ಬ್ರೇಕಿಂಗ್ ನ್ಯೂಸ್
30-08-23 10:25 pm Mangalore Correspondent ಕರಾವಳಿ
ಮಂಗಳೂರು, ಆಗಸ್ಟ್ 30: ಮಂಗಳೂರು- ಮೂಡುಬಿದ್ರೆ- ಕಾರ್ಕಳ ನಡುವಿನ ಹೆದ್ದಾರಿ ಕಾಮಗಾರಿ ಶುರುವಾಗಿದ್ದರೂ, ಭೂಮಿ ಕಳಕೊಳ್ಳುವ ರೈತರಿಗೆ ಪರಿಹಾರ ನೀಡಿಲ್ಲ ಎಂದು ಆಕ್ಷೇಪಿಸಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಕಚೇರಿ ಮುಂದೆ ಕೈಗೊಂಡಿದ್ದ ಒಂಬತ್ತು ದಿನಗಳ ಪ್ರತಿಭಟನಾ ಧರಣಿ ಅಂತ್ಯಗೊಂಡಿದೆ. ಆದರೆ, ವಾರ ಕಾಲದಿಂದ ಪ್ರತಿಭಟನೆ ನಡೆಯುತ್ತಿದ್ದರೂ, ಜಿಲ್ಲಾಧಿಕಾರಿಯಾಗಲೀ, ಸಂಸದ, ಶಾಸಕರು ಸ್ಪಂದಿಸಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆಗಸ್ಟ್ 22ರಿಂದ 30ರ ವರೆಗೆ ದಿನವೂ ಬೆಳಗ್ಗಿನಿಂದ ಸಂಜೆಯ ವರೆಗೆ ಪ್ರತಿಭಟನಾ ಧರಣಿ ನಡೆದಿದ್ದು ಪ್ರತಿ ದಿನವೂ ಒಂದೊಂದು ಗ್ರಾಮದ ನಿವಾಸಿಗಳು ಧರಣಿಯಲ್ಲಿ ಪಾಲ್ಗೊಂಡಿದ್ದಾರೆ. 80ರಷ್ಟು ಮಂದಿ ದಿನವೂ ಧರಣಿ ಕುಳಿತು ಹೆದ್ದಾರಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯದ ಬಗ್ಗೆ ಕೂಗು ಎಬ್ಬಿಸಿದ್ದರೂ ಆಡಳಿತಕ್ಕೆ ನಮ್ಮ ಕೂಗು ತಲುಪಿಲ್ಲ. ಹೀಗಾಗಿ ಈಗ ತಾತ್ಕಾಲಿಕವಾಗಿ ಧರಣಿ ಅಂತ್ಯಗೊಳಿಸುತ್ತಿದ್ದೇವೆ. ಆರು ದಿನಗಳ ಗಡುವು ಕೊಡುತ್ತಿದ್ದು, ಆನಂತರ ಸರಣಿ ರೂಪದಲ್ಲಿ ಸಂಸದ ನಳಿನ್ ಕುಮಾರ್ ಕಚೇರಿ, ಜಿಲ್ಲಾಧಿಕಾರಿ ಕಚೇರಿ, ಭೂಸ್ವಾಧೀನಧಿಕಾರಿಗಳ ಕಚೇರಿ ಎದುರಲ್ಲಿ ಪ್ರತಿಭಟನೆ ನಡೆಸುತ್ತೇವೆ ಎಂದು ಹೋರಾಟ ಸಮಿತಿಯ ನೇತೃತ್ವ ವಹಿಸಿರುವ ಮರಿಯಮ್ಮ ಥೋಮಸ್ ಹೇಳಿದ್ದಾರೆ.
ಬುಧವಾರ ಸಂಜೆ ಪ್ರತಿಭಟನಾ ಸ್ಥಳದಲ್ಲಿ ಸುದ್ದಿಗೋಷ್ಠಿ ಕರೆದು ಮಾತನಾಡಿದ ಹೋರಾಟ ಸಮಿತಿ ಮುಖಂಡರು, ಇಷ್ಟು ದಿನಗಳ ಕಾಲ ಧಿಕ್ಕಾರದ ಕೂಗು ಹೇಳುತ್ತಿದ್ದರೂ, ಸಂಸದ ನಳಿನ್ ಕುಮಾರ್ ಆಗಲೀ, ಇಲ್ಲಿನ ಶಾಸಕ ವೇದವ್ಯಾಸ ಕಾಮತ್ ಆಗಲೀ ಬಂದಿಲ್ಲ. ಕ್ಷೇತ್ರದ ಜನಪ್ರತಿನಿಧಿಯಾಗಿ ಜನರ ಅಹವಾಲು ಕೇಳಬೇಕಲ್ಲ. ನಮಗೆ ಹೈಕೋರ್ಟ್ ನೀಡಿರುವ ಆದೇಶ ಪ್ರಕಾರ, 2020ರಲ್ಲಿ ಹೊರಡಿಸಿದ ಅಧಿಸೂಚನೆಯಂತೆ ಪರಿಹಾರ ನೀಡಿದರೆ ಸಾಕು. ಹೆದ್ದಾರಿ ಅಧಿಕಾರಿಗಳು ಕೇವಲ ಸರ್ಕಾರಿ ಭೂಮಿಯಲ್ಲಿ ಕಾಮಗಾರಿ ಆರಂಭಿಸಿ ಉಳಿದ ಕಡೆಗಳಲ್ಲಿ ಕಾಲ ತಳ್ಳುತ್ತಿದ್ದಾರೆ. ಈ ರೀತಿಯ ಧೋರಣೆಯನ್ನು ನಾವು ಸಹಿಸೋದಿಲ್ಲ ಎಂದಿದ್ದಾರೆ.
ನಾವು ಶಾಂತಿಯುತ ಹೋರಾಟ ನಡೆಸಿದ್ದೇವೆ. ರಾಸ್ತಾರೋಕೋ ಮಾಡಬೇಕೆಂದು ಕೆಲವರ ಅಭಿಪ್ರಾಯ ಇದೆ. ಅಧಿಕಾರಿಗಳು ನಿರ್ಲಕ್ಷ್ಯ ತೋರಿದರೆ ನಾವು ರಾಸ್ತಾರೋಕೊ ನಡೆಸುವುದಕ್ಕೂ ಹಿಂಜರಿಯಲ್ಲ. ಕಾರ್ಕಳದ ಸಾಣೂರಿನಿಂದ ಮಂಗಳೂರಿನ ವರೆಗೂ ಸಂತ್ರಸ್ತರು ಹೆದ್ದಾರಿಯ ಉದ್ದಕ್ಕೂ ಅಲ್ಲಲ್ಲಿ ಪ್ರತಿಭಟನೆ ನಡೆಸಲಿದ್ದಾರೆ. ಈ ರೀತಿಯ ಪ್ರತಿಭಟನೆಯಿಂದ ದೊಡ್ಡ ಮಟ್ಟಿನ ತೊಂದರೆಯನ್ನು ಜನರು ಅನುಭವಿಸಬೇಕಾಗುತ್ತದೆ. ಹಾಗಾಗಿ ಇಂತಹ ನಡೆಗಳಿಗೆ ನಾವು ಮುಂದಾಗಿಲ್ಲ. ಒಂದ್ವೇಳೆ, ನಮ್ಮ ಪ್ರತಿಭಟನೆಯನ್ನು ನಿರ್ಲಕ್ಷಿಸಿದರೆ ನಾವು ಇದೇ ರೀತಿಯ ಪ್ರತಿಭಟನೆಗೆ ಇಳಿಯಬೇಕಾಗುತ್ತದೆ ಎಂದು ಮರಿಯಮ್ಮ ಥೋಮಸ್ ಹೇಳಿದ್ದಾರೆ.
ಈಗಿನ ಜನಪ್ರತಿನಿಧಿಗಳೆಂದರೆ ಗಟ್ಸ್ ಇಲ್ಲದ ರೀತಿ ಇದ್ದಾರೆ. ಕಾಂಗ್ರೆಸ್ ಪಕ್ಷದ ಕೆಲವು ನಾಯಕರು ಬಂದಿದ್ದು ಅಭಿಪ್ರಾಯ ಕೇಳಿಕೊಂಡು ಹೋಗಿದ್ದಾರೆ. ಆದರೆ ಯಾವುದೇ ಪರಿಣಾಮ ಆಗಿಲ್ಲ. ಜಿಲ್ಲಾಧಿಕಾರಿಯೂ ನಮ್ಮ ಅಹವಾಲು ಕೇಳಲು ಬಂದಿಲ್ಲ ಎಂದು ಹೇಳಿದ್ದಾರೆ. ಪ್ರತಿಭಟನಾ ಸ್ಥಳದಲ್ಲಿ ಜನಪ್ರತಿನಿಧಿಗಳ ನಡೆಯನ್ನು ಅಣಕಿಸಿ ಜನಪದ ಶೈಲಿಯಲ್ಲಿ ಪದ್ಯ ಹೇಳುತ್ತಾ ಧಿಕ್ಕಾರ ಕೂಗುತ್ತಿದ್ದುದು ಜನರ ಆಕ್ರೋಶವನ್ನು ಎತ್ತಿ ತೋರಿಸುತ್ತಿತ್ತು.
Mangalore 22 km of Sanur-Bikarnakatte highway widening project fraud, ome. Week.protest turns ineffective.
13-11-25 08:33 pm
HK News Desk
ಸಿದ್ದರಾಮಯ್ಯ ಸಿಎಂ ಆಗಿ ಮುಂದುವರಿದರೆ ತಪ್ಪೇನು? ನಾವ...
12-11-25 11:10 pm
ಧರ್ಮಸ್ಥಳ ಶವ ಹೂತ ಪ್ರಕರಣದಲ್ಲಿ ಎಸ್ಐಟಿ ತನಿಖೆಯ ತಡ...
12-11-25 11:06 pm
ಯಾರೂ ಗೂಟ ಹೊಡೆದು ಇರಕ್ಕಾಗಲ್ಲ, ಬಿಹಾರ ಚುನಾವಣೆ ಟೈಮ...
12-11-25 09:03 pm
ವಿಮಾನ ನಿಲ್ದಾಣದಲ್ಲಿ ನಮಾಜ್ ; ಅವರು ಎಲ್ಲಾದ್ರೂ ಶ್ರ...
10-11-25 07:17 pm
13-11-25 10:56 pm
HK News Desk
ಇಬ್ಬರು ಉಗ್ರರ ಡೈರಿ ಪತ್ತೆ ; ಮಹತ್ತರ ಮಾಹಿತಿ ಬಹಿರಂ...
13-11-25 08:41 pm
Tiruchi Aircraft: ತಿರುಚಿ- ಪುದುಕೋಟೈ ಹೆದ್ದಾರಿಯಲ...
13-11-25 05:13 pm
Delhi Blast: ದೆಹಲಿ ಸ್ಫೋಟಕ್ಕೆ ಟರ್ಕಿ ನಂಟಿನ ಶಂಕೆ...
13-11-25 04:52 pm
ಅಮಾಯಕರನ್ನು ಕೊಲ್ಲುವುದು ಇಸ್ಲಾಂನಲ್ಲಿ ಅತಿದೊಡ್ಡ ಪಾ...
12-11-25 02:54 pm
13-11-25 07:41 pm
Mangalore Correspondent
Belthangady, Kadaba Suicide, Mangalore; ಕಡಬದ...
13-11-25 05:01 pm
Kumble Toll Plaza: ಕುಂಬಳೆ ಟೋಲ್ ಪ್ಲಾಜಾಕ್ಕೆ ಭಾರ...
13-11-25 01:44 pm
Mangalore NMPT, Dinesh Gundu Rao, Congress, B...
12-11-25 06:56 pm
Ullal Dargah Committee: ಉಳ್ಳಾಲ ದರ್ಗಾ ಕಮಿಟಿಯಲ್...
11-11-25 10:42 pm
13-11-25 10:09 pm
Mangalore Correspondent
Sexual Harassment in Anekal: ಸ್ಕ್ಯಾನಿಂಗ್ ವೇಳ...
13-11-25 10:00 pm
ವಿದೇಶಿ ಕಂಪನಿಯಲ್ಲಿ ಹೂಡಿಕೆ ಮಾಡಿದರೆ ದುಪ್ಪಟ್ಟು ಲಾ...
12-11-25 12:32 pm
ಬೆಳ್ತಂಗಡಿ ಶ್ರೀರಾಮ ಕ್ರೆಡಿಟ್ ಸೊಸೈಟಿಯಲ್ಲಿ ಭಾರೀ ಅ...
11-11-25 06:33 pm
Fraud Dream Deal Mangalore, KSRTC: ತಿಂಗಳಿಗೆ ಒ...
09-11-25 10:27 pm