ಬ್ರೇಕಿಂಗ್ ನ್ಯೂಸ್
26-03-24 09:57 pm Mangalore Correspondent ಕರಾವಳಿ
ಮಂಗಳೂರು, ಮಾ.26: ತುಮಕೂರಿನಲ್ಲಿ ಬೆಳ್ತಂಗಡಿಯ ಮೂವರನ್ನು ಕಾರಿನಲ್ಲಿ ಸುಟ್ಟು ಕೊಂದ ಪ್ರಕರಣವನ್ನು ನಿಷ್ಪಕ್ಷಪಾತ ತನಿಖೆ ನಡೆಸುವಂತೆ ಒತ್ತಾಯಿಸಿ ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ನೇತೃತ್ವದ ಕಾಂಗ್ರೆಸ್ ನಿಯೋಗ ಮಂಗಳವಾರ ಜಿಲ್ಲಾ ಪೊಲೀಸ್ ಅಧೀಕ್ಷಕ ರಿಷ್ಯಂತ್ ಸಿಂಗ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.
“ದುಷ್ಕರ್ಮಿಗಳ ತಂಡವೊಂದು ಮೋಸದಿಂದ ದ.ಕ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮೂವರು ಯುವಕರನ್ನು ತುಮಕೂರಿಗೆ ಕರೆಸಿ ಹಣ ದೋಚಿ ಹತ್ಯೆ ಮಾಡಿದೆ. ಪತ್ರಿಕೆ ವರದಿಗಳ ಮೂಲಕ ಹತ್ಯೆಗೀಡಾದವರು 6 ಲಕ್ಷ ರೂ. ಕಳೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಆದರೆ ಕೊಲೆಗಡುಕರು 60 ಲಕ್ಷದಿಂದ 1 ಕೋಟಿ ರೂ. ವರೆಗೆ ದೋಚಿದ್ದಾರೆ ಎಂದು ಮೃತರ ಕುಟುಂಬಸ್ಥರು ತಿಳಿಸಿದ್ದಾರೆ. ಈ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಿ ಸತ್ಯಾಸತ್ಯತೆಯನ್ನು ಬಯಲಿಗೆಳೆಯಬೇಕು. ಮೋಸದ ಜಾಲದ ಹಿಂದಿರುವ ನೈಜ್ಯ ಆರೋಪಿಗಳನ್ನು ಬಂಧಿಸಬೇಕು. ಆ ಮೂಲಕ ಈ ಮೂರು ಕುಟುಂಬಗಳಿಗೆ ನ್ಯಾಯ ದೊರಕಿಸಿಕೊಡಬೇಕು. ಇನ್ನು ಮುಂದೆ ಜಿಲ್ಲೆಯಲ್ಲಿ ಇಂತಹ ಪ್ರಕರಣ ಮರುಕಳಿಸದಂತೆ ಸೂಕ್ತ ಕ್ರಮಕೈಗೊಳ್ಳಬೇಕು” ಎಂದು ಮನವಿಯಲ್ಲಿ ತಿಳಿಸಲಾಗಿದೆ.
ನಿಯೋಗದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ, ಮಾಜಿ ಸಚಿವ ಅಭಯಚಂದ್ರ ಜೈನ್, ಮ.ನ.ಪಾ ವಿಪಕ್ಷ ನಾಯಕ ಪ್ರವೀಣ್ ಚಂದ್ರ ಆಳ್ವ, ಜಿಲ್ಲಾ ಕಾಂಗ್ರೆಸ್ ಪಂಚಾಯತ್ ರಾಜ್ ಸಂಘಟನೆ ಅಧ್ಯಕ್ಷ ಶುಭಾಷ್ಚಂದ್ರ ಶೆಟ್ಟಿ ಇದ್ದರು.
ಇದಕ್ಕೂ ಮುನ್ನ ಕೊಲೆಯಾದ ಬೆಳ್ತಂಗಡಿಯ ಮೂವರು ಯುವಕರ ಮನೆಗೆ ಭೇಟಿ ನೀಡಿದ ನಿಯೋಗ, ರಾಜ್ಯ ಸರ್ಕಾರದಿಂದ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿತು.
Tumkuru three from Belthangady killed in car burnt case, Congress leaders visit sp demand for strict action.
29-08-25 05:59 pm
HK News Desk
Chikkamagaluru, Police, Fine: ಸಾರ್ವಜನಿಕರಿಗೆ ಮ...
28-08-25 06:23 pm
Bidar Bus Driver Suicide: ಬೀದರ್ ಬಸ್ ಡಿಪೋ ನಲ್ಲ...
28-08-25 02:41 pm
ಬಿಳಿಯಲ್ಲ ಮಾರಾಯರೇ ನೀಲಿ ಮೊಟ್ಟೆ ಇಟ್ಟ ನಾಟಿ ಕೋಳಿ ;...
28-08-25 11:56 am
Banumustak, DK Shivakumar, Chamundi Hill: ದೇವ...
27-08-25 06:21 pm
29-08-25 05:20 pm
HK News Desk
PM Modi Japan: ಪ್ರಧಾನಿ ಮೋದಿಗೆ ಜಪಾನ್ನಲ್ಲಿ ಗಾಯ...
29-08-25 01:47 pm
ಮೋದಿ 75 ವರ್ಷಕ್ಕೆ ನಿವೃತ್ತರಾಗಬೇಕು ಎಂದು ಹೇಳಿಲ್ಲ...
29-08-25 12:50 pm
ಪ್ರತಿ ಭಾರತೀಯ ಕುಟುಂಬಗಳು ಮೂರಕ್ಕಿಂತ ಹೆಚ್ಚು ಮಕ್ಕಳ...
29-08-25 10:56 am
Kanhangad Suicide: ಕಾಞಂಗಾಡ್ ; ಬೆಳೆದು ನಿಂತ ಇಬ್...
28-08-25 12:19 pm
29-08-25 03:48 pm
Mangalore Correspondent
Puttur Tahsildar, Lokayukta Raid: ಜಮೀನು ಪರಭಾರ...
28-08-25 11:00 pm
Mangalore Rain, School College Holiday: ಭಾರೀ...
28-08-25 10:07 pm
Soujanya Murder Case, Mother SIT: ಸೌಜನ್ಯಾ ಕೊಲ...
28-08-25 08:31 pm
Talapady Accident, Mangalore, Auto bus: ಕೇರಳ...
28-08-25 04:05 pm
27-08-25 10:23 pm
HK News Desk
Karkala Murder, Arrest, Crime: ಹೆಂಡ್ತಿ ಮಕ್ಕಳನ...
26-08-25 10:39 pm
ಟೆಕ್ನಾಲಜಿಯಲ್ಲಿ ಮುಂದಿರುವ ಅಮೆರಿಕದ ಪ್ರಜೆಗಳನ್ನೇ ಯ...
26-08-25 05:24 pm
ದುಬೈನಲ್ಲಿ ಗಂಡ, ಮೈಸೂರಿನಲ್ಲಿ ಪತ್ನಿಯ ಲವ್ವಿ ಡವ್ವಿ...
25-08-25 08:29 pm
ಶಿಕ್ಷಣ ಸಚಿವ ಮಧು ಬಂಗಾರಪ್ಪ ಪಿಎ ಹೆಸರಲ್ಲಿ ವಸೂಲಿ ;...
25-08-25 07:42 pm