ಬ್ರೇಕಿಂಗ್ ನ್ಯೂಸ್
28-11-20 02:52 pm Udupi Correspondent ಕರಾವಳಿ
ಉಡುಪಿ, ನ.28 : ಆಳಸಮುದ್ರ ಮೀನುಗಾರಿಕೆ ತೆರಳಿದ್ದ ಮಲ್ಪೆಯ ಬೋಟ್ ಮಹಾರಾಷ್ಟ್ರದ ಸಮೀಪದ ಸಮುದ್ರದಲ್ಲಿ ದುರಂತಕ್ಕೀಡಾಗಿದೆ.
ಈ ವೇಳೆ ಬೋಟ್ನಲ್ಲಿದ್ದ ಏಳು ಮೀನುಗಾರರನ್ನು ರಕ್ಷಿಸಲಾಗಿದೆ. ಮಲ್ಪೆ ಹನುಮಾನ್ ನಗರದ ತಾರಾನಾಥ ಕುಂದರ್ ಎಂಬವರಿಗೆ ಸೇರಿದ ‘ಮಥುರಾ’ ಹೆಸರಿನ ಆಳಸಮುದ್ರ ಬೋಟು ನ.17ರಂದು ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ತೆರಳಿತ್ತು. ಹಿಂತಿರುಗಿ ಬರುತ್ತಿದ್ದಾಗ, ಗೋವಾ- ಮಹಾರಾಷ್ಟ್ರ ಮಧ್ಯೆ ಸುಮಾರು 22 ಮೈಲ್ ದೂರದ ಸಮುದ್ರದಲ್ಲಿ ಬೋಟಿನ ತಳಭಾಗಕ್ಕೆ ವಸ್ತುವೊಂದು ಡಿಕ್ಕಿ ಹೊಡೆಯಿತ್ತೆನ್ನಲಾಗಿದೆ.
ಇದರಿಂದ ಬೋಟ್ ಒಡೆದು ಸ್ಟೋರೇಜ್ ಒಳಗೆ ಸಮುದ್ರದ ನೀರು ತುಂಬಿಕೊಂಡಿದೆ. ಅಪಾಯದ ಮುನ್ನೆಚ್ಚರಿಕೆಯಿಂದ ಅದರಲ್ಲಿದ್ದ ಮೀನುಗಾರರು, ಕೂಡಲೇ ಸಮೀಪದಲ್ಲಿದ್ದ ಮಾಹೂರ್ ಬೋಟಿನವರಿಗೆ ಮಾಹಿತಿ ನೀಡಿದರು. ಕೂಡಲೇ ಆಗಮಿಸಿದ ಮಾಹೂರ್ ಬೋಟಿನ ಸಿಬಂದಿ ಮುಳುಗುತ್ತಿದ್ದ ಬೋಟನ್ನು ಗೋವಾ ಬಂದರಿಗೆ ಎಳೆದು ತರುವ ಪ್ರಯತ್ನ ಮಾಡಿದರು.

ಆದರೆ ಬೋಟಿನೊಳಗೆ ಸಂಪೂರ್ಣ ನೀರು ನುಗಿದ್ದರಿಂದ ತಡರಾತ್ರಿ ವೇಳೆ ಬೋಟು ಸಮುದ್ರ ಮಧ್ಯೆ ಮುಳುಗಡೆಯಾಯಿತು ಎಂದು ತಿಳಿದು ಬಂದಿದೆ. ಬೋಟಿನಲ್ಲಿದ್ದ ಏಳು ಮೀನುಗಾರರನ್ನು ಮಹೂರ್ ಬೋಟು ಮೂಲಕ ರಕ್ಷಿಸಲಾಗಿದೆ.
ಮುಳುಗಡೆಯಾದ ಬೋಟಿನಲ್ಲಿದ್ದ ಬಲೆ, ಡಿಸೇಲ್, ಮೀನು ಸೇರಿದಂತೆ ಸುಮಾರು 65 ಲಕ್ಷ ರೂ. ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.
A deep-sea boat from Malpe which was conducting fishing operations near the Goa-Maharashtra border drowned on Thursday, November 27. All the seven fishermen aboard have been rescued, while the boat, fish stock, nets etc totally valued at Rs 65 lac, drowned.
15-09-26 09:13 pm
HK News Staffer
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 09:18 pm
HK News Staffer
Satish Kumpala, Manglore: ಕಾಟಾಚಾರಕ್ಕೆ ಸಂಪುಟ ಸ...
15-09-26 07:46 pm
U T Khader, KDP Meeting, Bharath Sheety, Hari...
15-09-26 06:52 pm
Aravind Bolar Controversy, Mangalore: “ಎಂಕ್ ಮ...
15-09-26 05:29 pm
U T Khader, KDP Meeting, Sudheer Reddy Ips: :...
15-09-26 05:27 pm
15-09-26 09:19 pm
HK News Staffer
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am