ಬ್ರೇಕಿಂಗ್ ನ್ಯೂಸ್
01-09-23 12:44 pm Mangalore Correspondent ಕರಾವಳಿ
ಮಂಗಳೂರು, ಸೆ.1: ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಯುವ ಕಬಡ್ಡಿ ಆಟಗಾರ ಸ್ವರಾಜ್ ಆತ್ಮಹತ್ಯೆ ಪ್ರಕರಣದಲ್ಲಿ ಬಿಗ್ ಟ್ವಿಸ್ಟ್ ಸಿಕ್ಕಿದ್ದು ಲೋನ್ ಆ್ಯಪ್ ಕಿರುಕುಳಕ್ಕೆ ಬೇಸತ್ತು ಸ್ವರಾಜ್ ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ಶಂಕೆ ವ್ಯಕ್ತವಾಗಿದೆ.
ಬೆಳ್ತಂಗಡಿ ತಾಲೂಕಿನ ಪುದುವೆಟ್ಟು ಗ್ರಾಮದ ನಿವಾಸಿ ಸ್ವರಾಜ್(24) ನಿನ್ನೆ ಬೆಳಗ್ಗೆ ತನ್ನ ಮನೆಯ ಬಳಿಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಲೋನ್ ಆ್ಯಪ್ ನಿಂದ 'Baby for sale' ಅಂತ ಕಿರುಕುಳ ನೀಡಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ. ವಾಟ್ಸಾಪ್ ನಲ್ಲಿ ಅಕ್ಕನ ಮಗುವಿನ ಫೋಟೊ ಹಾಕಿದ್ದ ಸ್ವರಾಜ್ ಗೆ ಅದೇ ಫೋಟೊ ಮುಂದಿಟ್ಟು ಕಿರುಕುಳ ನೀಡಲಾಗಿದೆ. ಮಗುವಿನ ಫೋಟೋವನ್ನು 'Baby for sale' ಅಂತ ಎಡಿಟ್ ಮಾಡಿ ಆತನ ಸ್ನೇಹಿತರು ಮತ್ತು ಕಾಂಟ್ಯಾಕ್ಟ್ ಲಿಸ್ಟ್ ನಲ್ಲಿದ್ದವರಿಗೆಲ್ಲ ಫಾರ್ವರ್ಡ್ ಮಾಡಲಾಗಿತ್ತು.

ಸ್ವರಾಜ್ ಮೊಬೈಲ್ ಕಾಂಟ್ಯಾಕ್ಟ್ ಲಿಸ್ಟನ್ನು ನಕಲು ಮಾಡಿದ್ದ ಲೋನ್ ಆ್ಯಪ್ ನವರು ಮಗುವಿನ ಫೋಟೋವನ್ನೇ ನಕಲಿಸಿ ಮಗು ಮಾರಾಟಕ್ಕಿದೆ ಎಂದು ಹೇಳಿ ಫಾರ್ವರ್ಡ್ ಮಾಡಿದ್ದರು. ಇದರಿಂದ ತೀವ್ರ ನೊಂದಿದ್ದ ಸ್ವರಾಜ್ ಬ್ಲಾಕ್ ಮೇಲ್ ಒಳಗಾಗಿದ್ದರು. ಒತ್ತಡ ತಡೆಯಲಾಗದೇ ಆ.30 ರಂದು ಸ್ವರಾಜ್ 30 ಸಾವಿರ ರೂ. ಹಣವನ್ನು ಕಟ್ಟಿದ್ದರು ಎನ್ನಲಾಗಿದೆ. ಆ.31 ರಂದು ಮಧ್ಯಾಹ್ನ 2 ಗಂಟೆ ಒಳಗೆ ಉಳಿದ ಹಣ ಬಡ್ಡಿ ಸಹಿತ ನೀಡುವಂತೆ ಡೆಡ್ ಲೈನ್ ನೀಡಿದ್ದರು. ಇದರ ನಡುವಲ್ಲೇ ಹಿಂಸೆ ತಾಳಲಾರದೆ ಸ್ವರಾಜ್ ನಿನ್ನೆ ಬೆಳಗ್ಗೆ ಮನೆಯ ಬಳಿಯಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೃತ್ಯದ ಬಗ್ಗೆ ಧರ್ಮಸ್ಥಳ ಪೊಲೀಸರು ತನಿಖೆ ನಡೆಸುತ್ತಿದ್ದು ಲೋನ್ ಆ್ಯಪ್ ಕಿರುಕುಳದಿಂದಲೇ ಯುವಕ ಸಾವಿಗೆ ಶರಣಾದ ಬಗ್ಗೆ ಗಂಭೀರ ಆರೋಪ ಕೇಳಿಬಂದಿದೆ.
In a major twist to the suicide case of Dakshina Kannada district-level youth kabaddi player Swaraj, it is suspected that she committed suicide after being harassed by the loan app. Swaraj (24), a resident of Puduvettu village in Belthangady taluk, committed suicide by hanging herself near her house yesterday morning. During the investigation, it came to light that he was harassed by the loan app as 'Baby for sale'.
27-06-26 08:31 pm
HK News Staffer
ಅಂಬಾನಿ ಕೊಟ್ಟ 900 ಕೋಟಿ ದೇಣಿಗೆಗೂ ಲೆಕ್ಕ ಇಲ್ಲ, ಈಗ...
27-06-26 04:21 pm
ಆರ್ಎಸ್ಎಸ್ ಗಲಿಬಿಲಿಗೊಂಡರೆ ಬಿಜೆಪಿ ಬುಸುಗುಡುತ್ತದ...
26-06-26 08:30 pm
ಬಿಡದಿಯಲ್ಲಿ ರೈತರ ವಿರುದ್ಧವಾಗಿ ಟೌನ್ಶಿಪ್ ಕಟ್ಟುವ...
26-06-26 05:10 pm
ಇಷ್ಟೆಲ್ಲಾ ಅಲ್ಲೋಲ ಕಲ್ಲೋಲಕ್ಕೆ ಶೋಭಾ ಕರಂದ್ಲಾಜೆ ನೇ...
25-06-26 09:10 pm
27-06-26 09:10 pm
HK News Staffer
40 ಸೆಕೆಂಡ್ ನಲ್ಲಿ ಎರಡು ಬಾರಿ ಭೂಕಂಪ ; ತತ್ತರಿಸಿ ಹ...
25-06-26 12:13 pm
ಕೂಲ್ ಸಿಟಿ ಯುರೋಪಿನಲ್ಲೀಗ ಬಿಸಿಲ ಹೊಡೆತ ; ಫ್ರಾನ್ಸ್...
24-06-26 01:51 pm
ಮಾಹಿತಿ ಹಕ್ಕು ನಿಯಮಗಳಿಗೆ ಮಹಾರಾಷ್ಟ್ರ ಸರ್ಕಾರ ತಿದ್...
23-06-26 10:47 pm
ಟಿಎಂಸಿಯಲ್ಲಿ ರಾಜಕೀಯ ಭೂಕಂಪ ; ಮಮತಾ ಬ್ಯಾನರ್ಜಿ ಅಧ...
23-06-26 12:21 pm
27-06-26 02:44 pm
HK News Staffer
Rss ಸಂಘಟನೆಯನ್ನು ರಿಜಿಸ್ಟರ್ ಮಾಡಿದ್ರೆ ಒಳ್ಳೇದು ;...
26-06-26 09:42 pm
ಸಾಂಪ್ರದಾಯಿಕ ಕನ್ನಡ ಎಂಎ ಪದವಿಗೆ ಆಧುನಿಕ ಟಚ್; ಸಂತ...
26-06-26 08:33 pm
ಡಿಕೆಶಿ ಜೊತೆ ಯಾವುದೇ ವ್ಯಾವಹಾರಿಕ ಸಂಬಂಧವಿಲ್ಲ, ಅಪಪ...
26-06-26 02:14 pm
ಮಂಗಳೂರು, ಮೈಸೂರು ಸೇರಿ ರಾಜ್ಯದ 10 ನಗರಗಳಿಗೆ ಇಲೆಕ್...
25-06-26 10:56 pm
27-06-26 08:01 pm
HK News Staffer
ಬೆಂಗಳೂರಿನಿಂದ ಪ್ರಿಯತಮೆಯ ಅಪಹರಣ ; ಅಂಕೋಲಾಕ್ಕೆ ಹೋಗ...
27-06-26 04:23 pm
ಬೆಂಗಳೂರಿನಲ್ಲಿ ಅಕ್ರಮ ಹಣದ ಭಾರಿ ಬೇಟೆ ; ಕುರುಬರಹಳ್...
27-06-26 04:19 pm
ಮಂತ್ರಾಲಯ ಯಾತ್ರೆ ಮಧ್ಯೆ ಯಮನಂತೆ ನುಗ್ಗಿದ ಲಾರಿ! ಡಿ...
27-06-26 11:46 am
Mangalore, Police, criminial escapes: ಪಾಂಡೇಶ್...
27-06-26 10:54 am