ಬ್ರೇಕಿಂಗ್ ನ್ಯೂಸ್
30-03-24 10:42 am Bangalore Correspondent ಕರಾವಳಿ
ಉಳ್ಳಾಲ, ಮಾ.29: ಅಡ್ಯಾರ್ ಪದವಿನಿಂದ ನಾಪತ್ತೆಯಾಗಿದ್ದ ತಾಯಿ, ಮಗು ಹರೇಕಳ ಗ್ರಾಮದ ಕಡವಿನಬಳಿ ಸಮೀಪದ ನೇತ್ರಾವತಿ ನದಿಯಲ್ಲಿ ಶುಕ್ರವಾರ ರಾತ್ರಿ ಶವವಾಗಿ ಪತ್ತೆಯಾಗಿದ್ದು, ಒಂದು ವರ್ಷದ ಗಂಡು ಮಗುವಿನೊಂದಿಗೆ ಗೃಹಿಣಿ ಆತ್ಮಹತ್ಯೆಗೈದಿರುವ ಶಂಕೆ ವ್ಯಕ್ತವಾಗಿದೆ.
ಅಡ್ಯಾರು ಪದವಿನ ದುರ್ಗಾಪರಮೇಶ್ವರಿ ದೇವಸ್ಥಾನ ಬಳಿಯ ನಿವಾಸಿ ಚೈತ್ರಾ( 30) ಮೃತ ಗೃಹಿಣಿ. ಚೈತ್ರಾ ಶುಕ್ರವಾರ ಮಧ್ಯಾಹ್ನ ತನ್ನ ಒಂದು ವರುಷದ ಗಂಡು ಮಗು ದಿಯಾಂಶ್ ಜತೆ ಆಟೋ ರಿಕ್ಷಾ ಒಂದರಲ್ಲಿ ಹರೇಕಳ ಸೇತುವೆಯ ಮೂಲಕ ಹರೇಕಳ ಕಡವಿನಬಳಿ ಬಂದಿದ್ದರಂತೆ. ಈ ಬಗ್ಗೆ ಸಿಸಿಟಿವಿಯಲ್ಲೂ ದಾಖಲೆ ದೊರೆತಿದೆ. ನದಿ ತೀರದಲ್ಲಿ ಚೈತ್ರಾ ಮಗುವನ್ನ ಎತ್ತಿಕೊಂಡು ಸಾಗುತ್ತಿರುವುದನ್ನ ಸ್ಥಳೀಯರೂ ನೋಡಿದ್ದರು.
ಮಧ್ಯಾಹ್ನದ ಬಳಿಕ ಚೈತ್ರಾಳ ಕುಟುಂಬಸ್ಥರು ಹರೇಕಳಕ್ಕೆ ಬಂದು ವಿಚಾರಿಸಿದ್ದು, ಚೈತ್ರಾ ನಾಪತ್ತೆಯಾಗಿರುವ ಬಗ್ಗೆ ತಿಳಿದಿತ್ತು. ರಾತ್ರಿ 8.30 ರ ವೇಳೆಗೆ ಹರೇಕಳ ನೇತ್ರಾವತಿ ನದಿಯಲ್ಲಿ ಚೈತ್ರ ಮತ್ತು ಆಕೆಯ ಮಗುವಿನ ಶವ ಪತ್ತೆಯಾಗಿದೆ. ಮಹಿಳೆಯು ಮಗುವಿನೊಂದಿಗೆ ಆತ್ಮಹತ್ಯೆಗೈದಿರಬಹುದೆಂದು ಶಂಕಿಸಲಾಗಿದೆ. ಕೊಣಾಜೆ ಪೊಲೀಸರು ಸ್ಥಳಕ್ಕೆ ತೆರಳಿ ಮೃತದೇಹಗಳನ್ನ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಚೈತ್ರಾಳ ಪತಿ ನಾಗರಾಜ್ ಅವರು ದಿನಗೂಲಿ ನೌಕರನಾಗಿದ್ದು ಪತ್ನಿ, ಮಗುವನ್ನ ಚೆನ್ನಾಗಿಯೇ ನೋಡಿ ಕೊಳ್ಳುತ್ತಿದ್ದರೆಂದು ಕುಟುಂಬವನ್ನ ಹತ್ತಿರದಿಂದ ಬಲ್ಲವರು ತಿಳಿಸಿದ್ದಾರೆ. ಕಳೆದ ಹತ್ತು ದಿವಸಗಳ ಹಿಂದಷ್ಟೆ ನಾಗರಾಜ್, ಚೈತ್ರಾ ದಂಪತಿ ತಮ್ಮ ಮಗುವಿನ ಪ್ರಥಮ ವರ್ಷದ ಹುಟ್ಟುಹಬ್ಬವನ್ನ ದೇರಳಕಟ್ಟೆಯ ವೃದ್ಧಾಶ್ರಮವೊಂದರಲ್ಲಿ ಆಚರಿಸಿ ಸಂಭ್ರಮಿಸಿದ್ದರು.
The lifeless bodies of Chaitra and her one-year-old child, Diyansh, both residents of Adyar Padavu, were discovered near Harekala Bridge. The mother and child were reported missing on the afternoon of Friday, March 29.
29-08-25 05:59 pm
HK News Desk
Chikkamagaluru, Police, Fine: ಸಾರ್ವಜನಿಕರಿಗೆ ಮ...
28-08-25 06:23 pm
Bidar Bus Driver Suicide: ಬೀದರ್ ಬಸ್ ಡಿಪೋ ನಲ್ಲ...
28-08-25 02:41 pm
ಬಿಳಿಯಲ್ಲ ಮಾರಾಯರೇ ನೀಲಿ ಮೊಟ್ಟೆ ಇಟ್ಟ ನಾಟಿ ಕೋಳಿ ;...
28-08-25 11:56 am
Banumustak, DK Shivakumar, Chamundi Hill: ದೇವ...
27-08-25 06:21 pm
29-08-25 05:20 pm
HK News Desk
PM Modi Japan: ಪ್ರಧಾನಿ ಮೋದಿಗೆ ಜಪಾನ್ನಲ್ಲಿ ಗಾಯ...
29-08-25 01:47 pm
ಮೋದಿ 75 ವರ್ಷಕ್ಕೆ ನಿವೃತ್ತರಾಗಬೇಕು ಎಂದು ಹೇಳಿಲ್ಲ...
29-08-25 12:50 pm
ಪ್ರತಿ ಭಾರತೀಯ ಕುಟುಂಬಗಳು ಮೂರಕ್ಕಿಂತ ಹೆಚ್ಚು ಮಕ್ಕಳ...
29-08-25 10:56 am
Kanhangad Suicide: ಕಾಞಂಗಾಡ್ ; ಬೆಳೆದು ನಿಂತ ಇಬ್...
28-08-25 12:19 pm
29-08-25 03:48 pm
Mangalore Correspondent
Puttur Tahsildar, Lokayukta Raid: ಜಮೀನು ಪರಭಾರ...
28-08-25 11:00 pm
Mangalore Rain, School College Holiday: ಭಾರೀ...
28-08-25 10:07 pm
Soujanya Murder Case, Mother SIT: ಸೌಜನ್ಯಾ ಕೊಲ...
28-08-25 08:31 pm
Talapady Accident, Mangalore, Auto bus: ಕೇರಳ...
28-08-25 04:05 pm
27-08-25 10:23 pm
HK News Desk
Karkala Murder, Arrest, Crime: ಹೆಂಡ್ತಿ ಮಕ್ಕಳನ...
26-08-25 10:39 pm
ಟೆಕ್ನಾಲಜಿಯಲ್ಲಿ ಮುಂದಿರುವ ಅಮೆರಿಕದ ಪ್ರಜೆಗಳನ್ನೇ ಯ...
26-08-25 05:24 pm
ದುಬೈನಲ್ಲಿ ಗಂಡ, ಮೈಸೂರಿನಲ್ಲಿ ಪತ್ನಿಯ ಲವ್ವಿ ಡವ್ವಿ...
25-08-25 08:29 pm
ಶಿಕ್ಷಣ ಸಚಿವ ಮಧು ಬಂಗಾರಪ್ಪ ಪಿಎ ಹೆಸರಲ್ಲಿ ವಸೂಲಿ ;...
25-08-25 07:42 pm