ಬ್ರೇಕಿಂಗ್ ನ್ಯೂಸ್
05-09-23 09:51 pm Mangalore Correspondent ಕರಾವಳಿ
ಮಂಗಳೂರು, ಸೆ.5: ಮಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ರಾಜಧಾನಿ ಬೆಂಗಳೂರಿಗೆ ಮತ್ತೊಂದು ಹೊಸ ವಿಮಾನ ದಿನಂಪ್ರತಿ ಸಂಚಾರ ಮಾಡಲಿದೆ. ಇದರೊಂದಿಗೆ ಮಂಗಳೂರು- ಬೆಂಗಳೂರು ಡೈಲೀ ವಿಮಾನ ಸಂಖ್ಯೆ ಐದಕ್ಕೇರಿದರೆ, ಶನಿವಾರ ಆರು ವಿಮಾನಗಳು ಸಂಚಾರ ನಡೆಸಲಿವೆ.
ಸೆ.7ರಿಂದ ಇಂಡಿಗೋ ಸಂಸ್ಥೆಯ ವಿಮಾನ ಹೊಸತಾಗಿ ಇವರೆಡು ನಗರಗಳ ನಡುವೆ ಸಂಚಾರ ಆರಂಭಿಸಲಿದೆ. ಬೆಳಗ್ಗೆ 8.35ಕ್ಕೆ ಮಂಗಳೂರಿಗೆ ತಲುಪಲಿರುವ ಇಂಡಿಗೋ ವಿಮಾನ 9.10ಕ್ಕೆ ಮತ್ತೆ ಬೆಂಗಳೂರಿಗೆ ಹೊರಡಲಿದೆ. ಈಗಾಗಲೇ ಬೆಳಗ್ಗೆ 6.50ಕ್ಕೆ ಬೆಂಗಳೂರು ಮೂಲಕ ಪಾಟ್ನಾಕ್ಕೆ, 11.35ಕ್ಕೆ ಬೆಂಗಳೂರು ವಯಾ ಕೋಲ್ಕತ್ತಾಕ್ಕೆ ಸಂಚರಿಸುತ್ತದೆ. ಸಂಜೆ 4.25 ಮತ್ತು ರಾತ್ರಿ 9.50ಕ್ಕೆ ನೇರವಾಗಿ ಬೆಂಗಳೂರಿಗೆ ಸಂಚರಿಸುವ ಇಂಡಿಗೋ ವಿಮಾನಗಳಿವೆ. ಇದರ ಜೊತೆಗೆ ಹೊಸ ವಿಮಾನ ದಿನವೂ ಬೆಳಗ್ಗೆ 9.10ಕ್ಕೆ ಮಂಗಳೂರಿನಿಂದ ಬೆಂಗಳೂರು ಸಂಚಾರ ಮಾಡಲಿದೆ.

ಶನಿವಾರ ಆರನೇ ವಿಮಾನ ಮಂಗಳೂರಿನಿಂದ ಬೆಂಗಳೂರಿಗೆ ಸಂಚಾರ ಮಾಡಲಿದೆ. ಮಂಗಳೂರು- ಪುಣೆಗೆ ಹೋಗುವ ವಿಮಾನವನ್ನೇ ಹೆಚ್ಚುವರಿಯಾಗಿ ಬೆಂಗಳೂರಿನತ್ತ ಓಡಿಸಲು ನಿರ್ಧರಿಸಲಾಗಿದೆ. ಮಂಗಳವಾರ, ಗುರುವಾರ, ಭಾನುವಾರ ಮತ್ತು ಶನಿವಾರ ಸಂಜೆ 5.50ಕ್ಕೆ ವಿಮಾನ ಮಂಗಳೂರಿಗೆ ಬರಲಿದ್ದು, 6.35ಕ್ಕೆ ನಿರ್ಗಮನ ಆಗಲಿದೆ. ಶನಿವಾರ ಮಾತ್ರ ಬೆಂಗಳೂರಿನಿಂದ ಮಂಗಳೂರಿಗೆ ಇಂಡಿಗೋ ವಿಮಾನ ಬರಲಿದ್ದು, ಅದೇ ವಿಮಾನ 6.35ಕ್ಕೆ ಪುಣೆ ಹೊರಡಲಿದೆ.
ಇಂಡಿಗೋ ಸಂಸ್ಥೆಯ ಹೊಸ ವಿಮಾನ ಸಂಚಾರದಿಂದ ಮಂಗಳೂರು – ಬೆಂಗಳೂರು ಮತ್ತು ಮಂಗಳೂರು- ಪುಣೆ ನಡುವೆ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಲಿದೆ. ಸೋಮವಾರದಿಂದ ಶುಕ್ರವಾರಕ್ಕೆ 38ರಿಂದ 40 ವಿಮಾನಗಳ ಸಂಚಾರ ಆಗಲಿದ್ದರೆ, ಅದೇ ಶನಿವಾರ ಮತ್ತು ಭಾನುವಾರ 40ರಿಂದ 42 ವಿಮಾನಗಳು ಸಂಚಾರ ನಡೆಸಲಿವೆ. ಇದಲ್ಲದೆ, ಮಂಗಳೂರು ಏರ್ಪೋರ್ಟಿನಿಂದ ಇತರ ಏರ್ ಸಂಸ್ಥೆಗಳ ಜೊತೆಗೂ ಸಂಪರ್ಕದಲ್ಲಿದ್ದು, ಮತ್ತಷ್ಟು ವಿಮಾನಗಳ ಸಂಚಾರ ಸದ್ಯದಲ್ಲೇ ಆಗಲಿದೆ ಎಂದು ಮಂಗಳೂರು ಏರ್ಪೋರ್ಟ್ ಅಧಿಕಾರಿಗಳು ತಿಳಿಸಿದ್ದಾರೆ.
The Mangaluru International Airport (MIA) is all set to get an additional daily flight during the weekdays and an additional flight on Saturday to Bengaluru from September 7. With these additional flights that IndiGo will operate till October 28, the number of daily flights to Bengaluru will go up to five during weekdays/Sundays and six on Saturdays. At present, IndiGo is operating all four flights daily to Bengaluru
27-06-26 08:31 pm
HK News Staffer
ಅಂಬಾನಿ ಕೊಟ್ಟ 900 ಕೋಟಿ ದೇಣಿಗೆಗೂ ಲೆಕ್ಕ ಇಲ್ಲ, ಈಗ...
27-06-26 04:21 pm
ಆರ್ಎಸ್ಎಸ್ ಗಲಿಬಿಲಿಗೊಂಡರೆ ಬಿಜೆಪಿ ಬುಸುಗುಡುತ್ತದ...
26-06-26 08:30 pm
ಬಿಡದಿಯಲ್ಲಿ ರೈತರ ವಿರುದ್ಧವಾಗಿ ಟೌನ್ಶಿಪ್ ಕಟ್ಟುವ...
26-06-26 05:10 pm
ಇಷ್ಟೆಲ್ಲಾ ಅಲ್ಲೋಲ ಕಲ್ಲೋಲಕ್ಕೆ ಶೋಭಾ ಕರಂದ್ಲಾಜೆ ನೇ...
25-06-26 09:10 pm
27-06-26 09:10 pm
HK News Staffer
40 ಸೆಕೆಂಡ್ ನಲ್ಲಿ ಎರಡು ಬಾರಿ ಭೂಕಂಪ ; ತತ್ತರಿಸಿ ಹ...
25-06-26 12:13 pm
ಕೂಲ್ ಸಿಟಿ ಯುರೋಪಿನಲ್ಲೀಗ ಬಿಸಿಲ ಹೊಡೆತ ; ಫ್ರಾನ್ಸ್...
24-06-26 01:51 pm
ಮಾಹಿತಿ ಹಕ್ಕು ನಿಯಮಗಳಿಗೆ ಮಹಾರಾಷ್ಟ್ರ ಸರ್ಕಾರ ತಿದ್...
23-06-26 10:47 pm
ಟಿಎಂಸಿಯಲ್ಲಿ ರಾಜಕೀಯ ಭೂಕಂಪ ; ಮಮತಾ ಬ್ಯಾನರ್ಜಿ ಅಧ...
23-06-26 12:21 pm
27-06-26 02:44 pm
HK News Staffer
Rss ಸಂಘಟನೆಯನ್ನು ರಿಜಿಸ್ಟರ್ ಮಾಡಿದ್ರೆ ಒಳ್ಳೇದು ;...
26-06-26 09:42 pm
ಸಾಂಪ್ರದಾಯಿಕ ಕನ್ನಡ ಎಂಎ ಪದವಿಗೆ ಆಧುನಿಕ ಟಚ್; ಸಂತ...
26-06-26 08:33 pm
ಡಿಕೆಶಿ ಜೊತೆ ಯಾವುದೇ ವ್ಯಾವಹಾರಿಕ ಸಂಬಂಧವಿಲ್ಲ, ಅಪಪ...
26-06-26 02:14 pm
ಮಂಗಳೂರು, ಮೈಸೂರು ಸೇರಿ ರಾಜ್ಯದ 10 ನಗರಗಳಿಗೆ ಇಲೆಕ್...
25-06-26 10:56 pm
27-06-26 08:01 pm
HK News Staffer
ಬೆಂಗಳೂರಿನಿಂದ ಪ್ರಿಯತಮೆಯ ಅಪಹರಣ ; ಅಂಕೋಲಾಕ್ಕೆ ಹೋಗ...
27-06-26 04:23 pm
ಬೆಂಗಳೂರಿನಲ್ಲಿ ಅಕ್ರಮ ಹಣದ ಭಾರಿ ಬೇಟೆ ; ಕುರುಬರಹಳ್...
27-06-26 04:19 pm
ಮಂತ್ರಾಲಯ ಯಾತ್ರೆ ಮಧ್ಯೆ ಯಮನಂತೆ ನುಗ್ಗಿದ ಲಾರಿ! ಡಿ...
27-06-26 11:46 am
Mangalore, Police, criminial escapes: ಪಾಂಡೇಶ್...
27-06-26 10:54 am