ಬ್ರೇಕಿಂಗ್ ನ್ಯೂಸ್
06-11-20 10:18 am Udupi Correspondent ಕರಾವಳಿ
ಉಡುಪಿ, ನವೆಂಬರ್ 06 : 'ಸಿದ್ದರಾಮಯ್ಯನಿಗೆ ಹುಚ್ಚು' ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಗುರುವಾರ ಸಂಜೆ ಉಡುಪಿ ಕೃಷ್ಣಮಠಕ್ಕೆ ಭೇಟಿ ನೀಡಿದ್ದ ಅವರನ್ನು ಮಾಧ್ಯಮದ ಮಂದಿ ಮಾತಿಗೆಳೆದರು. ಸಿದ್ದರಾಮಯ್ಯ, ಸಿಎಂ ಬದಲಾವಣೆ ಆಗುತ್ತೆ ಎಂದಿದ್ದಾರಲ್ಲಾ ಎಂಬ ಪ್ರಶ್ನೆಗೆ ಗರಂ ಆದ ಈಶ್ವರಪ್ಪ, ಮುಖ್ಯಮಂತ್ರಿ ಸ್ಥಾನ ಹೋದ ನಂತರ ಸಿದ್ದರಾಮಯ್ಯನಿಗೆ ಹುಚ್ಚು ಹಿಡಿದಿದೆ. ಅದಕ್ಕೆ ಹೀಗೆಲ್ಲಾ ಮಾತನಾಡುತ್ತಿದ್ದಾರೆ.
ರಾಜ್ಯದಲ್ಲಿ ಯಾಕೆ ಮುಖ್ಯಮಂತ್ರಿ ಬದಲಾವಣೆ ಆಗಬೇಕು, ಸಿದ್ದರಾಮಯ್ಯನಿಗೆ ಇಂತಹ ಸುದ್ದಿಗಳೇನು ಆಕಾಶದಿಂದ ಉದುರಿ ಬಿತ್ತಾ? ಮೋದಿ, ನಡ್ಡಾ, ಅಮಿತ್ ಶಾ ಅವರೇನಾದರೂ ಫೋನ್ ಮಾಡಿ ಹೇಳಿದ್ರಾ..? ನಾನು ದೇವಸ್ಥಾನದಲ್ಲಿ ಇದೀನಿ. ಇಲ್ಲದಿದ್ದರೆ ಸಿದ್ದರಾಮಯನಿಗೆ ಇನ್ನೂ ಕೆಟ್ಟಪದ ಬಳಸ್ತಿದ್ದೆ. ಸಿದ್ದರಾಮಯ್ಯ ಇಂತಹ ಸುದ್ದಿಗಳನ್ನು ಹರಡುವುದನ್ನು ಬಿಟ್ಟು ಜನರ ಮಧ್ಯೆ ಹೋಗಿ ಕೆಲಸ ಮಾಡಲಿ ಎಂದು ಸಲಹೆ ನೀಡಿದರು.

'ವಿನಯ ಕುಲಕರ್ಣಿ ಬಂಧನ ಬಿಜೆಪಿಯ ರಾಜಕೀಯ ಪ್ರೇರಿತ ಕೃತ್ಯ' ಎಂಬ ಸಿದ್ಧರಾಮಯ್ಯ ಮಾತಿಗೆ ತಿರುಗೇಟು ನೀಡಿದ ಈಶ್ವರಪ್ಪ, ಕೊಲೆ ಪ್ರಕರಣವನ್ನು ತನಿಖೆ ಮಾಡಬಾರದಾ? ಹಾಗಿದ್ದರೆ ಕಾಂಗ್ರೆಸ್ ಪಕ್ಷ ಕೊಲೆಗಳಿಗೆ ಬೆಂಬಲ ಕೊಡುತ್ತಾ.. ಹಾಗಂತ ಸಿದ್ದರಾಮಯ್ಯ ಒಪ್ಪಿಕೊಂಡು ಬಿಡಲಿ, ನಮ್ಮ ಪಕ್ಷದ ಅನೇಕರನ್ನು ಕಾಂಗ್ರೆಸ್ ಸರ್ಕಾರ ಜೈಲಿಗೆ ಕಳಿಸಿದ್ದು ಕೂಡ ರಾಜಕೀಯ ಪ್ರೇರಿತ ಕೃತ್ಯವೇ? ಬಾಯಿಗೆ ಬಂದಂತೆ ಮಾತನಾಡುವುದು ವಿರೋಧ ಪಕ್ಷದ ನಾಯಕನಿಗೆ ಶೋಭೆ ತರುವುದಿಲ್ಲ, ತಪ್ಪಿತಸ್ಥ ಅಲ್ಲದಿದ್ದರೆ ವಿನಯ ಕುಲಕರ್ಣಿ ಬಿಡುಗಡೆಯಾಗಿ ಹೊರಗೆ ಬರಲಿ ಎಂದರು. ಅಲ್ಲದೆ, ಕಾಂಗ್ರೆಸ್ ನಾಯಕರ ಸರ್ಕಾರದ ಪ್ರತಿ ನಡೆಯನ್ನು ವಿರೋಧಿಸುವ ಧೋರಣೆಯನ್ನು ನಾವು ಉಗ್ರವಾಗಿ ಖಂಡಿಸುತ್ತೇವೆ ಎಂದರು.
Udupi Eshwarappa calls Siddaramaiah mad person. Eshwarappa lashed out during his visit to Udupi temple.
15-09-26 09:13 pm
HK News Staffer
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 09:18 pm
HK News Staffer
Satish Kumpala, Manglore: ಕಾಟಾಚಾರಕ್ಕೆ ಸಂಪುಟ ಸ...
15-09-26 07:46 pm
U T Khader, KDP Meeting, Bharath Sheety, Hari...
15-09-26 06:52 pm
Aravind Bolar Controversy, Mangalore: “ಎಂಕ್ ಮ...
15-09-26 05:29 pm
U T Khader, KDP Meeting, Sudheer Reddy Ips: :...
15-09-26 05:27 pm
15-09-26 09:19 pm
HK News Staffer
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am