ಬ್ರೇಕಿಂಗ್ ನ್ಯೂಸ್
11-11-20 05:49 pm Mangalore Correspondent ಕರಾವಳಿ
ಮಂಗಳೂರು, ನವೆಂಬರ್ 11 : ಪೊಲೀಸ್, ಆರೋಗ್ಯ, ಅಗ್ನಿಶಾಮಕ ಸೇರಿದಂತೆ ಯಾವುದೇ ತುರ್ತು ಸೇವೆಗಳಿಗೆ ದೇಶಕ್ಕೊಂದೇ ನಂಬರ್ ಜಾರಿಗೆ ಬಂದಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ವಿನೂತನ ಸೇವೆ ಇನ್ನೆರಡೇ ದಿನದಲ್ಲಿ ಜಾರಿಗೆ ಬರಲಿದೆ. ಈ ಯೋಜನೆಗೆ ಸಾರ್ವಜನಿಕರಿಂದ ಉತ್ತಮ ಪ್ರಶಂಸೆ ವ್ಯಕ್ತವಾಗಿದೆ.
ಪ್ರಧಾನಿ ನರೇಂದ್ರ ಮೋದಿಯವರ ದೇಶಕ್ಕೊಂದೇ ನಂಬರ್ ಪರಿಕಲ್ಪನೆ ಇದಾಗಿದ್ದು, ಬೆಂಕಿ ಅವಘಡ, ಅನಾರೋಗ್ಯ, ನೀರಿಗೆ ಬಿದ್ದಿರುವುದು, ಕಾನೂನು ಸುವ್ಯವಸ್ಥೆ, ಮಹಿಳಾ, ಮಕ್ಕಳ, ಹಿರಿಯ ನಾಗರಿಕರ ಹಾಗೂ ಇನ್ನಿತರ ಯಾವುದೇ ತುರ್ತು ಸಮಸ್ಯೆಗಳಿದ್ದರೂ ಸಾರ್ವಜನಿಕರು 112 ನಂಬರ್ಗೆ ಡಯಲ್ ಮಾಡಬಹುದಾಗಿದೆ. ಹಿಂದೆ ಪೊಲೀಸ್, ಅಗ್ನಿಶಾಮಕ, ಆಂಬುಲೆನ್ಸ್ಗೆ ಪ್ರತ್ಯೇಕ ನಂಬರ್ಗಳಿದ್ದು ಈಗ ಎಲ್ಲವೂ ಒಂದೇ ನಂಬರಿನಡಿ ಬರಲಿದೆ.
ಸೆಂಟ್ರಲೈಝ್ ಸಿಸ್ಟಮ್
112 ನಂಬರಿಗೆ ಕರೆ ಮಾಡಿದಾಗ ಬೆಂಗಳೂರಿನಲ್ಲಿ ಕಂಟ್ರೋಲ್ ರೂಮ್ಗೆ ಸಂದೇಶ ರವಾನೆಯಾಗುತ್ತದೆ. ಬೆಂಗಳೂರಿನಲ್ಲಿ ಪರಿಣತ, ತರಬೇತಿ ಪಡೆದ ಕಾಲ್ಸೆಂಟರ್ ಸಿಬ್ಬಂದಿ ಕರೆಯ ಮಾಹಿತಿಯನ್ನು ಕಲೆ ಹಾಕುತ್ತಾರೆ. ಬಳಿಕ ಕರೆ ಮಾಡಿದವರ ಲೊಕೇಷನ್ ಟ್ರ್ಯಾಪ್ ಮಾಡಿ ಮ್ಯಾಪ್ ಸಂಗ್ರಹಿಸಲಾಗುತ್ತದೆ. ಕರೆ ಮಾಡಿದ ವ್ಯಕ್ತಿ ಹೇಳಿದ ಸಮಸ್ಯೆಯ ಸಂಪೂರ್ಣ ಮಾಹಿತಿ ಪಡೆದ ಬಳಿಕ ಸಂಬಂಧಪಟ್ಟ ಕಂಟ್ರೋಲ್ ರೂಂ, ಪೊಲೀಸ್, ಅಂಬುಲೆನ್ಸ್, ಅಗ್ನಿಶಾಮಕ ಸಿಬ್ಬಂದಿಗೆ ವಿಷಯ ರವಾನಿಸಲಾಗುತ್ತದೆ.

ಎಸ್ಪಿ ವ್ಯಾಪ್ತಿಯಲ್ಲಿ 10 ವಾಹನ
ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿ ವ್ಯಾಪ್ತಿಯಲ್ಲಿ 10 ಪೊಲೀಸ್ ವಾಹನಗಳನ್ನು ಇದಕ್ಕಾಗಿ ನಿಯೋಜಿಸಲಾಗಿದ್ದು, ಈ ವಾಹನಗಳಲ್ಲಿ ಅತ್ಯಾಧುನಿಕ ವ್ಯವಸ್ಥೆಯ ಟ್ಯಾಬ್ ಅಳವಡಿಕೆ ಮಾಡಲಾಗುತ್ತದೆ. ವೋಲಾ, ಉಬರ್ ಮಾದರಿಯಲ್ಲೇ ಕಂಟ್ರೋಲ್ ರೂಂನಿಂದ 112 ನಂಬರಿನಲ್ಲಿ ಬಂದ ದೂರಿನ ಸಂದೇಶ, ರೂಟ್ ಮ್ಯಾಪ್ ಸಂಬಂಧಪಟ್ಟ ಎಲ್ಲ ಮಾಹಿತಿ ಲೋಕೇಷನ್ಗೆ ಹತ್ತಿರವಿರುವ ವಾಹನಕ್ಕೆ ರವಾನೆಯಾಗುತ್ತದೆ.
ಕ್ಷಿಪ್ರ ಕಾರ್ಯಾಚರಣೆ
ಮಾಹಿತಿ ಪಡೆದ ಕೂಡಲೇ ವಾಹನ ಘಟನಾ ಸ್ಥಳಕ್ಕೆ ತೆರಳಬೇಕು. ಆ ಮೇಲೆ ದೂರಿಗೆ ಸಂಬಂಧಿಸಿ ತಕ್ಷಣ ಪರಿಹಾರ ಕಾರ್ಯದ ಬಗ್ಗೆ ಸ್ಥಳೀಯ ಸ್ಟೇಷನ್, ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು. ದಿನದ 24 ಗಂಟೆಯೂ ಈ ಸೇವೆ ಲಭ್ಯವಿದೆ. ಯಾವುದೇ ಇಲಾಖೆಯ ತುರ್ತು ಸೇವೆಯಾದರೂ ಪೊಲೀಸರು ಮಾತ್ರ ಅಲ್ಲಿಗೆ ಹಾಜರಾಗಲೇಬೇಕು.
ತುರ್ತು ಕರೆಗೆ ಸೀಮಿತ
112 ಕರೆಯ ದೂರಿಗೆ ಸ್ಪಂದಿಸಲು ನಿಗದಿಪಡಿಸಿದ ವಾಹನವನ್ನು ಬೇರೆ ಯಾವುದಕ್ಕೂ ಬಳಕೆ ಮಾಡುವಂತಿಲ್ಲ. ಈ ವಾಹನಗಳು ಯಾವಾಗಲೂ ಹೈ-ಅಲರ್ಟ್ ಸ್ಥಿತಿಯಲ್ಲಿರಬೇಕು. ಬಂಟ್ವಾಳ ಸಬ್ಡಿವಿಷನ್ (ಬಂಟ್ವಾಳ, ವಿಟ್ಲ, ಬೆಳ್ತಂಗಡಿ) 5 ಹಾಗೂ ಪುತ್ತೂರು ಸಬ್ಡಿವಿಷನ್ (ಪುತ್ತೂರು, ಸುಳ್ಯ, ಕಡಬ) 5 ವಾಹನ ನಿಯೋಜಿಸಲಾಗಿದೆ ಎಂದು ಎಸ್ಪಿ ತಿಳಿಸಿದ್ದಾರೆ.
ತುರ್ತು ಸೇವೆಗೆ 112 ಸಂಖ್ಯೆಗೆ ಡಯಲ್ ಮಾಡಿ, ಪ್ಯಾನಿಕ್ ಅಲರ್ಟ್ಗಾಗಿ ಸಾಮಾನ್ಯ ಫೋನಿನಲ್ಲಿ 5 ಅಥವಾ 9 ಸಂಖ್ಯೆಯನ್ನು ದೀರ್ಘ ಪ್ರೆಸ್ ಮಾಡಬೇಕು. ಮೊಬೈಲ್ನಲ್ಲಾದರೆ ಪವರ್ ಬಟನನ್ನು ಮೂರು ಬಾರಿ ವೇಗವಾಗಿ ಪ್ರೆಸ್ ಮಾಡುವುದು Emergency Response Support System (ERSS) ವೆಬ್ಸೈಟ್ ಮೂಲಕ ವಿನಂತಿ ಕಳುಹಿಸಬಹುದು. Emergency Report Centre (ERC)ಗೆ ಇಮೇಲ್ ಕಳುಹಿಸಬಹುದು. ''112" India mobile app, ಮೊಬೈಲ್ ಆಪ್ ಮೂಲಕ ವಿನಂತಿ ಕಳುಹಿಸಬಹುದು ಎಂದು ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.
112 Single Emergency helpline number to be launched in Dakshina Kannada in a period of two days. Single emergency helpline number '112' for immediate assistance services from the police (100), fire (101), health (108) and women (1090).
05-11-25 06:15 pm
Bangalore Correspondent
ಮಾಜಿ ಸಚಿವ ಎಚ್.ವೈ ಮೇಟಿ ಬೆಂಗಳೂರಿನ ಆಸ್ಪತ್ರೆಯಲ್ಲಿ...
04-11-25 04:38 pm
ಸಚಿವ ಸತೀಶ್ ಜಾರಕಿಹೊಳಿ ದಿಢೀರ್ ದೆಹಲಿಗೆ ; ಕೆಪಿಸಿಸ...
03-11-25 05:17 pm
ಕಣ್ಣೂರಿನ ಪಯ್ಯಂಬಲಂ ಬೀಚ್ ನಲ್ಲಿ ಸಮುದ್ರಕ್ಕಿಳಿದ ಬೆ...
02-11-25 11:09 pm
ಆರೆಸ್ಸೆಸ್ನವರಷ್ಟು ಹೇಡಿಗಳು ಯಾರೂ ಇಲ್ಲ, ಅವರ್ಯಾಕೆ...
01-11-25 09:33 pm
03-11-25 01:13 pm
HK News Desk
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
ಕೇರಳದಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ಒಬಿ...
02-11-25 05:13 pm
ಜೆಡ್ಡಾದಿಂದ ಹೈದರಾಬಾದ್ ಬರುತ್ತಿದ್ದ ವಿಮಾನದಲ್ಲಿ ಬ...
01-11-25 07:27 pm
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
05-11-25 07:49 pm
Mangalore Correspondent
ಅಕ್ರಮ ಗೋಹತ್ಯೆ, ಮಾಂಸಕ್ಕೆ ಬಳಕೆ ; ಆರೋಪಿಯ ಉಳ್ಳಾಲದ...
05-11-25 03:35 pm
ಮಂಗಳೂರು ಕಮಿಷನರ್ ಸುಧೀರ್ ರೆಡ್ಡಿ ಹೆಸರಿನಲ್ಲಿ ನಕಲಿ...
04-11-25 10:51 pm
Mangalore Police, Panambur Beach: ಗಂಡ - ಹೆಂಡತ...
04-11-25 08:37 pm
ಅಬಕಾರಿ ಇಲಾಖೆಯಲ್ಲಿ ವ್ಯಾಪಕ ಭ್ರಷ್ಟಾಚಾರ, ಹಣಕ್ಕಾಗಿ...
04-11-25 06:15 pm
05-11-25 05:27 pm
Bangalore Correspondent
ನಕಲಿ ಷೇರು ಮಾರುಕಟ್ಟೆ ಮೇಲೆ ಹೂಡಿಕೆ ; ಫೇಸ್ಬುಕ್ ಗೆ...
04-11-25 02:11 pm
ಟೋಪಿ ನೌಫಾಲ್ ಕೊಲೆಯಲ್ಲ, ರೈಲು ಡಿಕ್ಕಿ ಹೊಡೆದು ಸಾವು...
03-11-25 12:33 pm
ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಚಿನ್ನ ಕಳವು ಪ್ರಕ...
01-11-25 07:25 pm
Rowdy Topi Naufal Murder, Mangalore: ಮಂಗಳೂರಿನ...
01-11-25 03:31 pm