ಬ್ರೇಕಿಂಗ್ ನ್ಯೂಸ್
24-09-23 11:27 pm Mangalore Correspondent ಕರಾವಳಿ
ಮಂಗಳೂರು, ಸೆ.24: ರಾಧಾಸುರಭಿ ಗೋಮಂದಿರ, ರಾಷ್ಟ್ರೀಯ ಗೋಸೇವಾ ಸಂಸ್ಥಾನ, ಗೋಸೇವಾ ಗತಿವಿಧಿ ಕರ್ನಾಟಕ ಇವುಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡ ಗೋರಥಯಾತ್ರೆಗೆ ಪುದು ಗ್ರಾಮದ ಬ್ರಹ್ಮಗಿರಿ, ಗೋವಿನ ತೋಟದಲ್ಲಿ ಚಾಲನೆ ನೀಡಲಾಯಿತು. ಗೋಶಾಲೆಯ ಭಕ್ತಿಭೂಷಣದಾಸ್ ಪ್ರಭೂಜಿಯವರ ಮಾರ್ಗದರ್ಶನದಲ್ಲಿ ದೇಸಿ ಗೋತಳಿಯ ಬಗ್ಗೆ ಜಾಗೃತಿ ಮೂಡಿಸುವುದಕ್ಕಾಗಿ ರಥಯಾತ್ರೆ ಹಮ್ಮಿಕೊಳ್ಳಲಾಗಿದೆ.
ಭಾನುವಾರ ಬೆಳಗ್ಗೆ ಗೋವಿಗೆ ಮತ್ತು ಶ್ರೀಕೃಷ್ಣನಿಗೆ ಪೂಜೆ ಸಲ್ಲಿಸಿ ರಥಕ್ಕೆ ಚಾಲನೆ ನೀಡಲಾಯಿತು. ವೃಂದಾವನದ ರಮೇಶ್ ಗೋಸ್ವಾಮಿ ಉಪಸ್ಥಿತಿಯಲ್ಲಿ ಗೋಪೂಜೆ ಮತ್ತು ಗೋಕಥೆಯನ್ನು ಪಾರಾಯಣ ಮಾಡಲಾಯಿತು. ನ.14ರಿಂದ 22ರ ವರೆಗೆ ನಡೆಯಲಿರುವ ಶ್ರೀಮದ್ಭಾಗವತ ಕಥಾ ಪಾರಾಯಣ ಸಪ್ತಾಹ ಮಹಾಯಜ್ಞ ಮತ್ತು ಗೋ ನವರಾತ್ರಿ ಉತ್ಸವದ ಪ್ರಚಾರಾರ್ಥ ಗೋರಥಯಾತ್ರೆ ಹಮ್ಮಿಕೊಳ್ಳಲಾಗಿದ್ದು, ದಕ್ಷಿಣ ಕನ್ನಡ, ಕೊಡಗು ಮತ್ತು ಉಡುಪಿ ಜಿಲ್ಲೆಯಲ್ಲಿ ರಥ ಸಂಚರಿಸಲಿದೆ. ರಥಕ್ಕೆ ವಿಶೇಷ ಪೂಜೆಗೈದು ಚಾಲನೆ ನೀಡಿದ್ದು, ಈ ವೇಳೆ ಯಜ್ಞ ಸಮಿತಿಯ ಅಧ್ಯಕ್ಷ ಬೃಜೇಶ್ ಚೌಟ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.



ಸೆ.25ರಂದು ಬೆಳಗ್ಗೆ 7ಕ್ಕೆ ಗೋರಥವು ಮೂಡುಬಿದಿರೆಗೆ ತಲುಪಲಿದ್ದು, ಅಲ್ಲಿನ ವೆಂಕಟರಮಣ ದೇವಸ್ಥಾನ ವಠಾರದಲ್ಲಿ ಗೋಪೂಜೆ ಮತ್ತು ಗೋಕಥೆ ಪಾರಾಯಣ ನಡೆಯಲಿದೆ. ಬೆಳಗ್ಗೆ 10 ಗಂಟೆಗೆ ಮಿಜಾರು ಆಳ್ವಾಸ್ ಇಂಜಿನಿಯರಿಂಗ್ ಕಾಲೇಜು, ಆನಂತರ ಮೂಡುಬಿದ್ರೆ ತಾಲೂಕಿನ ವಿವಿಧ ಶಾಲೆ, ಕಾಲೇಜುಗಳಿಗೆ ತೆರಳಲಿದೆ. ಚಲಿಸುವ ಕಾಮಧೇನು ಆಗಿರುವ ದೇಸಿ ಗಿಡ್ಡ ತಳಿ ಗೋವನ್ನು ರಥದಲ್ಲಿರಿಸಿ ಅದರ ಮಹತ್ವವನ್ನು ಸಾರುವ ಉದ್ದೇಶ ರಥಯಾತ್ರೆಯದ್ದಾಗಿದೆ. ಸೆ.24ರಂದಿ ನ.8ರ ವರೆಗೆ ಗೋರಥಯಾತ್ರೆಯು ಮೂರು ಜಿಲ್ಲೆಗಳಲ್ಲಿ ಸಂಚರಿಸಲಿದೆ.
The 'Goratha Yatra' organised jointly by Radhasurabhi Gomandir, Rashtriya Goseva Sansthan and Goseva Gatividhi Karnataka was flagged off at Brahmagiri in Pudu village. Under the guidance of Bhaktibhushandas Prabhuji of Gaushala, the Rath Yatra is being organised to create awareness about desi cow breed.
27-06-26 08:31 pm
HK News Staffer
ಅಂಬಾನಿ ಕೊಟ್ಟ 900 ಕೋಟಿ ದೇಣಿಗೆಗೂ ಲೆಕ್ಕ ಇಲ್ಲ, ಈಗ...
27-06-26 04:21 pm
ಆರ್ಎಸ್ಎಸ್ ಗಲಿಬಿಲಿಗೊಂಡರೆ ಬಿಜೆಪಿ ಬುಸುಗುಡುತ್ತದ...
26-06-26 08:30 pm
ಬಿಡದಿಯಲ್ಲಿ ರೈತರ ವಿರುದ್ಧವಾಗಿ ಟೌನ್ಶಿಪ್ ಕಟ್ಟುವ...
26-06-26 05:10 pm
ಇಷ್ಟೆಲ್ಲಾ ಅಲ್ಲೋಲ ಕಲ್ಲೋಲಕ್ಕೆ ಶೋಭಾ ಕರಂದ್ಲಾಜೆ ನೇ...
25-06-26 09:10 pm
27-06-26 09:10 pm
HK News Staffer
40 ಸೆಕೆಂಡ್ ನಲ್ಲಿ ಎರಡು ಬಾರಿ ಭೂಕಂಪ ; ತತ್ತರಿಸಿ ಹ...
25-06-26 12:13 pm
ಕೂಲ್ ಸಿಟಿ ಯುರೋಪಿನಲ್ಲೀಗ ಬಿಸಿಲ ಹೊಡೆತ ; ಫ್ರಾನ್ಸ್...
24-06-26 01:51 pm
ಮಾಹಿತಿ ಹಕ್ಕು ನಿಯಮಗಳಿಗೆ ಮಹಾರಾಷ್ಟ್ರ ಸರ್ಕಾರ ತಿದ್...
23-06-26 10:47 pm
ಟಿಎಂಸಿಯಲ್ಲಿ ರಾಜಕೀಯ ಭೂಕಂಪ ; ಮಮತಾ ಬ್ಯಾನರ್ಜಿ ಅಧ...
23-06-26 12:21 pm
27-06-26 02:44 pm
HK News Staffer
Rss ಸಂಘಟನೆಯನ್ನು ರಿಜಿಸ್ಟರ್ ಮಾಡಿದ್ರೆ ಒಳ್ಳೇದು ;...
26-06-26 09:42 pm
ಸಾಂಪ್ರದಾಯಿಕ ಕನ್ನಡ ಎಂಎ ಪದವಿಗೆ ಆಧುನಿಕ ಟಚ್; ಸಂತ...
26-06-26 08:33 pm
ಡಿಕೆಶಿ ಜೊತೆ ಯಾವುದೇ ವ್ಯಾವಹಾರಿಕ ಸಂಬಂಧವಿಲ್ಲ, ಅಪಪ...
26-06-26 02:14 pm
ಮಂಗಳೂರು, ಮೈಸೂರು ಸೇರಿ ರಾಜ್ಯದ 10 ನಗರಗಳಿಗೆ ಇಲೆಕ್...
25-06-26 10:56 pm
27-06-26 08:01 pm
HK News Staffer
ಬೆಂಗಳೂರಿನಿಂದ ಪ್ರಿಯತಮೆಯ ಅಪಹರಣ ; ಅಂಕೋಲಾಕ್ಕೆ ಹೋಗ...
27-06-26 04:23 pm
ಬೆಂಗಳೂರಿನಲ್ಲಿ ಅಕ್ರಮ ಹಣದ ಭಾರಿ ಬೇಟೆ ; ಕುರುಬರಹಳ್...
27-06-26 04:19 pm
ಮಂತ್ರಾಲಯ ಯಾತ್ರೆ ಮಧ್ಯೆ ಯಮನಂತೆ ನುಗ್ಗಿದ ಲಾರಿ! ಡಿ...
27-06-26 11:46 am
Mangalore, Police, criminial escapes: ಪಾಂಡೇಶ್...
27-06-26 10:54 am