ಬ್ರೇಕಿಂಗ್ ನ್ಯೂಸ್
21-09-23 10:18 pm Udupi Correspondent ಕರಾವಳಿ
ಉಡುಪಿ, ಸೆ.21: ವಿದೇಶದಲ್ಲಿ ಉದ್ಯೋಗದಲ್ಲಿದ್ದ ಮಗ ಮೂರು ವರ್ಷಗಳ ಬಳಿಕ ಮನೆಮಂದಿಗೆ ಹೇಳದೇ ಅನಿರೀಕ್ಷಿತವಾಗಿ ಹಿಂತಿರುಗಿದ್ದ. ತಾಯಿ ಗಂಗೊಳ್ಳಿ ಮೀನು ಮಾರುಕಟ್ಟೆಯಲ್ಲಿ ಮೀನು ಮಾರುತ್ತಿದ್ದ ಬಗ್ಗೆ ತಿಳಿದು, ಮುಖಕ್ಕೆ ಮಾಸ್ಕ್ ಹಾಕ್ಕೊಂಡು ತಾಯಿ ಬಳಿಯಲ್ಲೇ ಮೀನು ಖರೀದಿಸಿದ ಸ್ವಾರಸ್ಯಕರ ಸಂಗತಿಯ ವಿಡಿಯೋ ವೈರಲ್ ಆಗಿದೆ.
ಗಂಗೊಳ್ಳಿ ನಿವಾಸಿ ರೋಹಿತ್ ಮೂರು ವರ್ಷಗಳ ಹಿಂದೆ ದುಬೈಗೆ ತೆರಳಿದ್ದು ಎರಡು ದಿನಗಳ ಹಿಂದೆ ಊರಿನ ಗೆಳೆಯರಿಗಾಗಲೀ, ಮನೆಯವರಿಗಾಗಲೀ ತಿಳಿಸದೆ ಸರ್ಪ್ರೈಸ್ ಕೊಡುವುದಕ್ಕಾಗಿ ನೇರವಾಗಿ ಬಂದಿದ್ದ. ಬೆಳಗ್ಗೆ ಮನೆಗೆ ಬಂದು ತಲುಪಿದಾಗ, ತಾಯಿ ಎಂದಿನಂತೆ ಮೀನು ಮಾರಲು ಹೋಗಿರುವುದು ತಿಳಿದುಬಂದಿತ್ತು. ಬ್ಯಾಗ್ ತೆಗೆದಿಟ್ಟು ನೇರವಾಗಿ ಗಂಗೊಳ್ಳಿ ಮೀನು ಮಾರುಕಟ್ಟೆಗೆ ಬಂದಿದ್ದ ರೋಹಿತ್, ತಾಯಿ ಮೀನು ಮಾರಾಟದಲ್ಲಿ ಬಿಝಿಯಾಗಿರುವುದನ್ನು ನೋಡಿದ್ದ. ದೂರದಿಂದಲೇ ಮುಖಕ್ಕೆ ಟವೆಲನ್ನು ಸುತ್ತಿಕೊಂಡು ಮೀನಿನ ದರ ವಿಚಾರಿಸಲು ಮುಂದಾಗಿದ್ದ.
ಯುವಕ ಮುಖ ತೋರಿಸದೆ, ಬಂಗುಡೆ ಮೀನಿನ ದರ ಕೇಳುತ್ತಿರುವುದರ ಬಗ್ಗೆ ತಾಯಿ ಸುಮಿತ್ರಾ ವಿಚಾರಣೆ ಮಾಡಿದ್ದಾರೆ. ಮಾತು ಕೇಳಿದಾಗ ಮಗನ ಧ್ವನಿಯಂತೇ ಕಂಡಿದ್ದರಿಂದ ತಾಯಿಗೆ ಸಂಶಯ ಆಗಿದೆ. ಹೀಗಾಗಿ ಮೀನನ್ನು ಬಿಟ್ಟು ಯುವಕನ ಬಳಿಗೆ ಎದ್ದು ಬಂದಿದ್ದು, ಮಗನ ಮುಖ ನೋಡುತ್ತಲೇ ಅಪ್ಪಿ ಹಿಡಿದು ಕಣ್ಣೀರು ಹಾಕಿದ್ದಾರೆ. ತಾಯಿ- ಮಗ ಅಪ್ಪಿ ಹಿಡಿದು ಆನಂದ ಭಾಷ್ಪ ಸುರಿಸಿದ ವಿಡಿಯೋ ಕುಂದಾಪುರದಲ್ಲಿ ವೈರಲ್ ಆಗಿದೆ.
A youth, who returned to his native after three years of working in the Gulf gave a surprise to his mother, who sells fish in Gangolli market. The video has gone viral on social media. Rohit, a resident of Gangollli in Kundapura taluk, returned to his native after three years of working in Dubai. He did not inform the matter to his family and friends to keep his arrival a surprise.
13-11-25 08:33 pm
HK News Desk
ಸಿದ್ದರಾಮಯ್ಯ ಸಿಎಂ ಆಗಿ ಮುಂದುವರಿದರೆ ತಪ್ಪೇನು? ನಾವ...
12-11-25 11:10 pm
ಧರ್ಮಸ್ಥಳ ಶವ ಹೂತ ಪ್ರಕರಣದಲ್ಲಿ ಎಸ್ಐಟಿ ತನಿಖೆಯ ತಡ...
12-11-25 11:06 pm
ಯಾರೂ ಗೂಟ ಹೊಡೆದು ಇರಕ್ಕಾಗಲ್ಲ, ಬಿಹಾರ ಚುನಾವಣೆ ಟೈಮ...
12-11-25 09:03 pm
ವಿಮಾನ ನಿಲ್ದಾಣದಲ್ಲಿ ನಮಾಜ್ ; ಅವರು ಎಲ್ಲಾದ್ರೂ ಶ್ರ...
10-11-25 07:17 pm
13-11-25 10:56 pm
HK News Desk
ಇಬ್ಬರು ಉಗ್ರರ ಡೈರಿ ಪತ್ತೆ ; ಮಹತ್ತರ ಮಾಹಿತಿ ಬಹಿರಂ...
13-11-25 08:41 pm
Tiruchi Aircraft: ತಿರುಚಿ- ಪುದುಕೋಟೈ ಹೆದ್ದಾರಿಯಲ...
13-11-25 05:13 pm
Delhi Blast: ದೆಹಲಿ ಸ್ಫೋಟಕ್ಕೆ ಟರ್ಕಿ ನಂಟಿನ ಶಂಕೆ...
13-11-25 04:52 pm
ಅಮಾಯಕರನ್ನು ಕೊಲ್ಲುವುದು ಇಸ್ಲಾಂನಲ್ಲಿ ಅತಿದೊಡ್ಡ ಪಾ...
12-11-25 02:54 pm
13-11-25 07:41 pm
Mangalore Correspondent
Belthangady, Kadaba Suicide, Mangalore; ಕಡಬದ...
13-11-25 05:01 pm
Kumble Toll Plaza: ಕುಂಬಳೆ ಟೋಲ್ ಪ್ಲಾಜಾಕ್ಕೆ ಭಾರ...
13-11-25 01:44 pm
Mangalore NMPT, Dinesh Gundu Rao, Congress, B...
12-11-25 06:56 pm
Ullal Dargah Committee: ಉಳ್ಳಾಲ ದರ್ಗಾ ಕಮಿಟಿಯಲ್...
11-11-25 10:42 pm
13-11-25 10:09 pm
Mangalore Correspondent
Sexual Harassment in Anekal: ಸ್ಕ್ಯಾನಿಂಗ್ ವೇಳ...
13-11-25 10:00 pm
ವಿದೇಶಿ ಕಂಪನಿಯಲ್ಲಿ ಹೂಡಿಕೆ ಮಾಡಿದರೆ ದುಪ್ಪಟ್ಟು ಲಾ...
12-11-25 12:32 pm
ಬೆಳ್ತಂಗಡಿ ಶ್ರೀರಾಮ ಕ್ರೆಡಿಟ್ ಸೊಸೈಟಿಯಲ್ಲಿ ಭಾರೀ ಅ...
11-11-25 06:33 pm
Fraud Dream Deal Mangalore, KSRTC: ತಿಂಗಳಿಗೆ ಒ...
09-11-25 10:27 pm