ಬ್ರೇಕಿಂಗ್ ನ್ಯೂಸ್
06-07-25 08:48 pm Bangalore Correspondent ಕರ್ನಾಟಕ
ಬೆಂಗಳೂರು, ಜುಲೈ 6 : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಹಿಂದುಳಿದ ವರ್ಗಗಳ ರಾಷ್ಟ್ರೀಯ ಸಲಹಾ ಮಂಡಳಿ ಅಧ್ಯಕ್ಷರಾಗಿ ಎಐಸಿಸಿ ನೇಮಕ ಮಾಡಿದೆ. ಆ ಮೂಲಕ ಸಿದ್ದರಾಮಯ್ಯ ರಾಷ್ಟ್ರ ರಾಜಕಾರಣದಲ್ಲಿ ಗುರುತಿಸಿಕೊಳ್ಳಲು ವೇದಿಕೆ ಸೃಷ್ಟಿಸಲಾಗಿದೆ.
ಕಳೆದ ವಾರ ಸಿದ್ದರಾಮಯ್ಯ ದೆಹಲಿಗೆ ತೆರಳಿದ್ದಾಗ, ಎಐಸಿಸಿ ಹಿಂದುಳಿದ ವರ್ಗಗಳ ರಾಷ್ಟ್ರೀಯ ಸಲಹಾ ಮಂಡಳಿ ಅಸ್ತಿತ್ವಕ್ಕೆ ತರಲಾಗಿತ್ತು. ಜುಲೈ 15ರಂದು ಬೆಂಗಳೂರಿನಲ್ಲಿ ಇದರ ಮೊದಲ ಸಭೆಯನ್ನು ಏರ್ಪಡಿಸಿದ್ದು ಇದರ ನಡುವೆಯೇ ಸಿದ್ದರಾಮಯ್ಯ ಅವರಿಗೆ ಹೊಸ ಜವಾಬ್ದಾರಿ ನೀಡಲಾಗಿದೆ. ದೇಶದಲ್ಲಿ ಹಿಂದುಳಿದ ವರ್ಗಗಳ ಸಮಸ್ಯೆಗಳನ್ನು ಮುಂದಿಟ್ಟು ಚರ್ಚಿಸುವ ನೆಪದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ವೇದಿಕೆ ಸೃಜಿಸಲಾಗಿದ್ದು ಸಿದ್ದರಾಮಯ್ಯ ಅವರ ಅನುಭವವನ್ನು ರಾಷ್ಟ್ರ ಮಟ್ಟದಲ್ಲಿ ಬಳಸಿಕೊಳ್ಳಲು ಕಾಂಗ್ರೆಸ್ ಮುಂದಾಗಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಿದ್ದರಾಮಯ್ಯ, ನನಗೇನೂ ಗೊತ್ತಿಲ್ಲ. ಈ ವಿಚಾರದ ಬಗ್ಗೆ ಹೈಕಮಾಂಡ್ ಜೊತೆ ಮಾತನಾಡುತ್ತೇನೆ. ಕೇಂದ್ರ ಓಬಿಸಿ ಅಧ್ಯಕ್ಷರು ಕರ್ನಾಟಕದಲ್ಲಿ ಸಭೆ ಮಾಡುವಂತೆ ಹೇಳಿದ್ದರು. ಇದೇ ಜುಲೈ 15ಕ್ಕೆ ಸಭೆ ನಿಗದಿ ಮಾಡಿದ್ದೆ ಎಂದಿದ್ದಾರೆ. ಒಬಿಸಿ ಕಮಿಟಿ ಅಧ್ಯಕ್ಷ ಸ್ಥಾನ ಸ್ವೀಕಾರ ಮಾಡ್ತೀರಾ ಎಂಬ ಪ್ರಶ್ನೆಗೆ, ಜವಾಬ್ದಾರಿ ಕೊಟ್ಟಾಗ ಓಡಿಹೋಗಲು ಆಗುತ್ತಾ? ನಾನು ಇದನ್ನು ಕೇಳಿಲ್ಲ. ಅವರೇ ಘೋಷಣೆ ಮಾಡಿದ್ದಾರೆ. ಇದು ರಾಷ್ಟ್ರ ರಾಜಕಾರಣ ಅಲ್ಲ. ಇನ್ನೂ ಈ ಬಗ್ಗೆ ಗೊತ್ತಿಲ್ಲ, ವಿಚಾರಿಸುತ್ತೇನೆ ಎಂದಿದ್ದಾರೆ.
ರಾಜ್ಯ ರಾಜಕಾರಣದಲ್ಲಿ ʻಸೆಪ್ಟೆಂಬರ್ ಕ್ರಾಂತಿʼಯ ಬಿರುಗಾಳಿ ಬೀಸುತ್ತಿರುವಾಗಲೇ ಸಿದ್ದರಾಮಯ್ಯ ಅವರನ್ನು ರಾಷ್ಟ್ರೀಯ ತಂಡಕ್ಕೆ ನೇಮಿಸಿರುವುದು ನಾನಾ ರೀತಿಯ ವಿಶ್ಲೇಷಣೆಗೆ ಕಾರಣವಾಗಿದೆ. ಮುಖ್ಯಮಂತ್ರಿ ಬದಲಾವಣೆ ವಿಚಾರ ಸುದ್ದಿಯಾಗುತ್ತಿದ್ದು ಇದರ ನಡುವೆಯೇ ಹೈಕಮಾಂಡ್ ಸಿದ್ದರಾಮಯ್ಯ ಅವರಿಗೆ ಹೊಸ ಜವಾಬ್ದಾರಿ ನೀಡಿದೆ. ಆಮೂಲಕ ಸಿಎಂ ಸ್ಥಾನದ ಜೊತೆಗೆ ಅವರನ್ನು ರಾಷ್ಟ್ರೀಯ ಮಟ್ಟದಲ್ಲಿ ಬಳಸಿಕೊಳ್ಳಲು ಚಿಂತನೆ ನಡೆದಿದೆಯೇ ಅಥರಾ ನೀವು ರಾಜ್ಯಕ್ಕೆ ಸಾಕು, ಕೇಂದ್ರಕ್ಕೆ ಬನ್ನಿ ಎನ್ನುವ ಸಂದೇಶವೇ ಎನ್ನುವ ಕುತೂಹಲ ಮೂಡಿದೆ.
ಓಬಿಸಿ ಸಲಹಾ ಮಂಡಳಿಯಲ್ಲಿ ನಾಲ್ವರು ಮಾಜಿ ಮುಖ್ಯಮಂತ್ರಿಗಳು ಸೇರಿ 24 ಸದಸ್ಯರಿದ್ದು ರಾಷ್ಟ್ರ ಮಟ್ಟದಲ್ಲಿ ಸಿದ್ದರಾಮಯ್ಯ ಮುನ್ನಡೆಸಲಿದ್ದಾರೆ. ಕೇಂದ್ರ ನಾಯಕರ ದಿಢೀರ್ ನಿರ್ಧಾರ ನೋಡಿದರೆ, ಸಿದ್ದರಾಮಯ್ಯ ಅವರ ವರ್ಚಸ್ಸನ್ನು ಬಳಸಿಕೊಂಡು ದೇಶಾದ್ಯಂತ ಹಿಂದುಳಿದ ವರ್ಗಗಳನ್ನು ತನ್ನತ್ತ ಸೆಳೆಯಲು ಕಾಂಗ್ರೆಸ್ ಪ್ಲಾನ್ ಮಾಡಿರುವಂತೆ ತೋರುತ್ತಿದೆ. ಹಿಂದುಳಿದ ವರ್ಗಗಳ ಸಮಸ್ಯೆ, ಸವಾಲುಗಳನ್ನು ಕುರಿತು ಚರ್ಚಿಸಿ, ಸಲಹೆ ನೀಡುವುದರ ಜೊತೆಗೆ ಮೋದಿ ಸರ್ಕಾರಕ್ಕೆದುರಾಗಿ ಬಲವಾದ ಪ್ರತಿಪಾದನೆ ಮಾಡುವಲ್ಲಿ ಸಿದ್ದರಾಮಯ್ಯ ಅವರೇ ಸಮರ್ಥರು ಎನ್ನುವ ಚಿಂತನೆಗೆ ಬಂದಂತಿದೆ. ಹೊಸತಾಗಿ, ಹಿಂದುಳಿದ ವರ್ಗಗಳ ರಾಷ್ಟ್ರೀಯ ಸಲಹಾ ಮಂಡಳಿಯನ್ನು ಸೃಜಿಸಲಾಗಿದ್ದು ರಾಜ್ಯದಿಂದ ಹಿರಿಯ ನಾಯಕರಾದ ಬಿಕೆ ಹರಿಪ್ರಸಾದ್ ಮತ್ತು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿ ಸದಸ್ಯರಾಗಿದ್ದಾರೆ.
ಅಂದಹಾಗೆ, ಹಿಂದುಳಿದ ವರ್ಗಗಳ ರಾಷ್ಟ್ರೀಯ ಸಲಹಾ ಮಂಡಳಿಯ ಚಟುವಟಿಕೆಗಳನ್ನು ಕರ್ನಾಟಕದಿಂದಲೇ ಆರಂಭಿಸಲು ಎಐಸಿಸಿ ಮುಂದಾಗಿದೆ. ಜುಲೈ 15ರಂದು ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿ ಆವರಣದಲ್ಲಿನ ‘ಭಾರತ್ ಜೋಡೊ ಭವನ’ದಲ್ಲಿ ಮೊದಲ ಸಭೆ ನಡೆಯಲಿದೆ. ಮಂಡಳಿಯ ಸದಸ್ಯರು, ಸಂಚಾಲಕರು, ಕಾರ್ಯದರ್ಶಿಗಳು, ಕಾಂಗ್ರೆಸ್‌ನ ಹಿಂದುಳಿದ ವರ್ಗಗಳ ಪ್ರಮುಖ ನಾಯಕರು ಸೇರಿದಂತೆ ದೇಶದ ವಿವಿಧ ರಾಜ್ಯಗಳ 90 ನಾಯಕರಿಗೆ ಆಹ್ವಾನ ನೀಡಲಾಗಿದೆ.
In a move that signals the Congress high command’s intent to project Karnataka Chief Minister Siddaramaiah on the national stage, the party has appointed him as the Chairman of the All India Congress Committee’s (AICC) National Advisory Council for Backward Classes.
25-08-25 10:55 pm
Bangalore Correspondent
K N Rajanna, Dk Shivakumar: ಅವ್ರು ಆರೆಸ್ಸೆಸ್ ಗ...
25-08-25 06:07 pm
DK Shivakumar, BK Hariprasad: ಕೆಪಿಸಿಸಿ ಅಧ್ಯಕ್...
25-08-25 03:02 pm
Satish Jarkiholi, Dharmasthala, SIT: ಧರ್ಮಸ್ಥಳ...
25-08-25 10:37 am
50% ರಿಯಾಯಿತಿ ಆಫರ್ ಗೆ ಮುಗಿಬಿದ್ದ ಜನರು ; ಮೊದಲ ದಿ...
24-08-25 05:30 pm
24-08-25 01:47 pm
HK News Desk
Actor Vijay, Thalapathy; ಟಿವಿಕೆ ಮುಖ್ಯಸ್ಥ, ನಟ...
23-08-25 04:58 pm
Mp Brijesh Chowta, Mangalore: ಆನ್ಲೈನ್ ಗೇಮಿಂಗ್...
22-08-25 10:00 pm
ಪತ್ನಿಯ ಪದವಿ ಪ್ರದಾನ ಸಮಾರಂಭಕ್ಕೆ ಬ್ರಿಟನ್ ತೆರಳಲು...
22-08-25 08:07 pm
Another Security, Parliament, Arrest: ಸಂಸತ್ತಿ...
22-08-25 02:00 pm
25-08-25 10:59 pm
Mangalore Correspondent
Mangalore, Esyasoft, AI, Bajpe: ಬಜ್ಪೆ ; ಎಸ್ಯಾ...
25-08-25 10:44 pm
Sameer MD, Latest News: ಬುರುಡೆ ರಹಸ್ಯ ; ಬೆಳ್ತಂ...
25-08-25 10:28 pm
Elevate Brand Mangalore 2025: 'ಎಲಿವೇಟ್ ಬ್ರ್ಯಾ...
25-08-25 05:24 pm
Dharmasthala, Mask Man, Fake Skull, SIT: ಎಸ್ಐ...
25-08-25 12:24 pm
25-08-25 08:29 pm
HK News Desk
ಶಿಕ್ಷಣ ಸಚಿವ ಮಧು ಬಂಗಾರಪ್ಪ ಪಿಎ ಹೆಸರಲ್ಲಿ ವಸೂಲಿ ;...
25-08-25 07:42 pm
How Did Pastor John Shamine and Criminal Mada...
25-08-25 07:31 pm
Online Fraud, cyber, Mangalore : ರಸಗೊಬ್ಬರ ಕಂಪ...
25-08-25 04:39 pm
Dharmasthala Case, Pastor John Shamine and No...
25-08-25 02:29 am