ಬ್ರೇಕಿಂಗ್ ನ್ಯೂಸ್
07-09-23 03:40 pm Mangalore Correspondent ಕರಾವಳಿ
ಮಂಗಳೂರು, ಸೆ.7: ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಗಣೇಶೋತ್ಸವ ಆಚರಣೆಗೆ ಆಕ್ಷೇಪ, ಅಡ್ಡಿ ಎದುರಾಗಿದೆ ಎನ್ನುವ ಸುದ್ದಿಗಳು ಹರಿದಾಡಿದ್ದವು. ಇದೇ ವಿಚಾರದಲ್ಲಿ ಶಾಸಕ ವೇದವ್ಯಾಸ ಕಾಮತ್ ನೇತೃತ್ವದಲ್ಲಿ ಬಿಜೆಪಿ ನಾಯಕರ ನಿಯೋಗ ಕುಲಪತಿ ಜಯರಾಜ್ ಅಮೀನ್ ಅವರನ್ನು ಭೇಟಿಯಾಗಿದ್ದರು. ಇದರ ನಡುವಲ್ಲೇ ಬಿಜೆಪಿ ನಿಯೋಗ ತನ್ನನ್ನು ಕಚೇರಿಯಲ್ಲಿ ಕೂಡಿಹಾಕಿ ಒತ್ತಡ ಹಾಕಿದ್ದಾರೆಂದು ಕುಲಪತಿ ರಾಜ್ಯ ಸರಕಾರಕ್ಕೆ ಪತ್ರ ಬರೆದಿದ್ದೂ ವೈರಲ್ ಆಗಿತ್ತು.
ವಿವಾದ ಸ್ವರೂಪ ಪಡೆಯುತ್ತಲೇ ಯುನಿವರ್ಸಿಟಿ ಕುಲಪತಿ ಜಯರಾಜ ಅಮೀನ್ ಪತ್ರಿಕಾ ಪ್ರಕಟಣೆ ನೀಡಿದ್ದು ನಾವು ಗಣೇಶೋತ್ಸವ ಆಚರಣೆಗೆ ವಿರೋಧ ವ್ಯಕ್ತಪಡಿಸಿಲ್ಲ. ಕುಲಪತಿಯವರ ವಿರೋಧ ಇದೆಯೆಂದು ಸುದ್ದಿ ಹಬ್ಬಿಸಿರುವುದು ಸತ್ಯಕ್ಕೆ ದೂರವಾದ ವಿಚಾರ ಎಂದು ಸ್ಪಷ್ಟನೆ ನೀಡಿದ್ದಾರೆ. ಈ ಬಗ್ಗೆ ಕುಲಪತಿ ಅವರಲ್ಲಿ ಮಾಹಿತಿ ಕೇಳಿದಾಗ, ವಿವರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

40 ವರ್ಷಗಳಿಂದಲೂ ನಾವು ಯುನಿವರ್ಸಿಟಿ ಕ್ಯಾಂಪಸ್ ನಲ್ಲಿ ಗಣೇಶೋತ್ಸವ ಆಚರಣೆ ಮಾಡಿಕೊಂಡು ಬಂದಿದ್ದೇವೆ. ಎಲ್ಲ ಹಾಸ್ಟೆಲ್ ಗಳ ಮಕ್ಕಳು, ವಾರ್ಡನ್ ಸೇರಿ ಹಬ್ಬ ಮಾಡಿಕೊಂಡಿದ್ದರು. ಕಳೆದ ಎರಡು ವರ್ಷಗಳಲ್ಲಿ ಮಾತ್ರ ಮಂಗಳಾ ಸಭಾಂಗಣದಲ್ಲಿ ಯುನಿವರ್ಸಿಟಿ ಫಂಡ್ ಬಳಸಿಯೇ ಉತ್ಸವ ಮಾಡಲಾಗಿತ್ತು. ಆದರೆ, ಈ ರೀತಿ ಯುನಿವರ್ಸಿಟಿ ಹಣ ಬಳಕೆ ಮಾಡುವಂತಿಲ್ಲ. ಎರಡು ಲಕ್ಷದಷ್ಟು ಯುನಿವರ್ಸಿಟಿ ದುಡ್ಡನ್ನು ಖರ್ಚು ಮಾಡಿದ್ದಕ್ಕೆ ಆಡಿಟ್ ಆಕ್ಷೇಪ ಬಂದಿದೆ. ಇದಕ್ಕಾಗಿ ಈ ಬಾರಿ ಮಂಗಳಾ ಸಭಾಂಗಣದಲ್ಲಿ ಉತ್ಸವ ನಡೆಸುವುದು ಬೇಡ ಎಂದಿದ್ದೆ. ಆದರೆ ಕೆಲವರು ಅದನ್ನೇ ದೊಡ್ಡದು ಮಾಡಿದ್ದಾರೆ.
ಈ ಬಗ್ಗೆ ರಾಜ್ಯ ಸರಕಾರಕ್ಕೂ ಪತ್ರ ಬರೆದು, ವಿಷಯ ಮನವರಿಕೆ ಮಾಡಿದ್ದೇನೆ. ಸರಕಾರದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಈ ಬಾರಿ ಹಾಸ್ಟೆಲ್ ನಲ್ಲಿ ಮಕ್ಕಳೂ ಇಲ್ಲ, ರಜೆಯಲ್ಲಿ ಹೋಗಿದ್ದಾರೆ. ಈ ಬಗ್ಗೆ ಎಲ್ಲ ಹಾಸ್ಟೆಲ್ ಗಳ ವಾರ್ಡನ್ ಮತ್ತು ಶಿಕ್ಷಕರು ಹಾಗೂ ಶಿಕ್ಷಕೇತರ ಸಿಬಂದಿಯನ್ನು ಕರೆದು ಮೀಟಿಂಗ್ ಮಾಡಿದ್ದೇನೆ. ಈ ಬಾರಿ ಹಣಕಾಸಿನ ಕೊರತೆ ಇರುವುದರಿಂದ ಸಣ್ಣದಾಗಿಯೇ ಹಾಸ್ಟೆಲ್ ವ್ಯಾಪ್ತಿಯಲ್ಲಿ ಗಣೇಶೋತ್ಸವ ಮಾಡೋಣ ಎಂದು ಅಭಿಪ್ರಾಯ ನೀಡಿದ್ದಾರೆ. ಆದರೆ ಕೆಲವರು ನನಗೆ ಫೋನ್ ಮಾಡಿ, ಮಂಗಳಾ ಸಭಾಂಗಣದಲ್ಲಿಯೇ ಮಾಡಬೇಕೆಂದು ಹೇಳಿದ್ದಾರೆ. ಸಭಾಂಗಣದಲ್ಲಿ ಮಾಡುವುದಕ್ಕೆ ನನ್ನದೇನು ಆಕ್ಷೇಪ ಇಲ್ಲ. ಆದರೆ ಯುನಿವರ್ಸಿಟಿ ಫಂಡನ್ನು ನೀಡುವುದಕ್ಕೆ ಆಗುತ್ತಿಲ್ಲ. ಇದರ ಬದಲು ಹಾಸ್ಟೆಲ್ ವ್ಯಾಪ್ತಿ ಸಾಂಸ್ಕೃತಿಕ ಕಾರ್ಯಕ್ರಮಕ್ಕೆಂದು ಅನುದಾನ ಬರುತ್ತದೆ. ಅದನ್ನು ಬಳಸಿಕೊಳ್ಳುತ್ತೇವೆ. ಇದು ಸರಕಾರಿ ಕಾರ್ಯಕ್ರಮವಾಗಿ ಮಾಡುತ್ತಿಲ್ಲ ಅಷ್ಟೇ ಎಂದು ಹೇಳಿದ್ದಾರೆ.
ಪ್ರತಿಭಟನೆಗೆ ಸಿದ್ಧತೆ ನಡೆಸಿದ್ದ ಸಂಘಟನೆಗಳು
ವಿವಿ ಕ್ಯಾಂಪಸಿನಲ್ಲಿ ಗಣೇಶೋತ್ಸವಕ್ಕೆ ಅಡ್ಡಿ ಎನ್ನುವ ವಿಚಾರವನ್ನೇ ಮುಂದಿಟ್ಟು ಹಿಂದು ಸಂಘಟನೆಗಳು ಸೆ.10ರಂದು ಅಸೈಗೋಳಿಯಲ್ಲಿ ಬೃಹತ್ ಪ್ರತಿಭಟನೆ ನಡೆಸುವುದಕ್ಕೆ ತಯಾರಿ ನಡೆಸಿದ್ದವು. ಭಾಷಣಕ್ಕೆ ಕಲ್ಲಡ್ಕ ಪ್ರಭಾಕರ ಭಟ್ಟರನ್ನು ಕರೆಸುವುದು, ಭಜನೆ ಇನ್ನಿತರ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕವೇ ವಿಶಿಷ್ಟವಾಗಿ ಪ್ರತಿಭಟನೆ ನಡೆಸಲು ಏರ್ಪಾಡು ಆಗಿತ್ತು. ಆದರೆ ಈ ವಿಷಯ ತಿಳಿಯುತ್ತಲೇ ಆಡಳಿತಾರೂಢ ಕಾಂಗ್ರೆಸ್ ನಾಯಕರು ಅಲರ್ಟ್ ಆಗಿದ್ದು, ಇಂಥದ್ದಕ್ಕೆಲ್ಲ ಅವಕಾಶವೇ ನೀಡುವುದು ಬೇಡ ಎಂದು ಪರೋಕ್ಷ ಸೂಚನೆಯನ್ನು ನೀಡಿದ್ದಾರೆ ಎನ್ನಲಾಗಿದೆ.
ಇದರ ಎಫೆಕ್ಟ್ ಎಂಬಂತೆ, ಬಿಜೆಪಿ ನಾಯಕರು ಒತ್ತಡ ಹೇರಿದ್ದಾರೆಂದು ರಾಜ್ಯ ಸರಕಾರಕ್ಕೆ ಪತ್ರ ಬರೆದು ಈ ರೀತಿಯ ಕಾರ್ಯಕ್ರಮಕ್ಕೆ ಅನುಮತಿ ನೀಡಬೇಕೋ, ಬೇಡವೋ ಅನ್ನುವ ರೀತಿ ಪತ್ರ ಬರೆದಿದ್ದ ಮಂಗಳೂರು ವಿವಿ ಕುಲಪತಿ ಜಯರಾಜ ಅಮೀನ್ ಉಲ್ಟಾ ಹೊಡೆದಿದ್ದಾರೆ. ದಿಢೀರ್ ಪತ್ರಿಕಾ ಪ್ರಕಟಣೆ ಕೊಟ್ಟು ಗಣೇಶೋತ್ಸವಕ್ಕೆ ನಮ್ಮದೇನು ತಕರಾರಿಲ್ಲ ಎಂದು ಹೇಳುವ ಮೂಲಕ ವಿವಾದಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ.
Ganeshotsava 2023 in Mangalore, Univercity Chancellor about to cancel program issues letter for permission.
13-11-25 08:33 pm
HK News Desk
ಸಿದ್ದರಾಮಯ್ಯ ಸಿಎಂ ಆಗಿ ಮುಂದುವರಿದರೆ ತಪ್ಪೇನು? ನಾವ...
12-11-25 11:10 pm
ಧರ್ಮಸ್ಥಳ ಶವ ಹೂತ ಪ್ರಕರಣದಲ್ಲಿ ಎಸ್ಐಟಿ ತನಿಖೆಯ ತಡ...
12-11-25 11:06 pm
ಯಾರೂ ಗೂಟ ಹೊಡೆದು ಇರಕ್ಕಾಗಲ್ಲ, ಬಿಹಾರ ಚುನಾವಣೆ ಟೈಮ...
12-11-25 09:03 pm
ವಿಮಾನ ನಿಲ್ದಾಣದಲ್ಲಿ ನಮಾಜ್ ; ಅವರು ಎಲ್ಲಾದ್ರೂ ಶ್ರ...
10-11-25 07:17 pm
13-11-25 10:56 pm
HK News Desk
ಇಬ್ಬರು ಉಗ್ರರ ಡೈರಿ ಪತ್ತೆ ; ಮಹತ್ತರ ಮಾಹಿತಿ ಬಹಿರಂ...
13-11-25 08:41 pm
Tiruchi Aircraft: ತಿರುಚಿ- ಪುದುಕೋಟೈ ಹೆದ್ದಾರಿಯಲ...
13-11-25 05:13 pm
Delhi Blast: ದೆಹಲಿ ಸ್ಫೋಟಕ್ಕೆ ಟರ್ಕಿ ನಂಟಿನ ಶಂಕೆ...
13-11-25 04:52 pm
ಅಮಾಯಕರನ್ನು ಕೊಲ್ಲುವುದು ಇಸ್ಲಾಂನಲ್ಲಿ ಅತಿದೊಡ್ಡ ಪಾ...
12-11-25 02:54 pm
13-11-25 07:41 pm
Mangalore Correspondent
Belthangady, Kadaba Suicide, Mangalore; ಕಡಬದ...
13-11-25 05:01 pm
Kumble Toll Plaza: ಕುಂಬಳೆ ಟೋಲ್ ಪ್ಲಾಜಾಕ್ಕೆ ಭಾರ...
13-11-25 01:44 pm
Mangalore NMPT, Dinesh Gundu Rao, Congress, B...
12-11-25 06:56 pm
Ullal Dargah Committee: ಉಳ್ಳಾಲ ದರ್ಗಾ ಕಮಿಟಿಯಲ್...
11-11-25 10:42 pm
13-11-25 10:09 pm
Mangalore Correspondent
Sexual Harassment in Anekal: ಸ್ಕ್ಯಾನಿಂಗ್ ವೇಳ...
13-11-25 10:00 pm
ವಿದೇಶಿ ಕಂಪನಿಯಲ್ಲಿ ಹೂಡಿಕೆ ಮಾಡಿದರೆ ದುಪ್ಪಟ್ಟು ಲಾ...
12-11-25 12:32 pm
ಬೆಳ್ತಂಗಡಿ ಶ್ರೀರಾಮ ಕ್ರೆಡಿಟ್ ಸೊಸೈಟಿಯಲ್ಲಿ ಭಾರೀ ಅ...
11-11-25 06:33 pm
Fraud Dream Deal Mangalore, KSRTC: ತಿಂಗಳಿಗೆ ಒ...
09-11-25 10:27 pm