ಬ್ರೇಕಿಂಗ್ ನ್ಯೂಸ್
23-10-23 03:15 pm Udupi Correspondent ಕರಾವಳಿ
ಭಟ್ಕಳ, ಅ 23: ಡೆಂಘೀ ಜ್ವರದಿಂದ ಬಳಲುತ್ತಿದ್ದ ಯುವಕ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಭಟ್ಕಳದಲ್ಲಿ ನಡೆದಿದೆ. ಉಡುಪಿಯ ಖಾಸಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿಕೊಂಡು ಬರುವ ವೇಳೆ ಯುವಕ ಮೃತಪಟ್ಟಿದ್ದಾನೆ. ಮೃತ ಯುವಕನನ್ನು ಮಾವಿನಕುರ್ವ ಗ್ರಾಮ ಪಂಚಾಯತ್ ವ್ಯಾಪ್ತಿಯ ತಲಗೋಡ ನಿವಾಸಿ ಪ್ರಜ್ವಲ ಖಾರ್ವಿ(24) ಎಂದು ಗುರುತಿಸಲಾಗಿದೆ.
ಮೃತ ಪ್ರಜ್ವಲ್ ಖಾರ್ವಿ ಇಲ್ಲಿನ ಸಾಗರ ಶ್ರೀ ಬೋಟ್ನಲ್ಲಿ ಕೆಲಸ ಮಾಡುತ್ತಿದ್ದನು. ಕಳೆದ ಒಂದು ವಾರದಿಂದ ಪ್ರಜ್ವಲ್ ಡೆಂಘೀ ಜ್ವರದಿಂದ ಬಳಲುತ್ತಿದ್ದ. ಈ ಸಂಬಂಧ ಅಕ್ಟೋಬರ್ 19ರಂದು ಭಟ್ಕಳ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದನು. ಜ್ವರ ಹೆಚ್ಚಾದ ಹಿನ್ನೆಲೆ ಹೆಚ್ಚಿನ ಚಿಕಿತ್ಸೆಗಾಗಿ ಕುಂದಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ 2 ದಿನಗಳ ಕಾಲ ಚಿಕಿತ್ಸೆ ಪಡೆದ ಬಳಿಕ ಯುವಕನ ಆರೋಗ್ಯದಲ್ಲಿ ಚೇತರಿಕೆ ಕಾಣದ ಹಿನ್ನೆಲೆ ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಇಲ್ಲಿಂದ ಡಿಸ್ಚಾರ್ಜ್ ಮಾಡಿಕೊಂಡು ಭಟ್ಕಳಕ್ಕೆ ಬರುವ ವೇಳೆ ಯುವಕ ಮಾರ್ಗ ಮಧ್ಯದಲ್ಲಿ ಸಾವನಪ್ಪಿದ್ದಾನೆ ಎಂದು ತಿಳಿದು ಬಂದಿದೆ.
ಡೆಂಘೀ ತಾಣವಾಗಿರುವ ಭಟ್ಕಳ ಬಂದರು:
ಕಳೆದ ಜೂನ್, ಜುಲೈನಿಂದ ತಿಂಗಳಲ್ಲಿ ಬಂದರು ಸುತ್ತಮುತ್ತಲಿನ ಸ್ವಚ್ಛತೆಗಾಗಿ ಟೆಂಡರ್ ಕರೆಯಲಾಗಿತ್ತು. ಆಗಸ್ಟ್ ತಿಂಗಳಲ್ಲಿ ಬಂದರು ಮೀನುಗಾರಿಕೆ ಸೊಸೈಟಿ ಈ ಟೆಂಡರ್ ಪಡೆದಿದ್ದು, ಮೀನುಗಾರಿಕಾ ಇಲಾಖೆ ಟೆಂಡರ್ ನೀಡದೇ ಇರುವ ಕಾರಣ ಬಂದರು ಸುತ್ತಮುತ್ತಲಿನ ನೀರು ನಿಂತು ದುರ್ಗಂಧ ಬೀರುತ್ತಿದೆ. ಸ್ವಚ್ಛತೆಯನ್ನು ಕಡೆಗಣಿಸಿರುವ ಕಾರಣ ಈ ಭಾಗದಲ್ಲಿ ಹೆಚ್ಚು ಡೆಂಘೀ ಪ್ರಕರಣ ಕಂಡು ಬಂದಿದೆ.
ಕೇವಲ 20 ದಿನದಲ್ಲಿ 1404 ಪ್ರಕರಣ ;
ಪ್ರಸಕ್ತ ವರ್ಷದಲ್ಲಿ ಅ.1ರ ವೇಳೆಗೆ ಬೆಂಗ ಳೂರು ನಗರದಲ್ಲಿ 5,767 ಪ್ರಕರಣ ವರದಿ ಯಾಗಿದ್ದವು. ಬೆಂಗಳೂರು ನಗರ ಹೊರತು ಪಡಿಸಿ ಉಳಿದ ಜಿಲ್ಲೆಗಳಲ್ಲಿ 4,505 ಪ್ರಕರಣ ವರದಿಯಾಗಿದ್ದೆವರು. ಈ ಪ್ರಕರಣಗಳ ಸಂಖ್ಯೆ ಅ.20ರ ವೇಳೆಗೆ ಬೆಂಗಳೂರು ನಗರದಲ್ಲಿ 6,139 ಆಗಿದ್ದು, 372 ಪ್ರಕರಣ ಹೆಚ್ಚಾಗಿದೆ. ಇನ್ನು ರಾಜ್ಯದ ಇತರೆಡೆ 4,505 ರಷ್ಟಿದ್ದ ಪ್ರಕರಣಗಳು 5,571ಕ್ಕೆ ಏರಿಕೆಯಾಗಿದ್ದು, 20 ದಿನಗಳಲ್ಲಿ 1,066 ಮಂದಿಗೆ ಡೆಂಘೀ ಸೋಂಕು ದೃಢಪಟ್ಟಿದೆ. ಇವು ಆರೋಗ್ಯ ಇಲಾಖೆಗೆ ವೈದ್ಯರು ವರದಿ ಮಾಡಿರುವ ಅಂಕಿ-ಅಂಶಗಳಾಗಿದ್ದು, ವಾಸ್ತವವಾಗಿ ಇನ್ನೂ ಹೆಚ್ಚಿನ ಪ್ರಕರಣಗಳು ವರದಿಯಾಗಿರುತ್ತವೆ. ಹೀಗಾಗಿ ಸಾರ್ವಜನಿಕರು ಈ ಬಗ್ಗೆ ಎಚ್ಚರ ವಹಿಸಬೇಕು ಎಂದು ಆರೋಗ್ಯ ಇಲಾಖೆ ಸಾಂಕ್ರಾಮಿಕ ರೋಗಗಳ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.
ರೋಗದ ಲಕ್ಷಣಗಳೇನು?
ಈಡಿಸ್ ಈಜಿಪ್ಟ್ ಎಂಬ ಸೊಳ್ಳೆಯಿಂದ ಡೆಂಘೀ ಜ್ವರ ಹರಡುತ್ತದೆ. ಸೊಳ್ಳೆ ಕಚ್ಚಿದ 4-5 ದಿನಗಳಲ್ಲಿ ರೋಗ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಮೈಕೈ ನೋವು, ಕೀಲು ನೋವು, ವಿಪರೀತ ಜ್ವರ, ರಕ್ತದಲ್ಲಿ ಪ್ಲೇಟ್ಲೆಟ್ ಕಣಗಳ ಪ್ರಮಾಣ ಕುಸಿಯುವಿಕೆ ಪ್ರಮುಖ ಲಕ್ಷಣಗಳು. ಪ್ಲೇಟೈಟ್ ಪ್ರಮಾಣ ಗಂಭೀರ ಪ್ರಮಾಣದಲ್ಲಿ ಕಡಿಮೆಯಾದರೆ ರೋಗಿಯ ಸಾವಿಗೂ ಕಾರಣವಾಗಬಹುದು.
ಎಚ್ಚರ ವಹಿಸುವುದು ಹೇಗೆ?
A youth, who was suffering from dengue fever, died at Bhatkal in the district. The youth died while being discharged from a private hospital in Udupi. The deceased has been identified as Prajwal Kharvi (24), a resident of Talagoda under Manikurva gram panchayat.
27-04-25 09:22 pm
HK News Desk
Pakistani Nationals Kalaburagi, Police Commis...
27-04-25 07:13 pm
Ex- ISRO chief, K Kasturirangan: ಎನ್ಇಪಿ ಶಿಕ್ಷ...
25-04-25 07:32 pm
ಧರ್ಮದ ಹೆಸರು ಕೇಳಿ ಯಾರನ್ನೂ ಅಲ್ಲಿ ಕೊಂದಿಲ್ಲ, ಕಾಶ್...
25-04-25 07:30 pm
ಪಾಕಿಸ್ತಾನಕ್ಕಿಂತ ಮೊದಲು ದೇಶದ ಒಳಗಿರುವ ಸ್ಲೀಪರ್ ಸ...
25-04-25 06:30 pm
27-04-25 08:42 pm
HK News Desk
Pak, Website Hacked, Indian Army : ಅಲ್ಲಾ ನಮ್ಮ...
27-04-25 07:38 pm
ಪಾಕ್ ಗಡಿಯಲ್ಲಿ ಯುದ್ಧ ಕಾರ್ಮೋಡ ; ಗಡಿ ಜಿಲ್ಲೆಗಳಲ್ಲ...
27-04-25 06:35 pm
ಸಿಂಧು ನದಿಯನ್ನು ತಡೆದರೆ ರಕ್ತ ಹರಿಯುತ್ತದೆ ; ಮಾಜಿ...
26-04-25 08:21 pm
Iran Blast: ಇರಾನ್ ಬಂದರಿನಲ್ಲಿ ಭಯಾನಕ ಸ್ಫೋಟ ; 4...
26-04-25 07:46 pm
27-04-25 11:09 pm
Mangalore Correspondent
Murali krishna, puttur, FIR: ಪೆಟ್ರೋಲ್ ಪಂಪ್ ವ್...
27-04-25 06:25 pm
Vhp, Mangalore, Railway Exam, Janivara: ರೈಲ್ವ...
27-04-25 05:28 pm
Harish Poonja, U T Khader, Mangalore: ಹರೀಶ್ ಪ...
27-04-25 01:00 pm
KMF Elections 2025, Belupu Deviprasad Shetty:...
26-04-25 08:03 pm
27-04-25 10:59 pm
Mangalore Correspondent
Mangalore Crime, Sexual Harrasment: ಸರ್ಕಾರಿ ಸ...
24-04-25 12:58 pm
Ullal Gang Rape, Mangalore, Police: ಗ್ಯಾಂಗ್ ರ...
23-04-25 01:03 pm
Shivamogga man killed in Pahalgam attack: ಕಾಶ...
22-04-25 07:37 pm
IPS Om Prakash Murder, Update: ನಿವೃತ್ತ ಡಿಜಿಪಿ...
22-04-25 03:26 pm