ಬ್ರೇಕಿಂಗ್ ನ್ಯೂಸ್
28-11-20 10:36 am Mangalore Correspondent ಕರಾವಳಿ
ಮಂಗಳೂರು, ನ.28: ಗೋಕರ್ಣನಾಥ ಕೋ- ಆಪರೇಟಿವ್ ಸೊಸೈಟಿ, ಹಂಪನಕಟ್ಟೆ ಶಾಖಾ ಕಚೇರಿಯಿಂದ ಜನರೇಟರ್ ಖರೀದಿಗೆ ಸಾಲ ಪಡೆದು 4.50 ಲಕ್ಷ ರೂ. ವಂಚಿಸಿರುವ ಬಗ್ಗೆ ಪೊಲೀಸ್ ದೂರು ನೀಡಲಾಗಿದೆ.
ಕಿಶೋರ್‌ಕುಮಾರ್ ವಂಚಿಸಿದ ಆರೋಪಿ ಎಂದು ಪೊಲೀಸ್ ದೂರು ನೀಡಲಾಗಿದೆ. 2018ರ ಸೆ.14ರಂದು ಆರೋಪಿ, ಜನರೇಟರ್ ಖರೀದಿ ಉದ್ದೇಶದಿಂದ 4.50 ಲಕ್ಷ ರೂ. ಕೈಗಾರಿಕಾ ಸಾಲ ಪಡೆದುಕೊಂಡಿದ್ದ. ಸಾಲಕ್ಕೆ ವಿಷ್ಣುದಾಸ ಎಂಬವರು ಜಾಮೀನು ನೀಡಿದ್ದು, ಆರೋಪಿಯ ಪತ್ನಿ ಸುಶೀಲಾ ಅವರ ವಿಮೆ ಪಾಲಿಸಿಯನ್ನು ಹೆಚ್ಚಿನ ಭದ್ರತೆಗೆ ಇಡಲಾಗಿತ್ತು.

ಸಾಲದ ಹಣವನ್ನು ಜನರೇಟರ್ ಪೂರೈಕೆದಾರ ಬಂಟ್ಸ್ ಹಾಸ್ಟೆಲ್‌ನ ಸಾಯಿರಾಂ ಟ್ರೇಡಿಂಗ್ ಕಂಪೆನಿ ನೀಡಿದ ಕೊಟೇಶನ್ ಪ್ರಕಾರ ನೀಡಲಾಗಿತ್ತು. ಆದರೆ, ಆರೋಪಿ ಖರೀದಿಸಿದ ಜನರೇಟರ್ ಅನ್ನು ಪರಿಶೀಲನೆಗೆ ಬ್ಯಾಂಕ್ ಸಿಬಂದಿ ತೆರಳಿದಾಗ ಜನರೇಟರ್ ತೋರಿಸದೆ, ಆರೋಪಿ ನೀಡಿದ ವಿಳಾಸದಲ್ಲಿ ಇಲ್ಲದೆ ನಾಪತ್ತೆಯಾಗಿದ್ದಾನೆ.
ಆರೋಪಿ ಕಿಶೋರ್, ಸಾಯಿರಾಂ ಟ್ರೇಡಿಂಗ್ ಕಂಪೆನಿಯ ಹರಿಕಿಶನ್ ಎಂಬಾತನ ಜತೆಗೂಡಿ ಜನರೇಟರ್ ಖರೀದಿಸುವ ನೆಪದಲ್ಲಿ ಬ್ಯಾಂಕಿನಿಂದ ಸಾಲ ಪಡೆದು ವಂಚಿಸಿದ್ದಾನೆ ಎಂದು ದೂರಿನಲ್ಲಿ ವಿವರಿಸಲಾಗಿದೆ. ಈ ಬಗ್ಗೆ ಬಂದರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
In the name of Buying Generator Kishor Kumar has cheated Gokarnath Cooperative Bank of Rs. 4.50 lakhs and he is said to be absonding. A case has been registered at the Bunder Police Station.
08-11-25 10:29 pm
Bangalore Correspondent
High Court Directs Kalaburagi: ಚಿತ್ತಾಪುರ ಆರೆಸ...
08-11-25 12:38 pm
ಯಾವ ಕ್ರಾಂತಿಯೂ ಆಗಲ್ಲ, ವಾಂತಿಯೂ ಆಗಲ್ಲ.. ನನಗೆ ಸಿದ...
07-11-25 09:59 pm
ಖಾಸಗಿ ಸಂಸ್ಥೆಗೆ ಸಾರ್ವಜನಿಕ ಸ್ಥಳದಲ್ಲಿ ನಿರ್ಬಂಧ ;...
06-11-25 07:34 pm
ಖ್ಯಾತ ಖಳ ನಟರಾಗಿ ಮಿಂಚಿದ್ದ ಹರೀಶ್ ರಾಯ್ ಕ್ಯಾನ್ಸರ್...
06-11-25 03:06 pm
07-11-25 05:21 pm
HK News Desk
ಮತಗಳವು ಆರೋಪ ; ರಾಹುಲ್ ವಿರುದ್ಧ ತಿರುಗಿಬಿದ್ದ ಮತದಾ...
07-11-25 11:33 am
'ನವೆಂಬರ್ ಕ್ರಾಂತಿ' ವದಂತಿ ತಳ್ಳಿಹಾಕಿದ ಡಿಸಿಎಂ ; ನ...
06-11-25 10:22 pm
ಐಸಿಸಿ ಮಹಿಳಾ ವಿಶ್ವಕಪ್ ಎತ್ತಿಹಿಡಿದ ಭಾರತದ ವನಿತೆಯರ...
03-11-25 01:13 pm
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
08-11-25 08:31 pm
Mangalore Correspondent
ಬೆಂಗಳೂರು- ಮಂಗಳೂರು ಹೈಸ್ಪೀಡ್ ಕಾರಿಡಾರ್ ; ಶಿರಾಡ...
07-11-25 10:58 pm
ಕುದ್ರೋಳಿ ಕ್ಷೇತ್ರ ಸ್ಥಾಪಿಸಿದ ಫೆ.21ರಂದು ನಾರಾಯಣ ಗ...
07-11-25 07:23 pm
ಗೋಡಂಬಿ ಉದ್ಯಮಕ್ಕೆ ನೂರು ವರ್ಷ ; ನ.14-16ರಂದು ದೇಶದ...
07-11-25 05:25 pm
ನೆಲ್ಯಾಡಿಯಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿದ್ದ ಅಭಿಷೇ...
07-11-25 02:18 pm
08-11-25 04:08 pm
Mangaluru Staff
ಆರೋಪಿಗೆ ಜಾಮೀನು ನೀಡಲು ಹೋಗಿ ತಾನೇ ತಗ್ಲಾಕ್ಕೊಂಡ !...
07-11-25 11:20 pm
ಹಗಲು ಕುರಾನ್ ಬೋಧಕ, ರಾತ್ರಿ ಮನೆಗಳ್ಳ..! ಬೀಗ ಹಾಕಿದ...
07-11-25 08:05 pm
ಕೋಮು ದ್ವೇಷ ; ಸಹಪಾಠಿ ವಿದ್ಯಾರ್ಥಿಗಳ ಮೇಲೆ ಯುವಕರಿಂ...
06-11-25 10:59 pm
ಪ್ರೇಮ ನಿರಾಕರಣೆ ; ಯುವಕನ ಹೆಸರಲ್ಲಿ ಕರ್ನಾಟಕ, ತಮಿಳ...
06-11-25 08:20 pm