ಬ್ರೇಕಿಂಗ್ ನ್ಯೂಸ್
27-11-23 09:08 pm Mangalore Correspondent ಕರಾವಳಿ
ಉಳ್ಳಾಲ, ನ.27: ಕೋಟೆಕಾರು ಗ್ರಾಮದ ಕಾರಣಿಕ ಕ್ಷೇತ್ರ ಕೊಂಡಾಣದಲ್ಲಿ ಭಂಡಾರಮನೆ ಇನ್ನೂ ಕ್ಷೇತ್ರದ ಆಸ್ತಿಯಾಗಿರದೆ ಖಾಸಗಿ ಮನೆತನದ ಹೆಸರಿನಲ್ಲಿದೆ. ಅದನ್ನು ಕ್ಷೇತ್ರದ ಹೆಸರಿಗೆ ಪರಭಾರೆ ಮಾಡಿಸುವುದಾಗಿ ಜಾಗದ ಮಾಲೀಕರು ಮಾತು ಕೊಟ್ಟಿದ್ದರೂ ತಮ್ಮ ಮಾತನ್ನು ಉಳಿಸಿಕೊಂಡಿಲ್ಲ. ಭಂಡಾರಮನೆ ಎಂಬುದು ಕ್ಷೇತ್ರದ ಹೆಸರಿನಲ್ಲಿಯೇ ನೋಂದಣಿ ಆಗಿರಬೇಕು ಎಂದು ವ್ಯವಸ್ಥಾಪನಾ ಸಮಿತಿ ನಿರ್ಧಾರ ಕೈಗೊಂಡಿದ್ದು ಆ ನಿಟ್ಟಿನಲ್ಲಿ ಪರ್ಯಾಯ ಮಾರ್ಗ ಕಂಡುಕೊಂಡಿದೆ ಎಂದು ಕೊಂಡಾಣ ಪಿಲಿಚಾಮುಂಡಿ ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೃಷ್ಣ ಶೆಟ್ಟಿ ತಾಮಾರು ಹೇಳಿದ್ದಾರೆ.
ತೊಕ್ಕೊಟ್ಟಿನ ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪೂರ್ವದ ಧರ್ಮಸ್ಥಳ, ಉತ್ತರದ ಕೊಲ್ಲೂರು, ದಕ್ಷಿಣದ ಕಾನತ್ತೂರು ಇರುವಂತೆಯೇ ಪಶ್ಚಿಮದ ಕಾರಣಿಕ ಕ್ಷೇತ್ರವಾಗಿ ಪ್ರಸಿದ್ಧಿ ಪಡೆದಿರುವ ಕೊಂಡಾಣ ಶ್ರೀ ಪಿಲಿಚಾಮುಂಡಿ, ಬಂಟ ಮತ್ತು ಮುಂಡತ್ತಾಯ ದೈವಸ್ಥಾನದ ಒಳಿತಿಗಾಗಿ ಒಂದೂವರೆ ವರ್ಷದ ಹಿಂದೆ ಪ್ರಶ್ನಾಚಿಂತನೆ ಇಡಲಾಗಿತ್ತು. ಅದರಲ್ಲಿ ಕಂಡುಬಂದ ದೋಷಗಳಿಗೆ ಶ್ರೀ ಕ್ಷೇತ್ರದ ಬ್ರಹ್ಮಶ್ರೀ ಉಚ್ಚಿಲತ್ತಾಯ ನೀಲೇಶ್ವರ ಪದ್ಮನಾಭ ತಂತ್ರಿಯವರ ಮಾರ್ಗದರ್ಶನದಲ್ಲಿ ಪರಿಹಾರ ಕಾರ್ಯ ಮಾಡಲಾಗಿದೆ. ತಂತ್ರಿಗಳ ಸಲಹೆಯಂತೆ ಆರು ತಿಂಗಳ ಹಿಂದೆ 22 ಪ್ರಮುಖ ಕಾಮಗಾರಿಗಳು ಸೇರಿದಂತೆ ಜೀರ್ಣೋದ್ಧಾರ, ಬ್ರಹ್ಮಕಲಶೋತ್ಸವ ನಡೆದಿದೆ.
ಸುಮಾರು ಹನ್ನೆರಡು ಕೋಟಿ ರೂ. ಮೌಲ್ಯದ ಜಾಗ ಕ್ಷೇತ್ರದ ಹೆಸರಿಗೆ ನೋಂದಣಿ ಆಗಿದೆ. ಆದರೆ ಭಂಡಾರಮನೆ ಕ್ಷೇತ್ರದ ಹೆಸರಿನಲ್ಲಿ ಇಲ್ಲದಿರುವುದು ಕೊರತೆಯಾಗಿದೆ. ಪ್ರತಿ ಮಂಗಳವಾರ ಹೂಹಾಕುವುದು, ಸಂಕ್ರಮಣ, ವಾರ್ಷಿಕ ಜಾತ್ರೆಗಳು ನಡೆಯುತ್ತದೆ. ದೈವ ಅದೆಲ್ಲವನ್ನು ಸ್ವೀಕರಿಸಿದರೂ ಭಂಡಾರಮನೆಯು ಕ್ಷೇತ್ರದ ಹೆಸರಿನಲ್ಲಿ ಇಲ್ಲದಿರುವುದರಿಂದ ಪರ್ಯಾಯವಾಗಿ ನೂತನ ಭಂಡಾರಮನೆ ನಿರ್ಮಾಣ ಕಾರ್ಯಕ್ಕೆ ವ್ಯವಸ್ಥಾಪನಾ ಸಮಿತಿ ಮುಂದಾಗಿದ್ದು ಅದಕ್ಕೆ ಈಗಾಗಲೇ ಕ್ಷೇತ್ರದ ಭಕ್ತರೂ ಆಗಿರುವ ದಾನಿಗಳು ಸ್ಥಳ ಖರೀದಿ ಮಾಡಿ ಕೊಟ್ಟಿದ್ದಾರೆ. ಅಷ್ಟಮಂಗಳ ಪ್ರಶ್ನೆ ಚಿಂತನೆಯಲ್ಲೂ ಜ್ಯೋತಿಷಿಗಳು ಆ ಸ್ಥಳ ನೂತನ ಭಂಡಾರಮನೆಗೆ ಸರಿ ಹೊಂದುತ್ತದೆ ಎಂದು ತಿಳಿಸಿದ್ದು ಮುಂದಿನ ನಡೆಗಳು ಮತ್ತು ಸಾಧಕ ಬಾಧಕಗಳ ಬಗ್ಗೆ ಅರಿಯುವ ಸಲುವಾಗಿ ನ.29ರ ಬುಧವಾರ ಶ್ರೀಕ್ಷೇತ್ರದಲ್ಲಿ ಒಂದು ದಿನದ ತಾಂಬೂಲ ಪ್ರಶ್ನೆ ಇಡಲಾಗಿದೆ ಎಂದು ಹೇಳಿದರು.
ದೇವಸ್ಯ ಮನೆತನದ ಗಡಿಕಾರ ರಾಘವೇಂದ್ರ ಭಟ್, ವ್ಯವಸ್ಥಾಪನಾ ಸಮಿತಿ ಸದಸ್ಯ ಐತಪ್ಪ ಪೂಜಾರಿ ಹಾಗೂ ದಿನಮಣಿ ರಾವ್ ಹಿರಿಯರಾದ ಅಜಯ್ ನಾಯ್ಕ್ ಹಾಗೂ ಜಯಂತ್ ಸಂಕೊಳಿಗೆ ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದರು.
Mangalore Ullal Kondan temple issue raise again in matter of land.
25-04-25 07:32 pm
Bangalore Correspondent
ಧರ್ಮದ ಹೆಸರು ಕೇಳಿ ಯಾರನ್ನೂ ಅಲ್ಲಿ ಕೊಂದಿಲ್ಲ, ಕಾಶ್...
25-04-25 07:30 pm
ಪಾಕಿಸ್ತಾನಕ್ಕಿಂತ ಮೊದಲು ದೇಶದ ಒಳಗಿರುವ ಸ್ಲೀಪರ್ ಸ...
25-04-25 06:30 pm
Pahalgam Attack, Shivamogga, Manjunath: ಉಗ್ರರ...
24-04-25 10:13 pm
Terror Attack, Bharat Bhushan wife: "ಸಣ್ಣ ಮಗು...
24-04-25 06:39 pm
26-04-25 02:00 pm
HK News Desk
Gokarna Beach, Drowning, Mbbs: ಗೋಕರ್ಣ ಸಮುದ್ರದ...
25-04-25 06:37 pm
ಪಹಲ್ಗಾಮ್ ದುಷ್ಕೃತ್ಯ ; ಐದು ವರ್ಷ ಕಾಲ ಪಾಕಿನಲ್ಲಿದ್...
25-04-25 02:54 pm
BSF jawan, Pakistan: ಗಡಿಯಲ್ಲಿ ಬಿಕ್ಕಟ್ಟು ; ಪಾಕ...
25-04-25 01:16 pm
Melted plastic, Kollam, Hazard: ವಲಸೆ ಕಾರ್ಮಿಕರ...
24-04-25 09:00 pm
25-04-25 10:49 pm
Giridhar Shetty, Mangalore Correspondent
Bhatkal News, Pakistani Origin Mangalore: ಭಟ್...
25-04-25 07:43 pm
Mangalore News, Facebook post, Pahalgam Terro...
24-04-25 11:08 pm
Pahalgam terror attack, udupi Vishwaprasanna...
23-04-25 10:23 pm
ಜಾತ್ಯತೀತರು ಉಗ್ರರಿಗೆ ಧರ್ಮ ಇಲ್ಲ ಎನ್ನುತ್ತಿದ್ದರು,...
23-04-25 09:45 pm
24-04-25 12:58 pm
Mangaluru Correspondent
Ullal Gang Rape, Mangalore, Police: ಗ್ಯಾಂಗ್ ರ...
23-04-25 01:03 pm
Shivamogga man killed in Pahalgam attack: ಕಾಶ...
22-04-25 07:37 pm
IPS Om Prakash Murder, Update: ನಿವೃತ್ತ ಡಿಜಿಪಿ...
22-04-25 03:26 pm
Om Prakash IPS Murder, Wife arrest: ನಿವೃತ್ತ ಡ...
21-04-25 01:03 pm