ಬ್ರೇಕಿಂಗ್ ನ್ಯೂಸ್
26-03-24 04:28 pm Mangaluru Correspondent ಕರಾವಳಿ
ಮಂಗಳೂರು, ಮಾ.26: ವಿಟ್ಲ ಬಳಿಯ ಪೆರಿಯಾಲ್ತಡ್ಕ ಚರ್ಚ್ ಪಾದ್ರಿಯೊಬ್ಬರು ವೃದ್ಧ ದಂಪತಿಗೆ ಹಲ್ಲೆಗೈದ ಕೃತ್ಯವನ್ನು ಮುಚ್ಚಿ ಹಾಕಲು ಮಂಗಳೂರು ಬಿಷಪ್ ಮತ್ತು ಅಲ್ಲಿನ ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ರಾಬರ್ಟ್ ರೊಸಾರಿಯೋ ಆರೋಪಿಸಿದ್ದಾರೆ.
ಕ್ರೈಸ್ಟ್ ಕಿಂಗ್ ಚರ್ಚ್ ಪಾದ್ರಿ ಫಾದರ್ ನೆಲ್ಸನ್ ಓಲಿವೆರಾ ಜ.29ರಂದು ಗ್ರೆಗರಿ ಮೊಂತೇರೊ ಅವರ ಮನೆಗೆ ಬಂದು ಕ್ಷುಲ್ಲಕ ವಿಚಾರದಲ್ಲಿ ಮಾತಿಗೆ ಮಾತು ಬೆಳೆಸಿ ಹಲ್ಲೆ ನಡೆಸಿದ್ದರು. ಹಲ್ಲೆ ಘಟನೆ ಮನೆಯ ಸಿಸಿಟಿವಿಯಲ್ಲಿ ದಾಖಲಾಗಿದ್ದಲ್ಲದೆ, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದರಿಂದ ಸಾರ್ವಜನಿಕ ಆಕ್ರೋಶವೂ ವ್ಯಕ್ತವಾಗಿತ್ತು. ಆರಂಭದಲ್ಲಿ ಘಟನೆ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗದಂತೆ ನೋಡಿಕೊಂಡಿದ್ದರೂ, ಆನಂತರ ರಾಬರ್ಟ್ ರೊಸಾರಿಯೋ ಮಧ್ಯಪ್ರವೇಶದ ಬಳಿಕ ಪೊಲೀಸರು ಪಾದ್ರಿ ವಿರುದ್ಧ ಎಫ್ಐಆರ್ ದಾಖಲಿಸಿದ್ದರು. ಆದರೆ, ಹಲ್ಲೆ ಕೃತ್ಯಕ್ಕೆ ಸಾಕ್ಷಿ ಒದಗಿಸಿದ್ದರೂ ಪೊಲೀಸರು ಪಾದ್ರಿ ವಿರುದ್ಧ ಕ್ರಮ ಜರುಗಿಸಿಲ್ಲ.
ಘಟನೆ ಹಿನ್ನೆಲೆಯಲ್ಲಿ ವೃದ್ಧ ದಂಪತಿಯನ್ನು ಮುಂದಿಟ್ಟು ಸುದ್ದಿಗೋಷ್ಟಿ ನಡೆಸಿದ ರಾಬರ್ಟ್ ರೊಸಾರಿಯೋ, ಬಿಷಪ್ ಮತ್ತು ಅವರ ಪಿಆರ್ ಓ ಪ್ರತಿನಿಧಿಗಳು ಒಟ್ಟು ಘಟನೆಯನ್ನು ಮುಚ್ಚಿ ಹಾಕಲು ಯತ್ನಿಸುತ್ತಿದ್ದಾರೆ. ವೃದ್ಧ ದಂಪತಿಗೆ ಮಾನಸಿಕವಾಗಿ ಕಿರುಕುಳ ಕೊಟ್ಟು ಕೇಸು ಹಿಂಪಡೆಯಲು ಒತ್ತಡ ಹೇರುತ್ತಿದ್ದಾರೆ. ಗ್ರೆಗರಿ ಅವರನ್ನು ಚರ್ಚಿನಿಂದ ಹೊರಗಿಟ್ಟಿದ್ದು ವಾಟ್ಸಪ್ ಗ್ರೂಪಿನಿಂದ ಹೊರಗೆ ಹಾಕಿದ್ದಾರೆ. ಪ್ರಕರಣ ದಾಖಲಾದ ಬೆನ್ನಲ್ಲೇ ಪಾದ್ರಿಯನ್ನು ಅಲ್ಲಿಂದ ತೆರವು ಮಾಡಿದ್ದು ಬಿಟ್ಟರೆ ವೃದ್ಧ ದಂಪತಿಯ ನೆರವಿಗೆ ಬಂದಿಲ್ಲ. ಪೊಲೀಸರು ಪಾದ್ರಿ ಎಂಬುದನ್ನು ಬದಿಗಿಟ್ಟು ಕಠಿಣ ಕ್ರಮ ಜರುಗಿಸಬೇಕು ಎಂದು ಆಗ್ರಹ ಮಾಡಿದ್ದಾರೆ.
ಚರ್ಚ್ ಆಡಳಿತ ಮತ್ತು ಪಾದ್ರಿಗಳ ವಿರುದ್ಧ ಇದಕ್ಕಿಂತ ನೀಚ ಕೃತ್ಯ ದಾಖಲಾದರೂ ಪೊಲೀಸರು ಕ್ರಮ ಜರುಗಿಸುವುದಿಲ್ಲ. ನ್ಯಾಯಾಂಗ, ಆಡಳಿತ ವ್ಯವಸ್ಥೆ ಚರ್ಚ್ ಪರವಾಗಿದೆ ಎಂಬ ಭಯದಲ್ಲಿ ಪೊಲೀಸರು ಕ್ರಮ ಕೈಗೊಳ್ಳಲು ಹಿಂಜರಿಯುತ್ತಿದ್ದಾರೆ. ಈ ಪ್ರಕರಣದಲ್ಲಿಯೂ ಕ್ರಿಮಿನಲ್ ಪ್ರಕರಣ ಇದ್ದರೂ ಕ್ರಮ ಜರುಗಿಸುತ್ತಿಲ್ಲ ಎಂದರು.
ಸಂತ್ರಸ್ತ ಗ್ರೆಗರಿ ಮೊಂತೇರೊ ಮಾತನಾಡಿ, ನಾವು ವೃದ್ಧ ದಂಪತಿಯಷ್ಟೇ ಮನೆಯಲ್ಲಿ ವಾಸ ಇರೋದು. ನಮಗೆ ಮಕ್ಕಳಿಲ್ಲ. ನಾವು ವಂತಿಗೆ ನೀಡುವ ವಿಚಾರದಲ್ಲಿ ತಕರಾರು ಇತ್ತು. ಮನೆಗೆ ಕಾರಿನಲ್ಲಿ ಬಂದವರು ಹಾಗೇ ಹೊರಟಿದ್ದಕ್ಕೆ ಪಾದ್ರಿಯನ್ನು ಪ್ರಶ್ನೆ ಮಾಡಿದ್ದೆ. ನಿನ್ನ ವಂತಿಗೆ ಬೇಕಾಗಿಲ್ಲ ಎಂದು ಪಾದ್ರಿ ಹೇಳಿದ್ದರು. ಆನಂತರ, ಮಾತಿಗೆ ಮಾತು ಬೆಳೆದು ಅವರು ವಿನಾಕಾರಣ ಹಲ್ಲೆ ಮಾಡಿದ್ದಾರೆ. ನಾವು ಪೊಲೀಸ್ ದೂರು ನೀಡಿದರೂ ಕ್ರಮ ಜರುಗಿಸಿಲ್ಲ. ನನ್ನನ್ನು ಚರ್ಚಿಗೆ ಕರೆದು ಪ್ರತಿ ಹಲ್ಲೆ ನಡೆಸಿದ್ದಾರೆಂದು ಮತ್ತೊಂದು ದೂರು ದಾಖಲಿಸಲು ಹುನ್ನಾರ ಮಾಡಿದ್ದರು. ನಾನು ಚರ್ಚ್ ಕಡೆಗೆ ಹೋಗಿಲ್ಲ. ಆ ಪಾದ್ರಿಯನ್ನು ಬಂಧಿಸಬೇಕೆಂದು ಆಗ್ರಹ ಮಾಡುತ್ತೇನೆ ಎಂದರು.
ಇತ್ತೀಚೆಗೆ ಮಂಗಳೂರಿನ ಕೆಇಬಿ ಕಚೇರಿಯಲ್ಲಿ ಅಧಿಕಾರಿಯಾಗಿದ್ದ ಮಹಿಳೆಯೊಬ್ಬರು ತನ್ನ ಮನೆಯಲ್ಲಿ ವೃದ್ಧ ಮಾವನ ಮೇಲೆ ವಾಕಿಂಗ್ ಸ್ಟಿಕ್ ನಲ್ಲಿ ಹಲ್ಲೆ ನಡೆಸಿದ ಕೃತ್ಯ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿತ್ತು. ಘಟನೆ ಬಗ್ಗೆ ದೂರು ದಾಖಲಾಗುತ್ತಿದ್ದಂತೆ ಮಹಿಳೆಯನ್ನು ಮಂಗಳೂರು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದರು. ಕೊಲೆಯತ್ನ ಪ್ರಕರಣವೂ ದಾಖಲಾಗಿತ್ತು. ಆದರೆ, ಅದೇ ರೀತಿಯ ಪ್ರಕರಣದಲ್ಲಿ ಚರ್ಚ್ ಪಾದ್ರಿ ವಿರುದ್ಧ ಪೊಲೀಸರು ಕ್ರಮ ಜರುಗಿಸದೇ ಇರುವುದು ಚರ್ಚೆಗೆ ಗ್ರಾಸವಾಗಿದೆ.
#NelsonOlivera, a #Mangalore #Catholicpriest, viciously beats an elderly couple of the #Church in #Vitla. A video of this has gone viral on social media. Priest Nelson Olivera is shown aggressively attacking the elderly couple and kicking the elderly woman #BREAKINGNEWS pic.twitter.com/QrSI1a7uHq
— Headline Karnataka (@hknewsonline) March 2, 2024
Mangalore social activist Robert Rosario slams priest Fr. Nelson Olivera over an attack on an elderly couple and says no action by the police has been taken even after an FIR has been filed and a video of the attack on the couple went viral. Mangalore Bishop and PRO Roy Castelino have been threatening the couple to take the case back, he added. The CCTV footage of a church priest assaulting an elderly couple at Pariyalthadka village in Dakshina Kannada has gone viral on social media. Fr Nelson Olivera, Parish priest of Christ the King parish at Manela in Pariyalthadka near Vittla in Bantwal taluk allegedly assuated the elderly couple after a fight broke out when he had visited their house for blessings on February 29.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
21-04-25 02:13 pm
HK News Desk
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
21-04-25 01:03 pm
Bangalore Correspondent
Karnataka DGP Om Prakash Murder, wife: ನಿವೃತ್...
20-04-25 10:52 pm
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm