ಬ್ರೇಕಿಂಗ್ ನ್ಯೂಸ್
23-09-23 06:30 pm Mangalore Correspondent ಕರಾವಳಿ
ಮಂಗಳೂರು, ಸೆ.23: ರಾಧಾ ಸುರಭಿ ಗೋ ಮಂದಿರ, ರಾಷ್ಟ್ರೀಯ ಗೋಸೇವಾ ಸಂಸ್ಥಾನ, ಗೋ ಸೇವಾ ಗತಿವಿಧಿ ಕರ್ನಾಟಕ ಇವುಗಳ ಸಂಯುಕ್ತ ಆಶ್ರಯದಲ್ಲಿ ನವೆಂಬರ್ ತಿಂಗಳಲ್ಲಿ ನಡೆಯುವ ಶ್ರೀಮದ್ಭಾಗವತ ಕಥಾ ಪಾರಾಯಣ ಸಪ್ತಾಹ ಮಹಾಯಜ್ಞ ಮತ್ತು ಗೋ ನವರಾತ್ರಿ ಉತ್ಸವದ ಪ್ರಯುಕ್ತ ಮೂರು ಜಿಲ್ಲೆಗಳ ವ್ಯಾಪ್ತಿಯಲ್ಲಿ ಗೋ ರಥಯಾತ್ರೆ ಹಮ್ಮಿಕೊಳ್ಳಲಾಗಿದೆ.
ಫರಂಗಿಪೇಟೆ ಬಳಿಯ ಪುದು ಗ್ರಾಮದ ಗೋವಿನತೋಟ, ಬ್ರಹ್ಮಗಿರಿಯಲ್ಲಿರುವ ರಾಧಾ ಸುರಭಿ ಗೋಮಂದಿರದ ಭಕ್ತಿಭೂಷಣದಾಸ್ ಪ್ರಭೂಜಿ ನೇತೃತ್ವದಲ್ಲಿ ಸೆ.24ರಂದು ಬೆಳಗ್ಗೆ ಗೋ ರಥಯಾತ್ರೆ ಹೊರಡಲಿದೆ. ಗೋಶಾಲೆಯಲ್ಲೇ ಬೆಳೆದ ದೇಸಿ ಗಿಡ್ಡ ತಳಿಯ ಗೋವನ್ನು ಮುಂದಿಟ್ಟು ಮೂರು ಜಿಲ್ಲೆಗಳಲ್ಲಿ ಗೋರಥಯಾತ್ರೆ ಸಂಚರಿಸಲಿದೆ. ಸೆ.24ರಿಂದ ನವೆಂಬರ್ 8ರ ವರೆಗೆ ರಥಯಾತ್ರೆ ಸಂಚರಿಸಲಿದ್ದು, ದೇಸಿ ಗಿಡ್ಡ ತಳಿ ಗೋವಿನ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಿದೆ.


ಈ ಬಗ್ಗೆ ರಾಧಾ ಸುರಭಿ ಗೋಮಂದಿರದ ಪ್ರವರ್ತಕ ಭಕ್ತಿಭೂಷಣದಾಸ ಪ್ರಭೂಜಿ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ್ದಾರೆ. ದೇಸಿ ಗೋವಿನಿಂದ 42 ವಿಧದ ಉತ್ಪನ್ನಗಳನ್ನು ತಯಾರಿಸಬಹುದಾಗಿದೆ. ಗೋವು ನಮ್ಮ ನಡುವೆ ಇರುವ ಚಲಿಸುವ ದೇವತೆಯಾಗಿದ್ದು, ಅದರ ಮಹತ್ವದ ಬಗ್ಗೆ ಹೆಚ್ಚಿನ ಜನರಿಗೆ ತಿಳಿದಿಲ್ಲ. ಸೆಗಣಿಯಿಂದ ಹಿಡಿದು ತುಪ್ಪದ ವರೆಗೂ ಅಮೂಲ್ಯ ರತ್ನಗಳನ್ನು ದೇಸಿ ಗೋವು ನೀಡುತ್ತದೆ. ಈ ಬಗ್ಗೆ ಜನಜಾಗೃತಿ ಮೂಡಿಸುವುದು ಮತ್ತು ನವೆಂಬರ್ ನಲ್ಲಿ ನಡೆಯುವ ಗೋನವರಾತ್ರಿ ಉತ್ಸವದ ಬಗ್ಗೆ ಪ್ರಚಾರ ಕೈಗೊಳ್ಳುವುದು ಗೋ ರಥಯಾತ್ರೆಯ ಉದ್ದೇಶ ಎಂದು ಪ್ರಭೂಜಿ ತಿಳಿಸಿದ್ದಾರೆ.
ಗೋರಥಯಾತ್ರೆ ದಕ್ಷಿಣ ಕನ್ನಡ, ಉಡುಪಿ ಮತ್ತು ಕೊಡಗು ಜಿಲ್ಲೆಯಲ್ಲಿ ಸಂಚರಿಸಲಿದ್ದು, ಜನರು ಆದರದಿಂದ ಬರಮಾಡಿಕೊಳ್ಳಬೇಕು. ನಮ್ಮ ಊರಿನ ದೇಸಿ ಗೋತಳಿಯ ಬಗ್ಗೆ ತಿಳಿದುಕೊಂಡು ಅದನ್ನು ಉಳಿಸುವಲ್ಲಿ ಪಣ ತೊಡಬೇಕಾಗಿದೆ. ಶ್ರೀಮದ್ಭಾಗವತ ಕಥಾ ಪಾರಾಯಣ ಮಹಾಯಜ್ಞ ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ನಡೆಯುತ್ತಿದ್ದು, ಇದರ ಪ್ರಚಾರಾರ್ಥ ಮತ್ತು ಗೋವಿನ ಬಗ್ಗೆ ಜಾಗೃತಿ ಮೂಡಿಸಲು ರಥಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ. ಯಾತ್ರೆಗೆ ಕದ್ರಿ ಜೋಗಿಮಠದ ನಿರ್ಮಲನಾಥಜೀ ಚಾಲನೆ ನೀಡಲಿದ್ದಾರೆ ಎಂದು ಯಜ್ಞ ಸಮಿತಿಯ ಅಧ್ಯಕ್ಷ ಕ್ಯಾ. ಬೃಜೇಶ್ ಚೌಟ ತಿಳಿಸಿದ್ದಾರೆ.
ರಥಯಾತ್ರೆ ಸಂದರ್ಭದಲ್ಲಿ ಗೋಪೂಜೆ, ನಾರಾಯಣ ಕವಚ ಯಾಗ ಸೇವೆ, ಅನ್ನದಾನ ಸೇವೆ, ಗೋಗ್ರಾಸ ಸೇವೆ ಇನ್ನಿತರ ಸೇವೆಗಳನ್ನು ಮಾಡುವುದಕ್ಕೆ ಸಾರ್ವಜನಿಕರಿಗೆ ಅವಕಾಶ ಇರಲಿದೆ. ಸುದ್ದಿಗೋಷ್ಟಿಯಲ್ಲಿ ತಾರನಾಥ ಕೊಟ್ಟಾರಿ, ರವಿ ಅಲೆವೂರಾಯ ಮತ್ತಿತರರಿದ್ದರು.
Go Ratayatra to be held in Mangalore on September 24th to November 8th covering three districts of Karnataka. A press meet was hele by Radha Surabi Gomandir Bhakthibushandas Prabuji.
20-09-26 07:13 pm
HK News Staffer
ಗಣೇಶ ಶೋಭಾಯಾತ್ರೆಯಲ್ಲಿ ಪ್ರಚೋದನಕಾರಿ ಭಾಷಣ ; ಮಸೀದಿ...
20-09-26 03:32 pm
ವಂದೇ ಮಾತರಂ ಎರಡೇ ಚರಣ ; ತೀರ್ಥಹಳ್ಳಿಯಲ್ಲಿ ಸಿಎಂ ಡಿ...
19-09-26 05:44 pm
B K Hariprasad: ಉಮರ್ ಖಾಲಿದ್ ರಾಷ್ಟ್ರೀಯವಾದಿ ದೇಶ...
17-09-26 04:13 pm
ಚಿತ್ರರಂಗದ ಸಾರ್ವಕಾಲಿಕ ಶ್ರೇಷ್ಠ ನಟ ಅನಂತನಾಗ್ ಗೆ '...
16-09-26 10:40 pm
19-09-26 05:40 pm
HK News Staffer
Mamata Banerjee, Sanchita Pradhan, Rejinagar:...
19-09-26 03:37 pm
ಮುಂಬೈನಲ್ಲಿ ಕುಡಿಯುವ ನೀರಿಗೆ ತೀವ್ರ ಬರ ; ಸಮುದ್ರದ...
13-09-26 09:00 pm
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
20-09-26 08:59 pm
HK News Staffer
ಮೊಗವೀರಪಟ್ಣ- ಕೋಟೆಪುರ ರಸ್ತೆ ಕಾಂಕ್ರೀಟಿಗೆ ಗಡುವು ;...
19-09-26 09:54 pm
ಬೆಳ್ಳಂಬೆಳಗ್ಗೆ ಮೀನುಗಾರಿಕಾ ಬಂದರಿಗೆ ಸಿಎಂ ಡಿಕೆಶಿ...
19-09-26 10:11 am
ಮಂಗಳೂರಿನಲ್ಲಿ ಮೊದಲ ಸಚಿವ ಸಂಪುಟ ಸಭೆ ; 32,611 ಕೋಟ...
18-09-26 07:30 pm
Puttur Medical College, Dakshina Kannada, Man...
18-09-26 06:08 pm
20-09-26 04:39 pm
HK News Staffer
Bengluru, Crime: ಬೆಂಗಳೂರು ; ಮಧ್ಯರಾತ್ರಿ ಹೋಟೆಲ್...
20-09-26 02:16 pm
ಹುಬ್ಬಳ್ಳಿಯಲ್ಲಿ ಗ್ಯಾಸ್ ಸೋರಿಕೆ ದುರಂತ: ಸಿಲಿಂಡರ್...
20-09-26 01:01 pm
ಪತಿಯೊಂದಿಗೆ ಜಗಳದ ಸಿಟ್ಟಿನಲ್ಲಿ ಇಬ್ಬರು ಮಕ್ಕಳನ್ನು...
19-09-26 09:57 pm
ಕೋಕಾ ಜಾಮೀನು ಬೆನ್ನಲ್ಲೇ ರೌಡಿಶೀಟರ್ ಭರತ್ ಕುಮ್ಡೇಲು...
19-09-26 09:48 pm