ಬ್ರೇಕಿಂಗ್ ನ್ಯೂಸ್
29-10-23 06:28 pm Mangalore Correspondent ಕರಾವಳಿ
ಮಂಗಳೂರು, ಅ.29: ಪೊಲೀಸ್ ಠಾಣೆಗಳಲ್ಲಿ ಏನೇನು ಆಗತ್ತೆ, ಪೊಲೀಸರು ಸಾರ್ವಜನಿಕರ ಜೊತೆ ಯಾವ ರೀತಿ ವರ್ತಿಸುತ್ತಾರೆ ಎಂದು ನಿಗಾ ಇಡುವುದಕ್ಕಾಗಿ ಬೆಂಗಳೂರಿನಲ್ಲಿ ಕಮಾಂಡ್ ಸೆಂಟರ್ ಮಾಡುತ್ತಿದ್ದೇವೆ. ಸಿಸಿಟಿವಿಗಳ ಮೂಲಕ ಇಡೀ ರಾಜ್ಯದಲ್ಲಿ ಪೊಲೀಸ್ ಠಾಣೆಗಳನ್ನು ನಿಗಾ ಇಡುತ್ತೇವೆ. ಈ ರೀತಿಯ ನಿಗಾ ಸೆಂಟರ್ ದೇಶದಲ್ಲೇ ಮೊದಲು ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಹೇಳಿದ್ದಾರೆ.
ವಾಮಂಜೂರಿನಲ್ಲಿ ಕಂಕನಾಡಿ ಗ್ರಾಮಾಂತರ ಠಾಣೆಯ ನೂತನ ಕಟ್ಟಡ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು. ಕಮಾಂಡ್ ಸೆಂಟರ್ ರೂಪುರೇಷೆ ರೆಡಿಯಾಗಿದ್ದು ಅದರ ಕಟ್ಟಡ ಕಾಮಗಾರಿ ಪ್ರಗತಿಯಲ್ಲಿದೆ. ಒಟ್ಟು 134 ಕೋಟಿ ವೆಚ್ಚದಲ್ಲಿ ಈ ಕೆಲಸ ಆಗುತ್ತಿದ್ದು ಶೀಘ್ರದಲ್ಲೇ ಕಾರ್ಯರೂಪಕ್ಕೆ ಬರಲಿದೆ ಎಂದರು. 1950ರಲ್ಲಿ ಕಂಕನಾಡಿ ಗ್ರಾಮಾಂತರ, 1959 ರಲ್ಲಿ ಬಜ್ಪೆ ಠಾಣೆ ಸ್ಥಾಪನೆಯಾಗಿತ್ತು. ಇವೆರಡಕ್ಕೂ ಸುದೀರ್ಘ ಅವಧಿಯ ಬಳಿಕ ಸುಸಜ್ಜಿತ ಸ್ವಂತ ಕಟ್ಟಡ ಲಭಿಸಿದೆ. ಪೊಲೀಸರು ಕೆಲವು ಕಡೆ ಕಠಿಣ ಪರಿಸ್ಥಿತಿಯಲ್ಲಿ ಕೆಲಸ ಮಾಡುವ ಸ್ಥಿತಿ ಇದೆ. ಎಲ್ಲ ಕಡೆಯೂ ಪೊಲೀಸ್ ಠಾಣೆಗಳನ್ನು ಆಧುನೀಕರಣ ಮಾಡುತ್ತಿದ್ದೇವೆ ಎಂದರು.



ಸಮಾಜ ಶಾಂತಿಯಿಂದ ಇದ್ದರೆ ಪೊಲೀಸ್ ಸ್ಟೇಶನ್ ಯಾಕೆ ಬೇಕು. ಒಂದು ಠಾಣೆ ಆಗಬೇಕಿದ್ದರೆ 300 ಅಪರಾಧ ಆಗಿರಬೇಕೆಂದು ಮಾನದಂಡ ಇದೆ. ಕೆಲವು ಶಾಸಕರು ಅಧಿವೇಶನದಲ್ಲಿ ತಮಗೆ ಪೊಲೀಸ್ ಠಾಣೆ ಬೇಕೆಂದು ಕೇಳಿದಾಗ, ಯಾಕೆ ಮಾರಾಯ್ರೆ ಅಂತ ಕೇಳಿದ್ದು ಇದೆ. ಅಪರಾಧ ಆಗದಂತೆ ನೋಡಿಕೊಂಡರೆ ಪೊಲೀಸ್ ಠಾಣೆ ಬೇಕಾಗಲ್ಲ ಎಂದಿದ್ದೇನೆ. ಆದರೆ ಪೊಲೀಸರು ಜಾಗೃತ ಇರುವುದರಿಂದ ಜನರು ನೆಮ್ಮದಿಯಲ್ಲಿದ್ದಾರೆ ಎಂದರು.
ಅಪರಾಧ ಪ್ರಮಾಣ ಕಳೆದ ಆರು ತಿಂಗಳಲ್ಲಿ ಕಡಿಮೆಯಾಗಿದೆ. ಆದರೆ ಸೈಬರ್ ಕ್ರೈಮ್ ರೇಟ್ ಹೆಚ್ಚುತ್ತಿದೆ. ಸಾವಿರಾರು ಸೈಬರ್ ಕ್ರೈಮ್ ದಿನಕ್ಕೆ ಆಗುತ್ತಿದೆ. ಜನರ ಬ್ಯಾಂಕ್ ಖಾತೆಗಳನ್ನು ಹ್ಯಾಕ್ ಮಾಡಿ ಹಣ ತಗೊಳ್ಳುತ್ತಿದ್ದಾರೆ. ಇದಕ್ಕಾಗಿ ಎಲ್ಲ ಠಾಣೆಗಳಲ್ಲಿಯೂ ಸೈಬರ್ ಅಪರಾಧಗಳನ್ನು ದಾಖಲಿಸಲು ಅವಕಾಶ ನೀಡಲಾಗಿದೆ.
ರಾಜ್ಯದಲ್ಲಿ ಬಿಪಿಎಲ್ ಕೆಳಗಿನ ಬಡತನ ಇರುವವರು ನೂರಕ್ಕೆ 80 ಪರ್ಸೆಂಟ್ ಇದೆಯೆಂದು ದಾಖಲೆ ಹೇಳುತ್ತಿದೆ. ಬೇರೆ ರಾಜ್ಯಗಳಿಗೆ ಹೋಲಿಸಿದಲ್ಲಿ ಕರ್ನಾಟಕ ತುಂಬ ಮುಂದುವರಿದಿದೆ. ದೇಶದಲ್ಲಿ ಬಡತನ ಪ್ರಮಾಣ 38 ಪರ್ಸೆಂಟ್ ಇರೋದು. ಕರ್ನಾಟಕದಲ್ಲಿ ಮಾತ್ರ ಯಾಕೆ ಇಷ್ಟೊಂದು ಹೆಚ್ಚಿದೆ ಎನ್ನುವುದರ ಬಗ್ಗೆ ಪರಿಶೀಲನೆ ಮಾಡಲು ಹೇಳಿದ್ದೇನೆ ಎಂದ ಪರಮೇಶ್ವರ್, ಕೇಂದ್ರ ಸರ್ಕಾರದಿಂದ ಬರ ಪರಿಹಾರವಾಗಿ 17 ಸಾವಿರ ಕೋಟಿ ರೂ. ಕೇಳಿದ್ದೇವೆ. ರಾಜ್ಯದಲ್ಲಿ ಬರ ಎದುರಾಗಿದ್ದು ಜನರ ಬವಣೆಯನ್ನು ನೀಗಿಸಲು ಅನುದಾನ ಅಗತ್ಯವಿದೆ ಎಂದರು.
ವಿಧಾನಸಭೆ ಸ್ಪೀಕರ್ ಯು.ಟಿ ಖಾದರ್, ಶಾಸಕ ಭರತ್ ಶೆಟ್ಟಿ, ಮಾಜಿ ಸಚಿವ ರಮಾನಾಥ ರೈ, ಎಂಎಲ್ಸಿಗಳಾದ ಮಂಜುನಾಥ ಭಂಡಾರಿ, ಹರೀಶ್ ಕುಮಾರ್, ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್, ಜಿಲ್ಲಾಧಿಕಾರಿ ಮುಲೈ ಮುಗಿಲನ್ ಉಪಸ್ಥಿತರಿದ್ದರು.
Command centre to monitor all police stations in Karnataka says Home Minister Parameshwara in Mangalore. The government plans to launch newly built Central Command Centre in Bengaluru within four months. This center will monitor functioning of all police stations in the state with help of modern technology and provide people friendly policing system which is a unique system in the entire country, said Home Minister Dr G Parmeshwar.
27-06-26 08:31 pm
HK News Staffer
ಅಂಬಾನಿ ಕೊಟ್ಟ 900 ಕೋಟಿ ದೇಣಿಗೆಗೂ ಲೆಕ್ಕ ಇಲ್ಲ, ಈಗ...
27-06-26 04:21 pm
ಆರ್ಎಸ್ಎಸ್ ಗಲಿಬಿಲಿಗೊಂಡರೆ ಬಿಜೆಪಿ ಬುಸುಗುಡುತ್ತದ...
26-06-26 08:30 pm
ಬಿಡದಿಯಲ್ಲಿ ರೈತರ ವಿರುದ್ಧವಾಗಿ ಟೌನ್ಶಿಪ್ ಕಟ್ಟುವ...
26-06-26 05:10 pm
ಇಷ್ಟೆಲ್ಲಾ ಅಲ್ಲೋಲ ಕಲ್ಲೋಲಕ್ಕೆ ಶೋಭಾ ಕರಂದ್ಲಾಜೆ ನೇ...
25-06-26 09:10 pm
27-06-26 09:10 pm
HK News Staffer
40 ಸೆಕೆಂಡ್ ನಲ್ಲಿ ಎರಡು ಬಾರಿ ಭೂಕಂಪ ; ತತ್ತರಿಸಿ ಹ...
25-06-26 12:13 pm
ಕೂಲ್ ಸಿಟಿ ಯುರೋಪಿನಲ್ಲೀಗ ಬಿಸಿಲ ಹೊಡೆತ ; ಫ್ರಾನ್ಸ್...
24-06-26 01:51 pm
ಮಾಹಿತಿ ಹಕ್ಕು ನಿಯಮಗಳಿಗೆ ಮಹಾರಾಷ್ಟ್ರ ಸರ್ಕಾರ ತಿದ್...
23-06-26 10:47 pm
ಟಿಎಂಸಿಯಲ್ಲಿ ರಾಜಕೀಯ ಭೂಕಂಪ ; ಮಮತಾ ಬ್ಯಾನರ್ಜಿ ಅಧ...
23-06-26 12:21 pm
27-06-26 02:44 pm
HK News Staffer
Rss ಸಂಘಟನೆಯನ್ನು ರಿಜಿಸ್ಟರ್ ಮಾಡಿದ್ರೆ ಒಳ್ಳೇದು ;...
26-06-26 09:42 pm
ಸಾಂಪ್ರದಾಯಿಕ ಕನ್ನಡ ಎಂಎ ಪದವಿಗೆ ಆಧುನಿಕ ಟಚ್; ಸಂತ...
26-06-26 08:33 pm
ಡಿಕೆಶಿ ಜೊತೆ ಯಾವುದೇ ವ್ಯಾವಹಾರಿಕ ಸಂಬಂಧವಿಲ್ಲ, ಅಪಪ...
26-06-26 02:14 pm
ಮಂಗಳೂರು, ಮೈಸೂರು ಸೇರಿ ರಾಜ್ಯದ 10 ನಗರಗಳಿಗೆ ಇಲೆಕ್...
25-06-26 10:56 pm
27-06-26 08:01 pm
HK News Staffer
ಬೆಂಗಳೂರಿನಿಂದ ಪ್ರಿಯತಮೆಯ ಅಪಹರಣ ; ಅಂಕೋಲಾಕ್ಕೆ ಹೋಗ...
27-06-26 04:23 pm
ಬೆಂಗಳೂರಿನಲ್ಲಿ ಅಕ್ರಮ ಹಣದ ಭಾರಿ ಬೇಟೆ ; ಕುರುಬರಹಳ್...
27-06-26 04:19 pm
ಮಂತ್ರಾಲಯ ಯಾತ್ರೆ ಮಧ್ಯೆ ಯಮನಂತೆ ನುಗ್ಗಿದ ಲಾರಿ! ಡಿ...
27-06-26 11:46 am
Mangalore, Police, criminial escapes: ಪಾಂಡೇಶ್...
27-06-26 10:54 am