ಬ್ರೇಕಿಂಗ್ ನ್ಯೂಸ್
14-08-23 02:46 pm Mangalore Correspondent ಕರಾವಳಿ
ಪುತ್ತೂರು, ಆಗಸ್ಟ್ 14: ಧರ್ಮಸ್ಥಳದ ವಿದ್ಯಾರ್ಥಿನಿ ಸೌಜನ್ಯಾ ಅತ್ಯಾಚಾರ, ಕೊಲೆ ಪ್ರಕರಣದ ನೈಜ ಆರೋಪಿಗಳನ್ನು ಬಂಧಿಸಬೇಕು, ಪ್ರಕರಣವನ್ನು ಮುಚ್ಚಿ ಹಾಕಿದ ಅಂದಿನ ಪೊಲೀಸ್ ಅಧಿಕಾರಿಗಳನ್ನು ತನಿಖೆಗೆ ಒಳಪಡಿಸಬೇಕು, ಅದಕ್ಕಾಗಿ ಎಸ್ಐಟಿ ರಚಿಸಬೇಕೆಂದು ಆಗ್ರಹಿಸಿ ಪುತ್ತೂರಿನಲ್ಲಿ ಪುತ್ತಿಲ ಪರಿವಾರದ ವತಿಯಿಂದ ಬೃಹತ್ ಪ್ರತಿಭಟನೆ, ಪಾದಯಾತ್ರೆ ನಡೆಸಲಾಗಿದೆ.
ದರ್ಭೆ ವೃತ್ತದಿಂದ ಪುತ್ತೂರು ಬಸ್ ನಿಲ್ದಾಣದ ವರೆಗೆ ಕಾಲ್ನಡಿಗೆ ಯಾತ್ರೆಯಲ್ಲಿ ಬಂದ ಮಹಿಳೆಯರು, ಕಾರ್ಯಕರ್ತರು ನ್ಯಾಯಕ್ಕಾಗಿ ಹೋರಾಟದ ಧ್ವನಿ ಮೊಳಗಿಸಿದರು. ಸರಕಾರಿ ಬಸ್ ನಿಲ್ದಾಣದ ಬಳಿ ಸೇರಿ 10 ನಿಮಿಷ ಕಾಲ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದ್ದು ಬಳಿಕ ಸಾರ್ವಜನಿಕ ಸಮಾವೇಶ ನಡೆಯಿತು.
ಪ್ರತಿಭಟನೆ ಉದ್ಧೇಶಿಸಿ ಮಾತನಾಡಿದ ಅರುಣ್ ಕುಮಾರ್ ಪುತ್ತಿಲ, ಸೌಜನ್ಯಳ ಕೊಲೆಯಾಗಿ ಹನ್ನೊಂದು ವರ್ಷ ಕಳೆದರು ಆಕೆಯ ನೈಜ ಕೊಲೆಗಾರ ಯಾರು ಅನ್ನೋದು ಪತ್ತೆಯಾಗಿಲ್ಲ. ಆರೋಪಿ ಎಂದು ಬಂಧಿಸಲ್ಪಟ್ಟ ಸಂತೋಷ್ ರಾವ್ ನಿರ್ದೋಷಿ ಎಂದು ನ್ಯಾಯಾಲಯವೇ ಆದೇಶ ನೀಡಿರುವಾಗ ನೈಜ ಆರೋಪಿ ಯಾರು ಅನ್ನೋದು ಪತ್ತೆಯಾಗಬೇಕು. ಆತ ಅಲ್ಲ ಎಂದಾದರೆ, ಕ್ರೂರವಾಗಿ ಹಿಂಸಿಸಿ ಕೊಲೆಗೈದ ಪಾಪಿಗಳ ಬಂಧನ ಆಗಬೇಡವೇ.. ಸೌಜನ್ಯಾ ಪರ ಹೋರಾಟ ಈಗ ಆಂದೋಲನ ರೂಪ ಪಡೆದಿದ್ದು ಸಂಘರ್ಷಕ್ಕೂ ಕಾರಣವಾದೀತು. ಆದರೆ ಸಂಘರ್ಷಕ್ಕೆ ಸರಕಾರ ಆಸ್ಪದ ನೀಡಬಾರದು.
ಅದಕ್ಕಾಗಿ ಮರು ತನಿಖೆಗೆ ವಿಶೇಷ ತನಿಖಾ ತಂಡ ರಚಿಸಬೇಕು. ಅಂದು ಕರ್ತವ್ಯ ನಿರ್ವಹಿಸಿದ್ದ ಪೊಲೀಸ್ ಅಧಿಕಾರಿಗಳಾದ ಯೋಗೀಶ್, ಸುದರ್ಶನ್ ಮತ್ತು ಅಭಿಷೇಕ್ ಗೋಯಲ್ ಎಂಬವರನ್ನು ತನಿಖೆಗೆ ಒಳಪಡಿಸಬೇಕು. ಅವರನ್ನು ತನಿಖೆ ಮಾಡಿದರೆ ನೈಜ ಆರೋಪಿ ಪತ್ತೆಯಾಗಬಹುದು. ನ್ಯಾಯ ಸಿಗಬಹುದು ಎನ್ನುವ ನಂಬಿಕೆ ಜನರಲ್ಲಿದೆ. ಆಮೂಲಕ ನೈಜ ಆರೋಪಿಯನ್ನು ಪತ್ತೆ ಮಾಡಿ ಗಲ್ಲಿಗೇರಿಸಬೇಕು ಎಂದು ಮಹಾಲಿಂಗೇಶ್ವರನ ಸನ್ನಿಧಿಯ ಮುಂದೆ ನಿಂತು ಒತ್ತಾಯಿಸುತ್ತೇವೆ ಎಂದರು.
ಪುತ್ತಿಲ ಪರಿವಾರದ ಪ್ರತಿಭಟನೆ ಹಿನ್ನೆಲೆಯಲ್ಲಿ ಬಹುತೇಕ ವ್ಯಾಪಾರಸ್ಥರು ತಮ್ಮ ಅಂಗಡಿಗಳನ್ನು ಮುಚ್ಚಿ ಸಹಕಾರ ನೀಡಿದ್ದಾರೆ. ಕಾಲ್ನಡಿಗೆ ಜಾಥಾದಲ್ಲಿ ಸಾವಿರಾರು ಜನ ಭಾಗವಹಿಸಿ ಸೌಜನ್ಯಾ ಪರವಾಗಿ ಧ್ವನಿ ಎತ್ತಿದ್ದಾರೆ.
Soujanya rape case Arun puthila demands reinvestigation of three Police officers at Puttur Protest. Even after 11 years of rape and murder of Sowjanya real accused have not been arrested Slams Puthila.
09-07-25 04:12 pm
HK News Desk
ಬೆಂಗಳೂರಿನಲ್ಲಿ ಐದು ಕಡೆ ಎನ್ಐಎ ದಾಳಿ ; ಭಯೋತ್ಪಾದಕ...
09-07-25 01:53 pm
Heart attack, Dharwad, Davanagere: ಉದ್ಯಮಿ ಮಗನ...
09-07-25 11:50 am
ಸಿಎಂ ಸೀಟು ಗೊಂದಲ ಕೇವಲ ಮಾಧ್ಯಮಗಳ ಸೃಷ್ಟಿ ; ಮೊದಲು...
08-07-25 08:35 pm
Karnataka Ban Online Betting and Gambling: ಆನ...
08-07-25 05:01 pm
07-07-25 08:45 pm
HK News Desk
ಅಮೆರಿಕದ ಟೆಕ್ಸಾಸ್ನಲ್ಲಿ ಭೀಕರ ಪ್ರವಾಹ ; 28 ಮಕ್ಕಳ...
07-07-25 04:11 pm
ಟೆಕ್ಸಾಸ್ ನಲ್ಲಿ ದಿಢೀರ್ ಪ್ರವಾಹ ; 27 ಮಂದಿ ಸಾವು,...
06-07-25 03:53 pm
ಹಿಜಾಬ್ ; ಪರೀಕ್ಷಾ ಕೊಠಡಿಗೆ ನುಗ್ಗಿ ಆವಾಜ್, ಪಿಇಎಸ್...
02-07-25 11:05 pm
Adult Film Star Kylie Page Death: ನೀಲಿ ಚಿತ್ರ...
02-07-25 05:31 pm
09-07-25 06:53 pm
Mangalore Correspondent
Mangalore Modern Fire Safety , Ullal Fire Sta...
09-07-25 06:20 pm
Rename Dakshina Kannada, Tulu: ವಿಜಯನಗರ ಕಾಲದಲ್...
08-07-25 09:33 pm
“Mission Possible: KMC Attavar Performs Life-...
08-07-25 03:37 pm
KMC Hospital Mangalore, Attavar, Surgery: ಅಪಘ...
08-07-25 03:27 pm
08-07-25 10:01 pm
Bengaluru Staffer
Mangalore, Job Fraud, Crime: ಪಾರ್ಟ್ ಟೈಮ್ ಕೆಲಸ...
07-07-25 10:31 pm
Job Fraud, Mangalore, Doctor: ದುಬೈನ ಎನ್ಎಂಸಿ ಹ...
07-07-25 10:18 pm
ಹದಿನಾರರ ವಯಸ್ಸು ಹುಚ್ಚುಕೋಡಿ ಮನಸ್ಸು ; 16ರ ಹುಡುಗಿ...
07-07-25 07:13 pm
Digital Arrest, Cyber Fraud, Mangalore: ಡಿಜಿಟ...
07-07-25 03:30 pm