ಬ್ರೇಕಿಂಗ್ ನ್ಯೂಸ್
11-08-23 03:21 pm Mangalore Correspondent ಕರಾವಳಿ
ಮಂಗಳೂರು, ಆಗಸ್ಟ್ 11: ಗುತ್ತಿಗೆದಾರರ ಬಿಲ್ ಬಾಕಿ ವಿಚಾರದ ಬಗ್ಗೆ ಸಮಗ್ರ ತನಿಖೆ ನಡೆಸಲಾಗುವುದು. ಕೆಲಸ ಆಗದೇ ಬಿಲ್ ಗಳಾಗಿರುವ ಬಗ್ಗೆ, ಅನವಶ್ಯಕ ಕೆಲಸ, ಹೆಚ್ಚು ಹಣ ಪಡೆದ ಕೆಲಸಗಳ ಬಗ್ಗೆ ತನಿಖೆ ಮಾಡಿಸುತ್ತೇವೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಕಾಂಗ್ರೆಸ್ ಸರ್ಕಾರದ ವಿರುದ್ಧ ಕೇಳಿಬಂದಿರುವ ಕಮಿಷನ್ ಆರೋಪದ ಬಗ್ಗೆ ಕೇಳಿದ ಪ್ರಶ್ನೆಗೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಮೇಲಿನಂತೆ ಉತ್ತರ ನೀಡಿದ್ದಾರೆ. ಬೆಂಗಳೂರಿನ ರಸ್ತೆಗಳು, ಸಿವಿಲ್ ವಿಚಾರ ಮಾತ್ರವಲ್ಲ ಕಸದ ವಿಚಾರದ ಬಗ್ಗೆಯೂ ತನಿಖೆ ಮಾಡುತ್ತೇವೆ. ಉತ್ತಮ ಅಧಿಕಾರಿಗಳ ನೇತೃತ್ವದಲ್ಲಿ ಈ ತನಿಖೆ ನಡೀತಾ ಇದೆ. ನಿಷ್ಪಕ್ಷಪಾತ ತನಿಖೆ ಮಾಡುವುದಕ್ಕಾಗಿ ಅಧಿಕಾರಿಗಳ ತಂಡ ರಚನೆಯಾಗಿದೆ. ಗುತ್ತಿಗೆದಾರರಿಗೆ ಬಿಲ್ ಪಾವತಿ ಆಗದೇ ಇರೋದು ದೊಡ್ಡ ಸಮಸ್ಯೆ. ಆದರೆ ಅದು ಈಗಿನ ಸಮಸ್ಯೆ ಅಲ್ಲ, ಎರಡು ವರ್ಷದಿಂದ ಆಗಿಲ್ಲ.
ಬಿಲ್ ಪಾವತಿಗೆ ತೊಂದರೆ ಇಲ್ಲ, ಆದರೆ ಕೆಲಸಗಳು ಆಗಿದ್ಯಾ ಎಂಬ ಬಗ್ಗೆ ತನಿಖೆ ಆಗುತ್ತದೆ. ಮುಂದಿನ ಮೂವತ್ತು ದಿನಗಳ ಒಳಗಡೆ ತನಿಖಾ ವರದಿ ಸಿಗಲಿದೆ. ನ್ಯಾಯಯುತವಾಗಿ ಆಗಿರುವ ಕೆಲಸಗಳಿಗೆ ಬಿಲ್ ಪಾವತಿ ಆಗಲಿದೆ. ಕಳಪೆ ಮತ್ತು ಕೆಲಸ ಆಗದೇ ಇದ್ರೆ ನಾವು ಬಿಲ್ ಕೊಡಲ್ಲ. ಸಾರ್ವಜನಿಕರ ಹಣ ಅದು, ನಾವು ನೋಡಿ ಕೊಡ್ತೇವೆ ಎಂದರು ದಿನೇಶ್ ಗುಂಡೂರಾವ್.
ಡಿಸಿಎಂ ವಿರುದ್ಧ ಆರೋಪ ಮಾಡಿರುವುದಕ್ಕೆ ಯಾವುದೇ ಹುರುಳಿಲ್ಲ. ಕೆಲವರು ಅನಾವಶ್ಯಕವಾಗಿ ಪ್ರಚಾರ ಮಾಡ್ತಾ ಇದಾರೆ. ನಮ್ಮ ಗ್ಯಾರಂಟಿ ಸ್ಕೀಮ್ ಜನರಿಗೆ ಮುಟ್ಟುತ್ತಿದೆ, ಅನುಕೂಲ ಆಗ್ತಾ ಇದೆ. ಜನರ ಅಭಿಪ್ರಾಯಕ್ಕೆ ಮಸಿ ಬಳಿಯಲು, ಕೆಟ್ಟ ಹೆಸರು ತರಲು ಈ ಆರೋಪ ಮಾಡ್ತಿದಾರೆ. ನಮ್ಮತ್ರ ಪೆನ್ ಡ್ರೈವ್ ಇದೆ, ಸಿಡಿ ಇದೆ, ದಾಖಲೆ ಇದೆ ಅಂತ ಸುಮ್ಮನೆ ಹೇಳ್ತಾ ಇದಾರೆ. ನಾವು ಅಥವಾ ಡಿಸಿಎಂ ಭ್ರಷ್ಟಾಚಾರ ತಡೆಯಲು ಪ್ರಯತ್ನ ಮಾಡ್ತಾ ಇದೀವಿ. ಆದರೆ ವಿರೋಧ ಪಕ್ಷದವರು ಜನರ ದಾರಿ ತಪ್ಪಿಸಲು ಆಧಾರ ರಹಿತವಾಗಿ ಮಾತನಾಡ್ತಿದಾರೆ. ತನಿಖೆ ಶುರುವಾಗಿದೆ, ಬಿಜೆಪಿಯ ಕರ್ಮಕಾಂಡ ಹೊರಗೆ ಬರಲು ಹೆಚ್ಚು ಸಮಯ ಬೇಕಾಗಿಲ್ಲ ಎಂದು ಹೇಳಿದ್ದಾರೆ.
A thorough probe will be conducted into the issue of pending bills of contractors. Health Minister Dinesh Gundu Rao said that the government will conduct an inquiry into the non-work bills, unnecessary work and over-paid works.
29-04-25 10:45 pm
Bangalore Correspondent
CM Siddaramaiah, Belagavi, BJP Suresh Kumar:...
29-04-25 09:51 pm
Protest Kalaburagi, islamabad Locality: ಕಲಬುರ...
29-04-25 09:20 pm
Kudupu Murder, Mob attack, Parameshwar: ಕುಡುಪ...
29-04-25 04:28 pm
Praveen Nettaru, Mohsin Shukur, Karwar Police...
29-04-25 01:04 pm
29-04-25 03:45 pm
HK News Desk
'ನನಗೆ ಪಾಕಿಸ್ತಾನದಲ್ಲಿ ಯಾರೂ ಇಲ್ಲ, ದಯವಿಟ್ಟು ಉಳಿಸ...
28-04-25 06:52 pm
ಪಾಕಿಸ್ತಾನದ ಶಾಂತಿ ಸಮಿತಿ ಕಚೇರಿ ಎದುರೇ ಬಾಂಬ್ ಸ್ಫೋ...
28-04-25 05:53 pm
ಪಾಕ್ ವಿರುದ್ಧ ಯುದ್ದಕ್ಕೆ ಕರೆ ನೀಡಿದ ಕಾಶ್ಮೀರ್ ಸಿಎ...
27-04-25 08:42 pm
Pak, Website Hacked, Indian Army : ಅಲ್ಲಾ ನಮ್ಮ...
27-04-25 07:38 pm
29-04-25 11:00 pm
Mangalore Correspondent
Mangalore, Ullal Nethravathi Bridge: ಉಳ್ಳಾಲ ನ...
29-04-25 05:45 pm
Mangalore, Dr Kalladka Bhat: ಹೆಣ್ಣು ಮಕ್ಕಳು ವ್...
29-04-25 12:40 pm
Vadiraj, Mangalore, B R Ambedkar: ಕಾಂಗ್ರೆಸ್ ಸ...
29-04-25 11:53 am
Highland Hospital Mangalore, FIR, Anti Nation...
29-04-25 11:38 am
29-04-25 09:59 pm
Mangalore Correspondent
Kudupu Murder, Mangalore Crime, Police: ಕುಡುಪ...
29-04-25 02:53 pm
Belthagady, Blackmail, Mangalore crime: ಬೆಳ್ತ...
28-04-25 11:39 am
Shootout Bakrebail, Mangalore Crime: ಬಾಕ್ರಬೈಲ...
28-04-25 11:24 am
Mangalore crime, Murder, Kudupu: ಕುಡುಪು ಬಳಿಯಲ...
27-04-25 10:59 pm