ಬ್ರೇಕಿಂಗ್ ನ್ಯೂಸ್
12-08-23 07:16 pm Mangalore Correspondent ಕರಾವಳಿ
ಬೆಳ್ತಂಗಡಿ, ಆಗಸ್ಟ್ 12: ಧರ್ಮಸ್ಥಳದ ಸೌಜನ್ಯಾ ಕೊಲೆ ಪ್ರಕರಣದಲ್ಲಿ ನ್ಯಾಯಕ್ಕಾಗಿ ಎದ್ದಿರುವ ಹೋರಾಟದ ದನಿಗೆ ಶ್ರೀರಾಮ ಸೇನೆ ಕೈಜೋಡಿಸಿದೆ. ಸೌಜನ್ಯಾ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಹಾಗೂ ಸೌಜನ್ಯಾ ಕುಟುಂಬಸ್ಥರ ಮನೆಗೆ ಶ್ರೀರಾಮ ಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಭೇಟಿ ನೀಡಿದ್ದು ಬೆಂಬಲ ಘೋಷಿಸಿದ್ದಾರೆ.
ಇದೇ ವೇಳೆ ಮಾಧ್ಯಮಕ್ಕೆ ಮಾತನಾಡಿದ ಅವರು, ಸೌಜನ್ಯಾ ಪರ ಹೋರಾಡುತ್ತಿರುವ ಮಹೇಶ್ ಶೆಟ್ಟಿ ತಿಮರೋಡಿ ಅವರಿಗೆ ಗನ್ ಮ್ಯಾನ್ ನೀಡಬೇಕು. ಮಹೇಶ್ ಶೆಟ್ಟಿ ತಿಮರೋಡಿ ರಕ್ಷಣೆಗೆ ಸರ್ಕಾರ ಮುಂದಾಗಬೇಕು. ಸೌಜನ್ಯಾ ಕುಟುಂಬಸ್ಥರಿಗೂ ಸುರಕ್ಷತೆ ನೀಡಬೇಕು, ರಕ್ಷಣೆ ನೀಡಬೇಕು. ಪ್ರಕರಣಕ್ಕೆ ನ್ಯಾಯ ಸಿಗುವವರೆಗೂ ಅವರಿಗೆ ಸುರಕ್ಷತೆ ನೀಡಬೇಕು ಎಂದು ಹೇಳಿದರು.

ರಾಜಕೀಯ ವ್ಯವಸ್ಥೆ, ರಾಜಕಾರಣಿಗಳು ಸಂಪೂರ್ಣ ಭ್ರಷ್ಟರಾಗಿದ್ದಾರೆ. ನ್ಯಾಯಕ್ಕಾಗಿ, ಪ್ರಾಮಾಣಿಕತೆಗಾಗಿ, ಮಾನವೀಯತೆಗಾಗಿ ಹೋರಾಟ ಅನ್ನುವುದು ರಾಜಕಾರಣಿಗಳಲ್ಲಿ ಇಲ್ಲ. ಸೌಜನ್ಯ ಪ್ರಕರಣದ ಪ್ರಮುಖ ಆರೋಪಿಯೇ ಪೊಲೀಸ್ ಇಲಾಖೆ. ಶಾಸಕರು, ರಾಜಕಾರಣಿಗಳು ಭ್ರಷ್ಟರಾಗಿದ್ದರಿಂದ ಅವರ ಹಿಡಿತದಲ್ಲಿರುವ ಪೊಲೀಸ್ ವ್ಯವಸ್ಥೆಯೂ ಭ್ರಷ್ಟವಾಗುತ್ತದೆ. ಸೌಜನ್ಯಾ ಪ್ರಕರಣದಲ್ಲಿ ಮುಗ್ಧ, ಅಮಾಯಕ ವ್ಯಕ್ತಿಯೊಬ್ಬನ ಸಿಲುಕಿಸಿ ಪೊಲೀಸರು ಬಲಿ ನೀಡಿದ್ದಾರೆ. ಪೊಲೀಸರೇ ವ್ಯವಸ್ಥೆಯನ್ನು ಹಾಳು ಮಾಡುತ್ತಿದ್ದಾರೆ. ಕೊಲೆಗೆಡುಕರಿಗೆ , ಅತ್ಯಾಚಾರಿಗಳಿಗೆ ಪೊಲೀಸ್ ಇಲಾಖೆ ರಕ್ಷಣೆ ನೀಡುತ್ತಿದೆ.
ಸೌಜನ್ಯ ಪ್ರಕರಣದಲ್ಲಿ ಯಾರ ಒತ್ತಡ ಇತ್ತು? ಯಾರನ್ನು ರಕ್ಷಣೆ ಮಾಡಿದ್ದೀರಿ? ಎಂಬುದು ಬಹಿರಂಗ ಆಗಬೇಕು. ಸೌಜನ್ಯಾ ಪರ ಹೋರಾಟದಲ್ಲಿ ಶ್ರೀರಾಮ ಸೇನೆ ಕೂಡ ಕೈ ಜೋಡಿಸಲಿದೆ ಎಂದು ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
Police department must give tight security to Mahesh Thimarodi and sowjanya's family says Pramod Muthalik meeting their family in Dharmasthala.
20-09-26 07:13 pm
HK News Staffer
ಗಣೇಶ ಶೋಭಾಯಾತ್ರೆಯಲ್ಲಿ ಪ್ರಚೋದನಕಾರಿ ಭಾಷಣ ; ಮಸೀದಿ...
20-09-26 03:32 pm
ವಂದೇ ಮಾತರಂ ಎರಡೇ ಚರಣ ; ತೀರ್ಥಹಳ್ಳಿಯಲ್ಲಿ ಸಿಎಂ ಡಿ...
19-09-26 05:44 pm
B K Hariprasad: ಉಮರ್ ಖಾಲಿದ್ ರಾಷ್ಟ್ರೀಯವಾದಿ ದೇಶ...
17-09-26 04:13 pm
ಚಿತ್ರರಂಗದ ಸಾರ್ವಕಾಲಿಕ ಶ್ರೇಷ್ಠ ನಟ ಅನಂತನಾಗ್ ಗೆ '...
16-09-26 10:40 pm
19-09-26 05:40 pm
HK News Staffer
Mamata Banerjee, Sanchita Pradhan, Rejinagar:...
19-09-26 03:37 pm
ಮುಂಬೈನಲ್ಲಿ ಕುಡಿಯುವ ನೀರಿಗೆ ತೀವ್ರ ಬರ ; ಸಮುದ್ರದ...
13-09-26 09:00 pm
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
20-09-26 08:59 pm
HK News Staffer
ಮೊಗವೀರಪಟ್ಣ- ಕೋಟೆಪುರ ರಸ್ತೆ ಕಾಂಕ್ರೀಟಿಗೆ ಗಡುವು ;...
19-09-26 09:54 pm
ಬೆಳ್ಳಂಬೆಳಗ್ಗೆ ಮೀನುಗಾರಿಕಾ ಬಂದರಿಗೆ ಸಿಎಂ ಡಿಕೆಶಿ...
19-09-26 10:11 am
ಮಂಗಳೂರಿನಲ್ಲಿ ಮೊದಲ ಸಚಿವ ಸಂಪುಟ ಸಭೆ ; 32,611 ಕೋಟ...
18-09-26 07:30 pm
Puttur Medical College, Dakshina Kannada, Man...
18-09-26 06:08 pm
20-09-26 04:39 pm
HK News Staffer
Bengluru, Crime: ಬೆಂಗಳೂರು ; ಮಧ್ಯರಾತ್ರಿ ಹೋಟೆಲ್...
20-09-26 02:16 pm
ಹುಬ್ಬಳ್ಳಿಯಲ್ಲಿ ಗ್ಯಾಸ್ ಸೋರಿಕೆ ದುರಂತ: ಸಿಲಿಂಡರ್...
20-09-26 01:01 pm
ಪತಿಯೊಂದಿಗೆ ಜಗಳದ ಸಿಟ್ಟಿನಲ್ಲಿ ಇಬ್ಬರು ಮಕ್ಕಳನ್ನು...
19-09-26 09:57 pm
ಕೋಕಾ ಜಾಮೀನು ಬೆನ್ನಲ್ಲೇ ರೌಡಿಶೀಟರ್ ಭರತ್ ಕುಮ್ಡೇಲು...
19-09-26 09:48 pm