ಬ್ರೇಕಿಂಗ್ ನ್ಯೂಸ್
15-08-23 06:49 pm Mangalore Correspondent ಕರಾವಳಿ
ಪುತ್ತೂರು, ಆಗಸ್ಟ್ 15: ಹೊಟ್ಟೆ ನೋವೆಂದು ಆಸ್ಪತ್ರೆಗೆ ಬಂದಿದ್ದ 17 ವರ್ಷದ ಬಾಲಕ ಶಸ್ತ್ರಚಿಕಿತ್ಸೆ ಬಳಿಕ ಗಂಭೀರ ಸ್ಥಿತಿಗೊಳಗಾಗಿ ಸಾವನ್ನಪ್ಪಿದ ಘಟನೆ ಪುತ್ತೂರಿನಲ್ಲಿ ನಡೆದಿದ್ದು, ಬಾಲಕನ ಸಂಬಂಧಿಕರು, ಸಾರ್ವಜನಿಕರು ಸೇರಿ ಆಸ್ಪತ್ರೆ ಮುಂದೆ ಪ್ರತಿಭಟನೆ ನಡೆಸಿದ್ದಾರೆ.
ಸುಳ್ಯ ತಾಲೂಕಿನ ಶಾಂತಿನಗರ ನಿವಾಸಿ ಸೃಜಿತ್(17) ಮೃತ ಬಾಲಕ. ಮೊನ್ನೆ ಶನಿವಾರ ಸಂಜೆ ಹೊಟ್ಟೆ ನೋವು ಕಾರಣಕ್ಕೆ ಈತನನ್ನು ಪುತ್ತೂರಿನ ಚೇತನಾ ಆಸ್ಪತ್ರೆಗೆ ಕರೆತರಲಾಗಿತ್ತು. ಹೊಟ್ಟೆಯ ಕರುಳು ಒಂದಕ್ಕೊಂದು ಸೇರಿಕೊಂಡಿದೆ, ಶಸ್ತ್ರಚಿಕಿತ್ಸೆ ಆಗಬೇಕೆಂದು ವೈದ್ಯರು ಸೂಚಿಸಿದ್ದರು. ಅದರಂತೆ, ಮರುದಿನ ಭಾನುವಾರ ಬೆಳಗ್ಗೆ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಆದರೆ ಸಂಜೆಯಾಗುತ್ತಿದ್ದಂತೆ ಬಾಲಕನಿಗೆ ವಿಪರೀತ ಕೆಮ್ಮು ಉಂಟಾಗಿದ್ದು, ವೈದ್ಯರು ಸಕಾಲದಲ್ಲಿ ಸ್ಪಂದಿಸದ ಕಾರಣ ಉಸಿರಾಟದ ಸಮಸ್ಯೆ ಎದುರಾಗಿತ್ತು.
ನಡು ರಾತ್ರಿ ವೇಳೆ ಕೂಡಲೇ ಮಂಗಳೂರಿಗೆ ಕರೆದೊಯ್ಯಬೇಕು, ಇಲ್ಲಿ ವೆಂಟಿಲೇಟರ್ ವ್ಯವಸ್ಥೆ ಇಲ್ಲವೆಂದು ವೈದ್ಯರು ಹೇಳಿದ್ದರಿಂದ ಬಾಲಕನನ್ನು ಸೋಮವಾರ ಬೆಳಗ್ಗಿನ ಹೊತ್ತಿಗೆ ಮಂಗಳೂರಿನ ಕೆಎಂಸಿ ಆಸ್ಪತ್ರೆಗೆ ತರಲಾಗಿತ್ತು. ಅಲ್ಲಿ ಬಾಲಕ ಮೃತಪಟ್ಟಿದ್ದಾಗಿ ವೈದ್ಯರು ತಿಳಿಸಿದ್ದರು. ಇದರಿಂದ ಪುತ್ತೂರಿನಲ್ಲಿ ಶಸ್ತ್ರಚಿಕಿತ್ಸೆ ನಡೆಸಿದ್ದ ವೈದ್ಯರ ವಿರುದ್ಧ ಸಂಬಂಧಿಕರ ಆಕ್ರೋಶ ತಿರುಗಿದ್ದು, ಮಂಗಳವಾರ ಮಧ್ಯಾಹ್ನದಿಂದಲೇ ಚೇತನಾ ಆಸ್ಪತ್ರೆಯ ಮುಂದೆ ಜನರು ಜಮಾಯಿಸಿ ಪ್ರತಿಭಟನೆ ನಡೆಸಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರಲ್ಲಿ ವೈದ್ಯರನ್ನು ಬಂಧಿಸುವಂತೆ ಪಟ್ಟು ಹಿಡಿದಿದ್ದಾರೆ.
ಬಳಿಕ ಪುತ್ತೂರು ತಹಸೀಲ್ದಾರ್ ಸ್ಥಳಕ್ಕೆ ಆಗಮಿಸಿದ್ದು, ಚೇತನಾ ಆಸ್ಪತ್ರೆಯಲ್ಲಿ ಈ ಹಿಂದೆಯೂ ಇದೇ ರೀತಿ ಎಡವಟ್ಟು ಆಗಿತ್ತು. ವೆಂಟಿಲೇಟರ್ ಇತ್ಯಾದಿ ವ್ಯವಸ್ಥೆ ಇಲ್ಲದೆ ಶಸ್ತ್ರಚಿಕಿತ್ಸೆ ನಡೆಸಿದ್ದು ಯಾಕೆ, ಎಡವಟ್ಟು ಮಾಡಿರುವ ವೈದ್ಯರನ್ನು ಬಂಧಿಸಬೇಕು. ಕೂಡಲೇ ಕ್ರಮ ಜರುಗಿಸಬೇಕೆಂದು ಆಗ್ರಹ ಮಾಡಿದ್ದಾರೆ. ಪುತ್ತೂರು ಪೊಲೀಸ್ ಠಾಣೆಯಲ್ಲಿ ಈಗಾಗಲೇ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸಿ ಕ್ರಮ ಜರುಗಿಸುತ್ತಾರೆಂದು ತಹಸೀಲ್ದಾರ್ ಸಮಜಾಯಿಷಿ ನೀಡಿದ್ದಾರೆ.
17 year old youth dies after doctors negligence during operation in Sullia, protest held holding dead body.
09-07-25 04:12 pm
HK News Desk
ಬೆಂಗಳೂರಿನಲ್ಲಿ ಐದು ಕಡೆ ಎನ್ಐಎ ದಾಳಿ ; ಭಯೋತ್ಪಾದಕ...
09-07-25 01:53 pm
Heart attack, Dharwad, Davanagere: ಉದ್ಯಮಿ ಮಗನ...
09-07-25 11:50 am
ಸಿಎಂ ಸೀಟು ಗೊಂದಲ ಕೇವಲ ಮಾಧ್ಯಮಗಳ ಸೃಷ್ಟಿ ; ಮೊದಲು...
08-07-25 08:35 pm
Karnataka Ban Online Betting and Gambling: ಆನ...
08-07-25 05:01 pm
07-07-25 08:45 pm
HK News Desk
ಅಮೆರಿಕದ ಟೆಕ್ಸಾಸ್ನಲ್ಲಿ ಭೀಕರ ಪ್ರವಾಹ ; 28 ಮಕ್ಕಳ...
07-07-25 04:11 pm
ಟೆಕ್ಸಾಸ್ ನಲ್ಲಿ ದಿಢೀರ್ ಪ್ರವಾಹ ; 27 ಮಂದಿ ಸಾವು,...
06-07-25 03:53 pm
ಹಿಜಾಬ್ ; ಪರೀಕ್ಷಾ ಕೊಠಡಿಗೆ ನುಗ್ಗಿ ಆವಾಜ್, ಪಿಇಎಸ್...
02-07-25 11:05 pm
Adult Film Star Kylie Page Death: ನೀಲಿ ಚಿತ್ರ...
02-07-25 05:31 pm
09-07-25 06:20 pm
Mangalore Correspondent
Rename Dakshina Kannada, Tulu: ವಿಜಯನಗರ ಕಾಲದಲ್...
08-07-25 09:33 pm
“Mission Possible: KMC Attavar Performs Life-...
08-07-25 03:37 pm
KMC Hospital Mangalore, Attavar, Surgery: ಅಪಘ...
08-07-25 03:27 pm
Mangalore suicide, Thumbe: ಮೊಬೈಲ್ ಗೀಳು ; ತುಂಬ...
08-07-25 10:15 am
08-07-25 10:01 pm
Bengaluru Staffer
Mangalore, Job Fraud, Crime: ಪಾರ್ಟ್ ಟೈಮ್ ಕೆಲಸ...
07-07-25 10:31 pm
Job Fraud, Mangalore, Doctor: ದುಬೈನ ಎನ್ಎಂಸಿ ಹ...
07-07-25 10:18 pm
ಹದಿನಾರರ ವಯಸ್ಸು ಹುಚ್ಚುಕೋಡಿ ಮನಸ್ಸು ; 16ರ ಹುಡುಗಿ...
07-07-25 07:13 pm
Digital Arrest, Cyber Fraud, Mangalore: ಡಿಜಿಟ...
07-07-25 03:30 pm