗೆ, ಹಿಂದೆ ರಾಜರು ಕಟ್ಟಿದ ಕೋಟೆಗಳೇ ಉಳಿದಿಲ್ಲ. ಪುಡಿಯಾಗಿ ಹೋಗಿವೆ. ಮಹಾರಾಷ್ಟ್ರದಲ್ಲಿ ಸಾವರ್ಕರ್ ಕಟ್ಟಿದ ಹಿಂದುತ್ವದ ಕೋಟೆಯೂ ಉಳಿದಿಲ್ಲ. ಇದೆಲ್ಲ ಯಾವ ಲೆಕ್ಕ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಬಿಕೆ ಹರಿಪ್ರಸಾದ್ ಹೇಳಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಆಗಮಿಸಿದ್ದ ಅವರಲ್ಲಿ ಮಾಧ್ಯಮದವರು ಪ್ರಶ್ನೆ ಇಟ್ಟಾಗ, ಹಿಂದೆ ಸಾವರ್ಕರ್ ಮಹಾರಾಷ್ಟ್ರದಲ್ಲಿ ಹಿಂದುತ್ವದ ಕೋಟೆ ಅಂತ ಮಾಡಿದ್ದರು. ಆ ಕೋಟೆಯೇ ಉಳಿದುಕೊಂಡಿಲ್ಲ. ಇವರು ಹಣ ಕೊಟ್ಟು ಕೋಟೆಗಳನ್ನು ಖರೀದಿಸಲು ಸಾಧ್ಯವಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾರಣಾಂತರಗಳಿಂದ ಬಿಜೆಪಿ ಗೆದ್ದಿದೆ. ಅದಕ್ಕೆ ಹಿಂದುತ್ವದ ಕೋಟೆ ಕಾರಣವಲ್ಲ. ಇದ್ಯಾವುದೇ ಕೋಟೆಗಳೂ ಉಳಿಯೋದಿಲ್ಲ ಎಂದು ಹೇಳಿದರು.
ದೇಶ ವಿಭಜನೆ ಹೇಳಿಕೆ ನೀಡಿದವರಿಗೆ ಕಾಂಗ್ರೆಸ್ ಟಿಕೆಟ್ ಕೊಟ್ಟಿದ್ದಾರೆಂದು ಅಮಿತ್ ಷಾ ಟೀಕಿಸಿದ್ದನ್ನು ಕೇಳಿದಾಗ, ಹಿಂದೆ ಇಂದಿರಾ ಗಾಂಧಿ ಕಾಲದಲ್ಲಿ ಬಾಂಗ್ಲಾದೇಶ, ಪಾಕಿಸ್ತಾನ ವಿಭಜನೆಯಾಗಿತ್ತು. ಅದು ಬಿಟ್ಟರೆ ಯಾರೋ ಹೇಳಿಕೆ ನೀಡಿದರೆ ದೇಶ ವಿಭಜನೆ ಆಗುತ್ತಾ.. ಹಿಂದೆ ಸಿಕ್ಕಿಂ ಸ್ವತಂತ್ರ ದೇಶವಾಗಿದ್ದುದನ್ನು ನಮ್ಮ ದೇಶದಲ್ಲಿ ರಾಜ್ಯವಾಗಿಸಿ ಜೋಡಿಸಿದ್ದು ಇಂದಿರಾ ಗಾಂಧಿ. ಈಗಲೂ ಆಡಳಿತದಲ್ಲಿರುವ ಸರಕಾರಕ್ಕೆ ದೇಶವನ್ನು ಉಳಿಸುವ ಜವಾಬ್ದಾರಿ ಇರುತ್ತದೆ.
ಮೋದಿಯವರು ಈಗ ಕಛ್ ದೀವು ದ್ವೀಪವನ್ನು ಬಿಟ್ಟು ಕೊಡುವುದಾಗಿ ಹೇಳಿದ್ದಾರೆ. ಇವರ ಆರೆಸ್ಸೆಸ್, ಬಿಜೆಪಿಯವರು ಹೇಳಿದಂತೆ ಚೀನಾ ಎರಡು ಸಾವಿರ ಚದರ ಕಿಲೋ ಮೀಟರ್ ಜಾಗವನ್ನು ಅತಿಕ್ರಮಿಸಿದೆ. ಈ ವಿಚಾರ ನಾವು ಹೇಳಿದ್ದಲ್ಲ. ಅವರದೇ ಸದಸ್ಯರು ಹೇಳಿದ್ದಾರೆ. ಆ ಭೂಮಿಯನ್ನು ಯಾವಾಗ ಮರಳಿ ಕಿತ್ತುಕೊಳ್ಳುತ್ತಾರೆಂದು ಹೇಳಲಿ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಬಿಕೆ ಹರಿಪ್ರಸಾದ್, ಪ್ರಧಾನಿ ಮೋದಿಗೆ ಸವಾಲೆಸೆದಿದ್ದಾರೆ.
B K Hariprasad slams about Hindutva in Mangalore, says we have destroyed Savarkar, Mangalore Hindutva is nothing before us he added.
28-08-25 06:23 pm
HK News Desk
Bidar Bus Driver Suicide: ಬೀದರ್ ಬಸ್ ಡಿಪೋ ನಲ್ಲ...
28-08-25 02:41 pm
ಬಿಳಿಯಲ್ಲ ಮಾರಾಯರೇ ನೀಲಿ ಮೊಟ್ಟೆ ಇಟ್ಟ ನಾಟಿ ಕೋಳಿ ;...
28-08-25 11:56 am
Banumustak, DK Shivakumar, Chamundi Hill: ದೇವ...
27-08-25 06:21 pm
Congress, MP Yaduveer, DK Shivakumar: ಕಾಂಗ್ರೆ...
27-08-25 06:17 pm
29-08-25 10:56 am
HK News Desk
Kanhangad Suicide: ಕಾಞಂಗಾಡ್ ; ಬೆಳೆದು ನಿಂತ ಇಬ್...
28-08-25 12:19 pm
ಕೈ ಗ್ಯಾರಂಟಿಗೆ ಬೊಕ್ಕಸ ಪೂರ ಖಾಲಿ - ಖಾಲಿ ; ತೆಲಂಗಾ...
26-08-25 09:02 pm
ಜಮ್ಮು ಭಾರಿ ಮಳೆಗೆ ಒಂಬತ್ತು ಮಂದಿ ಬಲಿ ; ಹಲವೆಡೆ ಭೂ...
26-08-25 07:39 pm
Trump Immigrant Population: ಟ್ರಂಪ್ ಸಾಮ್ರಾಜ್ಯದ...
24-08-25 01:47 pm
28-08-25 11:00 pm
Mangalore Correspondent
Mangalore Rain, School College Holiday: ಭಾರೀ...
28-08-25 10:07 pm
Soujanya Murder Case, Mother SIT: ಸೌಜನ್ಯಾ ಕೊಲ...
28-08-25 08:31 pm
Talapady Accident, Mangalore, Auto bus: ಕೇರಳ...
28-08-25 04:05 pm
Loudspeaker, Punjalkatte,Farangipete: ಪುಂಜಾಲ...
28-08-25 02:51 pm
27-08-25 10:23 pm
HK News Desk
Karkala Murder, Arrest, Crime: ಹೆಂಡ್ತಿ ಮಕ್ಕಳನ...
26-08-25 10:39 pm
ಟೆಕ್ನಾಲಜಿಯಲ್ಲಿ ಮುಂದಿರುವ ಅಮೆರಿಕದ ಪ್ರಜೆಗಳನ್ನೇ ಯ...
26-08-25 05:24 pm
ದುಬೈನಲ್ಲಿ ಗಂಡ, ಮೈಸೂರಿನಲ್ಲಿ ಪತ್ನಿಯ ಲವ್ವಿ ಡವ್ವಿ...
25-08-25 08:29 pm
ಶಿಕ್ಷಣ ಸಚಿವ ಮಧು ಬಂಗಾರಪ್ಪ ಪಿಎ ಹೆಸರಲ್ಲಿ ವಸೂಲಿ ;...
25-08-25 07:42 pm