ಬ್ರೇಕಿಂಗ್ ನ್ಯೂಸ್
19-03-24 10:15 pm Mangalore Correspondent ಕರಾವಳಿ
ಮಂಗಳೂರು, ಮಾ.19: ಇತ್ತೀಚೆಗೆ ಬಿಜೆಪಿ ಜಿಲ್ಲಾ ಸಾಮಾಜಿಕ ಜಾಲತಾಣ ಪ್ರಕೋಷ್ಠದ ಸದಸ್ಯ ಜಯಾನಂದ ಕೆ. ಬಂಗೇರ ಅವರ ಮನೆಗೆ ಪುತ್ತೂರು ಶಾಸಕರ ಬೆಂಬಲಿಗರು ನುಗ್ಗಿ ದಾಂಧಲೆ ನಡೆಸಿದ ಪ್ರಕರಣದ ಕುರಿತು ವಿಚಾರಿಸಲು ಭಾರತೀಯ ಜನತಾ ಪಾರ್ಟಿಯ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ರವರು ಜಯಾನಂದ ಬಂಗೇರ ಅವರ ಮನೆಗೆ ಭೇಟಿ ನೀಡಿದರು. ಬಿಜೆಪಿ ಪಕ್ಷವು ಸದಾ ನಿಮ್ಮ ಜೊತೆ ಇದೆ ಎಂದು ಹೇಳಿ ಧೈರ್ಯ ತುಂಬಿದರು.
ಘಟನೆಯನ್ನು ಖಂಡಿಸಿ ವ್ಯಕ್ತಪಡಿಸಿದ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಧೈರ್ಯವಾಗಿ ಪ್ರಶ್ನಿಸು ಅಂತ ಶಾಲೆಗಳಲ್ಲಿರುವ ಧ್ಯೇಯ ವಾಕ್ಯಗಳನ್ನು ಕಾಂಗ್ರೆಸ್ ಸರಕಾರವೇ ಬದಲಾಯಿಸಿತ್ತು. ಆದರೆ ಅದೇ ಪುತ್ತೂರಿನ ಶಾಸಕ ಅಶೋಕ ರೈ ಅವರೇ ಹೇಳಿದ ಸುಳ್ಳನ್ನು ದ.ಕ. ಜಿಲ್ಲಾ ಬಿಜೆಪಿ ಸಾಮಾಜಿಕ ಜಾಲತಾಣ ಪ್ರಕೋಷ್ಟದ ಸದಸ್ಯ ಜಯಾನಂದ ಬಂಗೇರ ಅವರು ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನಿಸಿದ್ದಕ್ಕೆ ಉತ್ತರ ಕೊಡಲಾಗದ ಹೇಡಿ ಕಾಂಗ್ರೆಸ್ ಶಾಸಕ ತನ್ನ ಬೆಂಬಲಿಗರನ್ನು ಜಯಾನಂದ ಅವರ ಮನೆಗೆ ಚಂಡೆ ಬಳಗ ಹಾಗೂ ಬ್ಯಾನರ್ ಹಿಡಿದುಕೊಂಡು ಅಕ್ರಮವಾಗಿ ಕಳುಹಿಸಿ ಜಯಾನಂದ ಅವರ ಹೆಂಡತಿ ಮಕ್ಕಳು ವಯೋವೃದ್ದರನ್ನು ಬೆದರಿಸುವ ಹಾಗೂ ವಸತಿ ಪ್ರದೇಶದಲ್ಲಿ ಭಯದ ವಾತಾವರಣ ಸೃಷ್ಟಿಸುವ ಮುಖೇನ ಹೇಯ ದುರ್ವರ್ತನೆ ತೋರಿದ್ದಾರೆ.
ಕಾಂಗ್ರೆಸ್ ನಡೆಯನ್ನು ದಕ್ಷಿಣ ಕನ್ನಡ ಬಿಜೆಪಿ ಅತ್ಯುಗ್ರವಾಗಿ ಖಂಡಿಸುತ್ತದೆ. ಹಾಗೂ ಅಲ್ಲಿ ಚುನಾವಣಾ ನೀತಿ ಸಂಹಿತೆ ಚಾಲ್ತಿಯಲ್ಲಿ ಇರುವಾಗ ಚಂಡೆ ಹಾಗೂ ಬ್ಯಾನರ್ ಅನ್ನು ಚುನಾವಣಾ ಆಯೋಗದ ಅನುಮತಿ ಇಲ್ಲದೇ ಮೆರವಣಿಗೆ ಮೂಲಕ ಬಂದಿರುವುದು ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆ ಆಗಿದೆ. ಆದ್ದರಿಂದ ಚುನಾವಣಾ ಆಯೋಗವು ಅಲ್ಲಿ ಬಂದಿದ್ದ ಚಂಡೆ, ವಾಹನ ಹಾಗೂ ಸಾಹಿತ್ಯಗಳನ್ನು ಮುಟ್ಟುಗೋಲು ಹಾಕಬೇಕು ಹಾಗೂ ತಪ್ಪಿತಸ್ಥರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದ.ಕ. ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರೊಂದಿಗೆ ಗೋಪಾಲಕೃಷ್ಣ ಹೇರಳೆ, ಪ್ರೇಮಾನಂದ ಶೆಟ್ಟಿ, ಯತೀಶ್ ಅರ್ವಾರ್, ನಿತಿನ್ ಕುಮಾರ್, ಆರ್.ಸಿ. ನಾರಾಯಣ, ಶ್ರೀಮತಿ ವಿದ್ಯಾಗೌರಿ, ಸಹಜ್ ರೈ, ಯುವರಾಜ್ ಪೆರಿಯತ್ತೋಡಿ, ನಿತೇಶ್ ಕುಂಬ್ರ, ಅಶೋಕ್ ಹಾರಾಡಿ ಹಾಗೂ ಪಕ್ಷದ ಮುಖಂಡರು, ಪುತ್ತೂರು ಮಂಡಲದ ಪ್ರಮುಖರು ಹಾಗೂ ಕಾರ್ಯಕರ್ತರು ಜೊತೆಗಿದ್ದರು.
Puttur banner row, assult on BJP member by congress, BJP leaders visit house, election commision takes action for violating election code of conduct.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
21-04-25 02:13 pm
HK News Desk
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
21-04-25 01:03 pm
Bangalore Correspondent
Karnataka DGP Om Prakash Murder, wife: ನಿವೃತ್...
20-04-25 10:52 pm
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm