ಬ್ರೇಕಿಂಗ್ ನ್ಯೂಸ್
17-03-24 10:35 am Mangalore Correspondent ಕರಾವಳಿ
ಮಂಗಳೂರು, ಮಾ.17: ಬೆಂಗಳೂರಿನ ಸಂತ ಜೋಸೆಫ್ ಯೂನಿವರ್ಸಿಟಿಯ ವಾರ್ಷಿಕ ಕಾರ್ಯಕ್ರಮವಾದ ‘ಸಿಂಟಾಕ್ಸಿಯಾ’ ಮಾರ್ಚ್ 12 ಮತ್ತು 13ರಂದು ವಿಶ್ವವಿದ್ಯಾಲಯದ ಕ್ಯಾಂಪಸ್ಸಿನಲ್ಲಿ ನಡೆಯಿತು.
ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಭಾಗವಹಿಸಿದ ಕಾರ್ಯಕ್ರಮದಲ್ಲಿ 20ಕ್ಕೂ ಹೆಚ್ಚಿನ ಈವೆಂಟ್ ಗಳು ನಡೆದವು. ಎಐ ನೆಕ್ಸಸ್ ಹೆಲ್ತ್ ಕೇರ್ನ ಭಾರತ ಮತ್ತು ಉಪಖಂಡದ ವ್ಯವಸ್ಥಾಪಕ ಮತ್ತು ಸಂಸ್ಥಾಪಕ ಪೀಟರ್ ಪುಷ್ಪರಾಜ್ ಅವರು ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿದ್ದು, ಸೇಂಟ್ ಜೋಸೆಫ್ ವಿಶ್ವವಿದ್ಯಾಲಯದ ಐಟಿ ವಿದ್ಯಾರ್ಥಿಗಳ ಪರಿಶ್ರಮದ ಪ್ರಯತ್ನಗಳನ್ನು ಶ್ಲಾಘಿಸಿದರು. ಸ್ಕೂಲ್ ಆಫ್ ಇನ್ಪರ್ಮೆಶನ್ ಟೆಕ್ನಾಲಜಿ, ಕಾಲೇಜಿನ ಡೀನ್, ರೆ| ಫಾ| ಡೆನ್ಜಿಲ್ ಲೋಬೊ ಎಸ್.ಜೆ, ಐಬಿಎಂ ಸಂಶೋಧನೆಯನ್ನು ಉಲ್ಲೇಖಿಸಿ, ಕ್ಷಿಪ್ರ ತಾಂತ್ರಿಕ ಪ್ರಗತಿಗಳ ಮೇಲೆ ಬೆಳಕು ಚೆಲ್ಲಿದರು.
ಕೇವಲ ಪರೀಕ್ಷೆಯ ಅಂಕಗಳ ಮೇಲೆ ಕೇಂದ್ರಿಕರಿಸುವ ಬದಲು, ಕೌಶಲ್ಯವನ್ನು ಬೆಳೆಸಿಕೊಳ್ಳುವಂತೆ ಅವರು ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು. ತಾಂತ್ರಿಕ ಪ್ರವೃತ್ತಿಗಳ ಮಹತ್ವವನ್ನು ತಿಳಿಸಿದರು. ಮಾರ್ಚ್ 13ರಂದು ನಡೆದ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಪ್ರಮಾಣಪತ್ರ ಮತ್ತು ಸ್ಮರಣಿಕೆಗಳನ್ನು ನೀಡಲಾಯಿತು. ಕರ್ನಾಟಕ ಮತ್ತು ತಮಿಳುನಾಡಿನ ಕಾಲೇಜುಗಳಿಂದ ಸುಮಾರು 250 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಡಾ| ಶಶಿಕಲಾ ಮತ್ತು ಡಾ| ಮೃಣ್ಮಯೀ ಸಿಂಟಾಕ್ಸಿಯಾದ ಅಧ್ಯಾಪಕ ಸಂಯೋಜಕರಾಗಿದ್ದರು. ಎರಡನೇ ವರ್ಷದ ಬಿ.ಎಸ್ಸಿಯ ನಿಖಿಲ್ ವಿದ್ಯಾರ್ಥಿ ಸಂಯೋಜಕರಾಗಿದ್ದರು. ಸೇಂಟ್ ಜೋಸೆಫ್ ವಿಶ್ವವಿದ್ಯಾಲಯವು ಬಿಸಿಎ, ಬಿಸಿಎ-ಡೇಟಾ ಅನಾಲಿಟಿಕ್ಸ್, ಮ್ಯಾಥ್ಸ್, ಸ್ಟಾಟಿಸ್ಟಿಕ್ಸ್ ಮತ್ತು ಇಲೆಕ್ಟ್ರಾನಿಕ್ಸ್ ಜೊತೆಗೆ ಬಿಸಿಎ ಕಂಪ್ಯೂಟರ್ ಸೈನ್ಸ್, ಸ್ನಾತಕೋತ್ತರದಲ್ಲಿ ಕಂಪ್ಯೂಟರ್ ಸೈನ್ಸ್, ಎಮ್ಎಸ್ಸಿ-ಬಿಗ್ ಡೇಟಾ, ಎಮ್ ಸಿಎ ವಿಭಾಗಗಳನ್ನು ಹೊಂದಿದೆ. ಎಮ್ಎಸ್ಸಿ-ಸೈಬರ್ ಸೆಕ್ಯುರಿಟಿ ಮತ್ತು ಎಐ ತರಬೇತಿಯನ್ನು 2024-25ರ ಅವಧಿಯಲ್ಲಿ ಪರಿಚಯಿಸಲಾಗುವುದು ಎಂದು ಯೂನಿವರ್ಸಿಟಿಯ ಪ್ರಕಟಣೆ ತಿಳಿಸಿದೆ.
'Syntaxia', the annual event of Saint Joseph's University, Bangalore, was held on March 12 and 13 at the University campus.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
21-04-25 02:13 pm
HK News Desk
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
21-04-25 01:03 pm
Bangalore Correspondent
Karnataka DGP Om Prakash Murder, wife: ನಿವೃತ್...
20-04-25 10:52 pm
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm