ಬ್ರೇಕಿಂಗ್ ನ್ಯೂಸ್
28-12-23 10:50 pm Mangalore Correspondent ಕರಾವಳಿ
ಮಂಗಳೂರು, ಡಿ.28: ಮುಸ್ಲಿಂ ಮಹಿಳೆಯರನ್ನು ಅವಮಾನಿಸಿ ಹೇಳಿಕೆ ನೀಡಿರುವ ಕಲ್ಲಡ್ಕ ಪ್ರಭಾಕರ ಭಟ್ಟರನ್ನು ಕೂಡಲೇ ಬಂಧಿಸಬೇಕು. ಲೋಕಸಭೆ ಚುನಾವಣೆ ವೇಳೆಗೆ ಹಿಂದು- ಮುಸ್ಲಿಂ ನಡುವೆ ಕಂದಕ ಸೃಷ್ಟಿಸಲು ಇಂತಹ ಹೇಳಿಕೆ ನೀಡುತ್ತಿದ್ದಾರೆ. ಇದರ ಹಿಂದೆ ಕೋಮು ದ್ವೇಷ ಹಬ್ಬಿಸುವ ಅಜೆಂಡಾ ಇದೆ. ಅವರ ಹೇಳಿಕೆ, ಅದನ್ನು ಕೋಮು ದ್ವೇಷಕ್ಕೆ ಬಿಂಬಿಸುತ್ತಿರುವ ಬಿಜೆಪಿ ನಾಯಕರನ್ನು ನೋಡಿದರೆ ಆ ರೀತಿಯ ಅನುಮಾನ ಬರುತ್ತದೆ ಎಂದು ಸಮಾನ ಮನಸ್ಕ ಸಂಘಟನೆಗಳ ನಾಯಕರು ಸುದ್ದಿಗೋಷ್ಟಿಯಲ್ಲಿ ಹೇಳಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಮಾಜಿ ಸಚಿವ ರಮಾನಾಥ ರೈ, ಈಗಾಗಲೇ ಗೃಹ ಸಚಿವರ ಜೊತೆಗೆ ಮಾತನಾಡಿದ್ದೇನೆ. ಎಫ್ಐಆರ್ ದಾಖಲಾಗಿದ್ದರಿಂದ ಅವರನ್ನು ಬಂಧಿಸುತ್ತಾರೆಂಬ ವಿಶ್ವಾಸ ಇದೆ. ಈ ರೀತಿ ಅವಮಾನಿಸಿದ್ದು ಎಲ್ಲ ಮಹಿಳಾ ಸಮುದಾಯವನ್ನು. ಕೇವಲ ಮುಸ್ಲಿಮರನ್ನು ಮಾತ್ರ ಅಲ್ಲ. ಹೀನಾಯ ಹೇಳಿಕೆ ನೀಡಿ, ಹಿಂದುಗಳನ್ನು ಕೆರಳಿಸುತ್ತಿದ್ದಾರೆ. ಇಷ್ಟು ವರ್ಷ ಬಿಜೆಪಿ ಸರಕಾರದಲ್ಲಿ ಇಲ್ಲದ ಹೇಳಿಕೆಗಳು ಈಗ ಯಾಕೆ ಬರುತ್ತದೆ ಅನ್ನುವುದನ್ನು ಜನರು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.
ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಮಾತನಾಡಿ, ಇದು ಚುನಾವಣೆ ಗಿಮಿಕ್ ಅನ್ನುವುದು ಸ್ಪಷ್ಟವಾಗಿ ಕಾಣುತ್ತಿದೆ. ಬಿಜೆಪಿಗೆ ಚುನಾವಣೆ ಗೆಲ್ಲಲು ಬೇರೆ ಯಾವುದೇ ಅಸ್ತ್ರ ಇಲ್ಲ. ಜನರನ್ನು ಹಿಂದು – ಮುಸ್ಲಿಂ ಆಗಿ ವಿಭಜಿಸಿ, ಮತ ಪಡೆಯಲು ಹವಣಿಕೆ ಮಾಡುತ್ತಿದ್ದಾರೆ. ಮತ್ತೆ ಕೋಮು ವೈಷಮ್ಯ, ಅಮಾಯಕರ ಕೊಲೆಗಳಾಗುತ್ತವೆ ಅನ್ನುವ ಸೂಚನೆಯನ್ನು ಇದು ನೀಡಿದೆ. ಕಲ್ಲಡ್ಕ ಭಟ್ಟರನ್ನು ಬಂಧಿಸಿದರೆ ಕಾನೂನು ಸುವ್ಯವಸ್ಥೆ ಹದಗೆಡುತ್ತದೆ ಎನ್ನುವ ಆತಂಕ ಈಗ ಇಲ್ಲ ಎನ್ನುವುದನ್ನು ನಾವು ಸ್ಪಷ್ಟಪಡಿಸುತ್ತಿದ್ದೇವೆ. ಇಂತಹ ಅವಹೇಳನ ಮಾಡಿದವರನ್ನು ಬಂಧಿಸಿ ಜೈಲಿಗಟ್ಟಿದರೆ ಮಾತ್ರ ಬುದ್ಧಿ ಬರುತ್ತದೆ ಎಂದರು.
ಸಾಮಾಜಿಕ ಹೋರಾಟಗಾರ ಎಂಜಿ ಹೆಗ್ಡೆ ಮಾತನಾಡಿ, ಇದೊಂದು ಚುನಾವಣೆ ಗೆಲ್ಲುವ ಟೂಲ್ ಕಿಟ್ ಅಸ್ತ್ರ. ಅಮಾಯಕರನ್ನು ಬಲಿ ಪಡೆಯಲು ಮಾಡುತ್ತಿರುವ ಹುನ್ನಾರದಂತೆ ಕಾಣುತ್ತದೆ. ಇದಕ್ಕಾಗಿ ಯುವಕರು ಜಾಗ್ರತೆಯಲ್ಲಿರಬೇಕು ಎಂದು ಮನವಿ ಮಾಡುತ್ತೇನೆ. ಯಾವುದೇ ಕ್ಷಣದಲ್ಲಿ ಗಲಭೆ ಆಗಬಹುದು. ಯಾರೋ ಅಮಾಯಕರನ್ನು ಕೊಲ್ಲುವ ಸ್ಥಿತಿ ಬರಬಹುದು. ಇಂಥದ್ದಕ್ಕೆಲ್ಲ ಆಸ್ಪದ ಕೊಡಬಾರದು ಎಂದಿದ್ದರೆ, ಕೂಡಲೇ ಅವರನ್ನು ಬಂಧಿಸಿ ಎಂದು ಆಗ್ರಹಿಸಿದರು.
ಸುದ್ದಿಗೋಷ್ಟಿಯಲ್ಲಿ ದಿನೇಶ್ ಹೆಗ್ಡೆ ಉಳೆಪಾಡಿ, ದೇವದಾಸ್ ಎಕ್ಕಾರು, ಯಾದವ ಶೆಟ್ಟಿ, ಸಾಹುಲ್ ಹಮೀದ್ ಮತ್ತಿತರರು ಇದ್ದರು.
The joint forum of secular parties in Dakshina Kannada district on Thursday urged the government to immediately arrest RSS leader Kalladka Prabhakar Bhat for allegedly insulting Muslim women in a recent speech in Mandya district and initiate appropriate legal action.
12-11-25 11:10 pm
Bangalore Correspondent
ಧರ್ಮಸ್ಥಳ ಶವ ಹೂತ ಪ್ರಕರಣದಲ್ಲಿ ಎಸ್ಐಟಿ ತನಿಖೆಯ ತಡ...
12-11-25 11:06 pm
ಯಾರೂ ಗೂಟ ಹೊಡೆದು ಇರಕ್ಕಾಗಲ್ಲ, ಬಿಹಾರ ಚುನಾವಣೆ ಟೈಮ...
12-11-25 09:03 pm
ವಿಮಾನ ನಿಲ್ದಾಣದಲ್ಲಿ ನಮಾಜ್ ; ಅವರು ಎಲ್ಲಾದ್ರೂ ಶ್ರ...
10-11-25 07:17 pm
54 ಹೆಕ್ಟೇರ್ ಅರಣ್ಯ ನಾಶ ಭೀತಿ ; ಶರಾವತಿ ಪಂಪ್ಡ್ ಸ್...
10-11-25 02:58 pm
12-11-25 02:54 pm
HK News Desk
ದೆಹಲಿ ಘಟನೆ, ಆತ್ಮಹತ್ಯಾ ಬಾಂಬರ್ ಆಗಿರಲಿಲ್ಲ, ಆಕಸ್ಮ...
11-11-25 10:56 pm
Mangaluru Kasaragod Highway: ಮಂಗಳೂರು- ಕಾಸರಗೋಡ...
11-11-25 10:20 pm
ಕೆಂಪುಕೋಟೆ ಕಾರು ಬ್ಲಾಸ್ಟ್ ಪ್ರಕರಣ ; ಜೈಶ್ ಉಗ್ರರ ಲ...
11-11-25 03:28 pm
ಐ-20 ಕಾರು ಕೆಂಪುಕೋಟೆ ಸಿಗ್ನಲ್ ನಲ್ಲಿದ್ದಾಗ ಬ್ಲಾಸ್...
10-11-25 11:07 pm
12-11-25 06:56 pm
Mangalore Correspondent
Ullal Dargah Committee: ಉಳ್ಳಾಲ ದರ್ಗಾ ಕಮಿಟಿಯಲ್...
11-11-25 10:42 pm
Bomb blast in New Delhi, High Alert in Dakshi...
11-11-25 10:15 pm
Bhagvati Prem Ship, Mangalore: ಸುರತ್ಕಲ್ ; ಮರಳ...
08-11-25 08:31 pm
ಬೆಂಗಳೂರು- ಮಂಗಳೂರು ಹೈಸ್ಪೀಡ್ ಕಾರಿಡಾರ್ ; ಶಿರಾಡ...
07-11-25 10:58 pm
12-11-25 12:32 pm
Mangalore Correspondent
ಬೆಳ್ತಂಗಡಿ ಶ್ರೀರಾಮ ಕ್ರೆಡಿಟ್ ಸೊಸೈಟಿಯಲ್ಲಿ ಭಾರೀ ಅ...
11-11-25 06:33 pm
Fraud Dream Deal Mangalore, KSRTC: ತಿಂಗಳಿಗೆ ಒ...
09-11-25 10:27 pm
ಬಹುಕೋಟಿ ವಂಚಕ ರೋಷನ್ ಸಲ್ದಾನಗೆ ಸೇರಿದ 2.85 ಕೋಟಿ ಮ...
09-11-25 03:50 pm
ಕೋಮುದ್ವೇಷದ ಕೊಲೆ ; ಪ್ರತೀಕಾರಕ್ಕೆ ಪ್ರಚೋದಿಸಿ ಇನ್...
08-11-25 11:15 pm