Mangalore suicide, Thumbe: ಮೊಬೈಲ್ ಗೀಳು ; ತುಂಬೆಯಲ್ಲಿ ಪಿಯು ವಿದ್ಯಾರ್ಥಿ ನೇಣು ಬಿಗಿದು ಆತ್ಮಹತ್ಯೆ, ಏಕೈಕ ಪುತ್ರನನ್ನ ಕಳಕೊಂಡ ಪೋಷಕರ ರೋದನ 

08-07-25 10:15 am       Mangalore Correspondent   ಕರಾವಳಿ

ಪಿಯುಸಿ ಓದುತ್ತಿದ್ದ ಹುಡುಗ ಸೋಮವಾರ ಸಂಜೆ ಕಾಲೇಜಿನಿಂದ ಮನೆಗೆ ಬಂದು ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ತುಂಬೆ ಬಳಿ ನಡೆದಿದೆ. ತಂದೆ, ತಾಯಿ ಕೆಲಸಕ್ಕೆ ಹೋಗಿದ್ದರಿಂದ ಈ ಸಂದರ್ಭದಲ್ಲಿ ಮನೆಯಲ್ಲಿ ಯಾರೂ ಇರಲಿಲ್ಲ. 

ಮಂಗಳೂರು, ಜು.8 : ಪಿಯುಸಿ ಓದುತ್ತಿದ್ದ ಹುಡುಗ ಸೋಮವಾರ ಸಂಜೆ ಕಾಲೇಜಿನಿಂದ ಮನೆಗೆ ಬಂದು ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ತುಂಬೆ ಬಳಿ ನಡೆದಿದೆ. ತಂದೆ, ತಾಯಿ ಕೆಲಸಕ್ಕೆ ಹೋಗಿದ್ದರಿಂದ ಈ ಸಂದರ್ಭದಲ್ಲಿ ಮನೆಯಲ್ಲಿ ಯಾರೂ ಇರಲಿಲ್ಲ. 

ತುಂಬೆಯ ಪರ್ಲಕ್ಕೆ ನಿವಾಸಿಗಳಾದ ಕರುಣಾಕರ ಗಟ್ಟಿ ಮತ್ತು ಶೋಭಾ ಗಟ್ಟಿ ದಂಪತಿಯ ಏಕೈಕ ಪುತ್ರ ತೇಜಸ್ ಗಟ್ಟಿ(17) ಮೃತ ವಿದ್ಯಾರ್ಥಿ. ತೇಜಸ್ ಗಟ್ಟಿ ಮೊಡಂಕಾಪು ಕಾಲೇಜಿನಲ್ಲಿ ಪಿಯುಸಿ ಎರಡನೇ ವರುಷದ ವಿದ್ಯಾರ್ಥಿಯಾಗಿದ್ದ. ನಿನ್ನೆ ಸಂಜೆ‌ ಕಾಲೇಜಿನಿಂದ ಮನೆಗೆ ಬಂದಿದ್ದ ತೇಜಸ್ ಕೋಣೆಯಲ್ಲಿ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆಗೈದಿದ್ದಾನೆ. ಸಂಜೆ ವೇಳೆಗೆ ತಂದೆ ಕರುಣಾಕರ ಅವರು ಎಂದಿ‌ನಂತೆ ಮನೆಗೆ ಬಂದಾಗ ಬಾಗಿಲು ತೆರದಿದ್ದು ಒಳಗೆ ನೋಡಿದಾಗ ತೇಜಸ್ ಆತ್ಮಹತ್ಯೆಗೈದಿರೋದು ಗೊತ್ತಾಗಿದೆ.

ಕಳೆದ ಶನಿವಾರ ಕಾಲೇಜಿನಲ್ಲಿ ತೇಜಸ್ ಮೊಬೈಲ್ ಬಳಸಿ ಉಪನ್ಯಾಸಕರಿಗೆ ಸಿಕ್ಕಿಬಿದ್ದು, ಕಾಲೇಜು ಆಡಳಿತದವರು ಮೊಬೈಲ್ ವಶಪಡಿಸಿ ಪೋಷಕರಿಗೆ ವಿಚಾರ ತಿಳಿಸಿದ್ದರಂತೆ. ಕಾಲೇಜು ಆಡಳಿತವು ಸೋಮವಾರವೂ ಮೊಬೈಲನ್ನ ತೇಜಸ್ ಗೆ ವಾಪಸ್ ನೀಡಿರಲಿಲ್ಲವೆಂಬುವುದು ಒಂದು‌ ನೆಪವಾಗಿದ್ದರೆ, ಆತ್ಮಹತ್ಯೆಗೆ ನಿಖರ ಕಾರಣ ತಿಳಿದಿಲ್ಲ. ಪೊಲೀಸರು ಪರಿಶೀಲನೆ ನಡೆಸಿದ್ದು, ಮೃತದೇಹವನ್ನ‌ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

ತಮಗೆ ಆಸರೆಯಾಗ ಬೇಕಿದ್ದ ಏಕೈಕ ಪುತ್ರ ಹದಿಹರೆಯದಲ್ಲೇ ಆತ್ಮಹತ್ಯೆಗೈದಿರುವುದನ್ನ ಅರಗಿಸಿಕೊಳ್ಳಲಾರದೆ ಪೋಷಕರು ದುಃಖ ಸಾಗರದಲ್ಲಿ ಮುಳುಗಿದ್ದಾರೆ.

In a heartbreaking incident reported from Thumbe near Mangaluru, a second-year PUC student allegedly died by suicide after returning home from college on Monday evening. The 17-year-old boy was found hanging from the ceiling fan in his room while his parents were away at work.