ಬ್ರೇಕಿಂಗ್ ನ್ಯೂಸ್
26-11-20 12:35 pm Mangalore Correspondent ಕರಾವಳಿ
ಮಂಗಳೂರು, ನವೆಂಬರ್ 26: ಬಹುನಿರೀಕ್ಷಿತ ಗೈಲ್ ಕಂಪನಿಯ ನೈಸರ್ಗಿಕ ಅನಿಲ ಕೊಚ್ಚಿಯಿಂದ ಪೈಪ್ ಲೈನ್ ಮೂಲಕ ಮಂಗಳೂರು ತಲುಪಿದ್ದು, ಮೊದಲ ಹಂತದಲ್ಲೇ ಎಂಸಿಎಫ್ ನಲ್ಲಿ ನೈಸರ್ಗಿಕ ಅನಿಲ ಬಳಕೆಗೆ ಯೋಜನೆ ಹಾಕಲಾಗಿದೆ.
ಈವರೆಗೆ ಎಂಸಿಎಫ್ ನಲ್ಲಿ ನ್ಯಾಫ್ತಾ ಬಳಸಿ ಯೂರಿಯಾ ಮತ್ತಿತರ ರಸಗೊಬ್ಬರ ತಯಾರಿ ನಡೆಸಲಾಗುತ್ತಿತ್ತು. ಆದರೆ, ನ್ಯಾಫ್ತಾ ಬಳಕೆಯಿಂದ ಪರಿಸರಕ್ಕೆ ಮಾರಕ ಮತ್ತು ಉತ್ಪಾದನಾ ವೆಚ್ಚ ಅಧಿಕ ಎನ್ನುವ ನೆಲೆಯಲ್ಲಿ ನ್ಯಾಫ್ತಾ ಬಳಕೆಯನ್ನು ಆರು ವರ್ಷಗಳ ಹಿಂದೆ ಕೇಂದ್ರ ಸರಕಾರ ನಿಷೇಧಿಸಿತ್ತು. ಕೇಂದ್ರ ಸರಕಾರದ ನಿಷೇಧ ಆದೇಶದಿಂದ ಒಂದು ಹಂತದಲ್ಲಿ ಎಂಸಿಎಫ್ ಉತ್ಪಾದನೆಯನ್ನೂ ಸ್ಥಗಿತಗೊಳಿಸಿತ್ತು. ಆನಂತರ ನೈಸರ್ಗಿಕ ಅನಿಲ ಲಭ್ಯವಾಗುವ ವರೆಗೆ ನ್ಯಾಫ್ತಾ ಬಳಸಲು ಸರಕಾರ ಅನುಮತಿ ನೀಡಿತ್ತು.


ಮೂರು ವರ್ಷಗಳ ಮೊದಲೇ ಗೈಲ್ ಪೈಪ್ ಲೈನ್ ಮೂಲಕ ನೈಸರ್ಗಿಕ ಅನಿಲ ಪೂರೈಕೆಯಾಗಬೇಕಿತ್ತು. ಆದರೆ, ಪೈಪ್ ಲೈನ್ ಹಾಕುವುದು ವಿಳಂಬವಾಗಿದ್ದರಿಂದ ಅದು ಸಾಧ್ಯವಾಗಿರಲಿಲ್ಲ. ಇದೀಗ ಅನಿಲ ಪೂರೈಕೆ ಆರಂಭಗೊಂಡಿದ್ದು ಆರಂಭಿಕ ಹಂತದ ಪ್ರಯೋಗ ನಡೆಸಲಾಗುತ್ತಿದೆ. ಅನಿಲ ಆಧಾರಿತ ಯಂತ್ರಗಳನ್ನು ಅಳವಡಿಸಿ ಕಾರ್ಯ ಚಟುವಟಿಕೆಯನ್ನು ಬಗ್ಗೆ ಪ್ರಾಯೋಗಿಕವಾಗಿ ನಡೆಸಲಾಗುತ್ತಿದೆ.
ಅಲ್ಲದೆ, ನೈಸರ್ಗಿಕ ಅನಿಲ ಸ್ಟೋರೇಜ್ ವ್ಯವಸ್ಥೆಯನ್ನೂ ಮಾಡಲಾಗುತ್ತಿದೆ. ಮುಂದಿನ ತಿಂಗಳಿಂದ ಅಧಿಕೃತವಾಗಿ ನೈಸರ್ಗಿಕ ಅನಿಲದಿಂದ ರಸಗೊಬ್ಬರ ತಯಾರಿ ಆರಂಭಗೊಳ್ಳಲಿದೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.
ಮುಂದಿನ ದಿನಗಳಲ್ಲಿ ಎಂಆರ್ ಪಿಎಲ್ ಗೂ ಗೈಲ್ ಕಂಪನಿಯಿಂದ ನೈಸರ್ಗಿಕ ಅನಿಲ ಪೂರೈಸಲಿದೆ. ಸದ್ಯ ಎಂಆರ್ ಪಿಎಲ್ ನಲ್ಲಿ ಪ್ರತಿದಿನ 2500 ಟನ್ ಎಲ್ ಪಿಜಿ ಉತ್ಪಾದನೆಯಾಗುತ್ತಿದ್ದು, ಅದನ್ನು ರಾಜ್ಯದ ವಿವಿಧೆಡೆಗೆ ಪೂರೈಸಲಾಗುತ್ತಿದೆ. ಇಲ್ಲಿ ಪೆಟ್ರೋಲಿಯಂ ಕಚ್ಚಾ ತೈಲದಿಂದ ಎಲ್ ಪಿಜಿ ಉತ್ಪಾದನೆ ಮಾಡಲಾಗುತ್ತಿತ್ತು. ಇನ್ನು ಗೈಲ್ ಪೂರೈಸುವ ನೈಸರ್ಗಿಕ ಅನಿಲದಿಂದಲೇ ಎಲ್ ಪಿಜಿ ಉತ್ಪಾದನೆಯಾಗಲಿದೆ.
The much-delayed Kochi-Mangalore natural gas pipeline project is finally ready for commissioning any day from now as the national energy major Gail India has completed the final 540-metre treacherous stretch across the Chandragiri river in northern Kerala, according to a senior company official.
15-09-26 09:13 pm
HK News Staffer
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 09:18 pm
HK News Staffer
Satish Kumpala, Manglore: ಕಾಟಾಚಾರಕ್ಕೆ ಸಂಪುಟ ಸ...
15-09-26 07:46 pm
U T Khader, KDP Meeting, Bharath Sheety, Hari...
15-09-26 06:52 pm
Aravind Bolar Controversy, Mangalore: “ಎಂಕ್ ಮ...
15-09-26 05:29 pm
U T Khader, KDP Meeting, Sudheer Reddy Ips: :...
15-09-26 05:27 pm
15-09-26 09:19 pm
HK News Staffer
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am